Harshal Patel: IPLನ ಸಾರ್ವಕಾಲಿಕ ದಾಖಲೆ ಮುರಿಯುವ ಸನಿಹದಲ್ಲಿ ಹರ್ಷಲ್ ಪಟೇಲ್
IPL 2021: ಚಹಲ್ 2015 ರ ಐಪಿಎಲ್ ಸೀಸನ್ನಲ್ಲಿ ಆರ್ಸಿಬಿ ಪರ 23 ವಿಕೆಟ್ ಪಡೆದಿದ್ದರು. ಈ ವೇಳೆ ಚಹಲ್ ಭಾರತ ತಂಡವನ್ನು ಪ್ರತಿನಿಧಿಸಿರಲಿಲ್ಲ.
ಐಪಿಎಲ್ನಲ್ಲಿ (IPL 2021) ಆರ್ಸಿಬಿ (RCB) ವೇಗಿ ಹರ್ಷಲ್ ಪಟೇಲ್ (Harshal Patel) ವಿಕೆಟ್ ಬೇಟೆ ಮುಂದುವರೆದಿದೆ. ಮುಂಬೈ ಇಂಡಿಯನ್ಸ್ (Mumbai Indians) ವಿರುದ್ದ ಹ್ಯಾಟ್ರಿಕ್ ನೊಂದಿಗೆ 4 ವಿಕೆಟ್ ಪಡೆದಿದ್ದ ಹರ್ಷಲ್ ರಾಜಸ್ಥಾನ್ ರಾಯಲ್ಸ್ ವಿರುದ್ದ 3 ವಿಕೆಟ್ ಉರುಳಿಸಿದ್ದಾರೆ. ಇದರೊಂದಿಗೆ ಐಪಿಎಲ್ ಸೀಸನ್ 14ರ ವಿಕೆಟ್ಗಳ ಸಂಖ್ಯೆಯನ್ನು 26ಕ್ಕೇರಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಭಾರತದ ಅತ್ಯಂತ ಯಶಸ್ವಿ ದೇಶೀಯ ಬೌಲರ್ ಎನಿಸಿಕೊಂಡಿದ್ದಾರೆ. ಹೌದು, ಹರ್ಷಲ್ ಪಟೇಲ್ ಇದುವರೆಗೆ ಟೀಮ್ ಇಂಡಿಯಾವನ್ನು (Team India) ಪ್ರತಿನಿಧಿಸಿಲ್ಲ. ಭಾರತ ತಂಡವನ್ನು ಪ್ರತಿನಿಧಿಸದೇ ಐಪಿಎಲ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ಹರ್ಷಲ್ ಪಟೇಲ್ ಬರೆದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಯಜುವೇಂದ್ರ ಚಹಲ್ ಹೆಸರಿನಲ್ಲಿತ್ತು.
ಚಹಲ್ 2015 ರ ಐಪಿಎಲ್ ಸೀಸನ್ನಲ್ಲಿ ಆರ್ಸಿಬಿ ಪರ 23 ವಿಕೆಟ್ ಪಡೆದಿದ್ದರು. ಈ ವೇಳೆ ಚಹಲ್ ಭಾರತ ತಂಡವನ್ನು ಪ್ರತಿನಿಧಿಸಿರಲಿಲ್ಲ. ಅದರಂತೆ ಕಳೆದ 6 ವರ್ಷಗಳಿಂದ ಐಪಿಎಲ್ನಲ್ಲಿ ಮಿಂಚಿದ್ದ ದೇಶೀಯ ಬೌಲರುಗಳ ಪಟ್ಟಿಯಲ್ಲಿ ಚಹಲ್ ಅಗ್ರಸ್ಥಾನದಲ್ಲಿದ್ದರು. ಇದೀಗ 26 ವಿಕೆಟ್ ಉರುಳಿಸುವ ಮೂಲಕ ಹರ್ಷಲ್ ಪಟೇಲ್ ಚಹಲ್ ದಾಖಲೆಯನ್ನು ಮುರಿದಿದ್ದಾರೆ. ಅಷ್ಟೇ ಅಲ್ಲದೆ ಐಪಿಎಲ್ ಸಾರ್ವಕಾಲಿಕ ದಾಖಲೆ ಮುರಿಯಲು ಹರ್ಷಲ್ ಪಟೇಲ್ಗೆ ಕೇವಲ 6 ವಿಕೆಟ್ಗಳ ಅವಶ್ಯಕತೆಯಿದೆ.
