ಆಂಡ್ರೆ ರಸೆಲ್ (Andre Russell) ಬ್ಯಾಟಿಂಗ್ನಲ್ಲಿರುವವರೆಗೂ ಎದುರಾಳಿ ತಂಡದ ಗೆಲುವು ಗಗನ ಕುಸುಮವೇ ಸರಿ. ಏಕೆಂದರೆ ಈ ಆಟಗಾರನ ಬಿರುಗಾಳಿ ಬ್ಯಾಟಿಂಗ್ ಎಂತಹ ಟಾರ್ಗೆಟ್ ಅನ್ನು ಸುಲಭವಾಗಿ ಚೇಸ್ ಮಾಡಿಬಿಡುತ್ತದೆ. ಇದಕ್ಕೆ ಈ ಹಿಂದೆ ಸಾಕಷ್ಟು ಉದಾಹರಣೆಗಳನ್ನು ಕ್ರಿಕೆಟ್ ಲೋಕ ನೋಡಿದೆ. ಈಗ ಮತ್ತೊಮ್ಮೆ ರಸೆಲ್, ಸಿಕ್ಸ್ಟಿ ಪಂದ್ಯಾವಳಿಯಲ್ಲಿ ಅದೇ ರೀತಿಯಲ್ಲಿ ಅಬ್ಬರಿಸಿದ್ದಾರೆ. ಟ್ರಿನ್‌ಬಾಗೊ ನೈಟ್ ರೈಡರ್ಸ್ ಪರ ಆಡುತ್ತಿರುವ ಆಂಡ್ರೆ ರಸೆಲ್ ಕೇವಲ 24 ಎಸೆತಗಳಲ್ಲಿ 72 ರನ್ ಚಚ್ಚಿದ್ದಾರೆ. ಈ ವೇಳೆ ರಸೆಲ್ ಬ್ಯಾಟ್‌ನಿಂದ 8 ಸಿಕ್ಸರ್ ಹಾಗೂ 5 ಬೌಂಡರಿಗಳು ಸಿಡಿದವು. ಇನ್ನೊಂದು ದಾಖಲೆಯೆಂದರೆ ಆಂಡ್ರೆ ರಸೆಲ್ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದರು. ಆದರೆ, ರಸೆಲ್ ಒಂದೇ ಓವರ್‌ನಲ್ಲಿ ಈ ಸಿಕ್ಸರ್‌ಗಳನ್ನು ಬಾರಿಸಲಿಲ್ಲ. ರಸೆಲ್ ಒಂದು ಓವರ್‌ನ ಕೊನೆಯ 4 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರೆ, ನಂತರ ಮುಂದಿನ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಸಿಕ್ಸರ್ ಹೊಡೆದರು.
ಆಂಡ್ರೆ ರಸೆಲ್ ಅಬ್ಬರಕ್ಕೆ ಸೇಂಟ್ ಕಿಟ್ಸ್ ತಂಡದ ಬೌಲರ್‌ಗಳು ಕಕ್ಕಾಬಿಕ್ಕಿಯಾದರು. ರಸೆಲ್ ಮೊದಲು ಡೊಮಿನಿಕ್ ಡ್ರೇಕ್ಸ್ ಓವರ್‌ನ ಕೊನೆಯ ನಾಲ್ಕು ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರೆ, ನಂತರ ಜಾನ್ ಜಾಗೆಸರ್ ಓವರ್‌ನಲ್ಲಿ ಮೊದಲ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿ ಸತತ ಆರು ಸಿಕ್ಸರ್‌ಗಳನ್ನು ಬಾರಿಸಿದರು. ರಸೆಲ್ ಅವರ ಬಿರುಸಿನ ಇನ್ನಿಂಗ್ಸ್‌ನಿಂದಾಗಿ ಟ್ರಿನ್‌ಬಾಗೊ ತಂಡವು 60 ಎಸೆತಗಳಲ್ಲಿ 155 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಈ ಸಮಯದಲ್ಲಿ ರಸೆಲ್ ಸ್ಟ್ರೈಕ್ ರೇಟ್ 300 ಆಗಿತ್ತು.
KABOOM? 6 sixes in a row, and each bigger than the last. @Russell12A making history in The 6ixty!
Watch all the action from The 6ixty LIVE, exclusively on #FanCode ?https://t.co/2tHqDrTR2V@6ixtycricket #6ixtyonFanCode pic.twitter.com/8SEMdVCtFu
— FanCode (@FanCode) August 28, 2022
ತಕ್ಕ ಉತ್ತರ ನೀಡಿದ ಸೇಂಟ್ ಕಿಟ್ಸ್
ಆದರೆ, 60 ಎಸೆತಗಳಲ್ಲಿ 155 ರನ್ ಗಳಿಸಿದ ಹೊರತಾಗಿಯೂ ಟ್ರಿನ್‌ಬಾಗೊ ನೈಟ್ ರೈಡರ್ಸ್ ಕೇವಲ 3 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಸೇಂಟ್ ಕಿಟ್ಸ್ ತಂಡ ಕೂಡ 152 ರನ್ ಗಳಿಸಿತು. ಈ ತಂಡದ ಪರ ಶೆರ್ಫೇನ್ ರುದರ್‌ಫೋರ್ಡ್ 15 ಎಸೆತಗಳಲ್ಲಿ 50 ರನ್ ಗಳಿಸಿದರು. ಈ ಎಡಗೈ ಬ್ಯಾಟ್ಸ್‌ಮನ್ ತಮ್ಮ ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ಡೊಮಿನಿಕ್ ಡ್ರೇಕ್ಸ್ ಕೂಡ 10 ಎಸೆತಗಳಲ್ಲಿ ಔಟಾಗದೆ 33 ರನ್ ಗಳಿಸಿದರು. ಅವರ ಬ್ಯಾಟ್‌ನಿಂದ 4 ಸಿಕ್ಸರ್ ಮತ್ತು 2 ಬೌಂಡರಿಗಳೂ ಸೇರಿದ್ದವು. ಆಂಡ್ರೆ ಫ್ಲೆಚರ್ 15 ಎಸೆತಗಳಲ್ಲಿ 33 ರನ್ ಗಳಿಸಿದರು. ಒಟ್ಟಾರೆ ಸೇಂಟ್ ಕಿಟ್ಸ್ ತಂಡದ ಬ್ಯಾಟ್ಸ್‌ಮನ್‌ಗಳು 60 ಎಸೆತಗಳಲ್ಲಿ 15 ಸಿಕ್ಸರ್ ಮತ್ತು 8 ಬೌಂಡರಿಗಳನ್ನು ಬಾರಿಸಿದರು. ಮತ್ತೊಂದೆಡೆ, ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ ಒಟ್ಟಾರೆ 14 ಸಿಕ್ಸರ್ ಮತ್ತು 11 ಬೌಂಡರಿಗಳು ಸಿಡಿದವು. ಈ ವೀರಾವೇಷದ ಹೋರಾಟದ ನಡುವೆಯೂ ಸೇಂಟ್ ಕಿಟ್ಸ್ ತಂಡಕ್ಕೆ ಅಂತಿಮವಾಗಿ ಗೆಲುವು ಸಿಗಲಿಲ್ಲ.
Published On - 4:25 pm, Sun, 28 August 22