Ajinkya Rahane: ಟಾಸ್ ವೇಳೆ ಮಹತ್ವದ ಮಾಹಿತಿ ಹಂಚಿಕೊಂಡ ಅಜಿಂಕ್ಯಾ ರಹಾನೆ: ಏನದು ಗೊತ್ತೇ?

| Updated By: Vinay Bhat

Updated on: Nov 25, 2021 | 10:26 AM

India vs New Zealand 1st Test Day 1: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್​ ಪಂದ್ಯದ ಟಾಸ್ ಪ್ರಕ್ರಿಯೆ ವೇಳೆ ಟೀಮ್ ಇಂಡಿಯಾ ನಾಯಕ ಅಜಿಂಕ್ಯಾ ರಹಾನೆ ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪ್ರಮುಖವಾಗಿ ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Ajinkya Rahane: ಟಾಸ್ ವೇಳೆ ಮಹತ್ವದ ಮಾಹಿತಿ ಹಂಚಿಕೊಂಡ ಅಜಿಂಕ್ಯಾ ರಹಾನೆ: ಏನದು ಗೊತ್ತೇ?
Ajinkya Rahane India vs New Zealand
Follow us on

ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಎರಡು ಪಂದ್ಯಗಳ ಟೆಸ್ಟ್​ ಸರಣಿ ಪೈಕಿ ಮೊದಲ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ (Kanpur Test) ಆರಂಭವಾಗಿದೆ. ಟಾಸ್ ಗೆದ್ದ ಟೀಮ್ ಇಂಡಿಯಾ (Team India) ನಾಯಕ ಅಜಿಂಕ್ಯಾ ರಹಾನೆ (Ajinkya Rahane) ಬ್ಯಾಟಿಂಗ್ ಕೂಡ ಆಯ್ಕೆ ಮಾಡಿಕೊಂಡಿದ್ದಾರೆ. ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿರುವ ಭಾರತ ರವೀಂದ್ರ ಜಡೇಜಾ (Ravindra Jadeja), ಆರ್. ಅಶ್ವಿನ್ (Ravichandran Ashwin) ಮತ್ತು ಅಕ್ಷರ್ ಪಟೇಲ್ (Axar Patel) ಹೀಗೆ ಮೂವರು ಸ್ಪಿನ್ನರ್​ಗಳಿಗೆ ಅವಕಾಶ ನೀಡಲಾಗಿದೆ. ಇದರ ಜೊತೆಗೆ ಶ್ರೇಯಸ್ ಅಯ್ಯರ್ (Shreyas Iyer) ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ. ಕೇನ್ ವಿಲಿಯಮ್ಸನ್ (Kane Williamson) ನೇತೃತ್ವದ ನ್ಯೂಜಿಲೆಂಡ್ ಕೂಡ ಇಬ್ಬರು ಸ್ಪಿನ್ನರ್​ಗಳನ್ನು ಆಡಿಸುತ್ತಿದೆ. ಕಿವೀಸ್ ಪರ ಸ್ಪಿನ್ನಿಂಗ್ ಆಲ್ರೌಂಡರ್ ರಚಿನ್ ರವೀಂದ್ರ (Rachin Ravindra) ಪದಾರ್ಪಣೆ ಮಾಡಿದ್ದಾರೆ. ಉಭಯ ತಂಡಗಳು ಬಲಿಷ್ಠವಾಗಿದ್ದು ಕಾನ್ಪುರ ಟೆಸ್ಟ್ ಸಾಕಷ್ಟು ರೋಚಕತೆ ಸೃಷ್ಟಿಸಿದೆ.

ಟಾಸ್ ಪ್ರಕ್ರಿಯೆ ವೇಳೆ ಭಾರತ ತಂಡದ ನಾಯಕ ಅಜಿಂಕ್ಯಾ ರಹಾನೆ ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. “ಈ ಪಿಚ್ ತುಂಬಾನೆ ಚೆನ್ನಾಗಿದೆ. ಸ್ವಲ್ಪ ಸಮಯದ ಬಳಿಕ ಇದು ನಿಧಾನವಾಗಿ ಪರಿವರ್ತನೆಯಾಗುತ್ತದೆ. ಇಲ್ಲಿ ಮತ್ತು ಎರಡನೇ ಟೆಸ್ಟ್ ನಡೆಯಲಿರುವ ಮುಂಬೈನಲ್ಲಿ ನಮಗೆ ಸಿಕ್ಕಿರುವ ಅತ್ಯುತ್ತಮ ಅವಕಾಶವಾಗಿದೆ. ಕೆಲ ಪ್ರಮುಖ ಹಿರಿಯ ಆಟಗಾರರು ಅಲಭ್ಯರಾಗಿದ್ದಾರೆ. ಹೀಗಾಗಿ ಯುವ ಆಟಗಾರರಿಗೆ ಅವಕಾಶ ಸಿಕ್ಕಿದ್ದು, ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಉತ್ತಮ ವೇದಿಕೆ” ಎಂದು ಹೇಳಿದ್ದಾರೆ.

