Arshdeep Singh: ಕೌಂಟಿ ಕ್ರಿಕೆಟ್​ನಲ್ಲಿ ಚೊಚ್ಚಲ ವಿಕೆಟ್ ಕಿತ್ತ ಅರ್ಶ್​ದೀಪ್ ಸಿಂಗ್: ಔಟ್ ಮಾಡಿದ್ದು ಯಾರನ್ನ ಗೊತ್ತೇ?

|

Updated on: Jun 13, 2023 | 10:35 AM

Kent vs Surrey, County Div 1: ತನ್ನ ಚೊಚ್ಚಲ ಪಂದ್ಯದಲ್ಲೆ ಅರ್ಶ್​ದೀಪ್ ಅವರು ಸರ್ರೆ ತಂಡ ಬೆನ್ ಫೋಕ್ಸ್ ಅವರನ್ನು ಔಟ್ ಮಾಡುವ ಮೂಲಕ ಮೊದಲ ವಿಕೆಟ್ ಕಿತ್ತಿದ್ದಾರೆ. ಈ ಮೂಲಕ ಕೌಂಟಿ ಕ್ರಿಕೆಟ್​ನಲ್ಲಿ ತಮ್ಮ ಖಾತೆ ತೆರೆದಿದ್ದಾರೆ.

Arshdeep Singh: ಕೌಂಟಿ ಕ್ರಿಕೆಟ್​ನಲ್ಲಿ ಚೊಚ್ಚಲ ವಿಕೆಟ್ ಕಿತ್ತ ಅರ್ಶ್​ದೀಪ್ ಸಿಂಗ್: ಔಟ್ ಮಾಡಿದ್ದು ಯಾರನ್ನ ಗೊತ್ತೇ?
arshdeep singh
Follow us on

ಐಪಿಎಲ್ 2023 (IPL 2023) ಮುಗಿದ ಬಳಿಕ ಭಾರತದ ಟೆಸ್ಟ್ ಆಟಗಾರರ ಹೊರತು ಪಡಿಸಿ ಇತರೆ ಹೆಚ್ಚಿನ ಪ್ಲೇಯರ್ಸ್ ವಿಶ್ರಾಂತಿಯಲ್ಲಿದ್ದಾರೆ. ಆದರೆ, ಟೀಮ್ ಇಂಡಿಯಾ ಯುವ ವೇಗಿ ಅರ್ಷ್​ದೀಪ್ ಸಿಂಗ್ (Arshdeep Singh) ಕೌಂಟಿ ಚಾಂಪಿಯನ್‌ಶಿಪ್​ನಲ್ಲಿ ಕೆಂಟ್ ಕೌಂಟಿ ಕ್ರಿಕೆಟ್ ಕ್ಲಬ್‌ ಪರ ಆಡುತ್ತಿದ್ದಾರೆ. ಭಾನುವಾರದಿಂದ ಪ್ರಾರಂಭವಾಗಿರುವ ಸರ್ರೆ ತಂಡದ ವಿರುದ್ಧದ ಪಂದ್ಯದಲ್ಲಿ ಅರ್ಶ್​ದೀಪ್ ಕಣಕ್ಕಿಳಿದಿದ್ದು, ಚೊಚ್ಚಲ ವಿಕೆಟ್ ಕಿತ್ತು ಮಿಂಚಿದ್ದಾರೆ. 2022 ರಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಅರ್ಷ್​ದೀಪ್​ ಅದ್ಭುತ ಪ್ರದರ್ಶನ ನೀಡಿದ ಕಾರಣ ಕೆಂಟ್ (Kent) ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಅರ್ಷ್​ದೀಪ್​ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು.

ಇದೀಗ ತನ್ನ ಚೊಚ್ಚಲ ಪಂದ್ಯದಲ್ಲೆ ಅರ್ಶ್​ದೀಪ್ ಅವರು ಸರ್ರೆ ತಂಡ ಬೆನ್ ಫೋಕ್ಸ್ ಅವರನ್ನು ಔಟ್ ಮಾಡುವ ಮೂಲಕ ಮೊದಲ ವಿಕೆಟ್ ಕಿತ್ತಿದ್ದಾರೆ. ಈ ಮೂಲಕ ಕೌಂಟಿ ಕ್ರಿಕೆಟ್​ನಲ್ಲಿ ತಮ್ಮ ಖಾತೆ ತೆರೆದಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ 14.2 ಓವರ್ ಬೌಲಿಂಗ್ ಮಾಡಿದ ಅರ್ಶ್​ದೀಪ್ 43 ರನ್ ನೀಡಿ 2 ವಿಕೆಟ್ ಪಡೆದುಕೊಂಡರು.

ಇದನ್ನೂ ಓದಿ
Team India Schedule: ಮುಗಿಯಿತು ಟೆಸ್ಟ್ ಚಾಂಪಿಯನ್​ಶಿಪ್: ಟೀಮ್ ಇಂಡಿಯಾದ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?
ವಿಶ್ವಕಪ್​ಗಿಂತ ಐಪಿಎಲ್​ ಟ್ರೋಫಿ ಗೆಲ್ಲುವುದು ಕಷ್ಟ, ರೋಹಿತ್ ಶರ್ಮಾ ಬೆಸ್ಟ್ ಕ್ಯಾಪ್ಟನ್: ಸೌರವ್ ಗಂಗೂಲಿ
Virat Kohli vs Babar Azam: ವಿರಾಟ್ ಕೊಹ್ಲಿಗೆ ತಿರುಗೇಟು ನೀಡಿದ ಬಾಬರ್ ಆಝಂ
Rohit Sharma: ರೋಹಿತ್ ಶರ್ಮಾಗೆ ಇದುವೇ ಕೊನೆಯ ಚಾನ್ಸ್​..!

India vs West Indies 2023 Schedule: ಭಾರತ-ವೆಸ್ಟ್ ಇಂಡೀಸ್ ಸರಣಿ ವೇಳಾಪಟ್ಟಿ ಪ್ರಕಟ

 

ಇನ್ನು ಕೆಂಟ್ ಪರ ಕಣಕ್ಕಿಳಿಯುವ ಬಗ್ಗೆ ಹರ್ಷವ್ಯಕ್ತಪಡಿಸಿದ ಅರ್ಷ್​ದೀಪ್, ”ನಾನು ಇಂಗ್ಲೆಂಡ್‌ನಲ್ಲಿ ರೆಡ್-ಬಾಲ್ ಕ್ರಿಕೆಟ್ ಆಡಲು ಉತ್ಸುಕನಾಗಿದ್ದೇನೆ. ಪ್ರಥಮ ದರ್ಜೆ ಪಂದ್ಯದಲ್ಲಿ ನನ್ನ ಕೌಶಲ್ಯವನ್ನು ಸುಧಾರಿಸಲು ಉತ್ಸುಕನಾಗಿದ್ದೇನೆ. ಕೆಂಟ್ ಸದಸ್ಯರು ಮತ್ತು ಬೆಂಬಲಿಗರ ಮುಂದೆ ಪ್ರದರ್ಶನ ನೀಡಲು ನಾನು ಎದುರು ನೋಡುತ್ತಿದ್ದೇನೆ,” ಎಂದಿದ್ದಾರೆ.

ಈ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಕೆಂಟ್ ತಂಡ 301 ರನ್​ಗೆ ಆಲೌಟ್ ಆಯಿತು. ತಂಡದ ಪರ ಜಾರ್ಡನ್ ಕಾಕ್ಸ್ 198 ಎಸೆತಗಳಲ್ಲಿ 17 ಫೋರ್, 2 ಸಿಕ್ಸರ್​ನೊಂದಿಗೆ 133 ರನ್ ಸಿಡಿಸಿದರು. ಜೋ ಎವಿಸನ್ 107 ಎಸೆತಗಳಲ್ಲಿ 58 ರನ್ ಕಲೆಹಾಕಿದರು. ವೆಸ್ ಅಗರ್ 70 ಎಸೆತಗಳಲ್ಲಿ 51 ರನ್ ಬಾರಿಸಿದರು. ಸರ್ರೆ ಪರ ಅಬಡ್ 4, ಕ್ಲಾರ್ಕ್ ಹಾಗೂ ಅಟ್ಕಿನ್ಸನ್ ತಲಾ 2 ವಿಕೆಟ್ ಪಡೆದರು.

ಬಳಿಕ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿದ ಸರ್ರೆ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ಕೇವಲ 145 ರನ್ ಸರ್ವಪತನ ಕಂಡಿತು. ತಂಡದ ಪರ ಅಬಟ್ 34 ರನ್ ಗಳಿಸಿದ್ದೇ ಹೆಚ್ಚು. ಕೆಂಟ್ ಪರ ಮ್ಯಾಥ್ಯೂ ಕ್ಯುನ್ ಹಾಗೂ ವೆಸ್ ಅಗರ್ 3 ವಿಕೆಟ್ ಕಿತ್ತರು. ಭರ್ಜರಿ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿರುವ ಕೆಂಟ್ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿದೆ. 353 ರನ್​ಗಳ ಮುನ್ನಡೆಯಲ್ಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