11 ಪಂದ್ಯಗಳಿಂದ 26 ವಿಕೆಟ್ ಪಡೆದಿರುವ ಹರ್ಷಲ್ ಪಟೇಲ್ ಮುಂದಿನ ಮೂರು ಪಂದ್ಯಗಳಿಂದ 7 ವಿಕೆಟ್ ಉರುಳಿಸಿದರೆ, ಐಪಿಎಲ್ ಇತಿಹಾಸದಲ್ಲೇ ಸೀಸನ್ವೊಂದರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಳ್ಳಲಿದ್ದಾರೆ. ಪ್ರಸ್ತುತ ಈ ದಾಖಲೆ ಸಿಎಸ್ಕೆ ಆಲ್ರೌಂಡರ್ ಡ್ವೇನ್ ಬ್ರಾವೊ ಹೆಸರಿನಲ್ಲಿದೆ. ಬ್ರಾವೊ ಐಪಿಎಲ್ 2013 ರಲ್ಲಿ ಸಿಎಸ್ಕೆ ಪರ 32 ವಿಕೆಟ್ ಉರುಳಿಸಿದ್ದರು. ಇದು ಸೀಸನ್ವೊಂದರಲ್ಲಿ ಬೌಲರೊಬ್ಬರ ಅತೀ ಶ್ರೇಷ್ಠ ದಾಖಲೆಯಾಗಿ ಉಳಿದಿದೆ. ಇದೀಗ ಈ ದಾಖಲೆಯನ್ನು ಸರಿಗಟ್ಟಲು ಹರ್ಷಲ್ ಪಟೇಲ್ 6 ವಿಕೆಟ್ಗಳ ಅವಶ್ಯಕತೆಯಿದ್ದು, ಹಾಗೆಯೇ 7 ವಿಕೆಟ್ ಪಡೆದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಸದ್ಯ ಆರ್ಸಿಬಿ ಲೀಗ್ ಹಂತದಲ್ಲಿ ಇನ್ನೂ 3 ಪಂದ್ಯಗಳನ್ನು ಆಡಬೇಕಿದೆ. ಈ ಪಂದ್ಯದಲ್ಲಿ ಒಂದರಲ್ಲಿ ಜಯಿಸಿದರೂ ಪ್ಲೇ ಆಫ್ ಆಡುವುದು ಬಹುತೇಕ ಖಚಿತ ಎನ್ನಬಹುದು. ಇದರಿಂದ ಪ್ಲೇ ಆಫ್ ಪಂದ್ಯ ಆಡುವ ಅವಕಾಶ ಕೂಡ ಹರ್ಷಲ್ಗೆ ದೊರೆಯುವ ಸಾಧ್ಯತೆಯಿದ್ದು, ಹೀಗಾಗಿ ನಾಲ್ಕು ಪಂದ್ಯಗಳಲ್ಲಿ 7 ವಿಕೆಟ್ ಉರುಳಿಸಿ ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸುವ ಅವಕಾಶ ಹರ್ಷಲ್ ಪಟೇಲ್ ಮುಂದಿದೆ.
ಇದನ್ನೂ ಓದಿ: IPL 2021: ಇದು ಅಂತಿಂಥ ಗೆಲುವಲ್ಲ…ಮುಂಬೈ ದಾಖಲೆಯನ್ನು ಅಳಿಸಿ ಹಾಕಿದ RCB
ಇದನ್ನೂ ಓದಿ: IPL 2021: RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು ಇವರೇ..!
ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು
ಇದನ್ನೂ ಓದಿ: Mumbai Indians: ಸಾಲು ಸಾಲು ಪಂದ್ಯ ಸೋತು ಮುಂಬೈ ಪ್ಲೇ ಆಫ್ ಪ್ರವೇಶಿಸಿತ್ತು..!
(Harshal Patel now just 6 wickets away from all time IPL record)