AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

The 6IXTY: 6 ಎಸೆತಗಳಲ್ಲಿ 6 ಸಿಕ್ಸರ್; ಕೇವಲ 24 ಎಸೆತಗಳಲ್ಲಿ 72 ರನ್ ಚಚ್ಚಿದ ರಸೆಲ್! ವಿಡಿಯೋ ನೋಡಿ

The 6IXTY: ಟ್ರಿನ್‌ಬಾಗೊ ನೈಟ್ ರೈಡರ್ಸ್ ಪರ ಆಡುತ್ತಿರುವ ಆಂಡ್ರೆ ರಸೆಲ್ ಕೇವಲ 24 ಎಸೆತಗಳಲ್ಲಿ 72 ರನ್ ಚಚ್ಚಿದ್ದಾರೆ. ಈ ವೇಳೆ ರಸೆಲ್ ಬ್ಯಾಟ್‌ನಿಂದ 8 ಸಿಕ್ಸರ್ ಹಾಗೂ 5 ಬೌಂಡರಿಗಳು ಸಿಡಿದವು.

The 6IXTY: 6 ಎಸೆತಗಳಲ್ಲಿ 6 ಸಿಕ್ಸರ್; ಕೇವಲ 24 ಎಸೆತಗಳಲ್ಲಿ 72 ರನ್ ಚಚ್ಚಿದ ರಸೆಲ್! ವಿಡಿಯೋ ನೋಡಿ
Andre Russell
TV9 Web
| Updated By: ಪೃಥ್ವಿಶಂಕರ|

Updated on:Aug 28, 2022 | 4:25 PM

Share

ಆಂಡ್ರೆ ರಸೆಲ್ (Andre Russell) ಬ್ಯಾಟಿಂಗ್​ನಲ್ಲಿರುವವರೆಗೂ ಎದುರಾಳಿ ತಂಡದ ಗೆಲುವು ಗಗನ ಕುಸುಮವೇ ಸರಿ. ಏಕೆಂದರೆ ಈ ಆಟಗಾರನ ಬಿರುಗಾಳಿ ಬ್ಯಾಟಿಂಗ್ ಎಂತಹ ಟಾರ್ಗೆಟ್ ಅನ್ನು ಸುಲಭವಾಗಿ ಚೇಸ್ ಮಾಡಿಬಿಡುತ್ತದೆ. ಇದಕ್ಕೆ ಈ ಹಿಂದೆ ಸಾಕಷ್ಟು ಉದಾಹರಣೆಗಳನ್ನು ಕ್ರಿಕೆಟ್ ಲೋಕ ನೋಡಿದೆ. ಈಗ ಮತ್ತೊಮ್ಮೆ ರಸೆಲ್, ಸಿಕ್ಸ್ಟಿ ಪಂದ್ಯಾವಳಿಯಲ್ಲಿ ಅದೇ ರೀತಿಯಲ್ಲಿ ಅಬ್ಬರಿಸಿದ್ದಾರೆ. ಟ್ರಿನ್‌ಬಾಗೊ ನೈಟ್ ರೈಡರ್ಸ್ ಪರ ಆಡುತ್ತಿರುವ ಆಂಡ್ರೆ ರಸೆಲ್ ಕೇವಲ 24 ಎಸೆತಗಳಲ್ಲಿ 72 ರನ್ ಚಚ್ಚಿದ್ದಾರೆ. ಈ ವೇಳೆ ರಸೆಲ್ ಬ್ಯಾಟ್‌ನಿಂದ 8 ಸಿಕ್ಸರ್ ಹಾಗೂ 5 ಬೌಂಡರಿಗಳು ಸಿಡಿದವು. ಇನ್ನೊಂದು ದಾಖಲೆಯೆಂದರೆ ಆಂಡ್ರೆ ರಸೆಲ್ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದರು. ಆದರೆ, ರಸೆಲ್ ಒಂದೇ ಓವರ್‌ನಲ್ಲಿ ಈ ಸಿಕ್ಸರ್‌ಗಳನ್ನು ಬಾರಿಸಲಿಲ್ಲ. ರಸೆಲ್ ಒಂದು ಓವರ್‌ನ ಕೊನೆಯ 4 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರೆ, ನಂತರ ಮುಂದಿನ ಓವರ್​ನ ಮೊದಲ ಎರಡು ಎಸೆತಗಳಲ್ಲಿ ಸಿಕ್ಸರ್ ಹೊಡೆದರು.

