ODI World Cup 2023: ಏಕದಿನ ವಿಶ್ವಕಪ್ನಿಂದ ವೆಸ್ಟ್ ಇಂಡೀಸ್ ಔಟ್..!
West Indies: 182 ರನ್ಗಳ ಸುಲಭ ಗುರಿ ಪಡೆದ ಸ್ಕಾಟ್ಲೆಂಡ್ ಪರ ಆರಂಭಿಕ ಆಟಗಾರ ಮ್ಯಾಥ್ಯೂ ಕ್ರಾಸ್ 3ನೇ ಕಮ್ರಾಂಕದ ಬ್ಯಾಟರ್ ಬ್ರಾಂಡನ್ ಮೆಕ್‌ಮುಲ್ಲೆನ್ ಜೊತೆಗೂಡಿ 125 ರನ್ಗಳ ಭರ್ಜರಿ ಜೊತೆಯಾಟವಾಡಿದ್ದರು.
ODI World Cup 2023: ಏಕದಿನ ವಿಶ್ವಕಪ್ನ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಪಂದ್ಯದಲ್ಲಿ ಸ್ಕಾಟ್ಲ್ಯಾಂಡ್ ವಿರುದ್ಧ ಸೋಲುವುದರೊಂದಿಗೆ ವೆಸ್ಟ್ ಇಂಡೀಸ್ (West Indies) ತಂಡವು ಏಕದಿನ ವಿಶ್ವಕಪ್ನಿಂದ ಹೊರಬಿದ್ದಿದೆ. 1975 ಮತ್ತು 1979 ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ವಿಂಡೀಸ್ ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿರುವುದು ವಿಶೇಷ. ಅಂದರೆ ಕಳೆದ 12 ಏಕದಿನ ವಿಶ್ವಕಪ್ಗಳಲ್ಲಿ ವೆಸ್ಟ್ ಇಂಡೀಸ್ ತಂಡವು ಪಾಲ್ಗೊಂಡಿತ್ತು. ಆದರೆ ಈ ಬಾರಿ ಅರ್ಹತಾ ಸುತ್ತಿನಿಂದಲೇ ನಿರ್ಗಮಿಸುವ ಮೂಲಕ ಭಾರೀ ಮುಖಭಂಗಕ್ಕೆ ಒಳಗಾಗಿದೆ.
ಈ ಬಾರಿಯ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವು ಯುಎಸ್ಎ ಮತ್ತು ನೇಪಾಳ ವಿರುದ್ಧ ಜಯಗಳಿಸಿತ್ತು. ಆದರೆ ಝಿಂಬಾಬ್ವೆ ಹಾಗೂ ನೆದರ್ಲ್ಯಾಂಡ್ಸ್ ವಿರುದ್ಧ ಹೀನಾಯ ಸೋಲನುಭವಿಸಿತ್ತು. ಇದಾಗ್ಯೂ 2 ಗೆಲುವಿನೊಂದಿಗೆ ಕೆರಿಬಿಯನ್ ಪಡೆ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಹಂತಕ್ಕೇರಿತು.
ಆದರೆ ಸೂಪರ್ ಸಿಕ್ಸ್ನ ಮೊದಲ ಪಂದ್ಯದಲ್ಲೇ ಸ್ಕಾಟ್ಲ್ಯಾಂಡ್ ವಿರುದ್ಧ ಪರಾಜಯಗೊಂಡಿದೆ. ಇದರೊಂದಿಗೆ ಭಾರತದಲ್ಲಿ ಏಕದಿನ ವಿಶ್ವಕಪ್ ಆಡುವ ವೆಸ್ಟ್ ಇಂಡೀಸ್ ತಂಡದ ಕನಸು ಕಮರಿದೆ.
