AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಗ್ಲೆಂಡ್​ನಲ್ಲಿರುವ ನಿತೀಶ್ ಕುಮಾರ್​ ರೆಡ್ಡಿಗೆ ಒಲಿದ ನಾಯಕತ್ವ

Andhra Premier League 2025: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ನಿತೀಶ್ ರೆಡ್ಡಿ ಅವರಿಗೆ ಆಂಧ್ರ ಪ್ರೀಮಿಯರ್ ಲೀಗ್‌ನಲ್ಲಿ ಭೀಮಾವರಂ ಬುಲ್ಸ್ ತಂಡದ ನಾಯಕತ್ವ ದೊರೆತಿದೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುವ ನಿತೀಶ್ ರೆಡ್ಡಿ 6 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ. ಏಳು ತಂಡಗಳ ನಡುವೆ ನಡೆಯುವ ಈ ಲೀಗ್ ರೌಂಡ್ ರಾಬಿನ್ ಸ್ವರೂಪದಲ್ಲಿ ನಡೆಯಲ್ಲಿದ್ದು ಒಟ್ಟು 19 ಪಂದ್ಯಗಳು ನಡೆಯಲಿವೆ.

ಇಂಗ್ಲೆಂಡ್​ನಲ್ಲಿರುವ ನಿತೀಶ್ ಕುಮಾರ್​ ರೆಡ್ಡಿಗೆ ಒಲಿದ ನಾಯಕತ್ವ
Nitish Reddy
ಪೃಥ್ವಿಶಂಕರ
|

Updated on: Jul 17, 2025 | 10:10 PM

Share

ಟೀಂ ಇಂಡಿಯಾದ ಆಲ್‌ರೌಂಡರ್ ನಿತೀಶ್ ರೆಡ್ಡಿ (Nitish Reddy) ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಆಡುತ್ತಿದ್ದಾರೆ. ಆದರೆ ಸಿಕ್ಕ ಅವಕಾಶದಲ್ಲಿ ನಿತೀಶ್​ಗೆ ಮಿಂಚಲು ಸಾಧ್ಯವಾಗಿಲ್ಲ. ಬೌಲಿಂಗ್​ನಲ್ಲಿ ಒಂದೆರಡು ವಿಕೆಟ್ ಉರುಳಿಸಿದ್ದನ್ನು ಬಿಟ್ಟರೆ, ಬ್ಯಾಟಿಂಗ್​ನಲ್ಲಿ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಆದಾಗ್ಯೂ ನಿತೀಶ್ ರೆಡ್ಡಿಗೆ ನಾಯಕತ್ವದ ಪಟ್ಟ ಒಲಿದು ಬಂದಿದೆ. ಆಶ್ಚರ್ಯಪಡಬೇಡಿ, ನಿತೀಶ್ ರೆಡ್ಡಿಗೆ ಟೀಂ ಇಂಡಿಯಾದ ನಾಯಕತ್ವ ಸಿಕ್ಕಿಲ್ಲ. ಬದಲಿಗೆ ಆಂಧ್ರ ಪ್ರೀಮಿಯರ್ ಲೀಗ್ (Andhra Premier League 2025)​ನಲ್ಲಿ ತಂಡದ ನಾಯಕರಾಗಿದ್ದಾರೆ. 2022 ರಿಂದ ಆರಂಭವಾಗಿರುವ ಆಂಧ್ರ ಪ್ರೀಮಿಯರ್ ಲೀಗ್​ನಲ್ಲಿ ನಿತೀಶ್ ರೆಡ್ಡಿ ಅವರನ್ನು ಭೀಮಾವರಂ ಬುಲ್ಸ್ ತಂಡದ ನಾಯಕರನ್ನಾಗಿ ಮಾಡಲಾಗಿದೆ. ಈ ಟೂರ್ನಮೆಂಟ್ ರೌಂಡ್ ರಾಬಿನ್ ಸ್ವರೂಪದಲ್ಲಿ ನಡೆಯಲ್ಲಿದ್ದು, 7 ತಂಡಗಳ ನಡುವೆ ಒಟ್ಟು 19 ಪಂದ್ಯಗಳು ನಡೆಯಲ್ಲಿವೆ.

