Asia Cup 2022: ರಾತ್ರೋರಾತ್ರಿ ಟೀಂ ಇಂಡಿಯಾಕ್ಕೆ ಸೇರ್ಪಡೆಗೊಂಡ ಕುಲ್ದೀಪ್ ಸೇನ್ ಯಾರು ಗೊತ್ತಾ?

Kuldeep Sen: ಮಧ್ಯಮ ವರ್ಗದಿಂದ ಹುಟ್ಟಿ ಬಂದ ಈ ಪ್ರತಿಭೆಯ ತಂದೆ ರಾಂಪಾಲ್ ಸೇನ್ ಅವರು ರೇವಾದ ಸಿರ್ಮೌರ್ ಚೌಕದಲ್ಲಿ ಹೇರ್ ಕಟಿಂಗ್ ಅಂಗಡಿಯನ್ನು ನಡೆಸುತ್ತ ಜೀವನ ಸಾಗಿಸುತ್ತಿದ್ದಾರೆ.

Asia Cup 2022: ರಾತ್ರೋರಾತ್ರಿ ಟೀಂ ಇಂಡಿಯಾಕ್ಕೆ ಸೇರ್ಪಡೆಗೊಂಡ ಕುಲ್ದೀಪ್ ಸೇನ್ ಯಾರು ಗೊತ್ತಾ?
Kuldeep Sen
Follow us
TV9 Web
| Updated By: ಪೃಥ್ವಿಶಂಕರ

Updated on: Aug 26, 2022 | 2:35 PM

ಈ ಸೀಸನ್​ನ ಏಷ್ಯಾಕಪ್ (Asia Cup 2022) ಆರಂಭಕ್ಕೆ ಸಕಲ ಸಿದ್ದತೆ ನಡೆದಿದೆ. ಆಗಸ್ಟ್ 27 ರಿಂದ ಆರಂಭವಾಗುವ ಈ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡ ಮುಖಾಮುಖಿಯಾಗಲಿವೆ. ಬಳಿಕ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ (India and Pakistan) ತಂಡಗಳು ಆಗಸ್ಟ್ 28 ರಂದು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನ ಬಿಸಿಸಿಐ ದಿಢೀರ್ ನಿರ್ಧಾರ ತೆಗೆದುಕೊಂಡಿದ್ದು, ಮಾಧ್ಯಮ ವರದಿಗಳ ಪ್ರಕಾರ ಬಿಸಿಸಿಐ ವೇಗದ ಬೌಲರ್ ಕುಲ್ದೀಪ್ ಸೇನ್ (Kuldeep Sen) ಅವರನ್ನು ನೆಟ್ ಬೌಲರ್ ಆಗಿ ತಂಡಕ್ಕೆ ಸೇರಿಸಿಕೊಂಡಿದೆ. ಈ ಹಿಂದೆ ಕುಲ್ದೀಪ್ IPL-2022 ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಉತ್ತಮ ಬೌಲಿಂಗ್ ಮಾಡಿ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

ಕುಲ್ದೀಪ್ ಅವರನ್ನು ನೆಟ್ ಬೌಲರ್ ಆಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದರೆ ಅವರು ನೆಟ್ಸ್‌ನಲ್ಲಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಬೌಲ್ ಮಾಡಿ ಅಭ್ಯಾಸ ಮಾಡಲು ಸಹಾಯ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಿಸಿಸಿಐ ಇದನ್ನು ನಿರಂತರವಾಗಿ ಮಾಡುತ್ತಿದೆ. ನೆಟ್ಸ್​ನಲ್ಲಿ ಅಭ್ಯಾಸ ಮಾಡಲು ಕೆಲವು ಬೌಲರ್​ಗಳನ್ನು ಪ್ರತ್ಯೇಕವಾಗಿ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದೆ.

ಕೇವಲ ನೆಟ್ ಬೌಲರ್ ಅಷ್ಟೆ

ಇದನ್ನೂ ಓದಿ
Image
Asia Cup 2022: ಏಷ್ಯಾಕಪ್​ನಲ್ಲಿ ಸಚಿನ್, ಗಪ್ಟಿಲ್ ಜೊತೆಗೆ ಕೊಹ್ಲಿ ದಾಖಲೆಯನ್ನು ಮುರಿಯಲಿದ್ದಾರೆ ರೋಹಿತ್..!
Image
Asia Cup 2022: ಪಾಕ್ ತಂಡಕ್ಕೆ ಆಘಾತದ ಮೇಲೆ ಆಘಾತ; ತಂಡದ ಮತ್ತೊಬ್ಬ ವೇಗದ ಬೌಲರ್​ಗೆ ಇಂಜುರಿ..!
Image
Asia Cup 2022: ಸ್ವದೇಶಿಯರು ಒಬ್ಬರೂ ಇಲ್ಲ; ಏಷ್ಯಾಕಪ್​ ಆಡುತ್ತಿರುವ ಹಾಂಕಾಂಗ್ ತಂಡದ ಬಗ್ಗೆ ನಿಮಗೆಷ್ಟು ಗೊತ್ತು?

