Team India: 2 ಪಂದ್ಯ ಗೆದ್ದರೂ ಸಂಕಷ್ಟಕ್ಕೆ ಸಿಲುಕಿದ ಟೀಮ್ ಇಂಡಿಯಾ

| Updated By: ಝಾಹಿರ್ ಯೂಸುಫ್

Updated on: Sep 01, 2022 | 1:35 PM

Asia cup 2022: ಸೂಪರ್-4 ಹಂತದ ಪಂದ್ಯಗಳು ರೌಂಡ್ ರಾಬಿನ್ ಫಾರ್ಮಾಟ್​ನಲ್ಲಿ ನಡೆಯಲಿದೆ. ಇಲ್ಲಿ ಯಾವ ತಂಡ ಹೆಚ್ಚು ಪಾಯಿಂಟ್ ಗಳಿಸಲಿದೆಯೋ ಆ ತಂಡಗಳು ಫೈನಲ್​ಗೆ ಪ್ರವೇಶಿಸಲಿದೆ.

Team India: 2 ಪಂದ್ಯ ಗೆದ್ದರೂ ಸಂಕಷ್ಟಕ್ಕೆ ಸಿಲುಕಿದ ಟೀಮ್ ಇಂಡಿಯಾ
Team India
Follow us on

Asia Cup 2022: ಈ ಬಾರಿಯ ಏಷ್ಯಾಕಪ್​ನಲ್ಲಿ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ (Team India) ಸೂಪರ್​-4 ಗೆ ಎಂಟ್ರಿ ಕೊಟ್ಟಿದೆ. ಆದರೆ ಈ ಎರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ ಎಂಬುದೇ ಸತ್ಯ. ಅಂದರೆ ಪಾಕಿಸ್ತಾನ್ ವಿರುದ್ದ ರೋಚಕ ಜಯ ಸಾಧಿಸಿದರೆ, ಹಾಂಗ್ ಕಾಂಗ್ ವಿರುದ್ದ ಟೀಮ್ ಇಂಡಿಯಾ ಬೌಲರ್​ಗಳು ಕಳಪೆ ಪ್ರದರ್ಶನ ನೀಡಿದ್ದರು. ಇನ್ನು ಬ್ಯಾಟಿಂಗ್ ವಿಭಾಗದಲ್ಲಿರುವ ಲೋಪಗಳು ಕೂಡ ಅನಾವರಣವಾಗಿದೆ. ಅದರಲ್ಲೂ ಟೀಮ್ ಇಂಡಿಯಾದ ನಾಲ್ಕು ದೊಡ್ಡ ನ್ಯೂನತೆಗಳು ಬೆಳಕಿಗೆ ಬಂದಿದ್ದು, ಇದನ್ನು ಸರಿಪಡಿಸದಿದ್ದರೆ ಸೂಪರ್​-4 ಹಂತದಲ್ಲಿ ಗೆಲ್ಲುವುದು ಸುಲಭವಲ್ಲ ಎಂದೇ ಹೇಳಬಹುದು. ಹಾಗಿದ್ರೆ ಆ ನ್ಯೂನತೆಗಳೇನು ನೋಡೋಣ…

