KL Rahul: ಇದೀಗ ಖಚಿತ: ಪಂಜಾಬ್ ತೊರೆಯಲಿರುವ ಕೆಎಲ್ ರಾಹುಲ್: ನಾಯಕನಾಗಿ ಈ ತಂಡಕ್ಕೆ ಆಯ್ಕೆ?

KL Rahul to lead Lucknow franchise: ಹೌದು, ಪಂಜಾಬ್‌ ಕಿಂಗ್ಸ್‌ ತಂಡದಿಂದ ಕೆಎಲ್‌ ರಾಹುಲ್‌ ಹೊರಬರುತ್ತಿರುವುದು ಖಾತ್ರಿಯಾಗಿದೆ. ಅಷ್ಟೇ ಅಲ್ಲದೆ ರಾಹುಲ್ ಆರ್​ಸಿಬಿಗಲ್ಲ ಲಖನೌ ಜೊತೆಗಿನ ಒಪ್ಪಂದವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

KL Rahul: ಇದೀಗ ಖಚಿತ: ಪಂಜಾಬ್ ತೊರೆಯಲಿರುವ ಕೆಎಲ್ ರಾಹುಲ್: ನಾಯಕನಾಗಿ ಈ ತಂಡಕ್ಕೆ ಆಯ್ಕೆ?
KL Rahul IPL 2022
Follow us
TV9 Web
| Updated By: Vinay Bhat

Updated on: Nov 25, 2021 | 12:12 PM

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಗಾಗಿ (Indian Premier League) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈಗಾಗಲೇ ಭರ್ಜರಿ ತಯಾರಿಯಲ್ಲಿದೆ. ಮುಂದಿನ ವರ್ಷದ ಜನವರಿಯನಲ್ಲಿ ಐಪಿಎಲ್ 2022ರ ಮೆಗಾ ಹರಾಜು (IPL 2022 Mega Auction) ಪ್ರಕ್ರಿಯೆ ನಡೆಯಲಿದೆ. ಇದರ ನಡುವೆ ಆಟಗಾರರನ್ನು ರಿಟೇನ್ ಜೊತೆಗೆ ಹೊಸತಾಗಿ ಸೇರ್ಪಡೆಯಾಗಿರುವ ಎರಡು ಹೊಸ ಫ್ರಾಂಚೈಸಿಗಳಾದ ಲಖನೌ ಹಾಗೂ ಅಹಮದಾಬಾದ್​ಗೆ (Ahmedabad and Lucknow) ಮೂವರು ಆಟಗಾರರನ್ನು ಸೇರ್ಪಡೆ ಮಾಡಲು ನವೆಂಬರ್ 30ರ ವರೆಗೆ ಅವಕಾಶ ನೀಡಲಾಗಿದೆ. ಇನ್ನೇನು ಇದರ ಗಡುವು ಮುಗಿಯಲು ಐದು ದಿನವಷ್ಟೇ ಬಾಕಿಉಳಿದಿದೆ. ಹೀಗಿರುವಾಗ ಕೆಲ ಅಚ್ಚರಿಯ ಮಾಹಿತಿಗಳು ಬಹಿರಂಗವಾಗುತ್ತಿದೆ. ಈ ಪೈಕಿ ಕೆಎಲ್ ರಾಹುಲ್ (KL Rahul) ಪಂಜಾಬ್ ಕಿಂಗ್ಸ್ (Punjab Kings) ಫ್ರಾಂಚೈಸಿ ತೊರೆಯವುದು ಖಚಿತವಾಗಿದೆ.

ಹೌದು, ಪಂಜಾಬ್‌ ಕಿಂಗ್ಸ್‌ ತಂಡದಿಂದ ಕೆಎಲ್‌ ರಾಹುಲ್‌ ಹೊರಬರುತ್ತಿರುವುದು ಖಾತ್ರಿಯಾಗಿದೆ. ಹೊಸ ತಂಡಗಳಾದ ಲಖನೌ ಮತ್ತು ಅಹ್ಮದಾಬಾದ್ ತಂಡಗಳು ಸ್ಟಾರ್‌ ಆಟಗಾರರ ಖರೀದಿಗೆ ಬಲೆ ಬೀಸಿದ್ದು, ಈ ಸಂದರ್ಭದಲ್ಲಿ ಲಖನೌ ತಂಡ ಸೇರಲು ಕೆಎಲ್‌ ರಾಹುಲ್‌ ಸಮ್ಮತಿಸಿದ್ದಾರೆ ಎಂದು ವರದಿಯಾಗಿದೆ. ರಾಹುಲ್ ಲಖನೌ ಜೊತೆಗಿನ ಒಪ್ಪಂದವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಮೊದಲು ರಾಹುಲ್‌ ಆರ್‌ಸಿಬಿ ತಂಡ ಸೇರಲಿದ್ದಾರೆ ಎಂದು ವರದಿಯಾಗಿತ್ತು. ಆದರೀಗ ಇವರು ಹೊಸ ಫ್ರಾಂಚೈಸಿ ಕಡೆ ಒಲವು ತೋರಿದ್ದಾರಂತೆ.

ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಆರ್. ಅಶ್ವಿನ್ ಮತ್ತು ಶ್ರೇಯಸ್ ಅಯ್ಯರ್ ಹೊರಬರುವುದು ಖಚಿತವಾಗಿದೆ. ಅಶ್ವಿನ್ ತಮ್ಮ​ ಯೂಟ್ಯೂಬ್​ ಚಾನೆಲ್​ ಸಂಭಾಷಣೆ ವೇಳೆ, “ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್​ಗೂ ಮುನ್ನ ಶ್ರೇಯಸ್​ ಅಯ್ಯರ್ ಮತ್ತು ನನ್ನನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ಇಲ್ಲ” ಎಂಬ ವಿಚಾರವನ್ನು ತಿಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕ್ಯಾಪ್ಟನ್‌ ರಿಷಭ್ ಪಂತ್‌ ಅವರನ್ನು ಉಳಿಸಿಕೊಳ್ಳುವುದು ಬಹುತೇಕ ಖಾತ್ರಿಯಾಗಿದೆ. ಅವರೊಟ್ಟಿಗೆ ಅಕ್ಷರ್‌ ಪಟೇಲ್‌, ಪೃಥ್ವಿ ಶಾ ಮತ್ತು ಎನ್ರಿಕ್‌ ನೊರ್ಕಿಯ ಅವರನ್ನು ಉಳಿಸಿಕೊಳ್ಳುತ್ತಿದೆ ಎಂದು ವರದಿಗಳು ಹೇಳಿವೆ.

ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಮುಂದಿನ ಮೂರು ವರ್ಷಗಳ ಕಾಲ ನಾಯಕ ಎಂಎಸ್‌ ಧೋನಿ ಅವರನ್ನು ತನ್ನಲ್ಲಿಯೇ ಉಳಿಸಿಕೊಳ್ಳಲಿದೆ ಎಂದು ಇತ್ತೀಚಿನ ವರದಿಗಳು ಹೇಳಿವೆ. ಕೆಲ ದಿನಗಳ ಹಿಂದಷ್ಟೇ ನಿವೃತ್ತಿ ಬಗ್ಗೆ ಮಾತನಾಡಿದ್ದ ಧೋನಿ 2025ರವರೆಗೆ ಸಿಎಸ್‌ಕೆ ಪರ ಆಡುವ ಸುಳಿವು ಕೊಟ್ಟಿದ್ದರು. ಧೋನಿ ಜೊತೆಗೆ, ಆಲ್‌ರೌಂಡರ್‌ ರವೀಂದ್ರ ಜಡೇಜಾ, ಐಪಿಎಲ್‌ 2021 ಟೂರ್ನಿಯಲ್ಲಿ ಆರೆಂಜ್‌ ಕ್ಯಾಪ್‌ ಗೆದ್ದ ಯುವ ಬ್ಯಾಟ್ಸ್‌ಮನ್‌ ಋತುರಾಜ್‌ ಗಾಯಕ್ವಾಡ್‌ ಮತ್ತು ಇಂಗ್ಲೆಂಡ್‌ನ ಆಲ್‌ರೌಂಡರ್‌ ಮೊಯೀನ್‌ ಅಲಿ ಅವರನ್ನು ಸಿಎಸ್‌ಕೆ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

2022ರ ಐಪಿಎಲ್​ ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು  ತಲಾ 4 ಆಟಗಾರರನ್ನು ರಿಟೇನ್ ಮಾಡಿಕೊಳ್ಳುವುದಕ್ಕೆ ಬಿಸಿಸಿಐ ತಿಳಿಸಿದೆ. ಅದು ತಲಾ ಇಬ್ಬರು ವಿದೇಶಿ ಆಟಗಾರರಾಗಿರಬಹುದು ಅಥವಾ 3 ಭಾರತೀಯರು ಮತ್ತು ಒಬ್ಬ ವಿದೇಶಿಗನನ್ನು ಉಳಿಸಿಕೊಳ್ಳಬಹುದೆಂದು ನಿಯಮದಲ್ಲಿ ತಿಳಿಸಿದೆ. ನಾಲ್ವರು ಆಟಗಾರರನ್ನು ಉಳಿಸಿಕೊಳ್ಳುವುದಾದರೆ ₹42 ಕೋಟಿ, ಮೂವರು ಆಟಗಾರರಿಗೆ ₹33 ಕೋಟಿ, ಇಬ್ಬರು ಆಟಗಾರರಿಗೆ ₹24 ಕೋಟಿ ಮತ್ತು ಓರ್ವ ಆಟಗಾರನಿಗೆ ₹14 ಕೋಟಿ ಕಡಿತಗೊಳಿಸಲಾಗುವುದು. ಹಾಗೆಯೇ ಅ‌ನ್‌ಕ್ಯಾಪ್ಡ್ ಆಟಗಾರನನ್ನು ಉಳಿಸಿಕೊಳ್ಳುವುದಾದರೆ ತಲಾ ₹4 ಕೋಟಿ ವ್ಯಯಿಸಬೇಕಿದೆ.

Ravichandran Ashwin: ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ದಾಖಲೆಯ ಹೊಸ್ತಿಲಲ್ಲಿ ರವಿಚಂದ್ರನ್ ಅಶ್ವಿನ್

Ajinkya Rahane: ಟಾಸ್ ವೇಳೆ ಮಹತ್ವದ ಮಾಹಿತಿ ಹಂಚಿಕೊಂಡ ಅಜಿಂಕ್ಯಾ ರಹಾನೆ: ಏನದು ಗೊತ್ತೇ?

(KL Rahul has decided to part ways with Punjab Kings and is all set to lead Lucknow franchise in IPL 2022)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