ಮಾರ್ಚ್ 22 ರಿಂದ ಆರಂಭವಾಗಲಿರುವ ಐಪಿಎಲ್ಗಾಗಿ (IPL 2024) ಇಡೀ ಕ್ರಿಕೆಟ್ ಲೋಕವೇ ಕಾದು ಕುಳಿತಿದೆ. ಅತ್ಯಂತ ಶ್ರೀಮಂತ ಲೀಗ್ಗಳಲ್ಲಿ ಒಂದಾಗಿರುವ ಐಪಿಎಲ್ನಲ್ಲಿ ಬೌಂಡರಿ ಸಿಕ್ಸರ್ಗಳ ಸುರಿಮಳೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಈ ನಡುವೆ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಇದ್ದು, ಐಪಿಎಲ್‌ಗೂ ಮುನ್ನವೇ ಅಭಿಮಾನಿಗಳು ಲೆಜೆಂಡ್ಗಳ ಕ್ರಿಕೆಟ್ ಲೀಗ್ (Legends Cricket Trophy 2024) ಅನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಅಂದರೆ ಐಪಿಎಲ್‌ನಂತೆಯೇ ಮತ್ತೊಂದು ಲೀಗ್ ಘೋಷಣೆಯಾಗಿದ್ದು, ಈ ಲೀಗ್‌ನಲ್ಲಿ ಮಾಜಿ ಕ್ರಿಕೆಟಿಗರು ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ಈ ಲೀಗ್ ಕೇವಲ 90 ಎಸೆತಗಳ ಅಂದರೆ 15 ಓವರ್ಗಳದ್ದಾಗಿದೆ. ಈ 90 ಎಸೆತಗಳ ಲೀಗ್‌ನಲ್ಲಿ ಭಾರತ ಮತ್ತು ಇತರ ಹಲವು ದೇಶಗಳ ಶ್ರೇಷ್ಠ ಆಟಗಾರರು ಆಡುವುದನ್ನು ಕಾಣಬಹುದು. ಈ ಲೀಗ್ ಬಗ್ಗೆ ಹೆಚ್ಚಿನ ವಿವರ ಈ ಕೆಳಗಿನಂತಿದೆ
ವಾಸ್ತವವಾಗಿ ಐಪಿಎಲ್ ಬಗ್ಗೆ ಅಭಿಮಾನಿಗಳಲ್ಲಿರುವ ಕ್ರೇಜ್ ಅನ್ನು ಗಮನದಲ್ಲಿಟ್ಟುಕೊಂಡು ಪ್ರಪಂಚದಾದ್ಯಂತ ಹತ್ತಾರು ಲೀಗ್‌ಗಳನ್ನು ಪ್ರಾರಂಭಿಸಲಾಗಿದೆ . ಇದಕ್ಕೂ ಮೊದಲು, ಇಂಗ್ಲೆಂಡ್‌ನಲ್ಲಿ ಹಂಡ್ರೆಡ್ ಲೀಗ್ ಪ್ರಾರಂಭವಾಯಿತು, ಇದರಲ್ಲಿ ತಂಡವು ತನ್ನ ಇನ್ನಿಂಗ್ಸ್‌ನಲ್ಲಿ ಕೇವಲ 100 ಎಸೆತಗಳನ್ನು ಮಾತ್ರ ಆಡುತ್ತಿತ್ತು. ಈಗ ಅದಕ್ಕಿಂತ ಕಡಿಮೆ 90 ಎಸೆತಗಳ ಲೀಗ್ ನಡೆಯಲಿದೆ. ತಲಾ 15 ಓವರ್‌ಗಳ ಈ ಲೀಗ್ ಅತ್ಯಂತ ರೋಚಕವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ವಿಶೇಷವೆಂದರೆ ಈ ಲೀಗ್‌ನಲ್ಲಿ ಭಾರತ ಸೇರಿದಂತೆ ಹಲವು ದೇಶಗಳ ಮಾಜಿ ಅನುಭವಿ ಆಟಗಾರರು ಆಡಲಿದ್ದಾರೆ.
