IND vs SA: ಇಂತಹ ಆಟಗಾರನಿಗೆ ಅವಕಾಶ ಕೊಡಬೇಕು; ಶ್ರೇಯಸ್ ಅಯ್ಯರ್ನನ್ನು ಹೊಗಳಿದ ಗಂಗೂಲಿ
IND vs SA: ಅಯ್ಯರ್ ಮೊದಲ ಟೆಸ್ಟ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ, ಆದರೆ ಅವರಿಗೆ ದಕ್ಷಿಣ ಆಫ್ರಿಕಾದಲ್ಲಿ ನಿಜವಾದ ಪರೀಕ್ಷೆ ಎದುರಾಗಲಿದೆ.
ಭಾರತ ಕ್ರಿಕೆಟ್ ತಂಡ ಟೆಸ್ಟ್ ಸರಣಿಗಾಗಿ ದಕ್ಷಿಣ ಆಫ್ರಿಕಾ ತಲುಪಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾದ ಕೆಲ ಹಿರಿಯ ಆಟಗಾರರ ವೃತ್ತಿಜೀವನ ಅತಂತ್ರವಾಗಿದೆ. ಅದೇ ಸಮಯದಲ್ಲಿ, ಕೆಲವು ಆಟಗಾರರು ತಮ್ಮ ಪ್ರದರ್ಶನದಿಂದ ತಂಡದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಅಂತಹ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಶ್ರೇಯಸ್ ಅಯ್ಯರ್, ಅವರು ಇತ್ತೀಚೆಗೆ ಟೀಮ್ ಇಂಡಿಯಾಕ್ಕೆ ಅದ್ಭುತವಾದ ಪದಾರ್ಪಣೆ ಮಾಡಿದ್ದಾರೆ. ಶ್ರೇಯಸ್ ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿ ಟೀಮ್ ಇಂಡಿಯಾದಲ್ಲಿದ್ದು, ಅಜಿಂಕ್ಯ ರಹಾನೆ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ 3 ಟೆಸ್ಟ್ ಪಂದ್ಯಗಳಲ್ಲಿ ಬಲಿಷ್ಠ ಪ್ರದರ್ಶನ ನೀಡುವಲ್ಲಿ ಶ್ರೇಯಸ್ ಯಶಸ್ವಿಯಾದರೆ, ಮುಂದಿನ ಸರಣಿಗೆ ಅವರು ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಖಚಿತಪಡಿಸಿಕೊಳ್ಳುತ್ತಾರೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಟೀಂ ಇಂಡಿಯಾದಲ್ಲಿ ಅಯ್ಯರ್ ಅವರನ್ನು ನೋಡಲು ಸಂತೋಷಪಟ್ಟಿದ್ದಾರೆ ಮತ್ತು ಅಂತಹ ಆಟಗಾರನಿಗೆ ಅವಕಾಶ ನೀಡುವುದು ಅಗತ್ಯ ಎಂದು ನಂಬಿದ್ದಾರೆ.
ಕಾನ್ಪುರ ಟೆಸ್ಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್ ಎಲ್ಲರನ್ನೂ ಆಕರ್ಷಿಸಿದರು. ಅವರಲ್ಲಿ ಗಂಗೂಲಿ ಕೂಡ ಒಬ್ಬರು. ಶ್ರೇಯಸ್ ಅವರ ದಾಖಲೆಯನ್ನು ಹೊಗಳಿದ ಗಂಗೂಲಿ ಅವರಿಗೆ ಅವಕಾಶ ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ. ನಾನು ಅವರ ಮೊದಲ ದರ್ಜೆಯ ಸರಾಸರಿಯನ್ನು ನೋಡಿದೆ. ಅವರು 10 ವರ್ಷಗಳಿಂದ 52 ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಹೀಗಾಗಿ ಅಯ್ಯರ್ ಅದನ್ನು ಮುಂದುವರಿಸಿದರೆ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ನ್ಯೂಜಿಲೆಂಡ್ ವಿರುದ್ಧ ಚೊಚ್ಚಲ ಶತಕ ಸಿಡಿಸಿದ ಶ್ರೇಯಸ್ ಅವರ ದೊಡ್ಡ ಸವಾಲಿನ ಬಗ್ಗೆ ಗಂಗೂಲಿ ಮಾತನಾಡಿದರು. ‘ಬ್ಯಾಕ್ ಸ್ಟೇಜ್ ವಿತ್ ಬೋರಿಯಾ’ ಎಂಬ ಯೂಟ್ಯೂಬ್ ಶೋನಲ್ಲಿ ಮಾತನಾಡಿದ ಗಂಗೂಲಿ, ಅಯ್ಯರ್ ಅವರ ನಿಜವಾದ ಪರೀಕ್ಷೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ ಎಂದು ಹೇಳಿದರು. ಅಯ್ಯರ್ ಮೊದಲ ಟೆಸ್ಟ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ, ಆದರೆ ಅವರಿಗೆ ದಕ್ಷಿಣ ಆಫ್ರಿಕಾದಲ್ಲಿ ನಿಜವಾದ ಪರೀಕ್ಷೆ ಎದುರಾಗಲಿದೆ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಅಲ್ಲಿ ವೇಗ ಮತ್ತು ಬೌನ್ಸ್ ಇರುತ್ತದೆ. ಹೀಗಾಗಿ ಅವರು ಉತ್ತಮವಾಗಿ ಆಡಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇವೆ ಎಂದಿದ್ದಾರೆ.
ಶ್ರೇಯಸ್ ಅಯ್ಯರ್ ಅವರ ಶ್ರೇಷ್ಠ ದಾಖಲೆ 10 ವರ್ಷಗಳಿಂದ ಅಲ್ಲ, ಅಯ್ಯರ್ ಕಳೆದ 7 ವರ್ಷಗಳಿಂದ ನಿರಂತರವಾಗಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. 2014 ರಲ್ಲಿ ಚೊಚ್ಚಲ ಪ್ರವೇಶದಿಂದ ಇಲ್ಲಿಯವರೆಗೆ, ಮುಂಬೈ, ಭಾರತ-ಎ ಮತ್ತು ಈಗ ಭಾರತಕ್ಕಾಗಿ ಆಡಿದ 56 ಪ್ರಥಮ ದರ್ಜೆ ಪಂದ್ಯಗಳಲ್ಲಿ, ಶ್ರೇಯಸ್ 52.10 ರ ಸರಾಸರಿಯಲ್ಲಿ 13 ಶತಕಗಳು ಮತ್ತು 24 ಅರ್ಧ ಶತಕಗಳನ್ನು ಒಳಗೊಂಡಂತೆ 4794 ರನ್ ಗಳಿಸಿದ್ದಾರೆ. 27 ವರ್ಷದ ಶ್ರೇಯಸ್ ಕಾನ್ಪುರ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿ 105 ರನ್ ಗಳಿಸಿದರು. ನಂತರ ಮುಂದಿನ ಇನ್ನಿಂಗ್ಸ್‌ನಲ್ಲೂ 65 ರನ್ ಗಳಿಸಿದರು. ಅವರು ಇದುವರೆಗೆ 2 ಟೆಸ್ಟ್‌ಗಳ 4 ಇನ್ನಿಂಗ್ಸ್‌ಗಳಲ್ಲಿ 50.50 ಸರಾಸರಿಯಲ್ಲಿ 202 ರನ್ ಗಳಿಸಿದ್ದಾರೆ.
Published On - 5:51 pm, Sat, 18 December 21