ವಿಶ್ವಕಪ್​ಗಿಂತ ಐಪಿಎಲ್​ ಟ್ರೋಫಿ ಗೆಲ್ಲುವುದು ಕಷ್ಟ, ರೋಹಿತ್ ಶರ್ಮಾ ಬೆಸ್ಟ್ ಕ್ಯಾಪ್ಟನ್: ಸೌರವ್ ಗಂಗೂಲಿ

Sourav Ganguly: ರೋಹಿತ್ ಶರ್ಮಾ ಉತ್ತಮ ನಾಯಕ. ಅವರ ಮೇಲೆ ನನಗೆ ಅಪಾರ ನಂಬಿಕೆ ಇದೆ. ಏಕೆಂದರೆ ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್​ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Jun 12, 2023 | 11:23 PM

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ (WTC Final 2023) ಪಂದ್ಯದಲ್ಲಿನ ಹೀನಾಯ ಸೋಲಿನ ಬೆನ್ನಲ್ಲೇ ರೋಹಿತ್ ಶರ್ಮಾ (Rohit Sharma) ಅವರ ನಾಯಕತ್ವದ ಬಗ್ಗೆ ಟೀಕೆಗಳು ಕೇಳಿ ಬರುತ್ತಿವೆ. ಇದರ ನಡುವೆ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಹಿಟ್​ಮ್ಯಾನ್ ಅವರ ನಾಯಕತ್ವವನ್ನು ಹಾಡಿ ಹೊಗಳಿರುವುದು ವಿಶೇಷ.

1 / 8
ಖಾಸಗಿ ಚಾನೆಲ್​ನ ಸಂದರ್ಶನವೊಂದರಲ್ಲಿ ಮಾತನಾಡಿದ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವ ತ್ಯಜಿಸಿದಾಗ ನಮ್ಮ ಮುಂದಿದ್ದ ಅತ್ಯುತ್ತಮ ಆಯ್ಕೆ ರೋಹಿತ್ ಶರ್ಮಾ ಮಾತ್ರ. ಹೀಗಾಗಿ ಹಿಟ್​ಮ್ಯಾನ್​ನನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.

2 / 8
ಈಗಲೂ ರೋಹಿತ್ ಶರ್ಮಾ ಉತ್ತಮ ನಾಯಕ. ಅವರ ಮೇಲೆ ನನಗೆ ಅಪಾರ ನಂಬಿಕೆ ಇದೆ. ಏಕೆಂದರೆ ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್​ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ. ಇದು ಒಬ್ಬ ನಾಯಕ ವಿಚಾರದಲ್ಲಿ ದೊಡ್ಡ ವಿಷಯ ಎಂದು ಗಂಗೂಲಿ ಹೇಳಿದರು.

3 / 8
ಇಂತಹ ಸ್ಪರ್ಧಾತ್ಮಕ ಟೂರ್ನಿಯಲ್ಲಿ ರೋಹಿತ್ ಶರ್ಮಾ 5 ಬಾರಿ ಮುಂಬೈ ಇಂಡಿಯನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಹೀಗಾಗಿಯೇ ಟೀಮ್ ಇಂಡಿಯಾಗೆ ನಾಯಕನಾಗಿ ರೋಹಿತ್ ಇನ್ನೂ ಸಹ ಅತ್ಯುತ್ತಮ ಆಯ್ಕೆ ಎಂದು ನಾನು ನಂಬುತ್ತೇನೆ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.

4 / 8

5 / 8
ಇದೇ ವೇಳೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಸೋಲಿನ ಬಗ್ಗೆ ಮಾತನಾಡಿದ ಗಂಗೂಲಿ, ನಾವೆಲ್ಲರೂ ಭಾರತ ಗೆಲ್ಲುತ್ತದೆ ಎಂದು ಭಾವಿಸಿದ್ದೆವು. ಏಕೆಂದರೆ ಈ ಹಿಂದೆ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಗೆದ್ದಿದೆ. ನಾನು ಬಿಸಿಸಿಐ ಅಧ್ಯಕ್ಷನಾಗಿದ್ದಾಗ ಆಸ್ಟ್ರೇಲಿಯಾ ವಿರುದ್ಧ ಅವರದ್ದೇ ನಾಡಿನಲ್ಲಿ ಐತಿಹಾಸಿಕ ಸರಣಿ ಗೆದ್ದಿದ್ದೆವು. ಹೀಗಾಗಿಯೇ ನನಗೆ ಟೀಮ್ ಇಂಡಿಯಾ ಗೆಲ್ಲಲಿದೆ ಎಂಬ ನಿರೀಕ್ಷೆಯಿತ್ತು.

6 / 8
ಆದರೆ ಮೊದಲ ದಿನದ ಭೋಜನ ಮತ್ತು ಚಹಾ ಅವಧಿಯ ನಡುವಿನ ಸಮಯದಲ್ಲಿ ಭಾರತ ತಂಡವು ತೀರಾ ಹಿಂದುಳಿದಿತ್ತು. ಅಲ್ಲದೆ ಈ ಪಂದ್ಯದಲ್ಲಿ ಭಾರತ ಯಾವುದೇ ರಿಸ್ಕ್ ತೆಗೆದುಕೊಳ್ಳಲಿಲ್ಲ ಎಂಬುದು ನನ್ನ ಅನಿಸಿಕೆ. ನಾಲ್ಕನೇ ಇನ್ನಿಂಗ್ಸ್‌ನಲ್ಲಿ 250-300 ರನ್‌ಗಳ ಟಾರ್ಗೆಟ್ ಮಾಡಬಲ್ಲೆವು ಎಂಬುದಷ್ಟೇ ಅವರ ಮನಸ್ಸಿನಲ್ಲಿತ್ತು. ಆದರೆ ಭಾರತ ತಂಡಕ್ಕೆ ಗೆಲ್ಲುವ ಸಾಮರ್ಥ್ಯವಿದ್ದರೂ ಅದು ಸಾಧ್ಯವಾಗಿಲ್ಲ.

7 / 8
ಪಂದ್ಯವನ್ನು ಗೆಲ್ಲಬೇಕಿದ್ದರೆ ಭಾರತ ಭಯವಿಲ್ಲದೆ ಕ್ರಿಕೆಟ್ ಆಡಬೇಕಾಗಿದೆ. ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ವಿಶ್ವಕಪ್‌ಗೂ ಮುನ್ನ ಈ ಬಗ್ಗೆ ಗಮನಹರಿಸಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಸೌರವ್ ಗಂಗೂಲಿ ತಿಳಿಸಿದರು.

8 / 8
Follow us