Asia Cup 2022: ಪಾಕ್ ವಿರುದ್ಧದ ಪಂದ್ಯದಿಂದ ಟೀಂ ಇಂಡಿಯಾದ ಈ 4 ಆಟಗಾರರಿಗೆ ಕೋಕ್..!

Asia Cup 2022: ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಆಗಸ್ಟ್ 28 ರಂದು ಮುಖಾಮುಖಿಯಾಗಲಿವೆ. ಹೀಗಾಗಿ ಭಾರತದ ಪ್ಲೇಯಿಂಗ್ XI ನಲ್ಲಿ ಯಾವ ಆಟಗಾರರಿಗೆ ಅವಕಾಶ ಸಿಗುತ್ತದೆ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.

Asia Cup 2022: ಪಾಕ್ ವಿರುದ್ಧದ ಪಂದ್ಯದಿಂದ ಟೀಂ ಇಂಡಿಯಾದ ಈ 4 ಆಟಗಾರರಿಗೆ ಕೋಕ್..!
Team India
Follow us
| Updated By: ಪೃಥ್ವಿಶಂಕರ

Updated on: Aug 26, 2022 | 4:19 PM

ಆಗಸ್ಟ್ 28 ರಂದು ಏಷ್ಯಾಕಪ್‌ನಲ್ಲಿ (Asia Cup 2022) ಭಾರತ ಮತ್ತು ಪಾಕಿಸ್ತಾನ (India and Pakistan) ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಗೆಲುವಿನ ತಯಾರಿಯಲ್ಲಿ ನಿರತವಾಗಿವೆ. ಏತನ್ಮಧ್ಯೆ, ಯಾವ ಪ್ಲೇಯಿಂಗ್ ಇಲೆವೆನ್​ನೊಂದಿಗೆ ಟೀಂ ಇಂಡಿಯಾ ಮೈದಾನಕ್ಕಿಳಿಯಲಿದೆ ಎಂಬುದು ಪ್ರಶ್ನೆಯಾಗಿದೆ. ಭಾರತ ಪ್ರತಿ ಸ್ಥಾನಕ್ಕೂ ಒಂದಕ್ಕಿಂತ ಹೆಚ್ಚು ಆಟಗಾರರನ್ನು ಹೊಂದಿದ್ದು, ಆಡುವ 11 ಅಲ್ಲಿ ಯಾರಿಗೆ ಅವಕಾಶ ಸಿಗಲಿದೆ. ಜೊತೆಗೆ ನಾಯಕ ರೋಹಿತ್ ಶರ್ಮಾ (Rohit Sharma) ಯಾವ ಆಟಗಾರರಿಗೆ ಅವಕಾಶ ನೀಡುತ್ತಾರೆ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಭಾರತದ ಬ್ಯಾಟಿಂಗ್ ವಿಭಾಗ ಹೇಗಿರಲಿದೆ?

ಭಾರತ ತಂಡದ ಆರಂಭಿಕರಾಗಿ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಕಣಕ್ಕಿಳಿಯಲಿದ್ದಾರೆ. ಈ ಇಬ್ಬರೂ ಆಟಗಾರರ ದಾಖಲೆ ಅದ್ಭುತವಾಗಿದ್ದು, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಇದೇ ಚಾಂಪಿಯನ್ ಜೋಡಿ ಇನ್ನಿಂಗ್ಸ್ ಆರಂಭಿಸಲಿದೆ. ಇವರಲ್ಲದೆ ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ ಸ್ಥಾನ ಕೂಡ ಆಡುವ ಇಲೆವೆನ್‌ನಲ್ಲಿ ಸ್ಥಿರವಾಗಿದೆ.

ಇದನ್ನೂ ಓದಿ
Image
Asia Cup 2022: ಏಷ್ಯಾಕಪ್​ನಲ್ಲಿ ಸಚಿನ್, ಗಪ್ಟಿಲ್ ಜೊತೆಗೆ ಕೊಹ್ಲಿ ದಾಖಲೆಯನ್ನು ಮುರಿಯಲಿದ್ದಾರೆ ರೋಹಿತ್..!
Image
Asia Cup 2022: ಪಾಕ್ ತಂಡಕ್ಕೆ ಆಘಾತದ ಮೇಲೆ ಆಘಾತ; ತಂಡದ ಮತ್ತೊಬ್ಬ ವೇಗದ ಬೌಲರ್​ಗೆ ಇಂಜುರಿ..!
Image
Asia Cup 2022: ಸ್ವದೇಶಿಯರು ಒಬ್ಬರೂ ಇಲ್ಲ; ಏಷ್ಯಾಕಪ್​ ಆಡುತ್ತಿರುವ ಹಾಂಕಾಂಗ್ ತಂಡದ ಬಗ್ಗೆ ನಿಮಗೆಷ್ಟು ಗೊತ್ತು?

