Asia Cup 2022: ಏಷ್ಯಾಕಪ್​ಗಾಗಿ ಹೊಸ ಜೆರ್ಸಿ ಅನಾವರಣಗೊಳಿಸಿದ ಭಾರತ- ಪಾಕಿಸ್ತಾನ

Asia Cup 2022: ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮಹತ್ವದ ಪಂದ್ಯ ಆಗಸ್ಟ್ 28 ರಂದು ನಡೆಯಲಿದೆ. ಎರಡೂ ತಂಡಗಳು ಈ ಪಂದ್ಯಕ್ಕೆ ಸಂಪೂರ್ಣ ಸಜ್ಜಾಗಿವೆ.

Asia Cup 2022: ಏಷ್ಯಾಕಪ್​ಗಾಗಿ ಹೊಸ ಜೆರ್ಸಿ ಅನಾವರಣಗೊಳಿಸಿದ ಭಾರತ- ಪಾಕಿಸ್ತಾನ
Follow us
TV9 Web
| Updated By: ಪೃಥ್ವಿಶಂಕರ

Updated on:Aug 26, 2022 | 3:46 PM

ಏಷ್ಯಾಕಪ್ 2022 (Asia Cup 2022) ಗಾಗಿ ಎಲ್ಲಾ ತಂಡಗಳ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಪಂದ್ಯಾವಳಿಗಾಗಿ ಯುಎಇಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಪೂರ್ಣಗೊಳಿಸಲಾಗಿದೆ. ಇದೇ ವೇಳೆ ಪ್ರಶಸ್ತಿ ಗೆಲ್ಲಲು ಎಲ್ಲಾ ತಂಡಗಳು ಕಸರತ್ತು ನಡೆಸುತ್ತಿವೆ. ಟೀಂ ಇಂಡಿಯಾ ಕೂಡ ತನ್ನ ಚಾಂಪಿಯನ್ ಪಟ್ಟವನ್ನೂ ಹಾಗೇ ಉಳಿಸಿಕೊಳ್ಳಲು ಶತಾಯಗತಾಯ ಹೋರಾಡಲಿದೆ. ಹೀಗಾಗಿ ಸಮರಾಭ್ಯಾಸ ಶುರು ಮಾಡಿರುವ ಭಾರತ ತಂಡ ಏಷ್ಯಾಕಪ್‌ಗಾಗಿ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದ್ದು, ಟೀಂ ಇಂಡಿಯಾ (Team India) ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಏಷ್ಯಾಕಪ್ ಜರ್ಸಿಯಲ್ಲಿರುವ ಟೀಂ ಇಂಡಿಯಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಭಾರತದೊಂದಿಗೆ ಪಾಕಿಸ್ತಾನ ತಂಡ ಕೂಡ ತನ್ನ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ.

ರವೀಂದ್ರ ಜಡೇಜಾ ಏಷ್ಯಾಕಪ್‌ನಲ್ಲಿ ಭಾರತ ತಂಡದ ಹೊಸ ಜೆರ್ಸಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ವಾಸ್ತವವಾಗಿ, ಐಸಿಸಿ, ಎಸಿಸಿಯ ಪ್ರತಿ ಪಂದ್ಯಾವಳಿಯಲ್ಲಿ ತಂಡಗಳು ಹೊಸ ಜೆರ್ಸಿಯಲ್ಲಿ ಕಂಡುಬರುತ್ತವೆ. ಈ ಜೆರ್ಸಿಗಳ ಮೇಲೆ ಟೂರ್ನಿಯ ಹೆಸರನ್ನೂ ಬರೆಯಲಾಗಿರುತ್ತದೆ. ಭಾರತ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ತಮ್ಮ ಹೊಸ ಏಷ್ಯಾಕಪ್ ಜರ್ಸಿಯಲ್ಲಿ ಟೀಮ್ ಇಂಡಿಯಾದ ಫೋಟೋವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಭಾರತ ತಂಡದ ಜೆರ್ಸಿ ನೀಲಿ ಬಣ್ಣದಲ್ಲಿದ್ದರೆ, ತಂಡದ ಜರ್ಸಿಯು ಏಷ್ಯಾಕಪ್ 2022 ಲೋಗೋವನ್ನು ಸಹ ಹೊಂದಿದೆ. ಈ ಜೆರ್ಸಿಯಲ್ಲಿ ಮೂರು ನಕ್ಷತ್ರಗಳೂ ಇವೆ. ಭಾರತ ತಂಡ ಇದುವರೆಗೆ ಮೂರು ಬಾರಿ ವಿಶ್ವಕಪ್ ಗೆದ್ದಿರುವುದು ಗೊತ್ತೇ ಇದೆ. ಆದರೆ, ಜಡೇಜಾ ಹೊರತುಪಡಿಸಿ ಯಾವುದೇ ಆಟಗಾರರು ಹೊಸ ಜೆರ್ಸಿಯಲ್ಲಿ ಫೋಟೋ ಅಥವಾ ವೀಡಿಯೊವನ್ನು ಪೋಸ್ಟ್ ಮಾಡಿಲ್ಲ.

