AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PKL 8: ಪ್ಲೇ ಆಫ್​​ಗೆ ಲಗ್ಗೆಯಿಟ್ಟ ಪಾಟ್ನಾ ಪೈರೇಟ್ಸ್: ಬೆಂಗಾಲ್‌ ವಾರಿಯರ್ -ದಬಾಂಗ್‌ ದಿಲ್ಲಿ ಪಂದ್ಯ ರೋಚಕ ಟೈ

Pro Kabaddi: ಪಾಟ್ನಾ ಪೈರೇಟ್ಸ್ (Patna Pirates) ತಂಡ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನ (Pro Kabaddi) 107ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ (Puneri Paltan) ತಂಡವನ್ನು ಮಣಿಸಿ, ಅಗ್ರ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಜೊತೆಗೆ ಪ್ಲೇ ಆಫ್​ಗೆ ಲಗ್ಗೆಯಿಟ್ಟ ಮೊದಲ ತಂಡವಾಗಿದೆ.

PKL 8: ಪ್ಲೇ ಆಫ್​​ಗೆ ಲಗ್ಗೆಯಿಟ್ಟ ಪಾಟ್ನಾ ಪೈರೇಟ್ಸ್: ಬೆಂಗಾಲ್‌ ವಾರಿಯರ್ -ದಬಾಂಗ್‌ ದಿಲ್ಲಿ ಪಂದ್ಯ ರೋಚಕ ಟೈ
Patna Pirates vs puneri paltan
TV9 Web
| Updated By: Vinay Bhat|

Updated on: Feb 11, 2022 | 9:41 AM

Share

ಮಾಜಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ (Patna Pirates) ತಂಡ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನ (Pro Kabaddi) 107ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ (Puneri Paltan) ತಂಡವನ್ನು ಮಣಿಸಿ, ಅಗ್ರ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಜೊತೆಗೆ ಪ್ಲೇ ಆಫ್​ಗೆ ಲಗ್ಗೆಯಿಟ್ಟ ಮೊದಲ ತಂಡವಾಗಿದೆ. ಮೊದಲಾವಧಿಯಲ್ಲಿ ಪಾಟ್ನಾ 18-17ರಿಂದ ಪುಣೇರಿ ವಿರುದ್ಧ ಮುನ್ನಡೆ ಸಾಧಿಸಿತು. ಪುಣೇರಿ ದಾಳಿಯಲ್ಲಿ 14, ಟ್ಯಾಕಲ್ ನಲ್ಲಿ 2 ಅಂಕ ಸೇರಿಸಿತು. ಪಾಟ್ನಾ ರೈಡಿಂಗ್ ನಲ್ಲಿ 8, ಟ್ಯಾಕಲ್ ನಲ್ಲಿ 3, ಎದುರಾಳಿ ತಂಡವನ್ನು ಆಲೌಟ್ ಮಾಡುವ ಮೂಲಕ 2 ಅಂಕ ಕಲೆ ಹಾಕಿತು. ದ್ವಿತಿಯಾರ್ಧದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಪಾಟ್ನಾ ಪೈರೇಟ್ಸ್ 25 ಪಾಯಿಂಟ್ಸ್ ಗಳಿಸಿದರೆ, ಪುಣೇರಿ ಪಲ್ಟನ್ ಕೇವಲ 9 ಪಾಯಿಂಟ್ಸ್ ಪಡೆಯಿತು. ಅಂತಿಮವಾಗಿ ಪಾಟ್ನಾ ಪೈರೇಟ್ಸ್ 43-26 ಪಾಯಿಂಟ್ಸ್ ಅಂತರದಲ್ಲಿ ಗೆಲುವು ಸಾಧಿಸಿತು. ಪಾಟ್ನಾ ಪೈರೇಟ್ಸ್ ಪರ ರೈಡಿಂಗ್‌ನಲ್ಲಿ ಮಿಂಚಿದ ಗುಮನ್ ಸಿಂಗ್ 13 ಪಾಯಿಂಟ್ಸ್ ಕಬಳಿಸಿದ್ರೆ, ಪುಣೇರಿ ಪಲ್ಟನ್ ಕಡೆ ಇಸ್ಲಾಂ ಇನಾಂದಾರ್ 9 ಪಾಯಿಂಟ್ಸ್ ತಮ್ಮದಾಗಿಸಿಕೋಂಡರು.

ಈ ಪಂದ್ಯದ ಗೆಲುವಿನ ಬಳಿಕ ಪಾಟ್ನಾ ಪೈರೇಟ್ಸ್ ಟೇಬಲ್ ಟಾಪರ್ ಆಗಿಯೇ ಉಳಿದಿದ್ದು, 18 ಪಂದ್ಯಗಳಲ್ಲಿ 13 ಜಯಗಳಿಂದ ಒಟ್ಟು 70 ಪಾಯಿಂಟ್ಸ್ ಕಲೆಹಾಕಿದೆ. ಎರಡನೇ ಸ್ಥಾನದಲ್ಲಿ ದಬಾಂಗ್ ಡೆಲ್ಲಿ 60 ಪಾಯಿಂಟ್ಸ್‌ನಿಂದ ಜಿಗಿತ ಕಂಡಿದ್ದು. ಹರಿಯಾಣ ಸ್ಟೀಲರ್ಸ್ 58 ಪಾಯಿಂಟ್ಸ್ ಮೂಲಕ ಮೂರನೇ ಸ್ಥಾನಕ್ಕೆ ಕುಸಿದಿದೆ.

