Anshul Kamboj: ಬರೋಬ್ಬರಿ 8 ವಿಕೆಟ್… ದುಲೀಪ್ ಟ್ರೋಫಿಯಲ್ಲಿ ದಾಖಲೆ ಬರೆದ ಅನ್ಶುಲ್

Anshul Kamboj : ಹರ್ಯಾಣ ಮೂಲದ 23 ವರ್ಷದ ಅನ್ಶುಲ್ ಕಾಂಬೋಜ್ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದಾರೆ. 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಅನ್ಶುಲ್ 3 ಪಂದ್ಯಗಳಿಂದ 2 ವಿಕೆಟ್ ಕಬಳಿಸಿದ್ದರು. ಇದೀಗ ದೇಶೀಯ ಟೂರ್ನಿಯಲ್ಲಿ 8 ವಿಕೆಟ್ ಉರುಳಿಸಿ ಯುವ ವೇಗಿ ಸಂಚಲನ ಸೃಷ್ಟಿಸಿರುವುದು ವಿಶೇಷ.

Anshul Kamboj: ಬರೋಬ್ಬರಿ 8 ವಿಕೆಟ್... ದುಲೀಪ್ ಟ್ರೋಫಿಯಲ್ಲಿ ದಾಖಲೆ ಬರೆದ ಅನ್ಶುಲ್
Anshul Kamboj
Follow us
ಝಾಹಿರ್ ಯೂಸುಫ್
|

Updated on:Sep 15, 2024 | 11:35 AM

ದುಲೀಪ್ ಟ್ರೋಫಿಯ 4ನೇ ಪಂದ್ಯದಲ್ಲಿ ಭರ್ಜರಿ ಬೌಲಿಂಗ್​​ನೊಂದಿಗೆ ಯುವ ವೇಗಿ ಅನ್ಶುಲ್ ಕಾಂಬೋಜ್ ಹೊಸ ದಾಖಲೆ ಬರೆದಿದ್ದಾರೆ. ಅನಂತಪುರದ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬಿ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಸಿ ತಂಡವು ಇಶಾನ್ ಕಿಶನ್ (112) ಅವರ ಭರ್ಜರಿ ಶತಕದೊಂದಿಗೆ ಪ್ರಥಮ ಇನಿಂಗ್ಸ್​ನಲ್ಲಿ 525 ರನ್ ಪೇರಿಸಿತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ಬಿ ತಂಡಕ್ಕೆ ಅಭಿಮನ್ಯು ಈಶ್ವರನ್ (157) ಹಾಗೂ ಎನ್ ಜಗದೀಸನ್ (70) ಉತ್ತಮ ಆರಂಭ ಒದಗಿಸಿದ್ದರು. ಆದರೆ ಆ ಬಳಿಕ ಬಂದ ಬ್ಯಾಟರ್​ಗಳಿಗೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ಅನ್ಶುಲ್ ಕಾಂಬೋಜ್ ಯಶಸ್ವಿಯಾದರು.

ಎನ್ ಜಗದೀಸನ್ ವಿಕೆಟ್​ ಕಬಳಿಸುವ ಮೂಲಕ ವಿಕೆಟ್ ಬೇಟೆ ಶುರು ಮಾಡಿದ ಅನ್ಶುಲ್ ಆ ಬಳಿಕ ಹಿಂತಿರುಗಿ ನೋಡಿಲ್ಲ. ಮುಶೀರ್ ಖಾನ್ (1), ಸರ್ಫರಾಝ್ ಖಾನ್ (16), ರಿಂಕು ಸಿಂಗ್ (6), ನಿತೇಶ್ ರೆಡ್ಡಿ ವಿಕೆಟ್ ಕಬಳಿಸಿ ಐದು ವಿಕೆಟ್​ಗಳ ಸಾಧನೆ ಮಾಡಿದರು.

ಇದಾದ ಬಳಿಕವೂ ಕರಾರುವಾಕ್ ದಾಳಿ ಮುಂದುವರೆಸಿದ ಅನ್ಶುಲ್ ಕೆಳ ಕ್ರಮಾಂಕದ ಬ್ಯಾಟರ್​ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು. ಈ ಮೂಲಕ 27.5 ಓವರ್​ಗಳಲ್ಲಿ ಕೇವಲ 69 ರನ್ ನೀಡಿ 8 ವಿಕೆಟ್​ಗಳನ್ನು ಕಬಳಿಸಿದರು. ಅಲ್ಲದೆ ಭಾರತ ಬಿ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 332 ರನ್​ಗಳಿಗೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.

