AUSW vs INDW Pink Ball Test: ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್: ಭಾರತೀಯ ವನಿತೆಯರಿಂದ ಉತ್ತಮ ಆರಂಭ
Australia Women vs India Women, Only Test: ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತೀಯ ಮಹಿಳೆಯರು ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದ್ದಾರೆ. ಓಪನರ್ಗಳಾದ ಸ್ಮೃತಿ ಮಂದಾನ ಹಾಗೂ ಶಫಾಲಿ ವರ್ಮಾ ತಂಡಕ್ಕೆ ಉತ್ತಮ ಆರಂಭ ತಂದುಕೊಡುತ್ತಿದ್ದಾರೆ.
ಆಸ್ಟ್ರೇಲಿಯಾದ ಮಟ್ರಿಕಾನ್ ಕ್ರೀಡಾಂಗಣದಲ್ಲಿ ಭಾರತ ಮಹಿಳೆಯರ ಹಾಗೂ ಆಸ್ಟ್ರೇಲಿಯಾ ಮಹಿಳೆಯರ (Australia Women vs India Women) ನಡುವಣ ಏಕೈಕ ಹಗಲು-ರಾತ್ರಿ (Day-Night Test) ಟೆಸ್ಟ್ ಪಂದ್ಯ ಆರಂಭವಾಗಿದ್ದು, ಈ ಮೂಲಕ ಪಿಂಕ್ ಬಾಲ್ ಟೆಸ್ಟ್ (Pink Ball Test) ಪಂದ್ಯಕ್ಕೆ ಪದಾರ್ಪಣೆ ಮಾಡಿದೆ. ಈಗಾಗಲೇ ಟಾಸ್ ಗೆದ್ದ ಆಸ್ಟ್ರೇಲಿಯಾ ವನಿತೆಯರು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಮಿಥಾಲಿ ರಾಜ್ (Mithali Raj) ಪಡೆ ಬ್ಯಾಟಿಂಗ್ ಆರಂಭಿಸಿದೆ. ಇದು ಬರೋಬ್ಬರಿ 15 ವರ್ಷಗಳ ಬಳಿಕ ಆಸ್ಪ್ರೇಲಿಯಾ ವಿರುದ್ಧ ಭಾರತೀಯ ವನಿತೆಯರು ಆಡುತ್ತಿರುವ ಟೆಸ್ಟ್ ಪಂದ್ಯ. ಈ ಹಿಂದೆ 2006ರಲ್ಲಿ ಕೊನೆಯ ಪಂದ್ಯ ಆಡಿದಾಗ ತಂಡದಲ್ಲಿದ್ದ ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಈಗಲೂ ತಂಡದಲ್ಲಿದ್ದಾರೆ. ಹೆಬ್ಬೆರಳಿಗೆ ಗಾಯವಾಗಿರುವ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಏಕದಿನ ಪಂದ್ಯಗಳಲ್ಲಿ ಆಡಿರಲಿಲ್ಲ. ಟೆಸ್ಟ್ ಪಂದ್ಯಕ್ಕೂ ಅವರು ಲಭ್ಯವಿಲ್ಲದಿರುವುದು ತಂಡಕ್ಕೆ ಕೊಂಚ ಹಿನ್ನಡೆಯಾಗಿದೆ.
ಸದ್ಯ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತೀಯ ಮಹಿಳೆಯರು ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದ್ದಾರೆ. ಓಪನರ್ಗಳಾದ ಸ್ಮೃತಿ ಮಂದಾನ ಹಾಗೂ ಶಫಾಲಿ ವರ್ಮಾ ತಂಡಕ್ಕೆ ಉತ್ತಮ ಆರಂಭ ತಂದುಕೊಡುತ್ತಿದ್ದಾರೆ.
