IND vs PAK: ಭಾರತ- ಪಾಕಿಸ್ತಾನ ನಡುವಿನ ಹೈವೋಲ್ಟೆಜ್ ಪಂದ್ಯದಲ್ಲಿ ಇವರೇ ಗೇಮ್ ಚೇಂಜರ್ಸ್..!
Asia Cup 2022: ಭಾನುವಾರ ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನಿ ತಂಡಗಳ ಒಟ್ಟು 6 ಆಟಗಾರರು ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಲು ನಿರ್ಣಾಯಕ ಎಂದು ಪರಿಗಣಿಸಬಹುದು.
ಭಾರತ-ಪಾಕಿಸ್ತಾನ (India-Pakistan) ಕ್ರಿಕೆಟ್ ಪಂದ್ಯ ಎಂದರೆ ಒತ್ತಡದ ಜೊತೆಗೆ ಆಟಗಾರರಿಗೆ ಹೀರೋ ಆಗುವ ಅವಕಾಶವೂ ಇರುತ್ತದೆ. ಇದರಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಹಲವು ವರ್ಷಗಳ ಕಾಲ ನೆನಪಿನಲ್ಲಿ ಉಳಿಯುವುದರಲ್ಲಿ ಸಂಶಯವಿಲ್ಲ. ಒಂಟಿ ಕೈಯಿಂದ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಅನೇಕ ಆಟಗಾರರು ಎರಡೂ ತಂಡಗಳಲ್ಲಿದ್ದಾರೆ. ಭಾನುವಾರ ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನಿ ತಂಡಗಳ ಒಟ್ಟು 6 ಆಟಗಾರರು ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಲು ನಿರ್ಣಾಯಕ ಎಂದು ಪರಿಗಣಿಸಬಹುದು. ಆ ಸ್ಟಾರ್‌ಗಳು ಯಾರು ಮತ್ತು ಅವರು ಏಕೆ ವಿಶೇಷರಾಗಿದ್ದಾರೆಂದು ಈಗ ನೋಡೋಣ..
1. ಸೂರ್ಯಕುಮಾರ್ ಯಾದವ್..
ಸೂರ್ಯ ಕುಮಾರ್ ಯಾದವ್ 123 ಐಪಿಎಲ್ ಪಂದ್ಯಗಳಲ್ಲಿ 136 ಸ್ಟ್ರೈಕ್ ರೇಟ್‌ನೊಂದಿಗೆ 2644 ರನ್ ಗಳಿಸಿದ್ದಾರೆ. ಇದರೊಂದಿಗೆ ಅವರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದರು. ಏಷ್ಯಾಕಪ್‌ನಲ್ಲಿ ಸೂರ್ಯ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಅವರು ಭಾರತದ ಪರ 23 ಟಿ20 ಪಂದ್ಯಗಳನ್ನು ಆಡಿದ್ದಾ, 175.45 ಸ್ಟ್ರೈಕ್ ರೇಟ್‌ನಲ್ಲಿ 672 ರನ್ ಗಳಿಸಿದ್ದಾರೆ. ಅವರ ಆಟದ ಶೈಲಿಯಿಂದಾಗಿ ಅವರನ್ನು ಮಿಸ್ಟರ್ 360 ಡಿಗ್ರಿ ಪ್ಲೇಯರ್ ಆಫ್ ಇಂಡಿಯಾ ಎಂದು ಕರೆಯಲಾಗುತ್ತದೆ. ಈ ಹಿಂದೆ T20 ವಿಶ್ವಕಪ್ 2021 ರಲ್ಲಿ, ಆರಂಭಿಕ ಜೋಡಿ ಕಡಿಮೆ ರನ್‌ಗಳಿಗೆ ಪೆವಿಲಿಯನ್ ಸೇರಿತ್ತು. ಆದರೆ ಟೀಮ್ ಇಂಡಿಯಾ ಪರವಾಗಿ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಈ ಬಾರಿ ಅಂತಹ ಪರಿಸ್ಥಿತಿ ಎದುರಾದರೆ ಪಂದ್ಯದ ಮೇಲಿನ ಭರವಸೆಯನ್ನು ಅಭಿಮಾನಿಗಳು ಬಿಟ್ಟುಕೊಡುವುದಿಲ್ಲ. ಏಕೆಂದರೆ ಸೂರ್ಯ ಕೈ ಹಿಡಿಯುತ್ತಾನೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ.
2. ಯುಜ್ವೇಂದ್ರ ಚಹಾಲ್..
2021ರ ಟಿ20 ವಿಶ್ವಕಪ್‌ನಲ್ಲಿ ಯುಜುವೇಂದ್ರ ಚಹಾಲ್‌ಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆ ಸಮಯದಲ್ಲಿ ಹೊಸ ಕಾಂಬಿನೇಷನ್‌ಗೆ ಆಯ್ಕೆಗಾರರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿತ್ತು. ಜೊತೆಗೆ ವೇಗದ ಸ್ಪಿನ್ನರ್‌ಗಳಿಗಾಗಿ ಬಿಸಿಸಿಐ ಹುಡುಕಾಟ ಶುರು ಮಾಡಿತ್ತು. ಸ್ಪಿನ್ನರ್ ಎಂದರೆ ತನ್ನ ವೇಗದ ಎಸೆತಗಳಿಂದ ಬ್ಯಾಟ್ಸ್‌ಮನ್‌ಗೆ ತೊಂದರೆ ಕೊಡುವ ಬೌಲರ್ ಎಂದರ್ಥ. ಈ ವೇಗದ ಸ್ಪಿನ್ನರ್ ಪರಿಕಲ್ಪನೆಯನ್ನು ಕೇಳಿ ಕ್ರಿಕೆಟ್ ಅಭಿಮಾನಿಗಳು ಕೂಡ ಅಚ್ಚರಿಗೊಂಡಿದ್ದರು. ಈ ವಿಷಯ ಚಹಾಲ್‌ಗೆ ತುಂಬಾ ಮುಟ್ಟಿತ್ತು. ಚಹಾಲ್ ಐಪಿಎಲ್ 2022 ರಲ್ಲಿ 17 ಪಂದ್ಯಗಳನ್ನು ಆಡಿ 27 ವಿಕೆಟ್ಗಳನ್ನು ಪಡೆದರು. ಈ ಮೂಲಕ ಪ್ರಪಂಚದ ಪ್ರಸಿದ್ಧ ಬೌಲರ್‌ಗಳನ್ನು ಹಿಂದಿಕ್ಕಿದ ನಂತರ, ಚಹಾಲ್ ಅಂತಿಮವಾಗಿ ಟೀಮ್ ಇಂಡಿಯಾಕ್ಕೆ ಮರಳಿದರು. ಈಗ ಅವರು ದುಬೈನಲ್ಲಿ ಟೀಂ ಇಂಡಿಯಾಗೆ ವಿಕೆಟ್ ಪಡೆಯುವ ಮೂಲಕ ಭಾರತದ ಟ್ರಂಪ್ ಕಾರ್ಡ್ ಎಂದು ಸಾಬೀತುಪಡಿಸಬಹುದು.
3. ಹಾರ್ದಿಕ್ ಪಾಂಡ್ಯ..