ಆಂಡ್ರೆ ರಸೆಲ್ ಅಬ್ಬರಕ್ಕೆ ಸೇಂಟ್ ಕಿಟ್ಸ್ ತಂಡದ ಬೌಲರ್‌ಗಳು ಕಕ್ಕಾಬಿಕ್ಕಿಯಾದರು. ರಸೆಲ್ ಮೊದಲು ಡೊಮಿನಿಕ್ ಡ್ರೇಕ್ಸ್ ಓವರ್​ನ ಕೊನೆಯ ನಾಲ್ಕು ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರೆ, ನಂತರ ಜಾನ್ ಜಾಗೆಸರ್ ಓವರ್​ನಲ್ಲಿ ಮೊದಲ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿ ಸತತ ಆರು ಸಿಕ್ಸರ್‌ಗಳನ್ನು ಬಾರಿಸಿದರು. ರಸೆಲ್ ಅವರ ಬಿರುಸಿನ ಇನ್ನಿಂಗ್ಸ್‌ನಿಂದಾಗಿ ಟ್ರಿನ್‌ಬಾಗೊ ತಂಡವು 60 ಎಸೆತಗಳಲ್ಲಿ 155 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಈ ಸಮಯದಲ್ಲಿ ರಸೆಲ್ ಸ್ಟ್ರೈಕ್ ರೇಟ್ 300 ಆಗಿತ್ತು.

ಇದನ್ನೂ ಓದಿ
Image
The Hundred: 23 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್! 278ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಸುನಾಮಿ ಎಬ್ಬಿಸಿದ ರಸೆಲ್
Image
KKR vs SRH IPL Match Result: ರಸೆಲ್ ಅಬ್ಬರಕ್ಕೆ ಮಂಕಾದ ಹೈದರಾಬಾದ್; ಕೆಕೆಆರ್ ಪ್ಲೇ ಆಫ್ ಕನಸು ಜೀವಂತ
Image
Andre Russell: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವಿಚಿತ್ರವಾಗಿ ರನೌಟ್ ಆದ ಆಂಡ್ರೆ ರಸೆಲ್..!

ತಕ್ಕ ಉತ್ತರ ನೀಡಿದ ಸೇಂಟ್ ಕಿಟ್ಸ್

ಆದರೆ, 60 ಎಸೆತಗಳಲ್ಲಿ 155 ರನ್ ಗಳಿಸಿದ ಹೊರತಾಗಿಯೂ ಟ್ರಿನ್‌ಬಾಗೊ ನೈಟ್ ರೈಡರ್ಸ್ ಕೇವಲ 3 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಸೇಂಟ್ ಕಿಟ್ಸ್ ತಂಡ ಕೂಡ 152 ರನ್ ಗಳಿಸಿತು. ಈ ತಂಡದ ಪರ ಶೆರ್ಫೇನ್ ರುದರ್‌ಫೋರ್ಡ್ 15 ಎಸೆತಗಳಲ್ಲಿ 50 ರನ್ ಗಳಿಸಿದರು. ಈ ಎಡಗೈ ಬ್ಯಾಟ್ಸ್‌ಮನ್ ತಮ್ಮ ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ಡೊಮಿನಿಕ್ ಡ್ರೇಕ್ಸ್ ಕೂಡ 10 ಎಸೆತಗಳಲ್ಲಿ ಔಟಾಗದೆ 33 ರನ್ ಗಳಿಸಿದರು. ಅವರ ಬ್ಯಾಟ್‌ನಿಂದ 4 ಸಿಕ್ಸರ್ ಮತ್ತು 2 ಬೌಂಡರಿಗಳೂ ಸೇರಿದ್ದವು. ಆಂಡ್ರೆ ಫ್ಲೆಚರ್ 15 ಎಸೆತಗಳಲ್ಲಿ 33 ರನ್ ಗಳಿಸಿದರು. ಒಟ್ಟಾರೆ ಸೇಂಟ್ ಕಿಟ್ಸ್ ತಂಡದ ಬ್ಯಾಟ್ಸ್‌ಮನ್‌ಗಳು 60 ಎಸೆತಗಳಲ್ಲಿ 15 ಸಿಕ್ಸರ್ ಮತ್ತು 8 ಬೌಂಡರಿಗಳನ್ನು ಬಾರಿಸಿದರು. ಮತ್ತೊಂದೆಡೆ, ಟ್ರಿನ್‌ಬಾಗೊ ನೈಟ್ ರೈಡರ್ಸ್‌ ತಂಡ ಒಟ್ಟಾರೆ 14 ಸಿಕ್ಸರ್ ಮತ್ತು 11 ಬೌಂಡರಿಗಳು ಸಿಡಿದವು. ಈ ವೀರಾವೇಷದ ಹೋರಾಟದ ನಡುವೆಯೂ ಸೇಂಟ್ ಕಿಟ್ಸ್ ತಂಡಕ್ಕೆ ಅಂತಿಮವಾಗಿ ಗೆಲುವು ಸಿಗಲಿಲ್ಲ.

Published On - 4:25 pm, Sun, 28 August 22

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