“ಶ್ರೇಯಸ್ ಅಯ್ಯರ್ ಈ ಪಂದ್ಯದ ಮೂಲಕ ಟೆಸ್ಟ್​ ಕ್ರಿಕೆಟ್​ಗೆ ಕಾಲಿಟ್ಟಿದ್ದಾರೆ. ನಾವೆಲ್ಲ ಹೊಸ ಕೋಚ್ ಅಡಿಯಲ್ಲಿ ಆಟವಾಡಲು ಸಾಕಷ್ಟು ಉತ್ಸುಕರಾಗಿದ್ದೇವೆ. ವೈಯಕ್ತಿಕವಾಗಿ ನಾನಗೆ ರಾಹುಲ್ ದ್ರಾವಿಡ್ ಅವರ ಅಂಡರ್​ನಲ್ಲಿ ಆಡಲು ಸಂತಸವಿದೆ” ಎಂದು ಅಜಿಂಕ್ಯಾ ರಹಾನೆ ಟಾಸ್ ಪ್ರಕ್ರಿಯೆ ವೇಳೆ ಹೇಳಿಕೊಂಡಿದ್ದಾರೆ.

 

ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮಾತನಾಡಿ, “ನಾವುಕೂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವುದರಲ್ಲಿದ್ದೆವು. ಆದರೆ, ಬಾಲ್ ಮಾಡುವ ಅವಕಾಶ ಸಿಕ್ಕಿದೆ. ಈಗ ಎದುರಾಳಿಯ ವಿಕೆಟ್ ಅನ್ನು ಆದಷ್ಟು ಬೇಗ ಉರುಳಿಸಬೇಕಿದೆ. ಈ ಚಾಲೆಂಜ್ ಸ್ವೀಕರಿಸುತ್ತೇವೆ. ಅಜಾಜ್ ಪಟೇಲ್ ಮತ್ತು ವಿಲ್ ಸೋಮರ್ವಿಲ್ಲೆ ಹಿಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಇಬ್ಬರು ಸ್ಪಿನ್ನರ್​ಗಳೊಂದಿಗೆ ನಾವು ಕಣಕ್ಕಿಳಿಯುತ್ತೇವೆ. ರಚಿನಾ ರವೀಂದ್ರ ಪದಾರ್ಪಣೆ ಮಾಡಿದ್ದಾರೆ” ಎಂದು ಕೇನ್ ತಿಳಿಸಿದರು.

ಇನ್ನು ಟೀಮ್ ಇಂಡಿಯಾ ಉಪ ನಾಯಕ ಚೇತೇಶ್ವರ್ ಪೂಜಾರ ಕೂಡ ಕೆಲ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. “ನಾನು ಈ ಬಾರಿಯ ಐಪಿಎಲ್​ನಲ್ಲಿ ಭಾಗವಹಿಸಿದ್ದೆ. ಒಂದು ಪಂದ್ಯವನ್ನೂ ಆಡದಿರಬಹುದು. ಆದರೆ, ಅಭ್ಯಾಸವನ್ನು ಮಾಡುತ್ತಿದ್ದೆ. ಹೀಗಾಗಿ ಲಯದಲ್ಲಿದ್ದೇನೆ. ಮುಂಬೈನಲ್ಲಿ ಉತ್ತಮ ಅಭ್ಯಾಸ ನಡೆಸಿದ್ದೇವೆ. ಕೊನೆಗೂ ಅನೇಕ ಸಮಯದ ಬಳಿಕ ಭಾರತದಲ್ಲಿ ಪಂದ್ಯವನ್ನು ಆಡುತ್ತಿದ್ದೇವೆ, ಇದು ಖುಷಿ ಇದೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಿಂದ ಇತರೆ ಆಟಗಾರರಿಗೆ ಅವಕಾಶ ಸಿಕ್ಕಿದ್ದು, ಪ್ರತಿಭೆ ಅನಾವರಣ ಮಾಡಲು ಸಾಧ್ಯವಾಗಲಿದೆ. ನನ್ನ ಮೇಲೆ ಸಾಕಷ್ಟು ಜವಾಬ್ದಾರಿಗಳು ಇವೆ ನಿಜ. ಆದರೆ, ಅದರ ಬಗ್ಗೆಯೇ ಯೋಚನೆ ಮಾಡುತ್ತಿರುವುದಿಲ್ಲ” ಎಂದು ಹೇಳಿದ್ದಾರೆ.

IND vs NZ 1st Test, Day 1: ಟಾಸ್ ಗೆದ್ದ ಟೀಮ್ ಇಂಡಿಯಾ: ಮೂವರು ಸ್ಪಿನ್ನರ್​ಗಳು ಕಣಕ್ಕೆ: ಇಲ್ಲಿದೆ ಭಾರತ ಪ್ಲೇಯಿಂಗ್ XI

India vs New Zealand 1st Test: ಭಾರತ ಮತ್ತು ನ್ಯೂಜಿಲೆಂಡ್ ಮೊದಲ ಟೆಸ್ಟ್ ಪಂದ್ಯ ಯಾವುದರಲ್ಲಿ ನೇರಪ್ರಸಾರ?, ಲೈವ್ ವೀಕ್ಷಿಸುವುದು ಹೇಗೆ?

(Ajinkya Rahane delivers great statement during toss in India vs New Zealand match here is details)