ಗಾಯದಿಂದ ಚೇತರಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಇದರೊಂದಿಗೆ ಭಾರತ ತಂಡಕ್ಕೆ ಗ್ರ್ಯಾಂಡ್ ರೀ ಎಂಟ್ರಿ ಕೊಟ್ಟಿದ್ದಾರೆ. ಬೌಲಿಂಗ್ ಡೆಪ್ತ್ ಕೊರತೆಯನ್ನು ನೀಗಿಸಲು ಹಾರ್ದಿಕ್ ಸಿದ್ಧರಾಗಿದ್ದಾರೆ. ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ. ತಂಡದ ಅಗ್ರ ಕ್ರಮಾಂಕ ವಿಫಲವಾದರೂ.. ಹಾರ್ದಿಕ್ ಸ್ವಂತ ಬಲದಿಂದ ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಡೆತ್ ಓವರ್‌ಗಳಲ್ಲಿ ಪವರ್ ಹಿಟ್ಟಿಂಗ್ ಕೂಡ ಮಾಡಬಲ್ಲರು. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಗೆಲ್ಲುವಲ್ಲಿ ಹಾರ್ದಿಕ್ ಪ್ರಮುಖ ಪಾತ್ರ ವಹಿಸಿದ್ದರು. ಮೊದಲ ಟಿ20 ಪಂದ್ಯದಲ್ಲಿ ಅವರು 51 ರನ್‌ಗಳ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದರು. ಆ ಬಳಿಕ ಟೀಂ ಇಂಡಿಯಾ ಪರ ಒಂದರ ಹಿಂದೊಂದರಂತೆ ಮ್ಯಾಚ್ ವಿನ್ನಿಂಗ್ ಪರ್ಫಾರ್ಮೆನ್ಸ್ ನೀಡುತ್ತಲೇ ಇದ್ದಾರೆ. ಈ ಬಾರಿಯ ಏಷ್ಯಾಕಪ್‌ನಲ್ಲಿ ತಂಡ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಹೊಂದಿದೆ.
ಈಗ ಪಾಕಿಸ್ತಾನದ ಮೂವರು ಗೇಮ್ ಚೇಂಜರ್‌ಗಳನ್ನು ನೋಡೋಣ.
4. ಮೊಹಮ್ಮದ್ ರಿಜ್ವಾನ್..
ಸಲ್ಮಾನ್ ಬಟ್ ನಂತರ ಪಾಕಿಸ್ತಾನ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರಲಿಲ್ಲ. ವಿಶೇಷವಾಗಿ ಆರಂಭಿಕ ಓವರ್‌ಗಳಲ್ಲಿ ಯಾವುದೇ ಒತ್ತಡವಿಲ್ಲದೆ ಬ್ಯಾಟಿಂಗ್ ಮಾಡುವ ಮತ್ತು ಎದುರಾಳಿ ತಂಡವನ್ನು ಪಂದ್ಯದಿಂದ ಹೊರಗಿಡುವ ಆಟಗಾರನಾಗಿರಬೇಕು. ಈ ಕೊರತೆಯನ್ನು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ತುಂಬಿದ್ದಾರೆ. 2021ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ನೀಡಿದ್ದ 156 ರನ್‌ಗಳ ಗುರಿಯನ್ನು ಬಾಬರ್, ರಿಜ್ವಾನ್ ಬೆನ್ನಟ್ಟಿ 10 ವಿಕೆಟ್‌ಗಳಿಂದ ಜಯಗಳಿಸಿದ್ದರು. ಈ ವರ್ಷದ ಟಿ20 ಮಾದರಿಯಲ್ಲಿ ಮೊಹಮ್ಮದ್ ರಿಜ್ವಾನ್ ಅವರ ಬ್ಯಾಟ್ ಪಾಕಿಸ್ತಾನಕ್ಕೆ ಅದ್ಭುತ ಶಕ್ತಿಯನ್ನು ತೋರಿಸಿದೆ. ರಿಜ್ವಾನ್ 27 ಪಂದ್ಯಗಳಲ್ಲಿ 1349 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರ ಸ್ಟ್ರೈಕ್ ರೇಟ್ 134.63 ಆಗಿದೆ. ಜೊತೆಗೆ ಅವರು 1 ಶತಕ ಮತ್ತು 12 ಅರ್ಧಶತಕಗಳನ್ನು ಗಳಿಸಿದ್ದಾರೆ. ರಿಜ್ವಾನ್ ಪವರ್‌ಪ್ಲೇಯಲ್ಲಿ ಅಬ್ಬರಿಸಿದರೆ, ಭಾರತೀಯ ಬೌಲಿಂಗ್‌ಗೆ ತೊಂದರೆಯಾಗುತ್ತದೆ.
