Virat Kohli: ಜಡೇಜಾರಿಂದ ಶಾಕಿಂಗ್ ಹೇಳಿಕೆ: ‘ಪಾಕ್ ವಿರುದ್ಧದ ಸೋಲಿನ ಬಳಿಕ ವಿರಾಟ್ ಕೊಹ್ಲಿ ಆಡಿದ ಮಾತು ಸರಿಯಲ್ಲ’

| Updated By: Vinay Bhat

Updated on: Oct 28, 2021 | 11:38 AM

Ajay Jadeja: ಭಾರತ ತಂಡ ಟಿ20 ವಿಶ್ವಕಪ್​ ಸೂಪರ್ 12ರ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ವಿರುದ್ಧ 10 ವಿಕೆಟ್​ಗಳ ಸೋಲು ಕಂಡಿತ್ತು. ಸದ್ಯ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಆಡಿದ ಮಾತಿನ ಬಗ್ಗೆ ಅಜಯ್ ಜಡೇಜಾ ಟೀಕಿಸಿದ್ದು, ನನಗೆ ಬಹಳಾ ಬೇಸರ ಉಂಟುಮಾಡಿತು ಎಂದು ಹೇಳಿದ್ದಾರೆ.

Virat Kohli: ಜಡೇಜಾರಿಂದ ಶಾಕಿಂಗ್ ಹೇಳಿಕೆ: ‘ಪಾಕ್ ವಿರುದ್ಧದ ಸೋಲಿನ ಬಳಿಕ ವಿರಾಟ್ ಕೊಹ್ಲಿ ಆಡಿದ ಮಾತು ಸರಿಯಲ್ಲ’
Virat Kohli Ajay Jadeja IND vs PAK
Follow us on

ಆರನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್​ನ (T20 World Cup) ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ್ದ ಭಾರತ (India) ಸೂಪರ್ 12 ಹಂತದ (Super 12) ಮೊದಲ ಪಂದ್ಯದಲ್ಲೇ ಮುಗ್ಗರಿಸಿತು. ಪಾಕಿಸ್ತಾನ (India vs Pakistan) ವಿರುದ್ಧ 10 ವಿಕೆಟ್​ಗಳ ಸೋಲು ಅನುಭವಿಸಿದ ಟೀಮ್ ಇಂಡಿಯಾ (Team India) ಮುಂದಿನ ಹಾದಿ ಕಬ್ಬಣದ ಕಡಲೆಯಂತಾಗಿದೆ. ಅಕ್ಟೋಬರ್ 31 ರಂದು ನಡೆಯಲಿರುವ ನ್ಯೂಜಿಲೆಂಡ್ (India vs New Zealand) ವಿರುದ್ಧದ ಎರಡನೇ ಪಂದ್ಯ ವಿರಾಟ್ ಕೊಹ್ಲಿ (Virat Kohli) ಪಡೆಗೆ ಮುಖ್ಯವಾಗಿದ್ದು, ಗೆದ್ದರಷ್ಟೆ ಉಳಿಗಾಲ ಎಂಬಂತಾಗಿದೆ. ಇದರ ನಡುವೆ ಪಾಕಿಸ್ತಾನ ವಿರುದ್ಧದ ಭಾರತದ ಸೋಲು ಅನೇಕರಿಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕ್ರಿಕೆಟ್ ದಿಗ್ಗಜರಿಂದಲೇ ಒಂದೊಂದು ಹೇಳಿಕೆ ಬರುತ್ತಲೇಯಿದೆ. ಸದ್ಯ ಪಾಕ್ ವಿರುದ್ಧದ ಪಂದ್ಯ ಮುಗಿದ ಬಳಿಕ ಕೊಹ್ಲಿ ಆಡಿದ ಮಾತು ನನಗೆ ಅಸಮಾಧಾನ ತಂದಿದೆ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಅಜಯ್ ಜಡೇಜಾ (Ajay Jadeja) ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.

ಪಾಕ್ ವಿರುದ್ಧ ಟಾಸ್ ಸೋತು ಕಣಕ್ಕಿಳಿದಿದ್ದ ಭಾರತ ಆರಂಭದಲ್ಲೇ ಎರಡು ಪ್ರಮುಖ ವಿಕೆಟ್​ಗಳನ್ನು ಕೈಚೆಲ್ಲಿತ್ತು. ಮೊದಲ ಓವರ್​ನಲ್ಲಿ ರೋಹಿತ್ ಶರ್ಮಾ(0) ತಾವು ಎದುರಿಸಿದ ಮೊದಲ ಎಸೆತದಲ್ಲೇ ಎಲ್​ಬಿಗೆ ಬಲಿಯಾಗಿದ್ದರು. ನಂತರ ಕೆ. ಎಲ್ ರಾಹುಲ್ (3) ಕ್ಲೀನ್ ಬೌಲ್ಡ್ ಆಗಿದ್ದರು. ಈ ಎರಡು ಬಿಗ್ ವಿಕೆಟ್​ಗಳನ್ನು ಶಾಹೀನ್ ಅಫ್ರಿದಿ ಪಡೆದುಕೊಂಡಿದ್ದರು. ಪಂದ್ಯ ಮುಗಿದ ಬಳಿಕ ಈ ಬಗ್ಗೆ ಮಾತನಾಡುದ್ದ ಕೊಹ್ಲಿ, ಪವರ್ ಪ್ಲೇಯ ಆರಂಭದಲ್ಲೇ ನಾವು ಎರಡು ಪ್ರಮುಖ ವಿಕೆಟ್ ಕಳೆದುಕೊಂಡಿದ್ದು ತೊಂದರೆಯಾಯಿತು. ಅಲ್ಲಿಂದ ನಾವು ಪುಟುದೇಳಲು ಸಾಧ್ಯವಾಗಲೇಯಿಲ್ಲ ಎಂದು ಹೇಳಿದ್ದರು.

