AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರಿನ ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ

ಮಂಗಳೂರಿನ ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ

ಅಶೋಕ್​ ಪೂಜಾರಿ
| Edited By: |

Updated on: Jul 08, 2026 | 7:10 PM

Share

ಮುಖ್ಯಾಂಶಗಳು

  • ಮಂಗಳೂರು ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್‌ನಲ್ಲಿ ಗುಡ್ಡ ಕುಸಿತ
  • ಮಂಗಳೂರಿನಲ್ಲಿ ಟಿವಿ 9 ಗೆ ಪರಿಸರ ತಜ್ಞ ದಿನೇಶ್ ಹೊಳ್ಳ ಪ್ರತಿಕ್ರಿಯೆ
  • ಲಂಬಾಕೃತಿಯಲ್ಲಿ ಅಗೆದಿರುವುದೇ ಗುಡ್ಡ ಕುಸಿತಕ್ಕೆ ಪ್ರಮುಖ ಕಾರಣ ಎಂದ ಪರಿಸರ ತಜ್ಞ

ನಿರಂತರ ಮಳೆಯಿಂದಾಗಿ ಮಂಗಳೂರು ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್‌ನಲ್ಲಿ ಗುಡ್ಡ ಕುಸಿತವಾಗುತ್ತಿದೆ. ಪ್ರತಿ ಬಾರಿ ಮಳೆಗಾಲದಲ್ಲೇ ಗುಡ್ಡ ಕುಸಿಯುತ್ತಿದ್ದು, ಇದಕ್ಕೆ ಪರಿಹಾರ ಕಂಡು ಹಿಡಿಯುವ ಕೆಲಸವಾಗಿಲ್ಲ. ಇನ್ನು ಪದೇ ಪದೇ ಕೆತ್ತಿಕಲ್‌ನಲ್ಲಿ ಏಕೆ ಗುಡ್ಡ ಕುಸಿಯುತ್ತೆ ಎನ್ನುವುದನ್ನು ಎಳೆ ಎಳೆಯಾಗಿ ಬಿಟ್ಟಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಪರಿಸರ ತಜ್ಞ ದಿನೇಶ್ ಹೊಳ್ಳ, ಲಂಬಾಕೃತಿಯಲ್ಲಿ ಅಗೆದಿರುವುದೇ ಕುಸಿತಕ್ಕೆ ಪ್ರಮುಖ ಕಾರಣ ಎಂದಿದ್ದಾರೆ.

ಮಂಗಳೂರು, (ಜುಲೈ 08): ನಿರಂತರ ಮಳೆಯಿಂದಾಗಿ ಮಂಗಳೂರು ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್‌ನಲ್ಲಿ ಗುಡ್ಡ ಕುಸಿತವಾಗುತ್ತಿದೆ. ಪ್ರತಿ ಬಾರಿ ಮಳೆಗಾಲದಲ್ಲೇ ಗುಡ್ಡ ಕುಸಿಯುತ್ತಿದ್ದು, ಇದಕ್ಕೆ ಪರಿಹಾರ ಕಂಡು ಹಿಡಿಯುವ ಕೆಲಸವಾಗಿಲ್ಲ. ಇನ್ನು ಪದೇ ಪದೇ ಕೆತ್ತಿಕಲ್‌ನಲ್ಲಿ ಏಕೆ ಗುಡ್ಡ ಕುಸಿಯುತ್ತೆ ಎನ್ನುವುದನ್ನು ಎಳೆ ಎಳೆಯಾಗಿ ಬಿಟ್ಟಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಪರಿಸರ ತಜ್ಞ ದಿನೇಶ್ ಹೊಳ್ಳ, ಲಂಬಾಕೃತಿಯಲ್ಲಿ ಅಗೆದಿರುವುದೇ ಕುಸಿತಕ್ಕೆ ಪ್ರಮುಖ ಕಾರಣ ಎಂದಿದ್ದಾರೆ.

ಇಂಜಿನಿಯರ್ ಗಳು ವಿದ್ಯೆ ಕಲಿತವರಲ್ವಾ? ಇಷ್ಟೊಂದು ಕಾಮಗಾರಿ ಮಾಡೋವಾಗ ಗೊತ್ತಾಗಲ್ವಾ? ರಾಷ್ಟ್ರೀಯ ಹೆದ್ದಾರಿ ಮಾಡೋವಾಗ ಗುಡ್ಡವನ್ನು‌ ಲಂಬಕಾರವಾಗಿ ಅಗೆದ್ರೆ ಹೇಗೆ? ಇದು ಸಾಮಾನ್ಯ ಮನುಷ್ಯನಿಗೂ ಅರ್ಥ ಆಗುತ್ತೆ, ಇಂಜಿನಿಯರ್ ಗೆ ಅರ್ಥ ಆಗಲ್ವಾ? ಎಂದು ಪ್ರಶ್ನಿಸಿದ ದಿನೇಶ್ ಹೊಳ್ಳ,ವೈಜ್ಞಾನಿಕವಾಗಿ ಕಾಮಗಾರಿ ಮಾಡದೆ ಕೇವಲ ಬಿಲ್ ಗಳಿಗೆ ಕಾಮಗಾರಿ ಮಾಡಲಾಗಿದೆ. ಕೋಟಿ ಕೋಟಿ ದುಡ್ಡು ಮಾತ್ರ ಖರ್ಚು ಆಗೋದು. ಕೆತ್ತಿಕಲ್ ನಲ್ಲಿ ಇದಕ್ಕೆ ಪರಿಹಾರ ಇದ್ದರೂ ನಿರ್ಲಕ್ಷ್ಯ ತೋರಿದ್ದಾರೆ. ದುರಂತಗಳನ್ನು ತಡೆಯುವ ಪ್ರಯತ್ನಗಳು ಆಗುತ್ತಿಲ್ಲ.ವಯನಾಡು ದುರಂತದ ಬಳಿಕ ಪಾಠ ಕಲಿಯಬೇಕಿತ್ತು. ಆದ್ರೆ ಮುಂಜಾಗ್ರತೆ ಇಲ್ಲದೆ ಕಾಮಗಾರಿ ನಡೆಸಲಾಗುತ್ತದೆ. ಜನ ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಜನ ಎಚ್ಚೆತ್ತುಕೊಂಡ್ರೆ ಜನ ಪ್ರತಿನಿಧಿಗಳು ಸಹ ಎಚ್ಚೆತ್ತುಕೊಳ್ಳುತ್ತಾರೆ ಎಂದರು.

ಇದನ್ನೂ ನೋಡಿ: ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಆತಂಕದಲ್ಲಿ 200 ಕುಟುಂಬಗಳು

Follow Us
ಅಶೋಕ್​ ಪೂಜಾರಿ
ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More