Sign In

By signing in or creating an account, you agree with Associated Broadcasting Company's Terms & Conditions and Privacy Policy.

Ashes 2023: ಒಂದೊಳ್ಳೆ ಉದ್ದೇಶಕ್ಕೆ ಪರಸ್ಪರ ಜೆರ್ಸಿ ಬದಲಿಸಿಕೊಂಡ ಇಂಗ್ಲೆಂಡ್ ಆಟಗಾರರು

ENG vs AUS: ಐದನೇ ಟೆಸ್ಟ್​ನ ಮೂರನೇ ದಿನದಂದು ಆಂಗ್ಲ ಕ್ರಿಕೆಟಿಗರು ತೋರಿದ ಮಾನವೀಯತೆಯ ಗುಣ ವಿಶ್ವದ ಹೃದಯ ಗೆದ್ದಿದೆ.

Ashes 2023: ಒಂದೊಳ್ಳೆ ಉದ್ದೇಶಕ್ಕೆ ಪರಸ್ಪರ ಜೆರ್ಸಿ ಬದಲಿಸಿಕೊಂಡ ಇಂಗ್ಲೆಂಡ್ ಆಟಗಾರರು
ಇಂಗ್ಲೆಂಡ್ ಕ್ರಿಕೆಟ್ ತಂಡ
Follow us
ಪೃಥ್ವಿಶಂಕರ
|

Updated on:Jul 30, 2023 | 11:48 AM

ಆಸ್ಟ್ರೇಲಿಯಾ ಈಗಾಗಲೇ ಆ್ಯಶಸ್ (Ashes 2023) ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೀಗ ಆಸ್ಟ್ರೇಲಿಯವನ್ನು ಸರಣಿ ಗೆಲ್ಲದಂತೆ ತಡೆಯುವುದು ಆಂಗ್ಲ (England vs Australia) ತಂಡದ ಪ್ರಯತ್ನವಾಗಿದೆ. ಸುಮಾರು 20 ವರ್ಷಗಳಿಂದ ಇಂಗ್ಲೆಂಡ್‌ನಲ್ಲಿ ಆ್ಶಶಸ್ ಸರಣಿಯನ್ನು ಗೆಲ್ಲಲು ಆಸ್ಟ್ರೇಲಿಯಾಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಸರಣಿ ಸಮಬಲಗೊಳಿಸಲು ಪಣತೊಟ್ಟಿರುವ ಆಂಗ್ಲರು (England Cricket Team) ಓವಲ್​ ಮೈದಾನದಲ್ಲಿ ಆರಂಭವಾಗಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಮಾಡು ಇಲ್ಲವೇ ಮಡಿ ಹೊರಟಕ್ಕಿಳಿದಿದ್ದಾರೆ. ಆದರೆ ಅದಕ್ಕೂ ಮುನ್ನ ಐದನೇ ಟೆಸ್ಟ್​ನ ಮೂರನೇ ದಿನದಂದು ಆಂಗ್ಲ ಕ್ರಿಕೆಟಿಗರು ತೋರಿದ ಮಾನವೀಯತೆಯ ಗುಣ ವಿಶ್ವದ ಹೃದಯ ಗೆದ್ದಿದೆ.

ವಾಸ್ತವವಾಗಿ, ಮೂರನೇ ದಿನ ಆಂಗ್ಲ ತಂಡ ಬ್ಯಾಟಿಂಗ್‌ ಮಾಡುವುದಕ್ಕೂ ಮುನ್ನ ಮೈದಾನದಲ್ಲಿ ನೆರೆದಿತ್ತು. ಇದರಲ್ಲಿ ವಿಶೇಷವೆನೆಂದರೆ, ಎಲ್ಲಾ ಇಂಗ್ಲೆಂಡ್ ಆಟಗಾರರು ತಮ್ಮದಲ್ಲದ ಜೆರ್ಸಿಯನ್ನು ತೊಟ್ಟಿದ್ದರು. ಅಂದರೆ ಇಂಗ್ಲೆಂಡ್ ಆಟಗಾರರು ತಮ್ಮ ತಮ್ಮ ಜೆರ್ಸಿಯನ್ನು ಇತರ ಸಹ ಆಟಗಾರರೊಂದಿಗೆ ಪರಸ್ಪರ ಬದಲಿಸಿಕೊಂಡಿದ್ದರು. ಆಂಗ್ಲ ಆಟಗಾರರ ಈ ನಡೆಗೆ ಸೂಕ್ತ ಕಾರಣವೂ ಇದ್ದು, ಬುದ್ಧಿಮಾಂದ್ಯತೆ (dementia patients) ಬಳಲುತ್ತಿರುವ ರೋಗಿಗಳನ್ನು ಬೆಂಬಲಿಸುವ ಸಲುವಾಗಿ ತಮ್ಮ ಜೆರ್ಸಿಗಳನ್ನು ಅದಲು ಬದಲು ಮಾಡಿಕೊಂಡಿದ್ದರು.

Ashes 2023: ದ್ರಾವಿಡ್​ರನ್ನು ಹಿಂದಿಕ್ಕಿ ಸಚಿನ್ ದಾಖಲೆಯನ್ನು ಸರಿಗಟ್ಟಿದ ಜೋ ರೂಟ್..!