ಇನ್ಸೈಡ್ ಸ್ಪೋರ್ಟ್ ಎಂಬ ವೆಬ್‌ಸೈಟ್ ತನ್ನ ವರದಿಯಲ್ಲಿ ಬಿಸಿಸಿಐ ಅಧಿಕಾರಿಯನ್ನು ಉಲ್ಲೇಖಿಸಿ ಕುಲ್ದೀಪ್ ತಂಡವನ್ನು ಸೇರುವ ಬಗ್ಗೆ ಮಾಹಿತಿ ನೀಡಿದೆ. ಅದೇ ಸಮಯದಲ್ಲಿ, ದೀಪಕ್ ಚಹಾರ್ ಅವರ ಗಾಯದ ಬಗ್ಗೆ ನಡೆಯುತ್ತಿರುವ ವದಂತಿಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ದೀಪಕ್ ಇಂಜುರಿಯಿಂದ ಹೊರಬಿದ್ದಿದ್ದಾರೆ ಎಂಬುದು ಸಂಪೂರ್ಣವಾಗಿ ಅಸಂಬದ್ಧವಾಗಿದೆ. ಅವರು ಇನ್ನೂ ದುಬೈನಲ್ಲಿ ತಂಡದ ಜೊತೆಯಲ್ಲಿದ್ದು, ನಿನ್ನೆ ತಂಡದೊಂದಿಗೆ ಅಭ್ಯಾಸ ಮಾಡಿದರು. ಇಂದು ಕೂಡ ಅದನ್ನು ಮುಂದುವರಿಸುತ್ತಾರೆ. ದೀಪಕ್ ಸಂಪೂರ್ಣವಾಗಿ ಫಿಟ್ ಆಗಿದ್ದು, ಕುಲ್ದೀಪ್ ಅವರನ್ನು ಕೇವಲ ನೆಟ್ ಬೌಲರ್ ಆಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.

ಹೇರ್ ಕಟಿಂಗ್ ಶಾಪ್​ನಲ್ಲಿ ಕುಲ್ದೀಪ್ ತಂದೆ ಕೆಲಸ

ಕುಲ್ದೀಪ್ ಸೇನ್ ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ಪರ ಆಡುತ್ತಿದ್ದಾರೆ. ಅವರು 2018-19ರಲ್ಲಿ ಮಧ್ಯಪ್ರದೇಶ ಪರ ತಮ್ಮ ಮೊದಲ ರಣಜಿ ಟ್ರೋಫಿ ಪಂದ್ಯವನ್ನು ಆಡಿದ್ದರು. ತಮ್ಮ ಮೊದಲ ರಣಜಿ ಸೀಸನ್​ನಲ್ಲಿ ಅಬ್ಬರಿಸಿದ ಕುಲ್ದೀಪ್, ಎಂಟು ಪಂದ್ಯಗಳಲ್ಲಿ 25 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಕುಲ್ದೀಪ್ ಮಧ್ಯಪ್ರದೇಶದ ರೇವಾ ಜಿಲ್ಲೆಯವರಾಗಿದ್ದು, ಈ ಜಿಲ್ಲೆಯಿಂದ IPL ಆಡುವ ಎರಡನೇ ಕ್ರಿಕೆಟಿಗರಾಗಿದ್ದಾರೆ. ಇದಕ್ಕೂ ಮುನ್ನ ಈಶ್ವರ್ ಪಾಂಡೆ ರೇವಾ ಜಿಲ್ಲೆಯಿಂದ ಐಪಿಎಲ್ ಆಡಿದ ಮೊದಲ ಆಟಗಾರರಾಗಿದ್ದಾರೆ. ಈ ಹಿಂದೆ ಈಶ್ವರ್ ಪಾಂಡೆ ಚೆನ್ನೈ ಸೂಪರ್ ಕಿಂಗ್ಸ್ ಪ್ರತಿನಿಧಿಸಿದ್ದರು. ಐಪಿಎಲ್-2022ರಲ್ಲಿ ಕುಲ್ದೀಪ್ ಅವರನ್ನು ರಾಜಸ್ಥಾನ್ ರಾಯಲ್ಸ್ 20 ಲಕ್ಷ ರೂ.ಗಳಿಗೆ ಖರೀದಿಸಿತ್ತು. ಮಧ್ಯಮ ವರ್ಗದಿಂದ ಹುಟ್ಟಿ ಬಂದ ಈ ಪ್ರತಿಭೆಯ ತಂದೆ ರಾಂಪಾಲ್ ಸೇನ್ ಅವರು ರೇವಾದ ಸಿರ್ಮೌರ್ ಚೌಕದಲ್ಲಿ ಹೇರ್ ಕಟಿಂಗ್ ಅಂಗಡಿಯನ್ನು ನಡೆಸುತ್ತ ಜೀವನ ಸಾಗಿಸುತ್ತಿದ್ದಾರೆ.

ಐಪಿಎಲ್ ಪ್ರದರ್ಶನ ಹೀಗಿತ್ತು

ಕುಲ್ದೀಪ್ ಐಪಿಎಲ್‌ಗೆ ಕಾಲಿಟ್ಟ ಮೊದಲ ಪಂದ್ಯದಿಂದಲೂ ಎಲ್ಲರ ಗಮನ ಸೆಳೆದಿದ್ದರು. ಐಪಿಎಲ್-2022 ರಲ್ಲಿ ರಾಜಸ್ಥಾನ ಪರ ಒಟ್ಟು ಏಳು ಪಂದ್ಯಗಳನ್ನು ಆಡಿದ ಕುಲ್ದೀಪ್ ಒಟ್ಟು ಎಂಟು ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಕುಲ್ದೀಪ್ ಅವರ ವಿಶೇಷತೆ ಎಂದರೆ ಅವರ ವೇಗ. ಐಪಿಎಲ್‌ನಲ್ಲಿ ಗಂಟೆಗೆ 150 ಕಿಮೀ ವೇಗದಲ್ಲಿ ಚೆಂಡನ್ನು ಎಸೆಯುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಜೊತೆಗೆ ಕುಲ್ದೀಪ್​ಗೆ ಚೆಂಡನ್ನು ಇನ್​ಸ್ವಿಂಗ್ ಹಾಗೂ ಔಟ್​ ಸ್ವಿಂಗ್ ಮಾಡುವ ಕಲೆಯೂ ಚೆನ್ನಾಗಿ ಗೊತ್ತಿದೆ.

ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು