Ajinkya Rahane: ಟೀಮ್ ಇಂಡಿಯಾ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಅಜಿಂಕ್ಯಾ ರಹಾನೆ: ಏನು ಹೇಳಿದ್ರು?

| Updated By: Vinay Bhat

Updated on: Feb 11, 2022 | 11:05 AM

ಇಲ್ಲಿ ಭಾರತ ತಂಡ ಅಡಿಲೇಡ್​ನಲ್ಲಿ 36ಕ್ಕೆ ಆಲೌಟ್​ ಆದ ನಂತರ ನಾನು ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ಆ ಸರಣಿಯಲ್ಲಿ ನಮಗೆ ಯಶಸ್ಸು ಸಿಕ್ಕಿತ್ತು. ಆದರೆ, ಆ ಕ್ರೆಡಿಟ್​ ಬೇರೆಯವರು ತೆಗೆದುಕೊಂಡಿದ್ದಾರೆ," ಎಂದು ಹೆಸರೇಳದೇ ಮಾಜಿ ಕೋಚ್​ ರವಿಶಾಸ್ತ್ರಿಯ ವಿರುದ್ಧ ರಹಾನೆ ಟೀಕೆಗಳ ಸುರಿಮಳೆಗೆರೆದಿದ್ದಾರೆ.

Ajinkya Rahane: ಟೀಮ್ ಇಂಡಿಯಾ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಅಜಿಂಕ್ಯಾ ರಹಾನೆ: ಏನು ಹೇಳಿದ್ರು?
Ajinkya Rahane
Follow us on

2020-21ರ ಆಸ್ಟ್ರೇಲಿಯಾ ಪ್ರವಾಸದ ವೇಳೆ  ಟೀಮ್ ಇಂಡಿಯಾ (Team India) ದಾಖಲೆಯ ಸತತ ಎರಡನೇ ಬಾರಿ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಕ್ರಿಕೆಟ್‌ ಸರಣಿ ಗೆಲ್ಲುವಲ್ಲಿ ಅಜಿಂಕ್ಯಾ ರಹಾನೆ (Ajinkya Rahane) ಬಹುಮುಖ್ಯ ಪಾತ್ರವಹಿಸಿದ್ದರು. ಆ ಸಂದರ್ಭ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆಯ ಮೇರೆಗೆ ತವರಿಗೆ ಮರಳಿದಾಗ ರಹಾನೆ ಅವರು ಹಂಗಾಮಿ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದಲ್ಲದೆ ಐತಿಹಾಸಿಕ ಗೆಲುವನ್ನೂ ತಂದುಕೊಟ್ಟಿದ್ದರು. “ಇಲ್ಲಿ ಭಾರತ ತಂಡ ಅಡಿಲೇಡ್​ನಲ್ಲಿ 36ಕ್ಕೆ ಆಲೌಟ್​ ಆದ ನಂತರ ನಾನು ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ಆ ಸರಣಿಯಲ್ಲಿ ನಮಗೆ ಯಶಸ್ಸು ಸಿಕ್ಕಿತ್ತು. ಆದರೆ, ಆ ಕ್ರೆಡಿಟ್​ ಬೇರೆಯವರು ತೆಗೆದುಕೊಂಡಿದ್ದಾರೆ,” ಎಂದು ಹೆಸರೇಳದೇ ಮಾಜಿ ಕೋಚ್​ ರವಿಶಾಸ್ತ್ರಿಯ (Ravi Shastri) ವಿರುದ್ಧ ರಹಾನೆ ಟೀಕೆಗಳ ಸುರಿಮಳೆಗೆರೆದಿದ್ದಾರೆ. ಕಳೆದ ವರ್ಷದ ಆಸ್ಟ್ರೇಲಿಯ ಸರಣಿಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡವನು ನಾನು, ಆದರೆ ಇದರ ಯಶಸ್ಸಿನ ಶ್ರೇಯಸ್ಸು ಬೇರೆಯವರ ಪಾಲಾಗಿದೆ ಎಂದು ರಹಾನೆ ಕಟುವಾಗಿ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ರಹಾನೆ, “ಆಸ್ಟ್ರೇಲಿಯ ಸರಣಿಯಲ್ಲಿ ನಾನು ಮಾಡಿದ್ದೇನು ಎಂಬುದರ ಬಗ್ಗೆ ನನಗೆ ಸ್ಪಷ್ಟ ಅರಿವಿದೆ. ಅಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡವನು ನಾನು. ಆದರೆ ಆ ಯಶಸ್ಸಿನ ಶ್ರೇಯಸ್ಸನ್ನು ಬೇರೆಯವರು ತೆಗೆದುಕೊಂಡರು. ಆಸೀಸ್‌ನಲ್ಲಿ ನಾನೇನು ಮಾಡಿದೆ ಎಂದು ಗೊತ್ತಿದೆ. ನಾನದನ್ನು ಯಾರಿಗೂ ಹೇಳುವ ಅಗತ್ಯವಿಲ್ಲ. ನನಗೆ ಶ್ರೇಯ ಬೇಕೆಂದು ಕೇಳುವ ಸ್ವಭಾವ ನನ್ನದಲ್ಲ. ಮೈದಾನದಲ್ಲಿ ಅಥವಾ ಡ್ರೆಸ್ಸಿಂಗ್ ರೂಂನಲ್ಲಿ ನಾನಾಗ ತೆಗೆದುಕೊಂಡ ಕೆಲವು ನಿರ್ಧಾರಗಳು ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದವು. ನಾವು ಸರಣಿ ಗೆದ್ದೆವು ಎಂಬುದಷ್ಟೇ ನನಗೆ ಮುಖ್ಯವಾದುದು. ಆ ಐತಿಹಾಸಿಕ ಸರಣಿ ಗೆಲುವು ನನಗೆ ನಿಜಕ್ಕೂ ವಿಶೇಷವಾದುದು,” ಎಂದು ರಹಾನೆ ಹೇಳಿಕೊಂಡಿದ್ದಾರೆ.