ಕೊಹ್ಲಿಯ ಈ ಹೇಳಿಕೆ ಬಗ್ಗೆ ಅಜಯ್ ಜಡೇಜಾ ಮಾತನಾಡಿದ್ದು, ನನಗೆ ಬಹಳಾ ಬೇಸರ ಉಂಟುಮಾಡಿತು ಎಂದಿದ್ದಾರೆ. ‘ಪಾಕಿಸ್ತಾನ ವಿರುದ್ಧದ ಪಂದ್ಯ ಸೋತ ಬಳಿಕ ವಿರಾಟ್‌ ಕೊಹ್ಲಿ ಹೇಳಿಕೆಯನ್ನು ಕೇಳಿದೆ. ಅವರು ಹೇಳಿದರು ಪಾಕ್‌ ವಿರುದ್ಧದ ಪಂದ್ಯದಲ್ಲಿ ಪವರ್‌ ಪ್ಲೇ ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡ ಕಾರಣ ಭಾರತ ತಂಡ ಹಿನ್ನಡೆ ಅನುಭವಿಸಿತು ಎಂದು. ಈ ಹೇಳಿಕೆ ನನಗೆ ಬೇಸರ ತಂದಿದೆ. ಏಕೆಂದರೆ 2 ವಿಕೆಟ್‌ ಬಿದ್ದರೂ ಕ್ರೀಸ್‌ನಲ್ಲಿ ಇನ್ನೂ ವಿರಾಟ್ ಕೊಹ್ಲಿ ಅವರಂತಹ ಅನುಭವಿ ಬಲಿಷ್ಠ ಬ್ಯಾಟರ್ ಇದ್ದರು. ಹೀಗಾಗಿ ಪಂದ್ಯ ಅಲ್ಲೇ ಕೈ ಜಾರಿತ್ತು ಎಂದು ಹೇಳುವ ಅಗತ್ಯವೇ ಇಲ್ಲ. ಇನ್ನೂ ಎಸೆತವನ್ನು ಎದುರಿಸದೇ ಇರುವಾಗಲೇ ಇಂಥದ್ದೊಂದು ಆಲೋಚನೆ ಕೊಹ್ಲಿ ತಲೆಯಲ್ಲಿ ಮೂಡಿದೆ ಎಂಬುದು, ಭಾರತ ತಂಡದ ಮನಸ್ಥಿತಿಯನ್ನು ತಿಳಿಸಿಕೊಡುತ್ತದೆ’ ಎಂದು ಹೇಳಿದ್ದಾರೆ.

‘ಇಂಗ್ಲೆಂಡ್‌ ತಂಡವನ್ನು ನೋಡಿ. ಅವರು ಕ್ರೀಸ್‌ನಲ್ಲಿ ಯಾರೇ ಇರಲಿ ಆಕ್ರಮಣಕಾರಿ ಆಟ ಒಂದೇ ಅವರ ಮಂತ್ರ. ನಾವು ಅಂತಹ ಹಾದದಿ ಹಿಡಿಯಬೇಕು. ಎರಡು ವಿಕೆಟ್ ಪತನಗೊಂಡಾಗ ಕುಗ್ಗಬಾರದು’ ಎಂದು ಜಡೇಜಾ ಹೇಳಿದ್ದಾರೆ.

ಭಾನುವಾರ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ-ಪಾಕ್ ಪಂದ್ಯದಲ್ಲಿ ಮೊದಲಿ ಬ್ಯಾಟ್ ಮಾಡಿದ ಕೊಹ್ಲಿ ಪಡೆ ನಾಯಕ ವಿರಾಟ್‌ ಅವರ ಅರ್ಧಶತಕದ ನೆರವಿನಿಂದ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟ್ಕಕೆ 151 ರನ್‌ ಕಲೆ ಹಾಕಿತ್ತು ಬಳಿಕ ಗುರಿ ಹಿಂಬಾಲಿಸಿದ ಪಾಕಿಸ್ತಾನ ತಂಡ ಆರಂಭಿಕರಾದ ಬಾಬರ್‌ ಆಝಮ್‌ ಹಾಗೂ ಮೊಹಮ್ಮದ್‌ ರಿಜ್ವಾನ್‌ ಅವರ ಅರ್ಧಶತಕಗಳ ನೆರವಿನಿಂದ ಇನ್ನೂ 13 ಎಸೆತಗಳು ಬಾಕಿ ಇರುವಾಗಲೇ 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.

KL Rahul: ಮೆಗಾ ಹರಾಜಿಗೂ ಮುನ್ನ ಬಿಗ್ ಶಾಕ್: ಕೆಎಲ್ ರಾಹುಲ್ ಬಗ್ಗೆ ಪಂಜಾಬ್ ಕಿಂಗ್ಸ್​ನಿಂದ ಅಚ್ಚರಿ ಹೇಳಿಕೆ

India vs New Zealand: ಮೈದಾನದಲ್ಲಿ ಟೀಮ್ ಇಂಡಿಯಾ ಆಟಗಾರರ ಬೆವರಿಳಿಸುತ್ತಿರುವ ಮೆಂಟರ್ ಧೋನಿ

(Ajay Jadeja who is disappointed Virat Kohli comment post India 10-wicket thrashing at the hands of Pakistan)