ವೆಸ್ಟ್ ಇಂಡೀಸ್ ನಂತರ ಐರ್ಲೆಂಡ್ ಕ್ರಿಕೆಟಿಗರಿಗೂ ವಕ್ಕರಿಸಿದ ಕೊರೊನಾ; ನಾಲ್ವರು ಆಟಗಾರರಿಗೆ ಕೊರೊನಾ ಪಾಸಿಟಿವ್

| Updated By: ಪೃಥ್ವಿಶಂಕರ

Updated on: Dec 18, 2021 | 5:07 PM

ಕೊರೊನಾ ಮತ್ತೊಮ್ಮೆ ಕ್ರಿಕೆಟ್ ಅನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಆರಂಭಿಸಿದೆ. ಈ ವೇಳೆ ಅದು ಐರ್ಲೆಂಡ್ ತಂಡದ ಮೇಲೆ ದಾಳಿ ನಡೆಸಿದೆ. ಐರ್ಲೆಂಡ್‌ನ 4 ಆಟಗಾರರು ಕೊರೊನಾಗೆ ತುತ್ತಾಗಿದ್ದಾರೆ.

ವೆಸ್ಟ್ ಇಂಡೀಸ್ ನಂತರ ಐರ್ಲೆಂಡ್ ಕ್ರಿಕೆಟಿಗರಿಗೂ ವಕ್ಕರಿಸಿದ ಕೊರೊನಾ; ನಾಲ್ವರು ಆಟಗಾರರಿಗೆ ಕೊರೊನಾ ಪಾಸಿಟಿವ್
ಐರ್ಲೆಂಡ್ ಕ್ರಿಕೆಟ್ ಆಟಗಾರರು
Follow us on

ಕೊರೊನಾ ಮತ್ತೊಮ್ಮೆ ಕ್ರಿಕೆಟ್ ಅನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಆರಂಭಿಸಿದೆ. ಈ ವೇಳೆ ಅದು ಐರ್ಲೆಂಡ್ ತಂಡದ ಮೇಲೆ ದಾಳಿ ನಡೆಸಿದೆ. ಐರ್ಲೆಂಡ್‌ನ 4 ಆಟಗಾರರು ಕೊರೊನಾಗೆ ತುತ್ತಾಗಿದ್ದಾರೆ. ಇದಲ್ಲದೆ, ಸಹಾಯಕ ಸಿಬ್ಬಂದಿಯ ಸದಸ್ಯರೂ ಕೊರೊನಾ ಪಾಸಿಟಿವ್ ಎಂದು ಕಂಡುಬಂದಿದೆ. ಅಮೇರಿಕಾ ಮತ್ತು ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಐರ್ಲೆಂಡ್ ಕ್ರಿಕೆಟ್ ತಂಡವು ಸೀಮಿತ ಓವರ್‌ಗಳ ಸರಣಿಗೆ ಹೊರಡುವ ಹಂತದಲ್ಲಿದ್ದಾಗ ಇದು ಸಂಭವಿಸಿದೆ. ಕೊರೊನಾ ಪಾಸಿಟಿವ್ ಆಗಿರುವ ಆಟಗಾರರ ನಂತರ, ಐರ್ಲೆಂಡ್ ಕ್ರಿಕೆಟ್ ಮಂಡಳಿಯು ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿರುವ ವೇಗದ ಬೌಲರ್ ಜೋಶ್ ಲಿಟಲ್‌ಗೆ ಕರೆ ಮಾಡಿದೆ.

ಕ್ರಿಕೆಟ್ ಐರ್ಲೆಂಡ್ ಹೊರಡಿಸಿದ ಹೇಳಿಕೆಯ ಪ್ರಕಾರ, “ಬ್ಯಾರಿ ಮೆಕಾರ್ಥಿ ಮತ್ತು ಜಾರ್ಜ್ ಡಾಕ್ರೆಲ್ ಕರೋನಾ ಪಾಸಿಟಿವ್ ಆಗಿರುವ ಆಟಗಾರರು. ಇಬ್ಬರೂ ತಂಡದೊಂದಿಗೆ ಮಿಯಾಮಿ ತಲುಪಿಲ್ಲ. ಆದರೆ ಕೊರೊನಾ ನೆಗೆಟಿವ್ ಬಂದ ನಂತರ ಇಬ್ಬರೂ ತಂಡ ಸೇರಿಕೊಳ್ಳುತ್ತಾರೆ. ಹ್ಯಾರಿ ಟೆಕ್ಟರ್ ಮತ್ತು ಗರೆಥ್ ಡಿಲ್ಲಾನಿ ಫ್ಲೋರಿಡಾದಲ್ಲಿದ್ದರು, ಅಲ್ಲಿ ಅವರು US T20 ಓಪನ್ ಪಂದ್ಯಾವಳಿಯನ್ನು ಆಡಲು ಹೋಗಿದ್ದರು. ಆದರೆ, ಹಿಂದಿರುಗಿದ ನಂತರ, ಅವರಿಬ್ಬರೂ ಸಹ ಕೊರೊನಾ ಪಾಸಿಟಿವ್ ಆಗಿರುವುದು ಕಂಡುಬಂದಿದೆ, ಅವರಿಬ್ಬರನ್ನೂ 10 ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಲಾಗಿದೆ.