March 3rd Tho IVPL League Ends
From March 8Th -20 Legends Cricket League Begins 🩷
Get Ready We Will Enjoy & Celebrate Each & Every Presence Of Our IDOL#SureshRaina | @ImRaina pic.twitter.com/bEHyaTAO0h
— SHANNU 🇮🇳 (@Shannu39) March 1, 2024
ಈ ಕ್ರಿಕೆಟ್ ಲೀಗ್‌ನ ಹೆಸರು ಲೆಜೆಂಡ್ಸ್ ಕ್ರಿಕೆಟ್ ಟೂರ್ನಮೆಂಟ್, ಇದು ಶ್ರೀಲಂಕಾದಲ್ಲಿ ನಡೆಯಲಿದೆ. ಮಾರ್ಚ್ 8 ರಿಂದ ಟೂರ್ನಿ ಆರಂಭವಾಗಲಿದೆ. ಈ ಲೀಗ್‌ನ ಅಂತಿಮ ಪಂದ್ಯ ಮಾರ್ಚ್ 19 ರಂದು ನಡೆಯಲಿದೆ. ಪ್ರತಿ ತಂಡದಿಂದ ಯಾವುದೇ ಒಬ್ಬ ಬೌಲರ್ ಗರಿಷ್ಠ 3 ಓವರ್ ಬೌಲ್ ಮಾಡಲು ಸಾಧ್ಯವಾಗುತ್ತದೆ. ಭಾರತದ ಆಲ್‌ರೌಂಡರ್ ಯುವರಾಜ್ ಸಿಂಗ್, ಸ್ಫೋಟಕ ಬ್ಯಾಟ್ಸ್‌ಮನ್ ಸುರೇಶ್ ರೈನಾ, ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಮತ್ತು ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಕ್ರಿಸ್ ಗೇಲ್ ಅವರಲ್ಲದೆ, ಅನೇಕ ಬಲಿಷ್ಠ ಬ್ಯಾಟ್ಸ್‌ಮನ್‌ಗಳು ಈ ಟೂರ್ನಿಯಲ್ಲಿ ಆಡಲಿದ್ದಾರೆ.
ಈ ಲೀಗ್‌ನಲ್ಲಿ ದುಬೈ ಜೈಂಟ್ಸ್, ರಾಜಸ್ಥಾನ್ ಕಿಂಗ್ಸ್, ಡೆಲ್ಲಿ ಡೆವಿಲ್ಸ್, ಕ್ಯಾಂಡಿ ಸ್ಯಾಂಪ್ ಆರ್ಮಿ, ಪಂಜಾಬ್ ರಾಯಲ್ಸ್, ಎನ್‌ವೈ ಸೂಪರ್‌ಸ್ಟಾರ್ಸ್ ಸ್ಟ್ರೈಕರ್ಸ್ ಮತ್ತು ಕೊಲಂಬೊ ಲಯನ್ಸ್ ಸೇರಿದಂತೆ ಒಟ್ಟು 7 ತಂಡಗಳು ಭಾಗವಹಿಸಲಿವೆ. ಮಾರ್ಚ್ 8ರಿಂದ ಆರಂಭವಾಗಿ ಮಾರ್ಚ್ 19ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ. ಇದು ಶ್ರೀಲಂಕಾದಲ್ಲಿ ನಡೆಯಲಿರುವ ಲೀಗ್‌ನ ಎರಡನೇ ಸೀಸನ್ ಆಗಿದೆ. 2023 ರಲ್ಲಿ ನಡೆದ ಲೀಗ್‌ನ ಮೊದಲ ಸೀಸನ್ ಭಾರತದಲ್ಲಿ ನಡೆದಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:41 pm, Fri, 1 March 24