Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs West Indies: ಕೆರಿಬಿಯನ್ ನಾಡಿಗೆ ತಲುಪಿದ ಭಾರತದ ಮೊದಲ ಬ್ಯಾಚ್: ಫೋಟೋ ನೋಡಿ

IND vd WI Test: ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಭಾರತ ಕ್ರಿಕೆಟ್ ತಂಡದ ಒಂದು ಬ್ಯಾಚ್ ಕೆರಿಬಿಯನ್ನರ ನಾಡಿಗೆ ತಲುಪಿದೆ. ಅಶ್ವಿನ್, ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಅವರು ಬಾರ್ಬಡೋಸ್​ಗೆ ತಲುಪಿದ ಬಗ್ಗೆ ಫೋಟೋ ಹಂಚಿಕೊಂಡಿದ್ದಾರೆ.

Vinay Bhat
|

Updated on: Jul 02, 2023 | 8:47 AM

ಸುಮಾರು 23 ದಿನಗಳ ಸುದೀರ್ಘ ವಿಶ್ರಾಂತಿ ಬಳಿಕ ಟೀಮ್ ಇಂಡಿಯಾ ಆಟಗಾರರು ಕ್ರಿಕೆಟ್ ಮೈದಾನಕ್ಕೆ ಮರಳುತ್ತಿದ್ದಾರೆ. ಜುಲೈ 12 ರಿಂದ ಕೆರಿಬಿಯನ್ನರ ನಾಡಲ್ಲಿ ಭಾರತ ತಂಡ ಎರಡು ಟೆಸ್ಟ್, ಮೂರು ಏಕದಿನ ಮತ್ತು ಐದು ಪಂದ್ಯಗಳ ಟಿ20 ಸರಣಿ ಆಡಲಿದೆ.

1 / 7
ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಭಾರತ ಕ್ರಿಕೆಟ್ ತಂಡದ ಒಂದು ಬ್ಯಾಚ್ ಕೆರಿಬಿಯನ್ನರ ನಾಡಿಗೆ ತಲುಪಿದೆ. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಅವರು ಬಾರ್ಬಡೋಸ್​ಗೆ ತಲುಪಿದ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

2 / 7
ವೆಸ್ಟ್ ಇಂಡೀಸ್ ಹವಾಮಾನಕ್ಕೆ ಒಗ್ಗಿಕೊಳ್ಳಲು ಭಾರತ ತಂಡ 10 ದಿನ ಮುಂಚಿತವಾಗಿ ವೆಸ್ಟ್ ಇಂಡೀಸ್‌ಗೆ ಹೋಗಿದೆ. ಈ ಹಿಂದೆ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಆದರೀತಿ ಇಲ್ಲೂ ಆಗಬಾರದು ಎಂಬ ಕಾರಣಕ್ಕೆ ಬಾರ್ಬಡೋಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮೊದಲ ಟೆಸ್ಟ್​ಗು ಮುನ್ನ ಅಭ್ಯಾಸ ಪಂದ್ಯ ಕೂಡ ಆಡಲಿದೆ.

3 / 7
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್​ಗಳಾದ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಇನ್ನೂ ವೆಸ್ಟ್ ಇಂಡೀಸ್ ತಲುಪಿಲ್ಲ. ಇವರು ಕುಟುಂಬ ಸಮೇತ ವಿದೇಶ ಪ್ರವಾಸದಲ್ಲಿದ್ದಾರೆ. ಕೊಹ್ಲಿ ಲಂಡನ್‌ನಲ್ಲಿದ್ದರೆ, ರೋಹಿತ್ ಪ್ಯಾರಿಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ.

4 / 7
ಕೊಹ್ಲಿ ಹಾಗೂ ರೋಹಿತ್ ಮುಂದಿನ ವಾರ ವೆಸ್ಟ್ ಇಂಡೀಸ್​ಗೆ ಬಂದು ತಂಡ ಸೇರಿಕೊಳ್ಳಲಿದ್ದಾರೆ. ಲಂಡನ್ ಮತ್ತು ಪ್ಯಾರಿಸ್​ನಿಂದ ಅಮೆರಿಕ ಮತ್ತು ನೆದರ್ಲೆಂಡ್ಸ್ ಮೂಲಕ ವಿವಿಧ ವಿಮಾನಗಳಲ್ಲಿ ವೆಸ್ಟ್​ ಇಂಡೀಸ್ ತಲುಪಲಿದ್ದಾರೆ.

5 / 7
ಜುಲೈ 12ಕ್ಕೆ ಮೊದಲ ಟೆಸ್ಟ್ ಪಂದ್ಯ ಶುರುವಾಗಲಿದೆ. ಆದರೆ, ಈ ಎರಡು ಪಂದ್ಯಗಳ ಟೆಸ್ಟ್ ಸರಣಿಗು ಮುನ್ನ ಭಾರತ ತಂಡ ಜುಲೈ 5 ಮತ್ತು 6 ರಂದು ಎರಡು ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ.

6 / 7
ಭಾರತ- ವಿಂಡೀಸ್ ನಡುವೆ ಡೊಮಿನಿಕಾದ ವಿಂಡ್ಸರ್ ಪಾರ್ಕ್​ನಲ್ಲಿ ಜುಲೈ 12 ರಿಂದ 16 ವರೆಗೆ ಮೊದಲ ಟೆಸ್ಟ್ ನಡೆಯಲಿದೆ. ಬಳಿಕ ಜುಲೈ 20ರಿಂದ 24ರ ವರೆಗೆ ಟ್ರಿನಿಡಾಡ್​ನ ಕ್ವೀನ್ಸ್ ಪಾರ್ಕ್ ಓವಲ್​ನಲ್ಲಿ ದ್ವಿತೀಯ ಟೆಸ್ಟ್ ಆಯೋಜಿಸಲಾಗಿದೆ. ಭಾರತೀಯ ಕಾಲ ಮಾನದ ಪ್ರಕಾರ ಈ ಟೆಸ್ಟ್ ಸಂಜೆ 7:30ಕ್ಕೆ ಪ್ರಾರಂಭವಾಗುತ್ತದೆ.

7 / 7
Follow us