Sanjana Burli Engagement: ಸದ್ದಿಲ್ಲದೆ ವೈದ್ಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಸಂಜನಾ ಬುರ್ಲಿ
ಸಂಜನಾ ಬುರ್ಲಿ ನಿಶ್ಚಿತಾರ್ಥ: ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೂಲಕ ಖ್ಯಾತಿ ಪಡೆದ ಸಂಜನಾ ಬುರ್ಲಿಗೆ ಈಗ ನಿಶ್ಚಿತಾರ್ಥದ ಸಂಭ್ರಮ. ಅವರು ಸದ್ದಿಲ್ಲದೆ, ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ. ಹಾಗಾದರೆ, ಅವರು ವಿವಾಹ ಆಗುತ್ತಿರುವ ಹುಡುಗನ ವೃತ್ತಿ ಏನು? ಆ ಬಗ್ಗೆ ಇಲ್ಲಿದೆ ವಿವರ.
ನಟಿ ಸಂಜನಾ ಬುರ್ಲಿ ಅವರು ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರು. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಅವರು ನಟಿಸಿ ಗಮನ ಸೆಳೆದರು. ಈಗ ಅವರು ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
1 / 5
ಸಂಜನಾ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದು ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ಏಕೆಂದರೆ ಸಂಜನಾ ಅವರು ನಿಶ್ಚಿತಾರ್ಥ ಮಾಡಿಕೊಳ್ಳುವ ಬಗ್ಗೆ ಯಾವುದೇ ಸೂಚನೆಯನ್ನು ಕೊಟ್ಟಿರಲಿಲ್ಲ.
2 / 5
ಸಂಜನಾ ಅವರು ಮದುವೆ ಆಗುತ್ತಿರುವ ಹುಡುಗನನ್ನೂ ಕೂಡ ಪರಿಚಯಿಸಿದ್ದಾರೆ. ಸಂಜನಾ ಮದುವೆ ಆಗುತ್ತಿರುವ ಹುಡುಗನ ಹೆಸರು ಸಮರ್ಥ್. ಅವರು ಚನ್ನಗಿರಿ ಮೂಲದವರು. ಅವರು ಎಂಬಿಬಿಎಸ್, ಎಂಡಿ ಓದಿದ್ದು, ವೃತ್ತಿಯಲ್ಲಿ ವೈದ್ಯರಾಗಿದ್ದಾರೆ ಎನ್ನಲಾಗಿದೆ.
3 / 5
ಸಮರ್ಥ್ ಅವರು ಸುತ್ತಾಟ ಮಾಡುವ, ಹೊಸ ಸ್ಥಳ ಅನ್ವೇಷಣೆ ಮಾಡೋ ಹವ್ಯಾಸ ಹೊಂದಿದ್ದಾರೆ. ಅವರು ಅಥ್ಲೀಟ್ ಕೂಡ ಹೌದು. ಹ್ಯಾಂಡ್ ಬಾಲ್ ಆಡುತ್ತಾರೆ. ಇದಿಷ್ಟು ಮಾಹಿತಿ ಅವರ ಇನ್ಸ್ಟಾಗ್ರಾಮ್ ಬಯೋದಲ್ಲಿ ಸಿಕ್ಕ ಮಾಹಿತಿ.
4 / 5
ಸಂಜನಾ ಅವರು ‘ಪುಟ್ಟಕ್ಕನ ಮಕ್ಕಳು’ ಬಳಿಕ ಕಲರ್ಸ್ನ ‘ಶ್ರೀ ಗಂಧದಗುಡಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಹಲವು ಎಪಿಸೋಡ್ಗಳನ್ನು ಪೂರ್ಣಗೊಳಿಸಿದೆ. ಹೀಗಿರುವಾಗಲೇ ಸಂಜನಾ ಜೊತೆ ನಿಶ್ಚಿತಾರ್ಥ ನೆರವೇರಿದೆ.