Andre Russell: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವಿಚಿತ್ರವಾಗಿ ರನೌಟ್ ಆದ ಆಂಡ್ರೆ ರಸೆಲ್..!
BPL 2022: ಪೆರೇರಾ ಅವರ ಕೊನೆಯ ಎಸೆತದಲ್ಲಿ ರಸೆಲ್ ಚೆಂಡನ್ನು ಶಾರ್ಟ್ ಥರ್ಡ್ ಮ್ಯಾನ್ ಕಡೆಗೆ ಹೊಡೆದರು. ಅಲ್ಲದೆ ಒಂದು ರನ್ಗಳಿಸುವ ಪಯತ್ನ ಮಾಡಿದ್ದರು.
ಕ್ರಿಕೆಟ್ನಲ್ಲಿ ಔಟ್ ಮತ್ತು ರನೌಟ್ ಸಾಮಾನ್ಯ ವಿಷಯ. ಹೀಗೆ ಔಟ್ ಹೇಗೆ ಆಗುತ್ತಾರೆ ಎಂಬುದು ಕೂಡ ಎಲ್ಲರಿಗೂ ಗೊತ್ತಿರುವ ವಿಷಯ. ಇದಾಗ್ಯೂ ಕೆಲವೊಮ್ಮೆ ಔಟ್ ಆದ ರೀತಿ ವಿಚಿತ್ರ ಎನಿಸಿಬಿಡುತ್ತದೆ. ಅದರಲ್ಲೂ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ನಲ್ಲಿ ಆಂಡ್ರೆ ರಸೆಲ್ ಔಟಾಗಿರುವ ರೀತಿ ಮಾತ್ರ ಎಂಬಾ ವಿಭಿನ್ನ ಎಂಬುದು ಇಲ್ಲಿ ವಿಶೇಷ. ಬಿಪಿಎಲ್ನಲ್ಲಿ ಶುಕ್ರವಾರ ಮಿನಿಸ್ಟರ್ ಗ್ರೂಪ್ ಢಾಕಾ ಮತ್ತು ಖುಲ್ನಾ ಟೈಗರ್ಸ್ ಮುಖಾಮುಖಿಯಾಗಿತ್ತು. ಮಿನಿಸ್ಟರ್ ಗ್ರೂಪ್ ಢಾಕಾ (MGD) ತಂಡದ ಪರ ಆಡುತ್ತಿರುವ ರಸೆಲ್ ವಿಚಿತ್ರ ರೀತಿಯಲ್ಲಿ ರನ್ ಔಟ್ ಆಗಿ ಇಡೀ ವಿಶ್ವದ ಗಮನ ಸೆಳೆದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಿನಿಸ್ಟರ್ ಗ್ರೂಪ್ ಢಾಕಾ ತಂಡದ ಪರ ರಸೆಲ್ 15 ನೇ ಓವರ್‌ನಲ್ಲಿ ಬ್ಯಾಟಿಂಗ್ಗೆ ಇಳಿದಿದ್ದರು. ಈ ಓವರ್ ಖುಲ್ನಾ ಟೈಗರ್ಸ್ ಪರ ಶ್ರೀಲಂಕಾದ ತಿಸಾರ ಪೆರೆರಾ ಬೌಲ್ ಮಾಡಿದ್ದರು. ಪೆರೇರಾ ಅವರ ಈ ಓವರ್‌ನ ಐದನೇ ಎಸೆತದಲ್ಲಿ ರಸೆಲ್ ಪ್ರಬಲ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಸಿಡಿಲಬ್ಬರ ತೋರಿಸುವ ಸೂಚನೆ ನೀಡಿದ್ದರು.