ಭಾರತ ಪರ ಬ್ಯಾಟರ್ ಯಷ್ಟಿಕಾ ಭಾಟಿಯಾ ಮತ್ತು ಮಧ್ಯಮ ವೇಗಿ ಮೇಘನಾ ಸಿಂಗ್ ಟೆಸ್ಟ್ ಪದಾರ್ಪಣೆ ಮಾಡಿದ್ದಾರೆ. ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಓಪನರ್ಗಳಾದರೆ, ಪೂನಮ್ ರೌತ್ ಮತ್ತು ನಾಯಕಿ ಮಿಥಾಲಿ ರಾಜ್ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ. ಜೂಲನ್ ಗೋಸ್ವಾಮಿ, ಮೇಘನಾ ಮತ್ತು ಪೂಜಾ ವಸ್ತ್ರಕಾರ್ ಅವರನ್ನು ವೇಗದ ದಾಳಿ ನಡೆಸಲಿದ್ದಾರೆ. ದೀಪ್ತಿ ಶರ್ಮಾ ಆಲ್‌ರೌಂಡರ್ ಜವಾಬ್ದಾರಿ ಹೊತ್ತಿದ್ದಾರೆ. ವಿಕೆಟ್ ಕೀಪಿಂಗ್ ಜವಾಬ್ದಾರಿ ತಾನಿಯಾ ಭಾಟಿಯಾ ಅವರಿಗೆ ಸಿಕ್ಕಿದೆ.
ಏಕದಿನ ಸರಣಿಯ ಬಳಿಕ ಭಾರತೀಯ ವನಿತೆಯರು ಕೇವಲ 2 ಬಾರಿಯಷ್ಟೇ ನೆಟ್ಸ್‌ನಲ್ಲಿ ಪಿಂಕ್ ಬಾಲ್ನಿಂದ ಅಭ್ಯಾಸ ನಡೆಸಿದೆ. ಚೆಂಡು ಹೇಗೆ ವರ್ತಿಸಲಿದೆ ಎನ್ನುವ ಬಗ್ಗೆ ತಂಡಕ್ಕೆ ಹೆಚ್ಚಿನ ಮಾಹಿತಿ ಇಲ್ಲ. ಆಸ್ಪ್ರೇಲಿಯಾ ತಂಡ ಈಗಾಗಲೇ ಹಗಲು-ರಾತ್ರಿ ಟೆಸ್ಟ್ ಆಡಿದೆಯಾದರೂ ಅದು 2017ರಲ್ಲಿ. ಹೀಗಾಗಿ ಆಸೀಸ್‌ಗೂ ಇದು ಹೊಸ ಅನುಭವವಾಗಲಿದೆ.
ಬರೋಬ್ಬರಿ ಏಳು ವರ್ಷಗಳ ಬಳಿಕ ಮಿಥಾಲಿ ರಾಜ್ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಕಳೆದ ಜೂನ್‌ನಲ್ಲಿ ಇಂಗ್ಲೆಂಡ್ ವಿರುದ್ದ ಮೊದಲ ಟೆಸ್ಟ್ ಪಂದ್ಯವನ್ನಾಡಿತ್ತು. 4 ದಿನಗಳ ಟೆಸ್ಟ್ ಪಂದ್ಯ ಸಾಕಷ್ಟು ರೋಚಕ ಹೋರಾಟಕ್ಕೆ ಕಾರಣವಾಗಿತ್ತು. ಆ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯವಾಗಿತ್ತು. ಆದರೆ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಸವಾಲನ್ನು ಭಾರತ ಹೇಗೆ ಎದುರಿಸಲಿದೆ ಎಂಬುವುದು ಕುತೂಹಲ ಕೆರಳಿಸಿದೆ.
Virat Kohli: ಆ ಒಂದು ಕ್ಷಣ ಪಂದ್ಯದ ಸ್ಥಿತಿಯೇ ಬದಲಾಯಿಸಿತು: ಮ್ಯಾಚ್ ಬಳಿಕ ವಿರಾಟ್ ಕೊಹ್ಲಿ ಏನಂದ್ರು ಕೇಳಿ
Harshal Patel, IPL 2021: ಐಪಿಎಲ್ ಇತಿಹಾಸದ ಅತಿದೊಡ್ಡ ದಾಖಲೆ ಉಡೀಸ್ ಮಾಡಿದ ಆರ್ಸಿಬಿ ವೇಗಿ ಹರ್ಷಲ್ ಪಟೇಲ್
(Australia Women vs India Women Pink Ball Test INDW Bat First Shafali and Mandhana good start)