ಹೀಗಾಗಿ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್, ತಮ್ಮ ಸಹ ವೇಗಿ ಸ್ಟುವರ್ಟ್ ಬ್ರಾಡ್ ಅವರ ಹೆಸರಿನ ಜೆರ್ಸಿಯನ್ನು ಧರಿಸಿದ್ದರೆ, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ ಹೆಸರಿನ ಜರ್ಸಿಯನ್ನು ಧರಿಸಿದ್ದರು. ಹಾಗೆಯೇ ಮೊಯಿನ್ ಅಲಿ, ಕ್ರಿಸ್ ವೋಕ್ಸ್ ಹೆಸರಿನ ಜೆರ್ಸಿ ತೊಟ್ಟಿದ್ದರು. ಇತರ ಆಟಗಾರರು ಕೂಡ ಇದೇ ರೀತಿ ಮಾಡಿದ್ದರು.

ಜಾಗೃತಿಗಾಗಿ ಜರ್ಸಿ ಬದಲಿಸಿದ್ದ ಆಂಗ್ಲರು

ಇನ್ನು ತಮ್ಮ ಮಹತ್ವದ ಕಾರ್ಯದ ಬಗ್ಗೆ ಮಾತನಾಡಿದ ತಂಡದ ಸಹಾಯಕ ಕೋಚ್ ಮಾರ್ಕಸ್ ಟ್ರೆಸ್ಕೊಥಿಕ್, ಇಸಿಬಿ ಮತ್ತು ಅಲ್ಜೈಮರ್ಸ್ ಸೊಸೈಟಿಯ ಜಂಟಿ ಆಯೋಗದೊಂದಿಗೆ ಈ ತೀರ್ಮಾನಕ್ಕೆ ಬಂದಿದ್ದೇವೆ. ಹಾಗೆಯೇ ನಮ್ಮ ತಂಡ ಅಲ್ಜೈಮರ್ಸ್​ ಸೊಸೈಟಿಯನ್ನು ಬೆಂಬಲಿಸುತ್ತಿದ್ದು, ಈ ಭಯಾನಕ ಕಾಯಿಲೆಯಿಂದ ಬಳಲುತ್ತಿರುವವರಿಗೆ ನೆರವಾಗಲು ಮುಂದಾಗಿದ್ದೇವೆ. ಜನರಿಗೆ ಈ ಬಗ್ಗೆ ಅರಿವು ನೀಡುವ ಮೂಲಕ ಮತ್ತು ಹಣವನ್ನು ಸಂಗ್ರಹಿಸುವ ಮೂಲಕ ಜಾಗೃತಿ ಮೂಡಿಸಲು ಮತ್ತು ಅದನ್ನು ಮುನ್ನೆಲೆಗೆ ತರುವುದು ನಮ್ಮ ಗುರಿಯಾಗಿದೆ ಎಂದರು.

ಏನಿದು ಅಲ್ಜೈಮರ್ ಖಾಯಿಲೆ?

ಸಾಮಾನ್ಯವಾಗಿ ವಯಸ್ಸಾದವರಲ್ಲಿ ಅಂದರೆ, 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ಈ ಅಲ್ಜೈಮರ್ ಖಾಯಿಲೆ ಕಂಡು ಬರುತ್ತದೆ. ವ್ಯಕ್ತಿಯಲ್ಲಿ ನೆನಪಿನ ಶಕ್ತಿಯನ್ನು ಕುಂಠಿತಗೊಳಿಸುವುದು ಈ ಖಾಯಿಲೆಯ ಪ್ರಮುಖ ಲಕ್ಷಣವಾಗಿದೆ. ಅಲ್ಜೈಮರ್ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗೆ ತಾವು ಏನು ಮಾಡುತ್ತಿದ್ದೇವೆ ಎಂಬ ಅರಿವೇ ಇಲ್ಲದಂತೆ ವರ್ತಿಸಲು ಪ್ರಾರಂಭಿಸುತ್ತಾರೆ. ಉದಾಹರಣೆಗೆ ಈ ರೋಗಕ್ಕೆ ತುತ್ತಾದ ವ್ಯಕ್ತಿ ಮನೆಯಿಂದ ಹೊರಬಂದರೆ, ಮತ್ತೆ ತನ್ನ ಮನೆಗೆ ಹೋಗುವ ದಾರಿಯನ್ನೇ ಮರೆತು ಬಿಡುತ್ತಾನೆ. ಕೆಲವು ಬಾರಿ ತಿಂದ ಆಹಾರವೇ ಆತನಿಗೆ ನೆನಪಿರುವುದಿಲ್ಲ. ಇಂತಹ ಲಕ್ಷಣಗಳು ಅಲ್ಜೈಮರ್ ಖಾಯಿಲೆಯ ಅರಂಭಿಕ ಲಕ್ಷಣಗಳಾಗಿವೆ. ವ್ಯಕ್ತಿಯ ನಡುವಳಿಕೆಗೆ ಮುಖ್ಯವಾದ ನರಗಳ ಕ್ಷೀಣತೆಯಿಂದಾಗಿ ಅಲ್ಜೈಮರ್ ಸಂಭವಿಸುತ್ತದೆ.

ಆಸ್ಟ್ರೇಲಿಯಾಕ್ಕೆ ಆ್ಯಶಸ್ ಟ್ರೋಫಿ

ಆಸ್ಟ್ರೇಲಿಯ ತಂಡ ಈಗಾಗಲೇ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ 5ನೇ ಟೆಸ್ಟ್ ಗೆದ್ದರೂ ಸರಣಿ ಡ್ರಾ ಆಗಲಿದ್ದು, ಟ್ರೋಫಿ ಆಸ್ಟ್ರೇಲಿಯಾದ ಬಳಿಯೇ ಉಳಿಯಲಿದೆ. 5ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸುವುದು ಸುಲಭವಲ್ಲದಿದ್ದರೂ, ಉಭಯರ ನಡುವೆ ತೀವ್ರ ಪೈಪೋಟಿ ಇದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:45 am, Sun, 30 July 23

ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