WPL 2024: ಬರೋಬ್ಬರಿ 2 ಕೋಟಿಗೆ ಹರಾಜಾದ ಅನ್ನಾಬೆಲ್
Annabel Sutherland: ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಅನ್ನಾಬೆಲ್ ಖರೀದಿಗಾಗಿ ಭರ್ಜರಿ ಪೈಪೋಟಿ ಕಂಡು ಬಂತು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಬರೋಬ್ಬರಿ 2 ಕೋಟಿ ರೂ. ನೀಡಿ ಅನ್ನಾಬೆಲ್ ಅವರನ್ನು ತನ್ನದಾಗಿಸಿಕೊಂಡಿದೆ.
ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ್ತಿ ಅನ್ನಾಬೆಲ್ ಸದರ್ಲ್ಯಾಂಡ್ (Annabel Sutherland ) ವುಮೆನ್ಸ್ ಪ್ರೀಮಿಯರ್ ಲೀಗ್ (WPL 2024) ಸೀಸನ್-2 ರ ಬಿಡ್ಡಿಂಗ್ನಲ್ಲಿ ಬರೋಬ್ಬರಿ 2 ಕೋಟಿ ರೂ.ಗೆ ಹರಾಜಾಗಿದ್ದಾರೆ. 40 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಅನ್ನಾಬೆಲ್ ಖರೀದಿಗೆ ಐದು ಫ್ರಾಂಚೈಸಿಗಳು ಆಸಕ್ತಿವಹಿಸಿದ್ದವು. ಇದರಿಂದ ಬಿಡ್ಡಿಂಗ್ ಪೈಪೋಟಿ ಏರ್ಪಟ್ಟಿತ್ತು.
ಪರಿಣಾಮ ಆರಂಭದಲ್ಲೇ 1 ಕೋಟಿ ರೂ. ದಾಟಿತು. ಇದಾಗ್ಯೂ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಅನ್ನಾಬೆಲ್ ಖರೀದಿಗಾಗಿ ಭರ್ಜರಿ ಪೈಪೋಟಿ ಕಂಡು ಬಂತು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಬರೋಬ್ಬರಿ 2 ಕೋಟಿ ರೂ. ನೀಡಿ ಅನ್ನಾಬೆಲ್ ಅವರನ್ನು ತನ್ನದಾಗಿಸಿಕೊಂಡಿದೆ.
ಇದನ್ನೂ ಓದಿ: WPL 2024: RCB ತಂಡಕ್ಕೆ ಹೊಸ ಆಟಗಾರ್ತಿ ಎಂಟ್ರಿ
22 ವರ್ಷದ ಆಲ್ರೌಂಡರ್ ಆಗಿರುವ ಅನ್ನಾಬೆಲ್ ಸದರ್ಲ್ಯಾಂಡ್ ಆಸ್ಟ್ರೇಲಿಯಾ ಪರ ಇದುವರೆಗೆ 22 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 97 ರನ್ ಕಲೆಹಾಕಿದರೆ, 10 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Bowler ho ya Batter, here she comes to haunt them all🔥
𝗔𝗻𝗻𝗮𝗯𝗲𝗹 𝗦𝘂𝘁𝗵𝗲𝗿𝗹𝗮𝗻𝗱 👉 DC 💙#YehHaiNayiDilli #WPLAuction pic.twitter.com/BnMz9XdmSc
— Delhi Capitals (@DelhiCapitals) December 9, 2023
ಡೆಲ್ಲಿ ಕ್ಯಾಪಿಟಲ್ಸ್ ತಂಡ ಉಳಿಸಿಕೊಂಡಿರುವ ಆಟಗಾರ್ತಿಯರು: ಆಲಿಸ್ ಕ್ಯಾಪ್ಸೆ, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ಜೆಸ್ ಜೊನಾಸೆನ್, ಲಾರಾ ಹ್ಯಾರಿಸ್, ಮರಿಜಾನ್ನೆ ಕಪ್, ಮೆಗ್ ಲ್ಯಾನಿಂಗ್, ಮಿನ್ನು ಮಣಿ, ಪೂನಮ್ ಯಾದವ್, ರಾಧಾ ಯಾದವ್, ಶಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತನಿಯಾಸ್ ಭಾಟಿಯಾ.
ವೇದಾ ಕೃಷ್ಣಮೂರ್ತಿ ಅನ್ಸೋಲ್ಡ್:
ಭಾರತೀಯ ಆಟಗಾರ್ತಿ ವೇದಾ ಕೃಷ್ಣ ಮೂರ್ತಿ ಹಾಗೂ ಪೂನಂ ರೌತ್ ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದಾರೆ. ಈ ಇಬ್ಬರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ. ಇದಾಗ್ಯೂ ಅಂತಿಮ ಸುತ್ತಿನಲ್ಲಿ ಹರಾಜಾಗಲಿದ್ದಾರಾ ಕಾದು ನೋಡಬೇಕಿದೆ.
Published On - 3:50 pm, Sat, 9 December 23