ಇನ್ನು ನಿನ್ನೆ ನಡೆದ ಮತ್ತೊಂದು ಜಿದ್ದಾಜಿದ್ದಿನ ಹೋರಾಟದಲ್ಲಿ ದಬಾಂಗ್‌ ದಿಲ್ಲಿ ಮತ್ತು ಬೆಂಗಾಲ್‌ ವಾರಿಯರ್ ಪಂದ್ಯ 39-39 ಅಂಕಗಳ ಸಮಬಲದ ಮುಕ್ತಾಯ ಕಂಡಿತು. ಇದು ಎರಡೂ ತಂಡಗಳು ಕಾಣುತ್ತಿರುವ ಸತತ 2ನೇ ಟೈ ಫ‌ಲಿತಾಂಶವಾಗಿದೆ. ಕೊನೆಯ ಹಂತದಲ್ಲಿ ದಿಲ್ಲಿಯ ಹೀರೋ ನವೀನ್‌ ಕುಮಾರ್‌ ಸೂಪರ್‌ ರೈಡಿಂಗ್‌ನಲ್ಲಿ 3 ಅಂಕ ಗಳಿಸಿ ಮುನ್ನಡೆ ತಂದಿತ್ತರೂ ಲಾಭವಾಗಲಿಲ್ಲ. ಬೆಂಗಾಲ್‌ನ ರೋಹಿತ್‌ ಇದಕ್ಕೆ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು.

ಪಂದ್ಯದ ಮೊದಲಾರ್ಧದಲ್ಲಿ ದಬಾಂಗ್ ದಿಲ್ಲಿ 19 ಪಾಯಿಂಟ್ಸ್ ಕಲೆಹಾಕಿದ್ರೆ, ಬೆಂಗಾಲ್ ವಾರಿಯರ್ 18 ಪಾಯಿಂಟ್ಸ್‌ ಕಲೆಹಾಕಿ ಹಿನ್ನಡೆ ಕಂಡಿತು. ಎರಡನೇ ಹಂತದಲ್ಲಿ ದಬಾಂಗ್ ದಿಲ್ಲಿಯನ್ನ ಹಿಂದಿಕ್ಕಿದ ಬೆಂಗಾಲ್ 21 ಪಾಯಿಂಟ್ಸ್ ಕಲೆಹಾಕಿದರೆ, ದಬಾಂಗ್ 20 ಪಾಯಿಂಟ್ಸ್‌ ಮುಟ್ಟಿತು. ಈ ಮೂಲಕ ರೋಚಕ ಪಂದ್ಯವು 39-39 ಪಾಯಿಂಟ್ಸ್‌ಗಳಿಂದ ಸಮಬಲಗೊಂಡಿತು.

ಪಂದ್ಯ ಗೆಲುವಿನ ಅಂತ್ಯ ಕಾಣದಿದ್ದರೂ ಸಹ ದಬಾಂಗ್ ದಿಲ್ಲಿ ಪರ ಉತ್ತಮ ರೈಡಿಂಗ್ ಮಾಡಿದ ನವೀನ್ ಕುಮಾರ್ 13 ಪಾಯಿಂಟ್ಸ್‌ಗಳಿಸಿದ್ರು. ವಿಜಯ್ ಮಲ್ಲಿಕ್ 9 ಪಾಯಿಂಟ್ಸ್ ತನ್ನದಾಗಿಸಿಕೊಂಡ್ರು. ಇನ್ನು ಬೆಂಗಾಲ್ ವಾರಿಯರ್ ಪರ ಮಣಿಂದರ್ ಸಿಂಗ್ 16 ಪಾಯಿಂಟ್ಸ್ ಕಲೆಹಾಕುವ ಮೂಲಕ ಮಿಂಚಿನ ಆಟವಾಡಿದರು.

India Playing XI 3rd ODI: ಧವನ್ ಕಮ್​ಬ್ಯಾಕ್, ಥಾಕೂರ್ ಔಟ್: 3ನೇ ಏಕದಿನಕ್ಕೆ ಭಾರತದಲ್ಲಿ ಮೂರು ಬದಲಾವಣೆ?

IND vs WI: ಇಂದು ಭಾರತ- ವೆಸ್ಟ್ ಇಂಡೀಸ್ ಅಂತಿಮ ಏಕದಿನ: ಸರಣಿ ಕ್ಲೀನ್​ಸ್ವೀಪ್ ಮಾಡುತ್ತಾ ರೋಹಿತ್ ಪಡೆ?

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