ಸ್ಕಾಟ್ಲ್ಯಾಂಡ್ಗೆ ಐತಿಹಾಸಿಕ ಜಯ:
ಹರಾರೆಯಲ್ಲಿ ನಡೆದ ಏಕದಿನ ವಿಶ್ವಕಪ್ನ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಸ್ಕಾಟ್ಲ್ಯಾಂಡ್ ಹೊಸ ಇತಿಹಾಸ ನಿರ್ಮಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು 43.5 ಓವರ್ಗಳಲ್ಲಿ 181 ರನ್ಗಳಿಸಿ ಆಲೌಟ್ ಆಯಿತು.
182 ರನ್ಗಳ ಸುಲಭ ಗುರಿ ಪಡೆದ ಸ್ಕಾಟ್ಲೆಂಡ್ ಪರ ಆರಂಭಿಕ ಆಟಗಾರ ಮ್ಯಾಥ್ಯೂ ಕ್ರಾಸ್ 3ನೇ ಕಮ್ರಾಂಕದ ಬ್ಯಾಟರ್ ಬ್ರಾಂಡನ್ ಮೆಕ್‌ಮುಲ್ಲೆನ್ ಜೊತೆಗೂಡಿ 125 ರನ್ಗಳ ಭರ್ಜರಿ ಜೊತೆಯಾಟವಾಡಿದ್ದರು. ಈ ಹಂತದಲ್ಲಿ 69 ರನ್ಗಳಿಸಿದ್ದ ಮೆಕ್‌ಮುಲ್ಲೆನ್ ಔಟಾದರು.
ಇದಾಗ್ಯೂ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಮ್ಯಾಥ್ಯೂ ಕ್ರಾಸ್ 107 ಎಸೆತಗಳನ್ನು ಎದುರಿಸಿ ಅಜೇಯ 74 ರನ್ ಬಾರಿಸಿದರು. ಈ ಮೂಲಕ 43.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ತಂಡವನ್ನು ಗುರಿ ಮುಟ್ಟಿಸುವ ಮೂಲಕ 7 ವಿಕೆಟ್ಗಳ ಜಯ ತಂದುಕೊಟ್ಟರು.
ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್ಗೆ 8 ತಂಡಗಳು ಫೈನಲ್
ವಿಶೇಷ ಎಂದರೆ ಸ್ಕಾಟ್ಲ್ಯಾಂಡ್ ತಂಡವು ಇದೇ ಮೊದಲ ಬಾರಿಗೆ ಏಕದಿನ ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಜಯ ಸಾಧಿಸಿದೆ. ಈ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.
ಏಕದಿನ ವಿಶ್ವಕಪ್ ಅರ್ಹತಾ ಸುತ್ತು ಆಡಿದ ವೆಸ್ಟ್ ಇಂಡೀಸ್ ತಂಡ ಹೀಗಿದೆ:
ಬ್ರಾಂಡನ್ ಕಿಂಗ್ , ಜಾನ್ಸನ್ ಚಾರ್ಲ್ಸ್ , ಶಮರ್ ಬ್ರೂಕ್ಸ್ , ಶಾಯ್ ಹೋಪ್ (ನಾಯಕ) , ನಿಕೋಲಸ್ ಪೂರನ್ , ಕೈಲ್ ಮೇಯರ್ಸ್ , ಕೆವಿನ್ ಸಿಂಕ್ಲೇರ್ , ಜೇಸನ್ ಹೋಲ್ಡರ್ , ರೊಮಾರಿಯೋ ಶೆಫರ್ಡ್ , ಅಕೀಲ್ ಹೋಸೇನ್ , ಅಲ್ಝಾರಿ ಜೋಸೆಫ್, ರೋವ್ಮನ್ ಪೊವೆಲ್ , ಕೀಸಿ ಕಾರ್ಟಿ , ಯಾನಿಕ್ ಕ್ಯಾರಿಯಾ , ಕೀಮೋ ಪಾಲ್ , ರೋಸ್ಟನ್ ಚೇಸ್.