- Kannada News Photo gallery Cricket photos Team India First batch reached Barbados before their West Indies tour Jadeja shared photos
India vs West Indies: ಕೆರಿಬಿಯನ್ ನಾಡಿಗೆ ತಲುಪಿದ ಭಾರತದ ಮೊದಲ ಬ್ಯಾಚ್: ಫೋಟೋ ನೋಡಿ
IND vd WI Test: ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಭಾರತ ಕ್ರಿಕೆಟ್ ತಂಡದ ಒಂದು ಬ್ಯಾಚ್ ಕೆರಿಬಿಯನ್ನರ ನಾಡಿಗೆ ತಲುಪಿದೆ. ಅಶ್ವಿನ್, ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಅವರು ಬಾರ್ಬಡೋಸ್ಗೆ ತಲುಪಿದ ಬಗ್ಗೆ ಫೋಟೋ ಹಂಚಿಕೊಂಡಿದ್ದಾರೆ.
Updated on: Jul 02, 2023 | 8:47 AM

ಸುಮಾರು 23 ದಿನಗಳ ಸುದೀರ್ಘ ವಿಶ್ರಾಂತಿ ಬಳಿಕ ಟೀಮ್ ಇಂಡಿಯಾ ಆಟಗಾರರು ಕ್ರಿಕೆಟ್ ಮೈದಾನಕ್ಕೆ ಮರಳುತ್ತಿದ್ದಾರೆ. ಜುಲೈ 12 ರಿಂದ ಕೆರಿಬಿಯನ್ನರ ನಾಡಲ್ಲಿ ಭಾರತ ತಂಡ ಎರಡು ಟೆಸ್ಟ್, ಮೂರು ಏಕದಿನ ಮತ್ತು ಐದು ಪಂದ್ಯಗಳ ಟಿ20 ಸರಣಿ ಆಡಲಿದೆ.

ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಭಾರತ ಕ್ರಿಕೆಟ್ ತಂಡದ ಒಂದು ಬ್ಯಾಚ್ ಕೆರಿಬಿಯನ್ನರ ನಾಡಿಗೆ ತಲುಪಿದೆ. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಅವರು ಬಾರ್ಬಡೋಸ್ಗೆ ತಲುಪಿದ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ಹವಾಮಾನಕ್ಕೆ ಒಗ್ಗಿಕೊಳ್ಳಲು ಭಾರತ ತಂಡ 10 ದಿನ ಮುಂಚಿತವಾಗಿ ವೆಸ್ಟ್ ಇಂಡೀಸ್‌ಗೆ ಹೋಗಿದೆ. ಈ ಹಿಂದೆ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಆದರೀತಿ ಇಲ್ಲೂ ಆಗಬಾರದು ಎಂಬ ಕಾರಣಕ್ಕೆ ಬಾರ್ಬಡೋಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮೊದಲ ಟೆಸ್ಟ್ಗು ಮುನ್ನ ಅಭ್ಯಾಸ ಪಂದ್ಯ ಕೂಡ ಆಡಲಿದೆ.

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಇನ್ನೂ ವೆಸ್ಟ್ ಇಂಡೀಸ್ ತಲುಪಿಲ್ಲ. ಇವರು ಕುಟುಂಬ ಸಮೇತ ವಿದೇಶ ಪ್ರವಾಸದಲ್ಲಿದ್ದಾರೆ. ಕೊಹ್ಲಿ ಲಂಡನ್‌ನಲ್ಲಿದ್ದರೆ, ರೋಹಿತ್ ಪ್ಯಾರಿಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ.

ಕೊಹ್ಲಿ ಹಾಗೂ ರೋಹಿತ್ ಮುಂದಿನ ವಾರ ವೆಸ್ಟ್ ಇಂಡೀಸ್‌ಗೆ ಬಂದು ತಂಡ ಸೇರಿಕೊಳ್ಳಲಿದ್ದಾರೆ. ಲಂಡನ್ ಮತ್ತು ಪ್ಯಾರಿಸ್ನಿಂದ ಅಮೆರಿಕ ಮತ್ತು ನೆದರ್ಲೆಂಡ್ಸ್ ಮೂಲಕ ವಿವಿಧ ವಿಮಾನಗಳಲ್ಲಿ ವೆಸ್ಟ್ ಇಂಡೀಸ್ ತಲುಪಲಿದ್ದಾರೆ.

ಜುಲೈ 12ಕ್ಕೆ ಮೊದಲ ಟೆಸ್ಟ್ ಪಂದ್ಯ ಶುರುವಾಗಲಿದೆ. ಆದರೆ, ಈ ಎರಡು ಪಂದ್ಯಗಳ ಟೆಸ್ಟ್ ಸರಣಿಗು ಮುನ್ನ ಭಾರತ ತಂಡ ಜುಲೈ 5 ಮತ್ತು 6 ರಂದು ಎರಡು ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ.

ಭಾರತ- ವಿಂಡೀಸ್ ನಡುವೆ ಡೊಮಿನಿಕಾದ ವಿಂಡ್ಸರ್ ಪಾರ್ಕ್ನಲ್ಲಿ ಜುಲೈ 12 ರಿಂದ 16 ವರೆಗೆ ಮೊದಲ ಟೆಸ್ಟ್ ನಡೆಯಲಿದೆ. ಬಳಿಕ ಜುಲೈ 20ರಿಂದ 24ರ ವರೆಗೆ ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ದ್ವಿತೀಯ ಟೆಸ್ಟ್ ಆಯೋಜಿಸಲಾಗಿದೆ. ಭಾರತೀಯ ಕಾಲ ಮಾನದ ಪ್ರಕಾರ ಈ ಟೆಸ್ಟ್ ಸಂಜೆ 7:30ಕ್ಕೆ ಪ್ರಾರಂಭವಾಗುತ್ತದೆ.




