IND vs PAK: ಪಾಕ್ ತಂಡದ ಶಕ್ತಿಯೇ ಅವರ ದೌರ್ಬಲ್ಯ: ಇದುವೇ ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್..!

Asia Cup 2022: 2021 ರಲ್ಲಿ ನಡೆದ T20 ವಿಶ್ವಕಪ್‌ನಲ್ಲಿ ಪಾಕ್ ಪರ ಯುಎಇ ಮೈದಾನದಲ್ಲಿ ಮಿಂಚಿದ್ದು ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್​ಮನ್​ಗಳು ಮಾತ್ರ.

IND vs PAK: ಪಾಕ್ ತಂಡದ ಶಕ್ತಿಯೇ ಅವರ ದೌರ್ಬಲ್ಯ: ಇದುವೇ ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್..!
IND vs PAK
Follow us
TV9 Web
| Updated By: ಝಾಹಿರ್ ಯೂಸುಫ್

Updated on:Aug 28, 2022 | 3:46 PM

India vs Pakistan: ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯಕ್ಕಾಗಿ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂ ಸಜ್ಜಾಗಿ ನಿಂತಿದೆ. ವಿಶೇಷ ಎಂದರೆ ಈ ಮೈದಾನದಲ್ಲಿ ಭಾರತ-ಪಾಕ್ ಈ ಹಿಂದೊಮ್ಮೆ ಮುಖಾಮುಖಿಯಾಗಿತ್ತು. ಆದರೆ ಆ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿತ್ತು ಎಂಬುದು ವಿಶೇಷ. ಅಂದರೆ ಕಳೆದ ವರ್ಷ ನಡೆದ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಪಾಕ್ ತಂಡ 10 ವಿಕೆಟ್​ಗಳಿಂದ ಮಣಿಸಿತ್ತು. ಇದೀಗ ವರ್ಷಗಳ ಬಳಿಕ ಅದೇ ಮೈದಾನದಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿದೆ. ಆದರೆ ಈ ಬಾರಿ ಟೀಮ್ ಇಂಡಿಯಾ ನಾಯಕ, ಕೋಚ್ ಸೇರಿದಂತೆ ತಂಡದಲ್ಲೂ ಕೆಲ ಬದಲಾವಣೆಗಳಾಗಿವೆ. ಅತ್ತ ಪಾಕ್ ತಂಡದಲ್ಲೂ ಕೂಡ ಸಣ್ಣ ಪುಟ್ಟ ಬದಲಾವಣೆ ಆಗಿದೆ. ಇದಾಗ್ಯೂ ಟೀಮ್ ಇಂಡಿಯಾಗೆ ಪೈಪೋಟಿ ನೀಡಬಲ್ಲ ಆಟಗಾರರು ಪಾಕ್ ತಂಡದಲ್ಲಿದ್ದಾರೆ ಎಂಬುದೇ ಸತ್ಯ. ಆದರೆ ಈ ಆಟಗಾರರು ಪಾಕ್ ತಂಡದ ಶಕ್ತಿಯಾದರೆ, ಇವರ ಶಕ್ತಿಯೇ ಉಳಿದವರ ದೌರ್ಬಲ್ಯ ಎನ್ನಬಹುದು. ಅದೇಗೆಂದರೆ…