ವಿಕೆಟ್ ಕೀಪರ್ ಯಾರು?

ಟೀಮ್ ಇಂಡಿಯಾದಲ್ಲಿ ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ರೂಪದಲ್ಲಿ ಇಬ್ಬರು ವಿಕೆಟ್ ಕೀಪರ್ ಗಳಿದ್ದಾರೆ. ಆದರೆ ಇಬ್ಬರಲ್ಲಿ ಒಬ್ಬರು ಮಾತ್ರ ಆಡಲಿದ್ದಾರೆ ಎಂಬ ವರದಿಗಳಿವೆ. ರಿಷಬ್ ಪಂತ್ ಎಡಗೈ ಬ್ಯಾಟ್ಸ್‌ಮನ್ ಮತ್ತು ತಂಡದ ತಂತ್ರಗಳಿಗೆ ಹೊಂದಿಕೊಳ್ಳುವ ಕಾರಣ ಟೀಮ್ ಇಂಡಿಯಾ ಅವರಿಗೆ ಮಾತ್ರ ಅವಕಾಶ ನೀಡುವ ಸಾಧ್ಯತೆಯಿದೆ.

ತಂಡದಲ್ಲಿ ಇಬ್ಬರು ಆಲ್‌ರೌಂಡರ್‌ಗಳು

ಭಾರತ ಇಬ್ಬರು ಆಲ್​ರೌಂಡರ್​ಗಳೊಂದಿಗೆ ಮೈದಾನಕ್ಕಿಳಿಯಲಿದೆ. ಇದರಲ್ಲಿ ಮೊದಲ ಹೆಸರು ಹಾರ್ದಿಕ್ ಪಾಂಡ್ಯ. ಪ್ರಚಂಡ ಮಧ್ಯಮ ವೇಗದ ಬೌಲಿಂಗ್ ಹೊರತಾಗಿ, ಪಾಂಡ್ಯ ಅದ್ಭುತ ಬ್ಯಾಟ್ಸ್‌ಮನ್ ಕೂಡ. ಇವರಲ್ಲದೆ ರವೀಂದ್ರ ಜಡೇಜಾ ಆಡುವ ಇಲೆವೆನ್‌ನಲ್ಲಿ ಸ್ಥಾನ ಪಡೆಯುವುದು ಸಹ ಖಚಿತವಾಗಿದೆ ಎಂದು ಊಹಿಸಲಾಗಿದೆ.

ಭಾರತದ ಬೌಲಿಂಗ್ ವಿಭಾಗ ಹೇಗಿರಲಿದೆ?

ಬೌಲಿಂಗ್​ನಲ್ಲಿ ಭಾರತ ತಂಡ ಭುವನೇಶ್ವರ್ ಕುಮಾರ್​ಗೆ ಆಡುವ ಇಲೆವೆನ್​ನಲ್ಲಿ ಖಚಿತವಾಗಿ ಅವಕಾಶ ನೀಡಲಿದೆ. ಇದಲ್ಲದೇ ಅರ್ಷದೀಪ್ ಸಿಂಗ್ ಅವರಿಗೂ ಅವಕಾಶ ಸಿಗುವ ವಿಶ್ವಾಸವಿದೆ. ಟೀಂ ಇಂಡಿಯಾ ಯುಜ್ವೇಂದ್ರ ಚಹಾಲ್ ರೂಪದಲ್ಲಿ ಲೆಗ್ ಸ್ಪಿನ್ನರ್‌ನೊಂದಿಗೆ ಕಣಕ್ಕಿಳಿಯಲಿದೆ. ಅದೇ ವೇಳೆ ಅಶ್ವಿನ್‌ಗೆ ಆಡುವ ಇಲೆವೆನ್‌ನಲ್ಲಿ ಅವಕಾಶ ನೀಡಬಹುದು. ಬೌಲಿಂಗ್‌ನ ಹೊರತಾಗಿ, ಅಶ್ವಿನ್ ಬ್ಯಾಟ್‌ನಿಂದಲೂ ಕೊಡುಗೆ ನೀಡಬಲ್ಲರು. ಅಂದರೆ ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ರವಿ ಬಿಷ್ಣೋಯ್ ಮತ್ತು ಅವೇಶ್ ಖಾನ್ ಅವರು ಪಾಕಿಸ್ತಾನದ ವಿರುದ್ಧ ಬೆಂಚ್ ಕಾಯುವ ಸಾಧ್ಯತೆಗಳು ಹೆಚ್ಚಿವೆ.

ಭಾರತದ ಸಂಭಾವ್ಯ ತಂಡ- ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್.