Ashish Nehra: ಟಿ20 ವಿಶ್ವಕಪ್​ ತಂಡದಲ್ಲಿ ಟೀಮ್ ಇಂಡಿಯಾದ ಪ್ರಮುಖ ವೇಗಿಗಿಲ್ಲ ಸ್ಥಾನ..!

| Updated By: ಝಾಹಿರ್ ಯೂಸುಫ್

Updated on: Jun 19, 2022 | 7:03 PM

Mohammed Shami: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಟಿ20 ಸರಣಿ ವೇಳೆ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ. ಇದಕ್ಕೂ ಮುನ್ನ ಅವರು ಕೊನೆಯ ಬಾರಿಗೆ ಐಪಿಎಲ್ 2022 ರಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದ್ದರು.

Ashish Nehra: ಟಿ20 ವಿಶ್ವಕಪ್​ ತಂಡದಲ್ಲಿ ಟೀಮ್ ಇಂಡಿಯಾದ ಪ್ರಮುಖ ವೇಗಿಗಿಲ್ಲ ಸ್ಥಾನ..!
Team India
Follow us on

ಟಿ20 ವಿಶ್ವಕಪ್​ ಟೀಮ್ ಇಂಡಿಯಾದಲ್ಲಿ ಹಿರಿಯ ವೇಗದ ಬೌಲರ್ ಮೊಹಮ್ಮದ್ ಶಮಿ ಸ್ಥಾನ ಪಡೆಯುವುದಿಲ್ಲ ಎಂದು ಮಾಜಿ ವೇಗದ ಬೌಲರ್​ ಆಶಿಶ್ ನೆಹ್ರಾ ಹೇಳಿದ್ದಾರೆ. ಏಕೆಂದರೆ ಶಮಿ ಟಿ20 ವಿಶ್ವಕಪ್​ ತಂಡದ ಪ್ಲ್ಯಾನ್​ನಲ್ಲಿ ಇಲ್ಲ. ಹೀಗಾಗಿ ಅವರು ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವುದಿಲ್ಲ ಎಂದು ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ. ಇದಾಗ್ಯೂ ಅವರು 2023ರಲ್ಲಿ ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ನಲ್ಲಿ ಆಡಬಹುದು ಎಂದಿದ್ದಾರೆ. ಸದ್ಯ ಮೊಹಮ್ಮದ್ ಶಮಿ ಟೀಮ್ ಇಂಡಿಯಾದೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಅಲ್ಲಿ ಅವರು ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಆದರೆ ಅವರಿಗೆ ಟಿ20 ತಂಡದಲ್ಲಿ ಚಾನ್ಸ್ ಸಿಗುವುದು ಅನುಮಾನ ಎಂದು ನೆಹ್ರಾ ಹೇಳಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಟಿ20 ಸರಣಿ ವೇಳೆ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ. ಇದಕ್ಕೂ ಮುನ್ನ ಅವರು ಕೊನೆಯ ಬಾರಿಗೆ ಐಪಿಎಲ್ 2022 ರಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದ್ದರು. ಹಾಗೆಯೇ ಶಮಿ ತನ್ನ ಕೊನೆಯ ODI ಪಂದ್ಯವನ್ನು ನವೆಂಬರ್ 2020 ರಲ್ಲಿ ಆಡಿದ್ದರು. ಇದಾಗ್ಯೂ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಶಮಿಗೆ ಆಡಲು ಅವಕಾಶ ನೀಡಬೇಕು ಎಂದು ಆಶಿಶ್ ನೆಹ್ರಾ ತಿಳಿಸಿದ್ದಾರೆ.

