- Kannada News Photo gallery Cricket photos Yuvraj singh and hazel keech reveal son name on fathers day called orion keech singh
ಇನ್‌ಸ್ಟಾಗ್ರಾಮ್‌ನಲ್ಲಿ ಮೊದಲ ಬಾರಿಗೆ ತನ್ನ ಮಗನ ಫೋಟೋ ಹಂಚಿಕೊಂಡ ಯುವರಾಜ್ ಸಿಂಗ್; ಹೆಸರೇನು ಗೊತ್ತಾ?
Father's Day: ಭಾನುವಾರ ವಿಶ್ವ ಅಪ್ಪಂದಿರ ದಿನದಂದು, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಮಗನ ಫೋಟೋವನ್ನು ಮೊದಲ ಬಾರಿಗೆ ಸೊಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Updated on:Jun 19, 2022 | 6:09 PM

ಭಾನುವಾರ ವಿಶ್ವ ಅಪ್ಪಂದಿರ ದಿನದಂದು, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಮಗನ ಫೋಟೋವನ್ನು ಮೊದಲ ಬಾರಿಗೆ ಸೊಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಗನ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಅವರು, ಓರಿಯನ್ ಕೀಚ್ ಸಿಂಗ್ಗೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ.

2016 ರಲ್ಲಿ ಬಾಲಿವುಡ್ ನಟಿ ಹೇಜಲ್ ಕೀಚ್ ಅವರನ್ನು ವಿವಾಹವಾಗಿದ್ದ ಯುವರಾಜ್ ಸಿಂಗ್, ಜನವರಿಯಲ್ಲಿ ಗಂಡು ಮಗುವಿಗೆ ತಂದೆಯಾಗಿದ್ದರು. ಈ ಶುಭ ಸುದ್ದಿಯನ್ನು ನೀಡಿದ ಅವರು ಖಾಸಗಿತನವನ್ನು ಗೌರವಿಸುವಂತೆಯೂ ಮನವಿ ಮಾಡಿದ್ದರು.

ಭಾರತದ ಪರ ಯುವರಾಜ್ ಸಿಂಗ್ ಮೊದಲ T20 ವಿಶ್ವಕಪ್ 2007 ಮತ್ತು ODI ವಿಶ್ವಕಪ್ 2011 ಅನ್ನು ಗೆದ್ದ ತಂಡದಲ್ಲಿದ್ದರು. T20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಯುವಿ 14 ಎಸೆತಗಳಲ್ಲಿ 58 ರನ್‌ಗಳ ಇನ್ನಿಂಗ್ಸ್ ಆಡಿದರು. ಇದರ ನಂತರ, ಅವರು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 30 ಎಸೆತಗಳಲ್ಲಿ 70 ರನ್ ಗಳಿಸಿದರು.

ಯುವರಾಜ್ 2011 ರ ODI ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಯುವಿ ತಮ್ಮ ವೃತ್ತಿಜೀವನದಲ್ಲಿ 304 ODI ಮತ್ತು 58 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ಏಕದಿನದಲ್ಲಿ 8 ಸಾವಿರದ 701 ರನ್ ಮತ್ತು 111 ವಿಕೆಟ್ ಪಡೆದಿದ್ದಾರೆ. ಟಿ20ಯಲ್ಲಿ 1 ಸಾವಿರದ 177 ರನ್ ಹಾಗೂ 28 ವಿಕೆಟ್ ಪಡೆದಿದ್ದಾರೆ.

ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ 40 ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದಾರೆ. ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 1900 ರನ್ ಗಳಿಸಿ, 9 ವಿಕೆಟ್‌ಗಳನ್ನು ಪಡೆದಿದ್ದಾರೆ.
Published On - 6:09 pm, Sun, 19 June 22