5. ಫಖರ್ ಜಮಾನ್..
ಸಾಮಾನ್ಯವಾಗಿ ಮೂರನೇ ಕ್ರಮಾಂಕದಲ್ಲಿ ತಂಡದ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿ ಆಡುತ್ತಿದ್ದರು. ಭಾರತ ಈ ಸ್ಥಾನವನ್ನು ವಿರಾಟ್ ಕೊಹ್ಲಿಗೆ ನೀಡಿದರೆ, ಪಾಕಿಸ್ತಾನದ ಪರವಾಗಿ ಮೊದಲು ಆಡುವ ಜವಾಬ್ದಾರಿಯನ್ನು ಅವರು ತೆಗೆದುಕೊಳ್ಳುತ್ತಾರೆ. ಫಖರ್ ತಮ್ಮ ಟಿ20 ವೃತ್ತಿಜೀವನದಲ್ಲಿ 65 ಪಂದ್ಯಗಳನ್ನು ಆಡಿದ್ದು, 1253 ರನ್ ಗಳಿಸಿದ್ದಾರೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಬ್ಯಾಟ್ಸ್‌ಮನ್ ಫಖರ್ ಜಮಾನ್ 106 ಎಸೆತಗಳಲ್ಲಿ 114 ರನ್ ಗಳಿಸಿದ್ದರು. ಆ ಪಂದ್ಯದಲ್ಲಿ ಅವರು ಭಾರತೀಯ ಬೌಲರ್‌ಗಳಿಗೆ ತೀವ್ರ ಹೊಡೆತ ನೀಡಿದರು. ಹೀಗಾಗಿ ಟೀಂ ಇಂಡಿಯಾ ಅವರ ಜೊತೆ ಎಚ್ಚರಿಕೆಯಿಂದ ಇರಬೇಕು. ಇವರಿಂದ ಮತ್ತೊಂದು ಪಂದ್ಯ ಗೆಲ್ಲುವ ನಿರೀಕ್ಷೆಯಲ್ಲಿ ಪಾಕಿಸ್ತಾನ ಪಾಳಯವಿದೆ.
6. ಶಾದಾಬ್ ಖಾನ್..
ಶಾದಾಬ್ ರಿಸ್ಟ್ ಸ್ಪಿನ್ನರ್. ತಮ್ಮ ಬೌಲಿಂಗ್‌ನಿಂದ ಯಾವುದೇ ಕ್ಷಣದಲ್ಲಿ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೆ ದೊಡ್ಡ ಹೊಡೆತಗಳನ್ನು ಆಡಬಲ್ಲ ಪವರ್ ಹಿಟ್ಟರ್. ಇಷ್ಟೇ ಅಲ್ಲ, ಶಾದಾಬ್ ಅತ್ಯಂತ ಬುದ್ಧಿವಂತ ಫೀಲ್ಡರ್. ಈ ನಿಟ್ಟಿನಲ್ಲಿ ಟೀಂ ಇಂಡಿಯಾ ಎಚ್ಚರಿಕೆ ವಹಿಸಬೇಕು. ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು, ರಿಸ್ಟ್ ಸ್ಪಿನ್ನರ್‌ಗಳ ವಿರುದ್ಧ ಆಡಲು ವರ್ಷಗಳಿಂದ ಹೋರಾಡುತ್ತಿದ್ದಾರೆ. ಅಂತಹ ಬೌಲರ್‌ಗಳು ವಿಶೇಷವಾಗಿ ವಿರಾಟ್ ಕೊಹ್ಲಿ ವಿರುದ್ಧ ಬಹಳ ಪರಿಣಾಮಕಾರಿ. ಇಂತಹ ಸಂದರ್ಭಗಳಲ್ಲಿ ಭಾರತ ತಂಡ ಶಾದಾಬ್ ಎದುರು ಎಚ್ಚರಿಕೆಯಿಂದ ಆಡಬೇಕಾಗುತ್ತದೆ.