ಟಿ20 ವಿಶ್ವಕಪ್‌ಗಾಗಿ ರೂಪಿಸಲಾಗುತ್ತಿರುವ ಪ್ರಸ್ತುತ ಯೋಜನೆಯಲ್ಲಿ ಶಮಿಯನ್ನು ಸೇರಿಸಲಾಗಿಲ್ಲ ಎಂದು ತೋರುತ್ತದೆ. ಆದರೆ ಅವರ ಸಾಮರ್ಥ್ಯಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಅವರು ಈ ವರ್ಷ ಟಿ20 ವಿಶ್ವಕಪ್‌ನಲ್ಲಿ ಆಡದಿದ್ದರೆ, ಅವರನ್ನು 2023 ಕ್ರಿಕೆಟ್ ವಿಶ್ವಕಪ್‌ಗೆ ಪರಿಗಣಿಸುವುದು ಖಚಿತ ಎಂದು ನೆಹ್ರಾ ಹೇಳಿದರು. ಸದ್ಯ ಐಪಿಎಲ್ ಬಳಿಕ ಶಮಿ ವಿಶ್ರಾಂತಿಯಲ್ಲಿದ್ದಾರೆ. ಟೆಸ್ಟ್ ಪಂದ್ಯದ ನಂತರ ಅವರು ಇಂಗ್ಲೆಂಡ್‌ನಲ್ಲಿ ಏಕದಿನ ಸರಣಿಯಲ್ಲಿ ಆಡುವ ಸಾಧ್ಯತೆಯಿದೆ ಎಂದರು.

ಇದನ್ನೂ ಓದಿ
On This Day: ಏಕದಿನ ವಿಶ್ವಕಪ್​: ಕೇವಲ 45 ರನ್​ಗೆ ಆಲೌಟ್..!
Heinrich Klaasen: ಬಡವರ ಧೋನಿ, RCB ಆಟಗಾರ…ಯಾರು ಈ ಹೆನ್ರಿಕ್ ಕ್ಲಾಸೆನ್..?
Hardik Pandya: ದಿನೇಶ್ ಕಾರ್ತಿಕ್ ವಿರುದ್ದ ಸೇಡು ತೀರಿಸಿಕೊಂಡ್ರಾ ಹಾರ್ದಿಕ್ ಪಾಂಡ್ಯ?
Dinesh Karthik: ಟೀಮ್ ಇಂಡಿಯಾ ಪರ ಯಾರೂ ಮಾಡದ ದಾಖಲೆ ಬರೆದ ದಿನೇಶ್ ಕಾರ್ತಿಕ್

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಟಿ20 ಸರಣಿಗೆ ಮೊಹಮ್ಮದ್ ಶಮಿಯನ್ನು ಆಯ್ಕೆ ಮಾಡಿಲ್ಲ. ಅಲ್ಲದೆ ಐರ್ಲೆಂಡ್ ವಿರುದ್ಧ ನಡೆಯಲಿರುವ 2 ಟಿ20 ಪಂದ್ಯಗಳ ಸರಣಿಗೆ ಟೀಮ್ ಇಂಡಿಯಾಗೆ ಸೇರ್ಪಡೆಗೊಂಡಿಲ್ಲ. ಇಂಗ್ಲೆಂಡ್ ವಿರುದ್ಧ ಆಡಿದ ಏಕೈಕ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾದ ಭಾರತದ 16 ಮಂದಿಯ ತಂಡದಲ್ಲಿ ಶಮಿ ಇದ್ದಾರೆ. ಇನ್ನು ಟೆಸ್ಟ್ ಪಂದ್ಯದ ಬಳಿಕ ಇಂಗ್ಲೆಂಡ್ ವಿರುದ್ದ ಟೀಮ್ ಇಂಡಿಯಾ ಏಕದಿನ ಹಾಗೂ ಟಿ20 ಸರಣಿ ಆಡಲಿದೆ. ಈ ಸರಣಿಗೆ ಆಯ್ಕೆಯಾದರೆ ಮಾತ್ರ ಮೊಹಮ್ಮದ್ ಶಮಿಗೆ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ಸಿಗಬಹುದು.

 

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.