  1. ಆರಂಭಿಕ ಸಮಸ್ಯೆ: ಟೀಮ್ ಇಂಡಿಯಾ 2 ಪಂದ್ಯಗಳಲ್ಲೂ ಉತ್ತಮ ಆರಂಭ ಪಡೆದಿರಲಿಲ್ಲ. ಅದರಲ್ಲೂ ಹಾಂಗ್ ಕಾಂಗ್ ವಿರುದ್ದ ಕೂಡ ಸ್ಪೋಟಕ ಆರಂಭ ಒದಗಿಸುವಲ್ಲಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಜೋಡಿ ವಿಫಲರಾಗಿದ್ದರು. ಅಂದರೆ ಈ ಜೋಡಿಯಿಂದ ನಿರೀಕ್ಷಿತ ಆರಂಭ ಸಿಗುತ್ತಿಲ್ಲ. ಅದರಲ್ಲೂ ಇಬ್ಬರು ಆರಂಭಿಕರಲ್ಲಿ ಒಬ್ಬರೂ ಕೂಡ ಕ್ಲಿಕ್ ಆಗದಿರುವುದು ಇದೀಗ ಟೀಮ್ ಇಂಡಿಯಾಗೆ ಚಿಂತೆಯಾಗಿದೆ.
  2. ನಿಧಾನಗತಿಯ ಬ್ಯಾಟಿಂಗ್: ಆರಂಭಿಕರ ನಿಧಾನಗತಿಯ ಬ್ಯಾಟಿಂಗ್ ಬಳಿಕ ಕೂಡ ಟೀಮ್ ಇಂಡಿಯಾದ ರನ್​ ಗತಿ ವೇಗ ಪಡೆಯುತ್ತಿಲ್ಲ. ಮೂರನೇ ಕ್ರಮಾಂಕದಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿ ಹೆಚ್ಚಿನ ಬಾಲ್​ಗಳನ್ನು ಎದುರಿಸುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಕೊಹ್ಲಿ ಅರ್ಧಶತಕ ಬಾರಿಸಿದ್ದರೂ ಅವರು 44 ಬಾಲ್​ಗಳನ್ನು ಎದುರಿಸಿದ್ದರು. ಹಾಗೆಯೇ ಹಾಂಗ್ ಕಾಂಗ್ ವಿರುದ್ದ ವಿರಾಟ್ ಕೊಹ್ಲಿ- ಕೆಎಲ್ ರಾಹುಲ್ ಜೊತೆಗೂಡಿ 49 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 56 ರನ್​ ಮಾತ್ರ. ಅಂದರೆ ಟಾಪ್-3 ಬ್ಯಾಟ್ಸ್​ಮನ್​ಗಳೇ ಹೆಚ್ಚಿನ ಎಸೆತಗಳನ್ನು ಆಡುತ್ತಿರುವುದರಿಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಒತ್ತಡದಲ್ಲಿ ಬ್ಯಾಟಿಂಗ್ ಮಾಡಬೇಕಾದ ಅನಿವಾರ್ಯತೆ ಉಂಟಾಗುತ್ತಿದೆ.
  3. ಮೂರನೇ ವೇಗಿಯ ಸಮಸ್ಯೆ: ಟೀಮ್ ಇಂಡಿಯಾ ಮೂರನೇ ವೇಗಿಯ ಕೊರತೆಯನ್ನು ಎದುರಿಸುತ್ತಿದೆ. ತಂಡದಲ್ಲಿರುವ ಅವೇಶ್ ಖಾನ್ ಮೊದಲೆರಡು ಪಂದ್ಯಗಳಲ್ಲಿ ಕಣಕ್ಕಿಳಿದರೂ ಉತ್ತಮ ಪ್ರದರ್ಶನ ನೀಡಿಲ್ಲ. ಅದರಲ್ಲೂ ಹಾಂಗ್ ಕಾಂಗ್ ವಿರುದ್ದ ಕೇವಲ 4 ಓವರ್​ಗಳಲ್ಲಿ ಬರೋಬ್ಬರಿ 53 ರನ್ ನೀಡಿದ್ದಾರೆ. ಇತ್ತ ಟೀಮ್ ಇಂಡಿಯಾದಲ್ಲಿ ಮೂರನೇ ಬೌಲರ್ ಇಲ್ಲದಿರುವುದರಿಂದ ಬದಲಾವಣೆಯ ಸಮಸ್ಯೆಯನ್ನು ಎದುರಿಸುತ್ತಿದೆ.
  4. ಲಯ ತಪ್ಪಿದ ಬೌಲರ್​ಗಳು: ಹಾಂಗ್ ಕಾಂಗ್ ವಿರುದ್ದದ ಪಂದ್ಯದಲ್ಲಿ ಟೀಮ್ ಇಂಡಿಯಾದ ವೇಗಿಗಳು ಲಯ ತಪ್ಪಿರುವುದು ಸ್ಪಷ್ಟ. ಅದರಲ್ಲೂ ಅವೇಶ್ ಖಾನ್ 4 ಓವರ್​ಗಳಲ್ಲಿ 53 ರನ್ ನೀಡಿದರೆ, ಅರ್ಷದೀಪ್ ಸಿಂಗ್ 4 ಓವರ್​ನಲ್ಲಿ 44 ರನ್ ಬಿಟ್ಟು ಕೊಟ್ಟಿದ್ದರು. ಆದರೆ ಸೂಪರ್- 4 ನಲ್ಲಿ ಟೀಮ್ ಇಂಡಿಯಾ ಮತ್ತೆ ಪಾಕಿಸ್ತಾನ್ ತಂಡವನ್ನು ಎದುರಿಸುವ ಸಾಧ್ಯತೆಯಿದೆ. ಇತ್ತ ಹಾಂಗ್ ಕಾಂಗ್ ವಿರುದ್ದವೇ ಟೀಮ್ ಇಂಡಿಯಾ ಬೌಲರ್​ಗಳು 10ರ ಎಕಾನಮಿ ರೇಟ್​ನಲ್ಲಿ ರನ್ ನೀಡಿರುವುದು ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ.

ಇನ್ನು ಸೂಪರ್-4 ಹಂತದ ಪಂದ್ಯಗಳು ರೌಂಡ್ ರಾಬಿನ್ ಫಾರ್ಮಾಟ್​ನಲ್ಲಿ ನಡೆಯಲಿದೆ. ಇಲ್ಲಿ ಯಾವ ತಂಡ ಹೆಚ್ಚು ಪಾಯಿಂಟ್ ಗಳಿಸಲಿದೆಯೋ ಆ ತಂಡಗಳು ಫೈನಲ್​ಗೆ ಪ್ರವೇಶಿಸಲಿದೆ. ಕೊನೆಯ ಸುತ್ತಿನಲ್ಲಿ ಮಾಡುವ ಸಣ್ಣ ಪುಟ್ಟ ತಪ್ಪುಗಳು ಕೂಡ ಟೀಮ್ ಇಂಡಿಯಾದ ಫಲಿತಾಂಶಗಳ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಫೈನಲ್​ಗೆ ಪ್ರವೇಶಿಸಬೇಕಿದ್ದರೆ ಟೀಮ್ ಇಂಡಿಯಾ ಈ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಲೇಬೇಕು.

ಇದನ್ನೂ ಓದಿ
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

 

Published On - 1:35 pm, Thu, 1 September 22