ನಿತೀಶ್ ರೆಡ್ಡಿ ಆಂಧ್ರದ ಸ್ಟಾರ್ ಆಟಗಾರ

ನಿತೀಶ್ ರೆಡ್ಡಿ ಆಂಧ್ರ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ನಿತೀಶ್​ಗೆ 6 ಕೋಟಿ ರೂ. ವೇತನ ನೀಡಲಾಗುತ್ತಿದೆ. ಐಪಿಎಲ್‌ನಲ್ಲಿ ಮಿಂಚಿದ ನಿತೀಶ್​ಗೆ ಆ ಬಳಿಕ ಭಾರತ ಟಿ20 ತಂಡದ ಕದ ತೆರೆಯಿತು. ಆ ನಂತರ ಟೆಸ್ಟ್ ತಂಡದಲ್ಲೂ ಆಡುತ್ತಿದ್ದಾರೆ. ನಿತೀಶ್ ರೆಡ್ಡಿ ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಇದುವರೆಗೆ ಎರಡು ಪಂದ್ಯಗಳಲ್ಲಿ ಆಡಿದ್ದಾರೆ. ಆದರೆ ಮೇಲೆ ಹೇಳಿದಂತೆ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಆದರೆ ಲಾರ್ಡ್ಸ್ ಟೆಸ್ಟ್‌ನಲ್ಲಿ ತಮ್ಮ ಬೌಲಿಂಗ್‌ನಲ್ಲಿ ಪ್ರಭಾವ ಬೀರುವಲ್ಲಿ ಯಶಸ್ವಿಯಾದರು.

IND vs ENG: 4 ಎಸೆತಗಳಲ್ಲಿ ಇಬ್ಬರು ಆರಂಭಿಕರನ್ನು ಪೆವಿಲಿಯನ್​ಗಟ್ಟಿದ ನಿತೀಶ್ ರೆಡ್ಡಿ; ವಿಡಿಯೋ ನೋಡಿ

ಆಂಧ್ರ ಪ್ರೀಮಿಯರ್ ಲೀಗ್ 2025

ಈ ಆವೃತ್ತಿಯ ಆಂಧ್ರ ಪ್ರೀಮಿಯರ್ ಲೀಗ್‌ನಲ್ಲಿ 7 ತಂಡಗಳು ಭಾಗವಹಿಸಲಿವೆ. ಅಮರಾವತಿ ಲಯನ್ಸ್, ಭೀಮವರಂ ಬುಲ್ಸ್, ಕಾಕಿನಾಡ ಕಿಂಗ್ಸ್, ರಾಯಲ್ಸ್ ಆಫ್ ರಾಯಲಸೀಮಾ, ಸಿಂಹಾದ್ರಿ ವೈಜಾಗ್ ಲಯನ್ಸ್, ತುಂಗಭದ್ರ ವಾರಿಯರ್ಸ್ ಮತ್ತು ವಿಜಯವಾಡ ಸನ್‌ಶೈನರ್ಸ್ ತಂಡಗಳು ಆಂಧ್ರ ಪ್ರೀಮಿಯರ್ ಲೀಗ್​ನಲ್ಲಿ ಪಾಲ್ಗೊಳ್ಳಲಿವೆ. ನಿತೀಶ್ ರೆಡ್ಡಿ ಹೊರತುಪಡಿಸಿ, ಹನುಮ ವಿಹಾರಿ, ಕೆಎಸ್ ಭರತ್, ಶೇಖ್ ರಶೀದ್, ರಿಕಿ ಭೂಯಿ ಮತ್ತು ಅಶ್ವಿನ್ ಹೆಬ್ಬಾರ್ ಈ ತಂಡಗಳ ನಾಯಕತ್ವ ವಹಿಸಲಿದ್ದಾರೆ. ಈ ಟೂರ್ನಿಯ ಮೂರು ಸೀಸನ್​​ಗಳಲ್ಲಿ ಇಲ್ಲಿಯವರೆಗೆ, ಕೋಸ್ಟಲ್ ರೈಡರ್ಸ್, ರಾಯಲಸೀಮಾ ಕಿಂಗ್ಸ್ ಮತ್ತು ವೈಜಾಗ್ ವಾರಿಯರ್ಸ್ ತಲಾ ಒಂದೊಂದು ಬಾರಿ ಚಾಂಪಿಯನ್ ಆಗಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