ಐರ್ಲೆಂಡ್ ಕ್ರಿಕೆಟ್‌ನಲ್ಲಿ ಕೊರೊನಾ ಅಟ್ಟಹಾಸ
ಈ ಆಟಗಾರರ ಹೊರತಾಗಿ, ಪ್ರವಾಸದ ಒಂದು ದಿನದ ಮೊದಲು ಕ್ರೇಗ್ ಯಂಗ್ ಸೋಂಕಿತರೊಂದಿಗಿದ್ದರು ಎಂಬುದು ಐರ್ಲೆಂಡ್ ಕ್ರಿಕೆಟ್ ಮಂಡಳಿಗೆ ತಿಳಿದುಬಂದಿತು. ಹೀಗಾಗಿ ಅವರನ್ನು ಪರೀಕ್ಷಿಸಿದಾಗ ಅವರಿಗೂ ಕೊರೊನಾ ತಗುಲಿರುವುದು ಪತ್ತೆಯಾಗಿದೆ. ಈ ಕಾರಣದಿಂದಾಗಿ, ಕ್ರೇಗ್ ಯಂಗ್‌ ಅವರನ್ನು 10 ದಿನಗಳ ಕ್ವಾರಂಟೈನ್‌ಗೆ ಕಳುಹಿಸಲಾಯಿತು. ಈಗ ಅವರು ಪಿಸಿಆರ್ ಪರೀಕ್ಷೆಯು ನೆಗೆಟಿವ್ ಬಂದ ನಂತರವೇ ತಂಡವನ್ನು ಸೇರಲು ಸಾಧ್ಯವಾಗುತ್ತದೆ. ಈ ಆಟಗಾರರನ್ನು ಹೊರತುಪಡಿಸಿ, ತಂಡದ ಸಹಾಯಕ ಕೋಚ್ ಗ್ಯಾರಿ ವಿಲ್ಸನ್ ಕೂಡ ತಂಡದ ಇತರರೊಂದಿಗೆ ಪ್ರವಾಸಕ್ಕೆ ಹೋಗಲು ಸಾಧ್ಯವಾಗಲಿಲ್ಲ. ವಾಸ್ತವವಾಗಿ, ಪೂರ್ವ-ಸರಣಿ ಪರೀಕ್ಷೆಯಲ್ಲಿ, ಅವರಿಗೆ ಕೊರೊನಾ ಪಾಸಿಟಿವ್ ಎಂಬ ತಪ್ಪು ವರದಿಯನ್ನು ನೀಡಲಾಯಿತು. ಈಗ ಮತ್ತೊಮ್ಮೆ ಪರೀಕ್ಷೆಗೆ ಒಳಪಡಲಿದ್ದಾರೆ. ಎಲ್ಲವೂ ಸರಿಯಾಗಿ ನಡೆದರೆ ಭಾನುವಾರ ತೆರಳಲಿದ್ದಾರೆ. ಬೋರ್ಡ್ ಆಫ್ ಐರ್ಲೆಂಡ್ ಹೊರಡಿಸಿದ ಹೇಳಿಕೆಯ ಪ್ರಕಾರ, ಮಿಯಾಮಿ ತಲುಪಿದ ಎಲ್ಲಾ ಆಟಗಾರರು ಮತ್ತು ತರಬೇತುದಾರರ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂದು ಹೇಳಿದೆ.

ವೆಸ್ಟ್ ಇಂಡೀಸ್ ತಂಡದ ಮೇಲೆ ಕೊರೊನಾ ದಾಳಿ
ಈ ಹಿಂದೆ, ಆಟಗಾರರು ಸೇರಿದಂತೆ ವೆಸ್ಟ್ ಇಂಡೀಸ್ ತಂಡದೊಂದಿಗೆ ಸಂಬಂಧ ಹೊಂದಿರುವ ಸುಮಾರು ಅರ್ಧ ಡಜನ್ ಜನರು ಕೊರೊನಾ ಪಾಸಿಟಿವ್ ಎಂದು ಕಂಡುಬಂದಿದೆ. ಕೊರೊನಾ ಕಾರಣ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯನ್ನೂ ಮುಂದೂಡಲಾಗಿತ್ತು. ವೆಸ್ಟ್ ಇಂಡೀಸ್ ತಂಡ ತಮ್ಮ ದೇಶಕ್ಕೆ ಮರಳಿದೆ. ಆದರೆ ಪಾಸಿಟಿವ್ ಬಂದಿದ್ದ ಕೆರಿಬಿಯನ್ ಆಟಗಾರರು ಪ್ರಸ್ತುತ ಪಾಕಿಸ್ತಾನದಲ್ಲಿ ಪ್ರತ್ಯೇಕವಾಗಿದ್ದಾರೆ.