ಕರ್ನಾಟಕದಲ್ಲಿ ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಮುಖ್ಯಾಂಶಗಳು
- ಕಲ್ಲು ಗಣಿಗಾರಿಕೆ ವೇಳೆ ಜೆಸಿಬಿ ಮೇಲೆ ಬಿದ್ದ ಬೃಹತ್ ಬಂಡೆ
- ಅದೃಷ್ಟವಶಾತ್ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು ಪಾರು
- ಕೊಪ್ಪಳ ತಾಲೂಕಿನ ಶಿವಪುರ ಕೆರೆ ಬಳಿ ನಡೆದಿರುವ ಘಟನೆ
ಕೊಪ್ಪಳ ತಾಲೂಕಿನ ಶಿವಾಪುರ ಕೆರೆ ಬಳಿ ನಡೆದ ಕಲ್ಲು ಗಣಿಗಾರಿಕೆ ವೇಳೆ ಬೃಹತ್ ಬಂಡೆಯೊಂದು ಜೆಸಿಬಿ ಯಂತ್ರದ ಮೇಲೆ ಕುಸಿದಿದೆ. ಅದೃಷ್ಟವಶಾತ್, ಸ್ಥಳದಲ್ಲಿದ್ದ ಕೂಲಿ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೆ ಗಣಿಗಾರಿಕೆ ನಡೆಸಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ.
ಕೊಪ್ಪಳ, ಜುಲೈ 08: ಇತ್ತೀಚೆಗೆ ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣ ಬಳಿ ಕಲ್ಲು ಕ್ವಾರಿಯಲ್ಲಿ ಬಂಡೆ ಉರುಳಿ 7 ಜನ ಸಾವನ್ನಪ್ಪಿದ್ದರು. ಈ ಬೆನ್ನಲ್ಲೇ ಮತ್ತೊಂದು ದುರಂತ ಸಂಭವಿಸಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದ ಜೆಸಿಬಿ ಮೇಲೆ ಬೃಹತ್ ಬಂಡೆ ಬಿದ್ದಿರುವಂತಹ ಘಟನೆ ಕೊಪ್ಪಳ ತಾಲೂಕಿನ ಶಿವಪುರ ಕೆರೆ ಬಳಿ ನಡೆದಿದೆ. ಕೆರೆ ಮೂಲೆಯಲ್ಲಿ ಕಲ್ಲು ಗಣಿಗಾರಿಕೆ ಮಾಡಲಾಗುತಿತ್ತು. ಈ ವೇಳೆ ಮಣ್ಣು ಕುಸಿತವಾಗಿ ಜೆಸಿಬಿ ಮೇಲೆ ಬೃಹತ್ ಬಂಡೆ ಬಿದ್ದಿದೆ. ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಯಾವುದೇ ಮುಂಜಾಗ್ರತಾ ಕ್ರಮವಹಿಸದೆ ಜೆಸಿಬಿ ಬಳಕೆ ಮಾಡಿರುವ ಆರೋಪ ಕೇಳಿಬಂದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