  1.  2021 ರಲ್ಲಿ ನಡೆದ T20 ವಿಶ್ವಕಪ್‌ನಲ್ಲಿ ಪಾಕ್ ಪರ ಯುಎಇ ಮೈದಾನದಲ್ಲಿ ಮಿಂಚಿದ್ದು ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್​ಮನ್​ಗಳು ಮಾತ್ರ. ಅಂದರೆ ಆರಂಭಿಕರಾದ ಬಾಬರ್ ಆಜಂ, ಮೊಹಮ್ಮದ್ ರಿಜ್ವಾನ್ ಹೊರತುಪಡಿಸಿದರೆ ಫಖರ್ ಝಮಾನ್ ಉತ್ತಮ ಪ್ರದರ್ಶನ ನೀಡಿದ್ದರು. ಈ ಮೂವರೇ ಸೆಮಿಫೈನಲ್​ವರೆಗೂ ಒಟ್ಟಾಗಿ ಪಾಕಿಸ್ತಾನಕ್ಕಾಗಿ 67.5 ಶೇಕಡಾ ರನ್ ಗಳಿಸಿದ್ದರು. ಅಷ್ಟೇ ಅಲ್ಲದೆ ಈ ಅವಧಿಯಲ್ಲಿ ಇಡೀ ಟೂರ್ನಿ ಇನಿಂಗ್ಸ್​ಗಳಲ್ಲಿ ಶೇ. 72 ರಷ್ಟು ಬಾಲ್​ಗಳನ್ನು ಎದುರಿಸಿದ್ದರು. ಅಂದರೆ, ತಂಡದ ಉಳಿದ ಆಟಗಾರರು ಕೇವಲ ಶೇ. 28 ರಷ್ಟು ಮಾತ್ರ ಬ್ಯಾಟ್ ಬೀಸಿದ್ದರು. ಇಲ್ಲಿ ಈ ಮೂವರು ಬ್ಯಾಟ್ಸ್​​ಮನ್​ಗಳನ್ನು ಬೇಗನೆ ಔಟಾದರೆ ಪಾಕ್ ತಂಡವು ದಿಢೀರ್ ಕುಸಿತಕ್ಕೊಳಗಾಗುವುದರಲ್ಲಿ ಅನುಮಾನವೇ ಇಲ್ಲ.
  2. ಈ ಮೇಲೆ ಹೇಳಿದಂತೆ ಪಾಕ್ ತಂಡದ ಬ್ಯಾಟಿಂಗ್ ಶಕ್ತಿ ಎಂದರೆ ಟಾಪ್- 3 ಬ್ಯಾಟ್ಸ್​ಮನ್​ಗಳು. 2021ರ ಟಿ20 ವಿಶ್ವಕಪ್‌ ಬಳಿಕ ಕೂಡ ಅದು ನಿರೂಪಿತವಾಗಿದೆ. ಅಂದರೆ ಪಾಕ್ ಪರ ಈ ವರ್ಷ ಅತಿ ಹೆಚ್ಚು ರನ್‌ ಗಳಿಸಿದ್ದು ಕೂಡ ಬಾಬರ್ ಆಜಂ, ಮೊಹಮ್ಮದ್ ರಿಜ್ವಾನ್ ಹಾಗೂ ಫಖರ್ ಝಮಾನ್. ಆದರೆ ಟಿ20 ವಿಶ್ವಕಪ್ ಬಳಿಕ ಉಳಿದ ಯಾವುದೇ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು  200 ರನ್ ಕೂಡ ಕಲೆಹಾಕಿಲ್ಲ. ಅಂದರೆ ಮೊದಲ 3 ವಿಕೆಟ್​ಗಳನ್ನು ಟೀಮ್ ಇಂಡಿಯಾ ಪವರ್​ಪ್ಲೇನಲ್ಲೇ ಉರುಳಿಸಿದರೆ, ಭಾರತದ ಮುಂದಿನ ಹಾದಿ ಸುಲಭವಾಗುತ್ತದೆ.
  3.  ಇನ್ನು ಪಾಕ್ ಟಾಪ್ ಆರ್ಡರ್ ಬ್ಯಾಟ್ಸ್​ಮನ್​ಗಳು ರನ್​ಗಳಿಸುತ್ತಿದ್ದರೂ ಬಿರುಸಿನ ಬ್ಯಾಟಿಂಗ್ ಬ್ಯಾಟಿಂಗ್ ಮಾಡುತ್ತಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ 2020 ರಿಂದ ಪಾಕಿಸ್ತಾನಕ್ಕೆ ಹೆಚ್ಚಿನ ಆಕ್ರಮಣಕಾರಿ ಆಟವಾಡಿಲ್ಲ. ಕಳೆದ 2 ವರ್ಷಗಳಿಂದ ಪವರ್‌ಪ್ಲೇನಲ್ಲಿ ಬಾಬರ್ ಅಜಮ್ ಪ್ರತಿ ಓವರ್‌ಗೆ 6.72 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಇನ್ನು ರಿಜ್ವಾನ್ ಪ್ರತಿ ಓವರ್‌ಗೆ 7.20 ಸರಾಸರಿಯಲ್ಲಿ ರನ್ ಬಾರಿಸಿದ್ದರು. ಹಾಗೆಯೇ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಫಖರ್ ಝಮಾನ್ ಕೂಡ ಪ್ರತಿ ಓವರ್‌ಗೆ 7.80 ರನ್ ಗಳಿಸಿದ್ದಾರೆ. ಅಂದರೆ ಪಾಕ್ ತಂಡದ ಬ್ಯಾಟಿಂಗ್ ಶಕ್ತಿ ಎನಿಸಿಕೊಂಡಿರುವ ಈ ಮೂವರು ಪವರ್​ಪ್ಲೇನಲ್ಲಿ ಬಿರುಸಿನ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾಗುತ್ತಾ ಬಂದಿದ್ದಾರೆ. ಇದಾಗ್ಯೂ ಕ್ರೀಸ್ ಕಚ್ಚಿ ನಿಲ್ಲುವ ಮೂಲಕ ಎದುರಾಳಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದೇ ಕಾರಣದಿಂದಾಗಿ ಈ ಮೂವರು ಬ್ಯಾಟ್ಸ್​ಮನ್​ಗಳು ಹೆಚ್ಚಿನ ಓವರ್​ಗಳನ್ನು ಆಡಿದ್ದಾರೆ. ಮತ್ತೊಂದೆಡೆ ಮಧ್ಯಮ ಕ್ರಮಾಂಕ ಬ್ಯಾಟ್ಸ್​ಮನ್​ಗಳಿಗೆ ಇದರಿಂದ ಹೆಚ್ಚಿನ ಅವಕಾಶ ಕೂಡ ದೊರೆಕುತ್ತಿಲ್ಲ. ಅಂದರೆ ಈ ಮೂವರು ಬ್ಯಾಟ್ಸ್​ಮನ್​ಗಳ ಶಕ್ತಿಯೇ, ಉಳಿದ ಬ್ಯಾಟ್ಸ್​ಮನ್​ಗಳ ದೌರ್ಬಲ್ಯಕ್ಕೆ ಕಾರಣವಾಗಿದೆ. ಇದುವೇ ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್ ಆಗಬಹುದು. ಅದಕ್ಕೂ ಮುನ್ನ ಬಾಬರ್ ಆಜಂ, ಮೊಹಮ್ಮದ್ ರಿಜ್ವಾನ್ ಹಾಗೂ ಫಖರ್ ಝಮಾನ್ ವಿಕೆಟ್ ಅನ್ನು ಪವರ್​ಪ್ಲೇನಲ್ಲಿ ಉರುಳಿಸಬೇಕಷ್ಟೇ.
ಇದನ್ನೂ ಓದಿ
Image
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
Image
KGF: ಕಬಾಲಿ ನಿರ್ದೇಶಕನ ಮಾಸ್ಟರ್​ ಪ್ಲ್ಯಾನ್​: ಬರಲಿದೆ ಮತ್ತೊಂದು ಕೆಜಿಎಫ್..!
Image
Yash Next Movie: ಯಶ್ ಮುಂದಿನ ಚಿತ್ರಕ್ಕೆ ಸೌತ್ ಸುಂದರಿ ನಾಯಕಿ..?
Image
Kabza: ಒಂದಲ್ಲ, ಎರಡಲ್ಲ, ಮೂರಲ್ಲ…ವಿದೇಶಿ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ ಕಬ್ಜ

Published On - 3:43 pm, Sun, 28 August 22

ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