ಇದನ್ನೂ ಓದಿ
Image
Asia Cup 2022: ಏಷ್ಯಾಕಪ್​ನಲ್ಲಿ ಸಚಿನ್, ಗಪ್ಟಿಲ್ ಜೊತೆಗೆ ಕೊಹ್ಲಿ ದಾಖಲೆಯನ್ನು ಮುರಿಯಲಿದ್ದಾರೆ ರೋಹಿತ್..!
Image
Asia Cup 2022: ಪಾಕ್ ತಂಡಕ್ಕೆ ಆಘಾತದ ಮೇಲೆ ಆಘಾತ; ತಂಡದ ಮತ್ತೊಬ್ಬ ವೇಗದ ಬೌಲರ್​ಗೆ ಇಂಜುರಿ..!
Image
Asia Cup 2022: ಸ್ವದೇಶಿಯರು ಒಬ್ಬರೂ ಇಲ್ಲ; ಏಷ್ಯಾಕಪ್​ ಆಡುತ್ತಿರುವ ಹಾಂಕಾಂಗ್ ತಂಡದ ಬಗ್ಗೆ ನಿಮಗೆಷ್ಟು ಗೊತ್ತು?

ಪಾಕಿಸ್ತಾನಕ್ಕೂ ಹೊಸ ಜೆರ್ಸಿ

ಭಾರತ ತಂಡದ ಜೊತೆಗೆ ಪಾಕಿಸ್ತಾನ ತಂಡ ಕೂಡ ತಮ್ಮ ಹೊಸ ಜೆರ್ಸಿ ಫೋಟೋಗಳನ್ನು ಹಂಚಿಕೊಂಡಿದೆ. ಏಷ್ಯಾಕಪ್‌ನಲ್ಲಿ ಆಡಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಹೊಸ ಜೆರ್ಸಿಯ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಹೊಸ ಜೆರ್ಸಿಯಲ್ಲಿ ನಾಯಕ ಬಾಬರ್ ಅಜಂ ಹಾಗೂ ತಂಡದ ಇತರೆ ಆಟಗಾರರು ಫೋಟೋ ಶೂಟ್‌ಗೆ ಬಂದಿದ್ದರು. ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮಹತ್ವದ ಪಂದ್ಯ ಆಗಸ್ಟ್ 28 ರಂದು ನಡೆಯಲಿದೆ. ಎರಡೂ ತಂಡಗಳು ಈ ಪಂದ್ಯಕ್ಕೆ ಸಂಪೂರ್ಣ ಸಜ್ಜಾಗಿವೆ.

2 ಗ್ರೂಪ್ – 6 ತಂಡಗಳು:

ಈ ಬಾರಿಯ ಏಷ್ಯಾಕಪ್​ನಲ್ಲಿ 6 ತಂಡಗಳು ಕಣಕ್ಕಿಳಿಯಲಿದೆ. ಈ ತಂಡಗಳನ್ನು ಎರಡು ಗ್ರೂಪ್​ಗಳಾಗಿ ವಿಂಗಡಿಸಲಾಗಿದೆ.

ಗ್ರೂಪ್- A

ಭಾರತ ಪಾಕಿಸ್ತಾನ್, ಹಾಂಗ್​ ಕಾಂಗ್

ಗ್ರೂಪ್- B

ಶ್ರೀಲಂಕಾ ಅಫ್ಘಾನಿಸ್ತಾನ್ ಬಾಂಗ್ಲಾದೇಶ

Published On - 3:46 pm, Fri, 26 August 22

ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು