16.25 ಕೋಟಿ ರೂ. ಬೌಲರ್ ಕೆಲಸಕ್ಕೆ ಬರಲಿಲ್ಲ! ಕ್ರಿಸ್ ಮೋರಿಸ್ ಮೇಲೆ ಕುಮಾರ್ ಸಂಗಕ್ಕಾರ ಅಸಮಾಧಾನ
ತಮ್ಮ ತಂಡವನ್ನು ನಿರಾಸೆಗೊಳಿಸಿದ್ದೇನೆ ಎಂಬುದು ಮೋರಿಸ್ಗೂ ಸಹ ತಿಳಿದಿದೆ ಎಂದು ಸಂಗಕ್ಕಾರ ಹೇಳಿದರು. ಐಪಿಎಲ್ 2021 ರ ಎರಡನೇ ಹಂತದಲ್ಲಿ ಮೋರಿಸ್ಗೆ ಇದುವರೆಗೂ ಒಂದೇ ಒಂದು ವಿಕೆಟ್ ಸಿಕ್ಕಿಲ್ಲ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2021) 43 ನೇ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿತು. ರಾಜಸ್ಥಾನವು ಉತ್ತಮ ಆರಂಭವನ್ನು ಪಡೆಯಿತು, ಆದರೆ 10 ಓವರ್‌ಗಳ ನಂತರ, ಆರ್‌ಸಿಬಿ ಬೌಲರ್‌ಗಳು ಪ್ರಾಬಲ್ಯ ಸಾಧಿಸಿದರು. ಪರಿಣಾಮವಾಗಿ ರಾಜಸ್ಥಾನದ ತಂಡವು ಕೇವಲ 149 ರನ್ ಗಳಿಸಲು ಸಾಧ್ಯವಾಯಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ ವೇಗವಾಗಿ ಆರಂಭಿಸಿತು ಮತ್ತು ಪಂದ್ಯವನ್ನು ಏಳು ವಿಕೆಟ್‌ಗಳಿಂದ ಗೆದ್ದಿತು. ರಾಜಸ್ಥಾನದ ಸೋಲಿನ ಖಳನಾಯಕ ವೇಗದ ಬೌಲರ್ ಕ್ರಿಸ್ ಮೋರಿಸ್ ಆದರು. ಮೋರಿಸ್ ತನ್ನ ನಾಲ್ಕು ಓವರ್ನಲ್ಲಿ 50 ರನ್ ಬಿಟ್ಟುಕೊಟ್ಟರು ಮತ್ತು ಒಂದು ವಿಕೆಟ್ ಕೂಡ ಪಡೆಯಲಿಲ್ಲ.
ರಾಜಸ್ಥಾನ ರಾಯಲ್ಸ್ ತಂಡದ ನಿರ್ದೇಶಕ ಕುಮಾರ್ ಸಂಗಕ್ಕಾರ ಮೋರಿಸ್ ಪ್ರದರ್ಶನದಿಂದ ನಿರಾಶೆಗೊಂಡರು. ಜೊತೆಗೆ ತಮ್ಮ ತಂಡವನ್ನು ನಿರಾಸೆಗೊಳಿಸಿದ್ದೇನೆ ಎಂಬುದು ಮೋರಿಸ್ಗೂ ಸಹ ತಿಳಿದಿದೆ ಎಂದು ಸಂಗಕ್ಕಾರ ಹೇಳಿದರು. ಐಪಿಎಲ್ 2021 ರ ಎರಡನೇ ಹಂತದಲ್ಲಿ ಮೋರಿಸ್ಗೆ ಇದುವರೆಗೂ ಒಂದೇ ಒಂದು ವಿಕೆಟ್ ಸಿಕ್ಕಿಲ್ಲ. ಇಲ್ಲಿಯವರೆಗೆ ಆಡಿದ ಎಲ್ಲಾ ಮೂರು ಪಂದ್ಯಗಳಲ್ಲಿ ಮೋರಿಸ್ ಪ್ರಭಾವ ಬೀರಿಲ್ಲಿ ಎಂದು ಸಾಬೀತಾಗಿದೆ. ಆದಾಗ್ಯೂ, ಸಂಗಕ್ಕಾರ ಮಾತನಾಡಿ ಈ ಸೋಲಿಗೆ ಯಾರನ್ನು ಹೊಣೆ ಮಾಡುವುದಿಲ್ಲ ಎಂದು ಹೇಳಿದರು.
