35 ಬಾಲ್​ಗೆ 83 ರನ್ ಬಾರಿಸಿದ ದಿನೇಶ್ ಕಾರ್ತಿಕ್​ಗೆ ವಿಶ್ವಕಪ್​ನಲ್ಲಿ ಸ್ಥಾನ? ಕೋಚ್ ಹೇಳಿದ್ದಿಷ್ಟು

ಈ ಮೊದಲಿನ ಟಿ20 ವಿಶ್ವಕಪ್​ನಲ್ಲಿ ದಿನೇಶ್ ಕಾರ್ತಿಕ್ ಆಟ ಆಡಿದ್ದರು. ಆ ಬಳಿಕ ಅವರು ಮತ್ತೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ. ಈಗ ಅವರಿಗೆ ಮತ್ತೊಮ್ಮೆ ಸ್ಥಾನ ಸಿಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆರ್​ಸಿಬಿ ಕೋಚ್ ಆ್ಯಂಡಿ ಫ್ಲವರ್ ಕೂಡ ದಿನೇಶ್ ಆಟವನ್ನು ಮೆಚ್ಚಿಕೊಂಡಿದ್ದಾರೆ

35 ಬಾಲ್​ಗೆ 83 ರನ್ ಬಾರಿಸಿದ ದಿನೇಶ್ ಕಾರ್ತಿಕ್​ಗೆ ವಿಶ್ವಕಪ್​ನಲ್ಲಿ ಸ್ಥಾನ? ಕೋಚ್ ಹೇಳಿದ್ದಿಷ್ಟು
ದಿನೇಶ್ ಕಾರ್ತಿಕ್

Updated on: Apr 16, 2024 | 10:39 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ರನ್​ಗಳ ಮಹಾಪೂರವೇ ಹರಿದುಬಂತು. 288 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನು ಹತ್ತಿದ ಆರ್​ಸಿಬಿಗೆ ದಿನೇಶ್ ಕಾರ್ತಿಕ್ ಬೆನ್ನೆಲುಬಾಗಿ ನಿಂತರು. 35 ಬಾಲ್​ಗಳಿಗೆ ಅವರು 83 ರನ್ ಚಚ್ಚಿದರು. ಮಧ್ಯ ಕ್ರಮಾಂಕದ ಆಟಗಾರನಾಗಿ ಅವರು ಈ ರೀತಿಯ ಪರ್ಫಾರ್ಮೆನ್ಸ್ ನೀಡಿರುವುದರಿಂದ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅವರಿಗೆ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಸಿಗಬಹುದು ಎಂದು ಊಹಿಸಲಾಗುತ್ತಿದೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಈ ಮೊದಲಿನ ಟಿ20 ವಿಶ್ವಕಪ್​ನಲ್ಲಿ ದಿನೇಶ್ ಕಾರ್ತಿಕ್ ಆಟ ಆಡಿದ್ದರು. ಆ ಬಳಿಕ ಅವರು ಮತ್ತೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ. ಈಗ ಅವರಿಗೆ ಮತ್ತೊಮ್ಮೆ ಸ್ಥಾನ ಸಿಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆರ್​ಸಿಬಿ ಕೋಚ್ ಆ್ಯಂಡಿ ಫ್ಲವರ್ ಕೂಡ ದಿನೇಶ್ ಆಟವನ್ನು ಮೆಚ್ಚಿಕೊಂಡಿದ್ದಾರೆ. ‘ಟಿ20 ವಿಶ್ವಕಪ್​ನಲ್ಲಿ ಸ್ಥಾನ ನೀಡಲೇಬೇಕು ಎನ್ನುವ ರೀತಿಯಲ್ಲಿ ಆಡುತ್ತಿದ್ದೀರಿ. ನೀವು ದಿನ ಕಳೆದಂತೆ ಉತ್ತಮವಾಗುತ್ತಿದ್ದೀರಿ’ ಎಂದಿದ್ದಾರೆ ಅವರು.
ಇದನ್ನೂ ಓದಿ: ವಿಶ್ವಕಪ್​ನಲ್ಲಿ ಸ್ಥಾನಪಡೆಯಲು ದಿನೇಶ್ ಕಾರ್ತಿಕ್ ಸ್ಫೋಟಕ ಆಟ? ಹಿಂಟ್ ಕೊಟ್ಟ ರೋಹಿತ್

ಬೆಂಗಳೂರು ಸ್ಟೇಡಿಯಂನಲ್ಲಿ ಎಲ್ಲರೂ ಡಿಕೆ ಡಿಕೆ ಎನ್ನುವ ಘೋಷಣೆ ಕೂಗಿದ್ದರು. ಕಾರ್ತಿಕ್ ಅವರು 5 ಫೋರ್ ಹಾಗೂ 7 ಸಿಕ್ಸ್​ಗಳ ಸಹಾಯದಿಂದ 83 ರನ್ ಕಲೆ ಹಾಕಿದ್ದರು. ಅವರ ಸ್ಟ್ರೈಕ್​ ರೇಟ್ 237.14 ಇದೆ. ಸದ್ಯ ವಿಶ್ವಕಪ್​ನ ವಿಕೆಟ್ ಕೀಪರ್ ರೇಸ್​ನಲ್ಲಿ ರಿಷಭ್ ಪಂತ್, ಇಶಾನ್ ಕಿಶನ್, ಧ್ರುವ್ ಜುರೇಲ್, ಸಂಜು ಸ್ಯಾಮ್​ಸನ್ ಹಾಗೂ ಕೆಎಲ್ ರಾಹುಲ್ ಇದ್ದಾರೆ.

ಆರ್​ಸಿಬಿ ಟ್ವೀಟ್

ಈ ಬಾರಿ ಏಳು ಪಂದ್ಯಗಳನ್ನು ಆಡಿರೋ ಕಾರ್ತಿಕ್ ಅವರು 156 ರನ್ ಕಲೆ ಹಾಕಿದ್ದು, 194 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಹೀಗಾಗಿ ಅವರಿಗೆ ವಿಶ್ವಕಪ್​ನಲ್ಲಿ ಆಡೋಕೆ ಚಾನ್ಸ್ ಇದೆ ಎನ್ನಲಾಗುತ್ತಿದೆ. ಈ ಮೊದಲು ರೋಹಿತ್ ಶರ್ಮಾ ಕೂಡ ಇದೇ ರೀತಿ ಹೇಳಿ ಕಾರ್ತಿಕ್ ಕಾಲೆಳೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us