Asia Cup 2022: ಭಾರತದ ದಿಗ್ಗಜ ಆಟಗಾರರಿಗೆ ಏಷ್ಯಾಕಪ್ ತುಂಬಾ ವಿಶೇಷ ಏಕೆ ಗೊತ್ತಾ? ಈ ಸ್ಟೋರಿ ಓದಿ

Asia Cup 2022: ಭಾರತದ ದಿಗ್ಗಜ ಆಟಗಾರರಿಗೆ ಏಷ್ಯಾಕಪ್ ತುಂಬಾ ವಿಶೇಷವಾಗಿದೆ. ಕೆಲವರು ಬ್ಯಾಟ್ಸ್‌ಮನ್‌ ಆಗಿ ಮತ್ತು ಕೆಲವರು ನಾಯಕರಾಗಿ ವಿಶೇಷ ದಾಖಲೆಗಳನ್ನು ಮಾಡಿದ್ದಾರೆ.

Asia Cup 2022: ಭಾರತದ ದಿಗ್ಗಜ ಆಟಗಾರರಿಗೆ ಏಷ್ಯಾಕಪ್ ತುಂಬಾ ವಿಶೇಷ ಏಕೆ ಗೊತ್ತಾ? ಈ ಸ್ಟೋರಿ ಓದಿ
Follow us
TV9 Web
| Updated By: ಪೃಥ್ವಿಶಂಕರ

Updated on:Aug 26, 2022 | 6:40 PM

ಮತ್ತೊಮ್ಮೆ ಏಷ್ಯಾಕಪ್‌ನಲ್ಲಿ (Asia Cup) ಚಾಂಪಿಯನ್ ಆಗುವ ಸವಾಲನ್ನು ನೀಡಲು ಏಷ್ಯಾ ತಂಡಗಳು ಸಜ್ಜಾಗಿವೆ. ಸುಮಾರು ನಾಲ್ಕು ವರ್ಷಗಳ ನಂತರ ನಡೆಯುತ್ತಿರುವ ಏಷ್ಯಾಕಪ್‌ಗಾಗಿ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಈ ಬಾರಿಯ ಏಷ್ಯನ್ ಕಪ್‌ನಲ್ಲಿ ಆರು ತಂಡಗಳು ಭಾಗವಹಿಸುತ್ತಿವೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ (T20 World Cup) ಮುನ್ನ ಈ ಏಷ್ಯಾಕಪ್‌ ಅತ್ಯಂತ ಮಹತ್ವದ್ದಾಗಿದೆ.

ಏಷ್ಯಾ ಕಪ್ ಬಗ್ಗೆ ನಿಮಗೆಷ್ಟು ಗೊತ್ತು?

ಏಷ್ಯಾಕಪ್ ಅನ್ನು 1984 ರಲ್ಲಿ ಪ್ರಾರಂಭಿಸಲಾಯಿತು. ಮೊದಲ ಬಾರಿಗೆ ಈ ಪಂದ್ಯಾವಳಿಯನ್ನು ಯುಎಇಯಲ್ಲಿ ಆಯೋಜಿಸಲಾಗಿದ್ದಯ, ಭಾರತ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿತ್ತು. ಇದುವರೆಗೆ ಒಟ್ಟು 14 ಬಾರಿ ಆಯೋಜಿಸಲಾಗಿದೆ. ಇದರಲ್ಲಿ ಭಾರತ ಗರಿಷ್ಠ 7 ಬಾರಿ ಟ್ರೋಫಿ ಗೆದ್ದಿದೆ. ಶ್ರೀಲಂಕಾ ಈ ಟ್ರೋಫಿಯನ್ನು 5 ಬಾರಿ ಗೆದ್ದಿದೆ. ಆದರೂ ಇಂದು ನಾವು ಏಷ್ಯಾಕಪ್ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ವಿಷಯಗಳನ್ನು ಹೇಳುತ್ತೇವೆ.

ಇದನ್ನೂ ಓದಿ
Image
Asia Cup 2022: ಏಷ್ಯಾಕಪ್​ನಲ್ಲಿ ಸಚಿನ್, ಗಪ್ಟಿಲ್ ಜೊತೆಗೆ ಕೊಹ್ಲಿ ದಾಖಲೆಯನ್ನು ಮುರಿಯಲಿದ್ದಾರೆ ರೋಹಿತ್..!
Image
Asia Cup 2022: ಪಾಕ್ ತಂಡಕ್ಕೆ ಆಘಾತದ ಮೇಲೆ ಆಘಾತ; ತಂಡದ ಮತ್ತೊಬ್ಬ ವೇಗದ ಬೌಲರ್​ಗೆ ಇಂಜುರಿ..!
Image
Asia Cup 2022: ಸ್ವದೇಶಿಯರು ಒಬ್ಬರೂ ಇಲ್ಲ; ಏಷ್ಯಾಕಪ್​ ಆಡುತ್ತಿರುವ ಹಾಂಕಾಂಗ್ ತಂಡದ ಬಗ್ಗೆ ನಿಮಗೆಷ್ಟು ಗೊತ್ತು?

– ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್‌ಗೆ ಏಷ್ಯಾಕಪ್ ತುಂಬಾ ವಿಶೇಷವಾಗಿದೆ. ಇಲ್ಲಿ ಅವರು ತಮ್ಮ ವೃತ್ತಿಜೀವನದ ಕೊನೆಯ ODI ಶತಕವನ್ನು ಗಳಿಸಿದ್ದರು. 2012 ರಲ್ಲಿ ಏಷ್ಯಾಕಪ್​ ಅನ್ನು ODI ಸ್ವರೂಪದಲ್ಲಿ ಆಡಲಾಗಿತ್ತು. ಈ ಟೂರ್ನಿಯಲ್ಲಿ ಶತಕ ಬಾರಿಸಿದ ನಂತರ ODI ಸ್ವರೂಪದಲ್ಲಿ ಒಂಬತ್ತು ತಿಂಗಳ ಕಾಲ ಆಡಿದ ಸಚಿನ್, ಬಳಿಕ ನಿವೃತ್ತಿ ಘೋಷಿಸಿದರು. ನಮತರ 2013 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

– ವಿರಾಟ್ ಕೊಹ್ಲಿ ಟೀಂ ಇಂಡಿಯಾದ ನಾಯಕನಾಗಿ ಹಲವು ದಾಖಲೆಗಳನ್ನು ಮಾಡಿದ್ದಾರೆ ಆದರೆ ಅವರು ಎಂದಿಗೂ ದೇಶವನ್ನು ಏಷ್ಯನ್ ಚಾಂಪಿಯನ್ ಮಾಡಲು ಸಾಧ್ಯವಾಗಲಿಲ್ಲ. 2014 ರಲ್ಲಿ, ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ, ಅವರು ತಂಡದ ನಾಯಕರಾಗಿದ್ದರು ಆದರೆ ಭಾರತ ಲೀಗ್ ಸುತ್ತಿನಿಂದಲೇ ಹೊರಬಿತ್ತು. 2016 ರಲ್ಲಿ ಧೋನಿ ಅನುಪಸ್ಥಿತಿಯಲ್ಲಿ ಮತ್ತು ನಂತರ 2018 ರಲ್ಲಿ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡವನ್ನು ಚಾಂಪಿಯನ್ ಮಾಡಿದ್ದರು.

– ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದ ಐತಿಹಾಸಿಕ ನಾಯಕ ಎನ್ನುವುದರಲ್ಲಿ ಯಾವುದೇ ಅತೀಶಯೋಕ್ತಿ ಇಲ್ಲ. ಏಕದೆಂದರೆ 2007 ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್​ನಲ್ಲೇ ಧೋನಿ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿದ್ದರು. ಇದಾದ ಬಳಿಕ 2016ರಲ್ಲಿ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿ, ಮೊದಲ ಬಾರಿಗೆ ಟಿ20 ಮಾದರಿಯಲ್ಲಿ ಆಡಿದ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾವನ್ನು ಚಾಂಪಿಯನ್‌ನನ್ನಾಗಿ ಮಾಡಿದ್ದರು. ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಭಾರತ ಏಷ್ಯಾಕಪ್ ಗೆದ್ದಿತ್ತು.

– ನಾಯಕನಾಗಿ ವಿರಾಟ್ ಕೊಹ್ಲಿ ಏಷ್ಯಾಕಪ್ ಗೆಲ್ಲದೇ ಇರಬಹುದು, ಆದರೆ ಉಪನಾಯಕನಾಗಿ ಅವರ ದಾಖಲೆ ಉತ್ತಮವಾಗಿದೆ. 2012 ರಲ್ಲಿ, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಅವರಿಗೆ ಉಪನಾಯಕತ್ವವನ್ನು ನೀಡಲಾಯಿತು. ಆ ಸೀಸನ್​ನಲ್ಲಿ, ಭಾರತ ಲೀಗ್ ಸುತ್ತಿನಿಂದ ಹೊರಬಿತ್ತು. ಆದರೆ 2016 ರಲ್ಲಿ, ಟೀಮ್ ಇಂಡಿಯಾ ಕೊಹ್ಲಿ ಉಪನಾಯಕತ್ವದಲ್ಲಿ ಚಾಂಪಿಯನ್ ಆಯಿತು.

– ರೋಹಿತ್ ಶರ್ಮಾ ಈಗ ಟೀಮ್ ಇಂಡಿಯಾದ ನಾಯಕರಾಗಿರಬಹುದು ಆದರೆ ಅವರು ಈಗಾಗಲೇ ಏಷ್ಯನ್ ಚಾಂಪಿಯನ್ ನಾಯಕರಾಗಿದ್ದಾರೆ. 2018ರಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಏಷ್ಯಾಕಪ್‌ನಲ್ಲಿ ತಂಡದ ನಾಯಕತ್ವ ವಹಿಸಿದ್ದರು. ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಅವರು ಭಾರತವನ್ನು ಸತತ ಎರಡನೇ ಬಾರಿಗೆ ಏಷ್ಯನ್ ಚಾಂಪಿಯನ್ ಆಗಿ ಮಾಡಿದರು.

Published On - 6:40 pm, Fri, 26 August 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್