ಈ ಬಾರಿ ಯುಎಇಯಲ್ಲಿ ವಿಕೆಟ್ ಖಾತೆಯನ್ನು ತೆರೆಯಲಾಗಿಲ್ಲ ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಗಕ್ಕಾರ ಮಾತನಾಡಿ, ನಾವು ನಮ್ಮ ತಂಡದ ವಿರುದ್ಧ ಆರೋಪ ಮಾಡುವುದಿಲ್ಲ. ನಾವು ಒಟ್ಟಾಗಿ ಗೆಲ್ಲುತ್ತೇವೆ ಮತ್ತು ಒಟ್ಟಿಗೆ ಸೋಲುತ್ತೇವೆ. ನಾವು ಚೆನ್ನಾಗಿ ಆಡಲಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿದೆ. ನಾವು ವಿಷಯಗಳನ್ನು ಸರಳವಾಗಿಡುವ ಮೂಲಕ ಅಭ್ಯಾಸದತ್ತ ಗಮನ ಹರಿಸುತ್ತೇವೆ ಎಂದಿದ್ದಾರೆ.
ಕ್ರಿಸ್ ಮೋರಿಸ್ ಐಪಿಎಲ್ 2021 ರ ಮೊದಲ ಹಂತದಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದರು. ಮೋರಿಸ್ ನಮಗೆ ಸ್ವಲ್ಪ ಮಟ್ಟಿಗೆ ಸಹಾಯಕವಾಗಿದ್ದಾರೆ ಎಂದು ಸಾಬೀತಾಗಿದೆ. ಮುಂದೆ, ಅವರು ತಾನು ಅತ್ಯುತ್ತಮ ಆಟಗಾರ ಎಂದು ಸಾಬೀತುಪಡಿಸುತ್ತಾರೆ ಎಂದರು.
ಚಹಲ್ ಮತ್ತು ಶಹಬಾಜ್ ಅವರ ಅದ್ಭುತ ಬೌಲಿಂಗ್ ಸ್ಪಿನ್ ಜೋಡಿಯಾದ ಯುಜ್ವೇಂದ್ರ ಚಾಹಲ್ ಮತ್ತು ಶಹಬಾಜ್ ಅಹ್ಮದ್ ಅವರ ಉತ್ತಮ ಪ್ರದರ್ಶನಗಳ ಹಿನ್ನೆಲೆಯಲ್ಲಿ ಆರ್ಸಿಬಿ ರಾಜಸ್ಥಾನವನ್ನು ಸೋಲಿಸಿದ ನಂತರ ಮೂರನೇ ಸ್ಥಾನದಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಿಕೊಂಡಿದೆ. ಮ್ಯಾಕ್ಸ್ವೆಲ್ 30 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 50 ರನ್ ಗಳಿಸಿದರು. ಅವರು ಶ್ರೀಕರ್ ಭರತ್ (35 ಎಸೆತಗಳಲ್ಲಿ 44) ಜೊತೆ ಮೂರನೇ ವಿಕೆಟ್ಗೆ 69 ರನ್ ಜೊತೆಯಾಟವನ್ನು ಹಂಚಿಕೊಂಡರು.
ಮೋರಿಸ್ ಅವರನ್ನು ದೊಡ್ಡ ಮೊತ್ತಕ್ಕೆ ಖರೀದಿಸಲಾಗಿದೆ ರಾಜಸ್ಥಾನ ರಾಯಲ್ಸ್ 16.25 ಕೋಟಿ ಬಿಡ್ ಮಾಡುವ ಮೂಲಕ ಕ್ರಿಸ್ ಮೋರಿಸ್ ಅವರನ್ನು ತಮ್ಮ ತಂಡದಲ್ಲಿ ಸೇರಿಸಿಕೊಂಡಿದೆ. ಆದರೆ ಯುಎಇಯಲ್ಲಿ ಇದುವರೆಗೆ ಆತ ತನ್ನ ಬೆಲೆಗೆ ನ್ಯಾಯ ಒದಗಿಸಿಲ್ಲ. ಈ ಋತುವಿನಲ್ಲಿ ಕ್ರಿಸ್ ಮೋರಿಸ್ ಅವರ ಪ್ರದರ್ಶನವನ್ನು ನೋಡಿದರೆ, ಅವರು ಐಪಿಎಲ್ 2021 ರ 10 ಪಂದ್ಯಗಳಲ್ಲಿ 67 ರನ್ ಮತ್ತು 14 ವಿಕೆಟ್ ಗಳಿಸಿದ್ದಾರೆ. ಆದರೆ ಬುಧವಾರ ನಡೆದ ಪಂದ್ಯದಲ್ಲಿ ಅವರು ತುಂಬಾ ದುಬಾರಿಯೆಂದು ಸಾಬೀತಾಯಿತು. ಆರ್‌ಸಿಬಿಗೆ ಸೋಲಿನ ನಂತರ, ರಾಜಸ್ಥಾನ ರಾಯಲ್ಸ್ ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಇಳಿದಿದೆ.