AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2021: ಟೂರ್ನಿಯಿಂದ ಹೊರಬೀಳುವ ಭಯ! ಕೊಹ್ಲಿ ತಲೆನೋವು ಹೆಚ್ಚಿಸಿವೆ ತಂಡದ ಈ 4 ಸಮಸ್ಯೆಗಳು

T20 World Cup 2021: ಟೀಮ್ ಇಂಡಿಯಾ ಒಂದಕ್ಕಿಂತ ಹೆಚ್ಚು ಮ್ಯಾಚ್ ವಿನ್ನರ್‌ಗಳಿಂದ ತುಂಬಿದೆ. ಆದರೆ ತಂಡದಲ್ಲಿರುವ ಈ 4 ದೌರ್ಬಲ್ಯಗಳಿಂದ ಕೊಹ್ಲಿಗೆ ತೆಲನೋವು ಹೆಚ್ಚಾಗಿದೆ.

T20 World Cup 2021: ಟೂರ್ನಿಯಿಂದ ಹೊರಬೀಳುವ ಭಯ! ಕೊಹ್ಲಿ ತಲೆನೋವು ಹೆಚ್ಚಿಸಿವೆ ತಂಡದ ಈ 4 ಸಮಸ್ಯೆಗಳು
ಹಾರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ
Follow us
TV9 Web
| Updated By: ಪೃಥ್ವಿಶಂಕರ

Updated on: Oct 28, 2021 | 2:41 PM

2021 ರ ಟಿ 20 ವಿಶ್ವಕಪ್‌ನಲ್ಲಿ ಭಾರತದ ಅತ್ಯಂತ ಕಳಪೆ ಆರಂಭವು ಈಗ ಕೊಹ್ಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪಾಕಿಸ್ತಾನ ವಿರುದ್ಧ 10 ವಿಕೆಟ್‌ಗಳಿಂದ ಸೋತಿರುವ ಭಾರತ ತಂಡಕ್ಕೆ ಸೆಮಿಫೈನಲ್‌ ತಲುಪುವುದು ಈಗ ಕಷ್ಟದ ಕೆಲಸ. ಟೀಮ್ ಇಂಡಿಯಾ ಈಗ ಭಾನುವಾರ ನ್ಯೂಜಿಲೆಂಡ್ ವಿರುದ್ಧ ಪಂದ್ಯವನ್ನು ಆಡಬೇಕಾಗಿದೆ. ಅದರಲ್ಲಿ ಸೋಲಿನ ಹಾಲ್ ಅನ್ನು ಗೆಲ್ಲಬೇಕು, ಇಲ್ಲದಿದ್ದರೆ ಪಂದ್ಯಾವಳಿಯಿಂದ ಭಾರತ ಹೊರಹೋಗುವ ಸಾಧ್ಯತೆಗಳು ಹೆಚ್ಚಿವೆ. ಟೀಮ್ ಇಂಡಿಯಾ ಒಂದಕ್ಕಿಂತ ಹೆಚ್ಚು ಮ್ಯಾಚ್ ವಿನ್ನರ್‌ಗಳಿಂದ ತುಂಬಿದೆ. ಆದರೆ ತಂಡದಲ್ಲಿರುವ ಈ 4 ದೌರ್ಬಲ್ಯಗಳಿಂದ ಕೊಹ್ಲಿಗೆ ತೆಲನೋವು ಹೆಚ್ಚಾಗಿದೆ.

ಆಟಗಾರರು ಫಾರ್ಮ್‌ನಿಂದ ಹೊರಗಿದ್ದಾರೆ ಭಾರತದ ಪ್ಲೇಯಿಂಗ್ XI ನಲ್ಲಿ ಅನೇಕ ಆಟಗಾರರು ತಮ್ಮದೇ ಆದ ಸಾಮಥ್ಯ್ರ ಹೊಂದಿದ್ದಾರೆ. ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಅವರಂತಹ ದೊಡ್ಡ ಹೆಸರುಗಳು ಟೀಮ್ ಇಂಡಿಯಾದಲ್ಲಿದೆ. ಆದರೆ ಈ ತಂಡದ ಕೆಲವು ಆಟಗಾರರು ಫಾರ್ಮ್‌ನಲ್ಲಿ ಇಲ್ಲದಿರುವುದು ಭಾರತ ತಂಡವನ್ನು ದುರ್ಬಲಗೊಳಿಸುತ್ತಿದೆ. ಸೂರ್ಯಕುಮಾರ್ ಯಾದವ್ ಫಾರಂನಲ್ಲಿಲ್ಲ. IPL 2021 ರಿಂದ ರೋಹಿತ್ ಶರ್ಮಾ ಮಿಂಚುತ್ತಿಲ್ಲ. ಸೂರ್ಯಕುಮಾರ್ ಯಾದವ್ ವಿಷಯದಲ್ಲೂ ಅದೇ ಆಗಿದೆ. ಹಾರ್ದಿಕ್ ಪಾಂಡ್ಯ ಕೂಡ ಬ್ಯಾಟ್​ನಿಂದ ಸದ್ದು ಮಾಡುತ್ತಿಲ್ಲ ಮತ್ತು ಪಂತ್ ಕೂಡ ಬಲಿಷ್ಠ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ.

ಆರನೇ ಬೌಲರ್ ಕೊರತೆ ಬುಧವಾರ, ಹಾರ್ದಿಕ್ ಪಾಂಡ್ಯ ದುಬೈನಲ್ಲಿ ಬೌಲಿಂಗ್ ಅಭ್ಯಾಸ ಮಾಡಿದ್ದಾರೆ. ಇದರಿಂದ ಭಾರತೀಯ ತಂಡಕ್ಕೆ ಒಳ್ಳೆಯ ಸುದ್ದಿ ಸಿಕ್ಕಿತು ಆದರೆ ಅವರು ಕಿವೀ ತಂಡದ ವಿರುದ್ಧ ಬೌಲಿಂಗ್ ಮಾಡುವ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಭಾರತ ತಂಡದಲ್ಲಿ ಇನ್ನೂ ಆರನೇ ಬೌಲರ್ ಇಲ್ಲ ಮತ್ತು ಪಾಂಡ್ಯ ಬೌಲಿಂಗ್ ಮಾಡಿದರೂ ಅವರು ಚೆಂಡಿನೊಂದಿಗೆ ಎಷ್ಟು ಪರಿಣಾಮಕಾರಿಯಾಗುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಕೊಹ್ಲಿ ಟಾಸ್‌ನ ಬಾಸ್ ಆಗಬೇಕಾಗುತ್ತದೆ ಟಾಸ್ ಯಾರ ನಿಯಂತ್ರಣದಲ್ಲಿರುವುದಿಲ್ಲ, ಆದರೆ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ಟಾಸ್ ಸೋತರೆ, ಅದು ತುಂಬಾ ಕಷ್ಟಕರವಾಗಿರುತ್ತದೆ. ದುಬೈನಲ್ಲಿ ಮೊದಲು ಬ್ಯಾಟ್ ಮಾಡುವುದು ಕಷ್ಟ ಮತ್ತು ಇಬ್ಬನಿಯಿಂದಾಗಿ ಬೆನ್ನಟ್ಟುವುದು ಅಷ್ಟೇ ಸುಲಭ. ಇದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಕಂಡುಬಂದಿದೆ. ಒಂದು ವೇಳೆ ನ್ಯೂಜಿಲೆಂಡ್ ತಂಡ ಟಾಸ್ ಗೆದ್ದರೆ ಬೌಲಿಂಗ್ ಮಾಡಲಿದೆ.

ನ್ಯೂಜಿಲೆಂಡ್ ಭಾರತದ ವಿರುದ್ಧ ಅದ್ಭುತ ದಾಖಲೆಯನ್ನು ಹೊಂದಿದೆ ಐಸಿಸಿ ಪಂದ್ಯಾವಳಿಗಳಲ್ಲಿ ನ್ಯೂಜಿಲೆಂಡ್ ವಿರುದ್ಧದ ಭಾರತೀಯ ತಂಡದ ದಾಖಲೆಯು ತುಂಬಾ ಕೆಟ್ಟದಾಗಿದೆ. ಐಸಿಸಿ ಟೂರ್ನಿಯಲ್ಲಿ ಕಳೆದ 6 ಪಂದ್ಯಗಳಲ್ಲಿ ಭಾರತ ಕೇವಲ 1 ಪಂದ್ಯದಲ್ಲಿ ಮಾತ್ರ ನ್ಯೂಜಿಲೆಂಡ್‌ ತಂಡವನ್ನು ಸೋಲಿಸಿದೆ. ಸೌರವ್ ಗಂಗೂಲಿ ನಾಯಕತ್ವದಲ್ಲಿ 2003 ರ ವಿಶ್ವಕಪ್‌ನಲ್ಲಿ ಈ ವಿಜಯವನ್ನು ಸಾಧಿಸಲಾಯಿತು. ಅಂದಿನಿಂದ, ಭಾರತವು 2007 ರ ಟಿ 20 ವಿಶ್ವಕಪ್, 2016 ರ ಟಿ 20 ವಿಶ್ವಕಪ್, 2019 ರ ವಿಶ್ವಕಪ್ ಸೆಮಿಫೈನಲ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್‌ನಿಂದ ಸೋಲಿಸಲ್ಪಟ್ಟಿದೆ.

ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ
ತಮ್ಮ ಭಾಷಣದಲ್ಲಿ ಶಿವಕುಮಾರ್​ರನ್ನು ಡೈನಾಮಿಕ್ ಲೀಡರ್ ಎಂದ ಪವನ್ ಕಲ್ಯಾಣ್
ತಮ್ಮ ಭಾಷಣದಲ್ಲಿ ಶಿವಕುಮಾರ್​ರನ್ನು ಡೈನಾಮಿಕ್ ಲೀಡರ್ ಎಂದ ಪವನ್ ಕಲ್ಯಾಣ್