ರಹಾನೆ ತನ್ನ ಹೇಳಿಕೆಯಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲ. ಆದರೆ ಅವರ ಈ ಹೇಳಿಕೆಯು ಆಗಿನ ಮುಖ್ಯ ಕೋಚ್ ರವಿ ಶಾಸ್ತ್ರಿ ಮೇಲಿನ ಮುಸುಕಿನ ಗುದ್ದಾಟವಾಗಿದೆ ಎನ್ನಲಾಗಿದೆ. ಆಸ್ಟ್ರೇಲಿಯದಲ್ಲಿ ತಂಡದ ಅತ್ಯುತ್ತಮ ಸಾಧನೆಗೆ ರವಿ ಶಾಸ್ತ್ರಿ ಮಾಧ್ಯಮಗಳಲ್ಲಿ ಮೆಚ್ಚುಗೆ ಪಡೆದಿದ್ದರು.

“ನಾನು ಆ ನಿರ್ಧಾರ ತೆಗೆದುಕೊಂಡೆ, ಈ ನಿರ್ಧಾರ ತೆಗೆದುಕೊಂಡೆ. ನನ್ನ ನಿರ್ಧಾರದಿಂದ ಹಾಗಾಯಿತು ಎಂದು ಕೆಲವರು ಮಾಧ್ಯಮಗಳಲ್ಲಿ ಹೇಳುತ್ತ ಬರುತ್ತಿದ್ದಾರೆ. ಆದರೆ ನನಗೆ ಗೊತ್ತಿದೆ, ನಾನೇನು ನಿರ್ಧಾರಗಳನ್ನು ತೆಗೆದುಕೊಂಡೆ ಎಂಬುದು. ಅದು ಆ ಕ್ಷಣದಲ್ಲೇ ತೆಗೆದುಕೊಂಡ ನಿರ್ಧಾರಗಳಾಗಿದ್ದವು. ಅದು ಬೇರೆಯವರು ತೆಗೆದುಕೊಂಡ ನಿರ್ಧಾರ ಎಂಬುದನ್ನು ಕೇಳಿದಾಗ ನಗು ಬಂದಿತ್ತು. ಆದರೆ ನಾನೆಂದೂ ನನ್ನ ಬಗ್ಗೆ ಜಾಸ್ತಿ ಮಾತನಾಡುವವನಲ್ಲ ಅಥವಾ ನನ್ನನ್ನು ಹೊಗಳಿಕೊಳ್ಳಲು ಇಷ್ಟಪಡುವುದಿಲ್ಲ,” ಎಂದು ರಹಾನೆ ಹೇಳಿದ್ದಾರೆ.

“ನನ್ನ ವೃತ್ತಿ ಬದುಕು ಅಂತ್ಯಗೊಂಡಿದೆ ಎಂದು ಹೇಳುವವರನ್ನು ನೋಡಿ ನಾನು ನಗುತ್ತೇನೆ ಅಷ್ಟೆ. ಅದರ ಬಗ್ಗೆ ಆಳವಾಗಿ ಯೋಚಿಸಲು ಹೋಗಲ್ಲ. ಆಸ್ಟ್ರೇಲಿಯಾದಲ್ಲಿ ಏನಾಯಿತು ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ. ಆಸ್ಟ್ರೇಲಿಯಾ ಸರಣಿಯ ನಂತರ ಮತ್ತು ಅದಕ್ಕೂ ಹಿಂದೆ ಟೆಸ್ಟ್​ ಕ್ರಿಕೆಟ್​ಗೆ ನನ್ನ ಕೊಡುಗೆ ಏನೂ ಎಂಬುದು ಎಲ್ಲರಿಗೂ ತಿಳಿದಿದೆ. ಕ್ರೀಡೆ ಬಗ್ಗೆ ತಿಳಿದಿರುವವರು, ಕ್ರೀಡೆಯನ್ನು ಪ್ರೀತಿಸುವವರು ಸಮಯೋಚಿತವಾಗಿ ಮಾತನಾಡುತ್ತಾರೆ,” ಎಂದು ಹೇಳಿದ್ದಾರೆ.

PKL 8: ಪ್ಲೇ ಆಫ್​​ಗೆ ಲಗ್ಗೆಯಿಟ್ಟ ಪಾಟ್ನಾ ಪೈರೇಟ್ಸ್: ಬೆಂಗಾಲ್‌ ವಾರಿಯರ್ -ದಬಾಂಗ್‌ ದಿಲ್ಲಿ ಪಂದ್ಯ ರೋಚಕ ಟೈ

India Playing XI 3rd ODI: ಧವನ್ ಕಮ್​ಬ್ಯಾಕ್, ಥಾಕೂರ್ ಔಟ್: 3ನೇ ಏಕದಿನಕ್ಕೆ ಭಾರತದಲ್ಲಿ ಮೂರು ಬದಲಾವಣೆ?