ಆದರೆ ಪೆರೇರಾ ಅವರ ಕೊನೆಯ ಎಸೆತದಲ್ಲಿ ರಸೆಲ್ ಚೆಂಡನ್ನು ಶಾರ್ಟ್ ಥರ್ಡ್ ಮ್ಯಾನ್ ಕಡೆಗೆ ಹೊಡೆದರು. ಅಲ್ಲದೆ ಒಂದು ರನ್ಗಳಿಸುವ ಪಯತ್ನ ಮಾಡಿದ್ದರು. ಅತ್ತ ನಾನ್ ಸ್ಟ್ರೈಕ್ನಲ್ಲಿದ್ದ ತಂಡದ ನಾಯಕ ಮೆಹಮುದುಲ್ಲಾ ಕೂಡ ಓಡಿದರು. ಇದೇ ವೇಳೆ ಶಾರ್ಟ್ ಥರ್ಡ್ ಮ್ಯಾನ್‌ನಲ್ಲಿ ಫೀಲ್ಡಿಂಗ್ ಮಾಡಿದ ಮೆಹದಿ ಹಸನ್ ಸ್ಟ್ರೈಕರ್ ಎಂಡ್ ವಿಕೆಟ್ ಚೆಂಡೆಸೆದರು. ಚೆಂಡು ಸ್ಟಂಪ್‌ಗೆ ಬಡಿಯಿತು. ಫೀಲ್ಡರ್ ಸ್ಟೈಕರ್ ವಿಕೆಟ್ ಟಾರ್ಗೆಟ್ ಮಾಡಿರುವುದನ್ನು ಗಮನಿಸಿದ ರಸೆಲ್ ಕೂಡ ನಿಧಾನಗತಿಯಲ್ಲಿ ಓಡಿದರು.
ಆದರೆ ವಿಕೆಟ್ಗೆ ಬಡಿದ ಚೆಂಡು ನೇರವಾಗಿ ನಾನ್ ಸ್ಟ್ರೈಕರ್ ತುದಿಯ ವಿಕೆಟ್ಗೆ ಬಂದು ಕೂಡ ಬಡಿಯಿತು. ಇಂತಹದೊಂದು ಟ್ವಿಸ್ಟ್ ಅನ್ನು ರಸೆಲ್ ಕೂಡ ಊಹಿಸಿರಲಿಲ್ಲ. ಅಂದರೆ ಚೆಂಡು ಎರಡೂ ಕಡೆ ವಿಕೆಟ್ ಬೇಲ್ಸ್ ಅನ್ನು ಎಗರಿಸಿತ್ತು. ಖುಲ್ನಾ ಟೈಗರ್ಸ್ ಆಟಗಾರರು ರನೌಟ್ಗೆ ಮನವಿ ಮಾಡಿದರು. ಆದರೆ ವಿಕೆಟ್ಗೆ ಚೆಂಡು ತಾಗುವ ಮೊದಲೇ ಮೊಹಮುದುಲ್ಲಾ ಕ್ರೀಸ್ಗೆ ತಲುಪಿದ್ದರು. ಹೀಗಾಗಿ ಥರ್ಡ್ ಅಂಪೈರ್ 2ನೇ ಬಾರಿ ನಾನ್ ಸ್ಟೈಕ್ ವಿಕೆಟ್ಗೆ ತಾಗಿದ ರನೌಟ್ ಅನ್ನು ಪರಿಶೀಲಿಸಿದರು. ಅಚ್ಚರಿ ಎಂಬಂತೆ ಆಂಡ್ರೆ ರಸೆಲ್ ಕ್ರೀಸ್ ತಲುಪುವ ಮೊದಲೇ ಚೆಂಡು ವಿಕೆಟ್ಗೆ ತಾಗಿತ್ತು. ಅದರಂತೆ ಆಂಡ್ರೆ ರಸೆಲ್ ವಿಚಿತ್ರ ರನೌಟ್ಗೆ ಬಲಿಯಾಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಬೇಕಾಯಿತು. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕ್ರಿಕೆಟ್ ಇತಿಹಾಸದಲ್ಲೇ ಇದೊಂದು ವಿಚಿತ್ರ ರನೌಟ್ ಎಂದು ವಿಶ್ಲೇಷಿಸಲಾಗುತ್ತಿದೆ.
WHAT A BIZARRE RUN OUT! ?
? Watch the #BPL2022 match live on #FanCode ? https://t.co/wPDmICv8cM#BPLonFanCode pic.twitter.com/O43gKKfLSi
— FanCode (@FanCode) January 21, 2022
ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!
(BPL: Andre Russell dismissed in a bizarre run-out)