ENG vs AUS 2nd Test: ರೋಚಕ ಘಟ್ಟದತ್ತ ಆ್ಯಶಸ್ ದ್ವಿತೀಯ ಟೆಸ್ಟ್: ಸಂಕಷ್ಟದಲ್ಲಿರುವ ಇಂಗ್ಲೆಂಡ್ ಗೆಲುವಿಗೆ ಬೇಕು 257 ರನ್ಸ್

|

Updated on: Jul 02, 2023 | 7:16 AM

Ashes Test: ಬೆನ್ ಡಕ್ಲೆಟ್ 50 ರನ್ ಗಳಿಸಿ ಹಾಗೂ ನಾಯಕ ಬೆನ್ ಸ್ಟೋಕ್ಸ್ 29 ರನ್ ಗಳಿಸಿ ಅಂತಿಮ ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 31 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 114 ರನ್ ಬಾರಿಸಿದೆ.

ENG vs AUS 2nd Test: ರೋಚಕ ಘಟ್ಟದತ್ತ ಆ್ಯಶಸ್ ದ್ವಿತೀಯ ಟೆಸ್ಟ್: ಸಂಕಷ್ಟದಲ್ಲಿರುವ ಇಂಗ್ಲೆಂಡ್ ಗೆಲುವಿಗೆ ಬೇಕು 257 ರನ್ಸ್
ENG vs AUS 2nd Test
Follow us on

ಲಂಡನ್​ನ ಲಾರ್ಡ್ಸ್ (Lords) ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ (England vs Australia) ನಡುವಣ ಆ್ಯಶಸ್ ಸರಣಿಯ (Ashes Test) ದ್ವಿತೀಯ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್​ನಲ್ಲಿ 279 ರನ್​ಗಳಿಗೆ ಆಲೌಟ್ ಆಗುವ ಮೂಲಕ ಇಂಗ್ಲೆಂಡ್​ಗೆ 371 ರನ್​ಗಳ ಟಾರ್ಗೆಟ್ ನೀಡಿದೆ. ಇತ್ತ ಗುರಿ ಬೆನ್ನಟ್ಟಿರುವ ಆಂಗ್ಲರು ನಾಲ್ಕನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 114 ರನ್ ಗಳಿಸಿದೆ. ಇಂದು ಕೊನೆಯ ದಿನದಾಟ ಮಾತ್ರ ಬಾಕಿ ಉಳಿದಿದ್ದು, ಆಸೀಸ್ ಗೆಲುವಿಗೆ ಆಂಗ್ಲರ 6 ವಿಕೆಟ್ ಕೀಳಬೇಕಿದ್ದರೆ, ಇಂಗ್ಲೆಂಡ್​ಗೆ 257 ರನ್ಸ್ ಬೇಕಾಗಿದೆ. ಹೀಗಾಗಿ ಐದನೇ ದಿನದಾಟದ ಮಹತ್ವ ಪಡೆದುಕೊಂಡಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖವಾಜಾ ಪ್ರಥಮ ವಿಕೆಟ್​ಗೆ 73 ರನ್​ಗಳ ಕಾಣಿಕೆ ನೀಡಿದರು. ಉಸ್ಮಾನ್ 70 ಎಸೆತಗಳಲ್ಲಿ 17 ರನ್ ಗಳಿಸಿದರೆ, ವಾರ್ನರ್ 88 ಎಸೆತಗಳಲ್ಲಿ 66 ರನ್ ಸಿಡಿಸಿ ಔಟಾದರು. ಬಳಿಕ ಮೂರನೇ ವಿಕೆಟ್​ಗೆ ಜೊತೆಯಾದ ಮಾರ್ನಸ್ ಲಾಬುಶೇನ್ (47) ಹಾಗೂ ಸ್ಟೀವ್ ಸ್ಮಿತ್ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಈ ಜೋಡಿ 102 ರನ್ ಕಲೆಹಾಕಿತು. ನಂತರ ಸ್ಮಿತ್ ಜೊತೆಯಾದ ಟ್ರಾವಿಡ್ ಹೆಡ್ (77) ಬೊಂಬಾಟ್ ಆಟ ಪ್ರದರ್ಶಿಸಿದರು. ಸ್ಮಿತ್ 184 ಎಸೆತಗಳಲ್ಲಿ 110 ರನ್ ಕಲೆಹಾಕಿದರು. ಅಂತಿಮವಾಗಿ ಆಸೀಸ್ ತನ್ನ ಪ್ರಥಮ ಇನ್ನಿಂಗ್ಸ್​ನಲ್ಲಿ 100.4 ಓವರ್​ಗೆ 416 ರನ್ ಗಳಿಸಿ ಆಲೌಟ್ ಆಯಿತು.

ODI World Cup 2023: ಏಕದಿನ ವಿಶ್ವಕಪ್​ನಿಂದ ವೆಸ್ಟ್ ಇಂಡೀಸ್ ಔಟ್..!

ಇದನ್ನೂ ಓದಿ
Jos Buttler: ಜೋಸ್ ಬಟ್ಲರ್​ಗೆ 40 ಕೋಟಿ ರೂ. ಆಫರ್ ನೀಡಿದ ರಾಜಸ್ಥಾನ್ ರಾಯಲ್ಸ್..!
SAFF Championship 2023: ಫೈನಲ್​ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ
Duleep Trophy 2023: ಸೌರಭ್​ಗೆ 8 ವಿಕೆಟ್: ಕೇಂದ್ರ ವಲಯಕ್ಕೆ ಭರ್ಜರಿ ಜಯ
Ashes 2023: 279 ರನ್​ಗಳಿಗೆ ಆಸ್ಟ್ರೇಲಿಯಾ ಆಲೌಟ್: ಕುತೂಹಲಘಟ್ಟದತ್ತ ಲಾರ್ಡ್ಸ್​ ಟೆಸ್ಟ್

ಬಳಿಕ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ ಪರ ಮೊದಲ ವಿಕೆಟ್​ಗೆ ಓಪನರ್​ಗಳಾದ ಜ್ಯಾಕ್ ಕ್ರಾವ್ಲೆ (48) ಹಾಗೂ ಡಕ್ಲೆಟ್ 91 ರನ್​ಗಳ ಜೊತೆಯಾಟ ಆಡಿದರು. ಬಳಿಕ ಡಕ್ಲೆಟ್ ಜೊತೆಯಾದ ಓಲಿ ಪೊಪ್ (42) 98 ರನ್​ಗಳ ಕಾಣಿಕೆ ನೀಡಿದರು. ಶತಕದ ಅಂಚಿನಲ್ಲಿದ್ದ ಡಕ್ಲೆಟ್ 98 ರನ್​ಗಳಿಗೆ ಔಟ್ ಆದರು. ಹ್ಯಾರಿ ಬ್ರೂಕ್ ಅರ್ಧಶತಕ ಸಿಡಿಸಿದರು. ಇಂಗ್ಲೆಂಡ್ 325 ರನ್​ಗಳಿಗೆ ಆಲೌಟ್ ಆಯಿತು. ಆಸೀಸ್ ಪರ ಸ್ಟಾರ್ಕ್ 3, ಹ್ಯಾಜ್ಲೆವುಡ್ ಹಾಗೂ ಹೆಡ್ ತಲಾ 2 ವಿಕೆಟ್ ಪಡೆದರು.

91 ರನ್​ಗಳ ಇನ್ನಿಂಗ್ಸ್ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿರುವ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 25 ರನ್​ಗಳಿಗೆ ಔಟ್ ಆದರೆ, ಮಾರ್ನಸ್ ಲಾಬುಶೇನ್ ಆಟ 30 ರನ್​ಗೆ ಅಂತ್ಯವಾಯಿತು. ಉಸ್ಮಾನ್ ಖವಾಜಾ 77 ರನ್ ಗಳಿಸಿದರೆ, ಸ್ಮಿತ್ 34 ರನ್​ಗೆ ಬ್ಯಾಟ್ ಕೆಳಗಿಟ್ಟರು. ನಂತರ ಬಂದ ಬ್ಯಾಟರ್​ಗಳು ಯಾರೂ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ ಆಸೀಸ್ 101.5 ಓವರ್​ಗಳಲ್ಲಿ 279 ರನ್​ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಬ್ರಾಡ್ 4 ವಿಕೆಟ್ ಪಡೆದರು.

371 ರನ್​ಗಳ ಟಾರ್ಗೆಟ್ ಬೆನ್ನಟ್ಟಲು ಬಂದ ಇಂಗ್ಲೆಂಡ್ 50 ರನ್​ಗು ಮೊದಲೇ 4 ವಿಕೆಟ್ ಕಳೆದುಕೊಂಡಿತು. ಜ್ಯಾಕ್ ಕ್ರಾವ್ಲೆ ಹಾಗೂ ಓಲಿ ಪೊಪ್ ತಲಾ 3 ರನ್​ಗೆ ಔಟಾದರೆ, ಜೋ ರೂಟ್ (18) ಹಾಗೂ ಹ್ಯಾರಿ ಬ್ರೂಕ್ (4) ಕೂಡ ಬೇಗನೆ ನಿರ್ಗಮಿಸಿದರು. ಬೆನ್ ಡಕ್ಲೆಟ್ 50 ರನ್ ಗಳಿಸಿ ಹಾಗೂ ನಾಯಕ ಬೆನ್ ಸ್ಟೋಕ್ಸ್ 29 ರನ್ ಗಳಿಸಿ ಅಂತಿಮ ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 31 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 114 ರನ್ ಬಾರಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