ಭಾರತ B (ಪ್ಲೇಯಿಂಗ್ XI): ಅಭಿಮನ್ಯು ಈಶ್ವರನ್ (ನಾಯಕ), ಎನ್ ಜಗದೀಸನ್ (ವಿಕೆಟ್ ಕೀಪರ್), ಮುಶೀರ್ ಖಾನ್, ಸರ್ಫರಾಝ್ ಖಾನ್, ರಿಂಕು ಸಿಂಗ್, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ನವದೀಪ್ ಸೈನಿ, ಮುಖೇಶ್ ಕುಮಾರ್, ರಾಹುಲ್ ಚಾಹರ್.

ಇದನ್ನೂ ಓದಿ: ವಿಶ್ವದ ಟಾಪ್-5 ಬ್ಯಾಟರ್​ಗಳನ್ನು ಹೆಸರಿಸಿದ ಕೆಎಲ್ ರಾಹುಲ್

ಭಾರತ C (ಪ್ಲೇಯಿಂಗ್ XI): ರುತುರಾಜ್ ಗಾಯಕ್‌ವಾಡ್ (ನಾಯಕ), ಇಶಾನ್ ಕಿಶನ್, ಸಾಯಿ ಸುದರ್ಶನ್, ರಜತ್ ಪಾಟಿದಾರ್, ಬಾಬಾ ಇಂದ್ರಜಿತ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಮಾನವ್ ಸುತಾರ್, ಅನ್ಶುಲ್ ಕಾಂಬೋಜ್, ಮಯಾಂಕ್ ಮಾರ್ಕಾಂಡೆ, ವಿಜಯಕುಮಾರ್ ವೈಶಾಕ್, ಸಂದೀಪ್ ವಾರಿಯರ್.

ದುಲೀಪ್ ಟ್ರೋಫಿ ದಾಖಲೆ:

ಈ 8 ವಿಕೆಟ್​ಗಳೊಂದಿಗೆ ಅನ್ಶುಲ್ ಕಾಂಬೋಜ್ ದುಲೀಪ್ ಟ್ರೋಫಿ ಇತಿಹಾಸದಲ್ಲೇ ಇನಿಂಗ್ಸ್​ವೊಂದರಲ್ಲಿ ಏಳಕ್ಕಿಂತ ಹೆಚ್ಚು ವಿಕೆಟ್ ಪಡೆದ 5ನೇ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ ದುಲೀಪ್ ಟ್ರೋಫಿ ಇನಿಂಗ್ಸ್​ನಲ್ಲಿ 8 ವಿಕೆಟ್ ಕಬಳಿಸಿದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಮೊಹಂತಿ ಹೆಸರಿನಲ್ಲಿ ಭರ್ಜರಿ ದಾಖಲೆ:

ದುಲೀಪ್ ಟ್ರೋಫಿ ಟೂರ್ನಿಯ ಇನಿಂಗ್ಸ್​ವೊಂದರಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ದಾಖಲೆ ದೇಬಾಸಿಸ್ ಮೊಹಂತಿ ಹೆಸರಿನಲ್ಲಿದೆ. 2001 ರಲ್ಲಿ ನಡೆದ ಸೌತ್ ಝೋನ್ ವಿರುದ್ಧದ ಪಂದ್ಯದಲ್ಲಿ ಮೊಹಂತಿ ಕೇವಲ 46 ರನ್ ನೀಡಿ 10 ವಿಕೆಟ್​ಗಳನ್ನು ಕಬಳಿಸಿ ಇತಿಹಾಸ ನಿರ್ಮಿಸಿದ್ದರು. ಇದು ದೇಶೀಯ ಟೂರ್ನಿಯಲ್ಲಿ ನಿರ್ಮಾಣವಾದ ಅತ್ಯುತ್ತಮ ಬೌಲಿಂಗ್ ದಾಖಲೆಯಾಗಿದೆ.

ದುಲೀಪ್ ಟ್ರೋಫಿಯಲ್ಲಿನ ಅತ್ಯುತ್ತಮ ಬೌಲಿಂಗ್ ಪ್ರದರ್ಶನ:

  • 10-46 – ದೇಬಾಸಿಸ್ ಮೊಹಂತಿ, 2001
  • 9-55 – ಬಾಲೂ ಗುಪ್ತೆ, 1963
  • 8-64 – ಸೌರಭ್ ಕುಮಾರ್, 2023
  • 8-65 – ಅರ್ಷದ್ ಅಯೂಬ್, 1987
  • 8-69 – ಅನ್ಶುಲ್ ಕಾಂಬೋಜ್, 2024.

Published On - 11:35 am, Sun, 15 September 24

ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ
ಸರಿಗಮ ವಿಜಿ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಇನ್ನಿತರೆ ಮಾಹಿತಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