IND vs PAK: ಕಿಂಗ್ ಕೊಹ್ಲಿಗೆ ಎಬಿಡಿ ಕಡೆಯಿಂದ ವಿಶೇಷ ಸಂದೇಶ..!
AB De Villiers: ಪಾಕ್ ವಿರುದ್ದದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಪರ 100 ಟಿ20 ಪಂದ್ಯಗಳನ್ನು ಆಡಿದ 2ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.
Asia Cup 2022: ಬರೋಬ್ಬರಿ ಒಂದು ತಿಂಗಳ ಪೂರ್ಣ ವಿರಾಮದ ಬಳಿಕ ವಿರಾಟ್ ಕೊಹ್ಲಿ (Virat Kohli) ಮತ್ತೆ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಭಾನುವಾರ ಪಾಕಿಸ್ತಾನ್ (India vs Pakistan) ವಿರುದ್ದ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಮತ್ತೆ ಟೀಮ್ ಇಂಡಿಯಾ (Team India) ಜೊತೆ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಎಂದರೆ ಇದು ಕೊಹ್ಲಿ ಪಾಲಿನ ನೂರನೇ ಟಿ20 ಪಂದ್ಯ. ಹೀಗಾಗಿಯೇ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಡೆಯಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಲಾಗುತ್ತಿದೆ. ಈ ನಿರೀಕ್ಷೆಯನ್ನು ಇಮ್ಮಡಿಗೊಳಿಸುವಂತೆ ಕಿಂಗ್ ಕೊಹ್ಲಿಗೆ ದೂರದ ಸೌತ್ ಆಫ್ರಿಕಾದಿಂದ ಗೆಳೆಯನ ವಿಶೆಷ ಸಂದೇಶ ಕೂಡ ಬಂದಿದೆ.
ಈ ಬಗ್ಗೆ ಮಾತನಾಡಿರುವ ಎಬಿ ಡಿವಿಲಿಯರ್ಸ್, 100ನೇ ಪಂದ್ಯವಾಡುತ್ತಿರುವ ನನ್ನ ಸ್ನೇಹಿತ ವಿರಾಟ್ ಕೊಹ್ಲಿಯನ್ನು ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಟೀಮ್ ಇಂಡಿಯಾ ಪರ ಮೂರು ಮಾದರಿಯಲ್ಲೂ 100 ಪಂದ್ಯವಾಡುತ್ತಿರುವ ಮೊದಲ ಆಟಗಾರ ನೀವು. ಇದೊಂದು ಅಧ್ಭುತ ಸಾಧನೆ. ನಾವೆಲ್ಲರೂ ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ. ನಿಮ್ಮ ಈ ವಿಶೇಷ ಪಂದ್ಯವನ್ನು ವೀಕ್ಷಿಸುವುದಾಗಿ ಎಬಿಡಿ ತಿಳಿಸಿದ್ದಾರೆ.
ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಜೊತೆ ಆಡಿರುವ ಎಬಿ ಡಿವಿಲಿಯರ್ಸ್ ಪ್ರತಿ ಸಂದರ್ಭದಲ್ಲೂ ಆಪ್ತ ಸ್ನೇಹಿತ ಪರವಹಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಕೊಹ್ಲಿ ಫಾರ್ಮ್ ಬಗ್ಗೆ ಮಾತನಾಡಿದ್ದ ಎಬಿಡಿ, ಕ್ರಿಕೆಟ್ ಕೆರಿಯರ್ನಲ್ಲಿ ಇಂತಹ ಏರಿಳಿತಗಳು ಸಾಮಾನ್ಯ. ಅವರು ಶೀಘ್ರದಲ್ಲೇ ಕಂಬ್ಯಾಕ್ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಇದೀಗ ನೂರನೇ ಪಂದ್ಯದ ಸಾಧನೆಗಾಗಿ ಕಿಂಗ್ ಕೊಹ್ಲಿಗೆ ವಿಶೇಷ ಸಂದೇಶ ರವಾನಿಸುವ ಮೂಲಕ ಅಭಿನಂದಿಸಿದ್ದಾರೆ. ಅಲ್ಲದೆ ಭಾರತ-ಪಾಕ್ ನಡುವಣ ಪಂದ್ಯವನ್ನು ವೀಕ್ಷಿಸುವುದಾಗಿ ತಿಳಿಸಿದ್ದಾರೆ.
ಎಬಿಡಿ ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಡು ಪ್ಲೆಸಿಸ್ ಮತ್ತು ಲೆಜೆಂಡರಿ ಬೌಲರ್ ಡೇಲ್ ಸ್ಟೇಯ್ನ್ ಕೂಡ ಕೊಹ್ಲಿ ಅವರ 100ನೇ ಟಿ20 ಪಂದ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆಯೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಸಹ ಆಟಗಾರನ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದು, ಭಾರತದ ಪರ ಎಲ್ಲಾ ಮೂರು ಮಾದರಿಗಳಲ್ಲಿ 100 ಪಂದ್ಯಗಳನ್ನು ಆಡುವುದು ಸುಲಭವಲ್ಲ ಎಂದು ತಿಳಿಸಿದ್ದಾರೆ.
.@ABdeVilliers17 has a special message for his close friend @imVkohli ahead of his 100th T20I! ❤️
DP World #AsiaCup2022 | #INDvPAK | #TeamIndia | #BelieveInBlue | #GreatestRivalry pic.twitter.com/nG0VbOo27O
— Star Sports (@StarSportsIndia) August 28, 2022
ಅದರಂತೆ ಪಾಕ್ ವಿರುದ್ದದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಪರ 100 ಟಿ20 ಪಂದ್ಯಗಳನ್ನು ಆಡಿದ 2ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆಯನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ನಿರ್ಮಿಸಿದ್ದರು.
Published On - 4:05 pm, Sun, 28 August 22