IND vs HK: ಭಾರತ-ಪಾಕ್ ಮೂಲದ ಆಟಗಾರರ ವಿರುದ್ದ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ..!

| Updated By: ಝಾಹಿರ್ ಯೂಸುಫ್

Updated on: Aug 30, 2022 | 10:05 PM

Hong Kong Indian players: ಅಂದು ಕಣಕ್ಕಿಳಿದ ಬಹುತೇಕ ಆಟಗಾರರು ಈ ಬಾರಿ ಕೂಡ ತಂಡದಲ್ಲಿದ್ದಾರೆ. ಆದರೆ ಈ ತಂಡದಲ್ಲಿ ಹಾಂಗ್​ ಕಾಂಗ್​ ಮೂಲದ ಯಾವುದೇ ಆಟಗಾರರಿಲ್ಲ ಎಂಬುದು ವಿಶೇಷ.

IND vs HK: ಭಾರತ-ಪಾಕ್ ಮೂಲದ ಆಟಗಾರರ ವಿರುದ್ದ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ..!
Team India
Follow us on

Asia Cup 2022: ಏಷ್ಯಾಕಪ್​ 2022 ರ 4ನೇ ಪಂದ್ಯದಲ್ಲಿ ಭಾರತ-ಹಾಂಗ್ ಕಾಂಗ್ (India vs Hong Kong) ತಂಡಗಳು ಮುಖಾಮುಖಿಯಾಗಲಿದೆ. ಹಾಂಗ್ ಕಾಂಗ್ ತಂಡವು ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ವಿರುದ್ಧ ಆಡುತ್ತಿರುವುದು  ಮೊದಲ ಬಾರಿಗೆ ಎಂಬುದು ವಿಶೇಷ. ಇದಾಗ್ಯೂ ಈ ಹಿಂದೆ ಏಕದಿನ ಪಂದ್ಯಗಳಲ್ಲಿ ಭಾರತ ಮತ್ತು ಹಾಂಗ್ ಕಾಂಗ್ 2 ಬಾರಿ ಮುಖಾಮುಖಿಯಾಗಿತ್ತು. 2008 ರಲ್ಲಿ ನಡೆದ ಏಷ್ಯಾಕಪ್​ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ನಡೆಸಿ 374 ರನ್ ಕಲೆಹಾಕಿತ್ತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಹಾಂಗ್ ಕಾಂಗ್ ಕೇವಲ 118 ರನ್​ಗಳಿಗೆ ಆಲೌಟ್ ಆಗಿದ್ದು ಈಗ ಇತಿಹಾಸ.

ಇದಾದ ಬಳಿಕ ಮತ್ತೆ ಉಭಯ ತಂಡಗಳು ಮುಖಾಮುಖಿಯಾಗಿದ್ದು 2018 ರಲ್ಲಿ. ಅದು ಕೂಡ ಏಷ್ಯಾಕಪ್​ನಲ್ಲಿಯೇ ಎಂಬುದು ವಿಶೇಷ. ಅಂದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 7 ವಿಕೆಟ್ ಕಳೆದುಕೊಂಡು 285 ರನ್ ಕಲೆಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ಹಾಂಗ್ ಕಾಂಗ್ ತಂಡವು ಒಂದು ಹಂತದಲ್ಲಿ ಟೀಮ್ ಇಂಡಿಯಾಗೆ ಸೋಲಿನ ಭೀತಿ ಹುಟ್ಟಿಸಿತ್ತು. ಏಕೆಂದರೆ ಟೀಮ್ ಇಂಡಿಯಾ ವಿರುದ್ದ ಭರ್ಜರಿ ಪ್ರದರ್ಶನ ನೀಡಿದ್ದ ಹಾಂಗ್ ಕಾಂಗ್ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 259 ರನ್​ ಕಲೆಹಾಕಿದ್ದರು. ಅಂದು ಕೇವಲ 26 ರನ್​ಗಳ ಅಂತರದಿಂದ ಟೀಮ್ ಇಂಡಿಯಾ ಜಯ ಸಾಧಿಸಿತ್ತು.

ಟೀಮ್ ಇಂಡಿಯಾ ವಿರುದ್ದದ 2ನೇ ಮುಖಾಮುಖಿಯಲ್ಲಿ ಕಣಕ್ಕಿಳಿದ ಬಹುತೇಕ ಆಟಗಾರರು ಈ ಬಾರಿ ಕೂಡ ತಂಡದಲ್ಲಿದ್ದಾರೆ. ಆದರೆ ಈ ತಂಡದಲ್ಲಿ ಹಾಂಗ್​ ಕಾಂಗ್​ ಮೂಲದ ಯಾವುದೇ ಆಟಗಾರರಿಲ್ಲ ಎಂಬುದು ವಿಶೇಷ. ಅಂದರೆ ಹಾಂಗ್ ಕಾಂಗ್​ ತಂಡವನ್ನು ವಲಸಿಗರು ಪ್ರತಿನಿಧಿಸುತ್ತಿದ್ದಾರೆ. ಹಾಂಗ್ ಕಾಂಗ್​ನಲ್ಲಿ ಪೌರತ್ವ ಹೊಂದಿರುವ ಪಾಕಿಸ್ತಾನ್, ಭಾರತ ಮೂಲದವರೇ ಕ್ರಿಕೆಟ್​ನಲ್ಲಿ ಪಾರುಪತ್ಯ ಸಾಧಿಸಿದ್ದಾರೆ. ಇದೀಗ ಈ ಎರಡು ದೇಶಗಳ ಆಟಗಾರರೇ ಟೀಮ್ ಇಂಡಿಯಾ ವಿರುದ್ದ ಕಣಕ್ಕಿಳಿಯುತ್ತಿರುವುದು ವಿಶೇಷ.

ಇದನ್ನೂ ಓದಿ
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಒಟ್ಟು 17 ಸದಸ್ಯರನ್ನು ಹೊಂದಿರುವ ಹಾಂಗ್ ಕಾಂಗ್ ತಂಡದಲ್ಲಿ ಭಾರತೀಯ ಮೂಲದ ನಾಲ್ವರು ಆಟಗಾರರಿದ್ದಾರೆ. ಇನ್ನು ಪಾಕಿಸ್ತಾನ್ ಮೂಲದ 12 ಆಟಗಾರರಿದ್ದಾರೆ. ಹಾಗೆಯೇ ಇಂಗ್ಲೆಂಡ್ ಮೂಲದ ಓರ್ವ ಆಟಗಾರನಿದ್ದಾನೆ. ಹಾಗಿದ್ರೆ ಮೂರು ದೇಶಗಳ ಆಟಗಾರರು ಯಾರೆಲ್ಲಾ ನೋಡೋಣ…

ಭಾರತೀಯ ಮೂಲದ ಆಟಗಾರರು:

  1. ಕಿಂಚಿತ್ ಶಾ
  2. ಧನಂಜಯ್ ರಾವ್
  3. ಆಯುಷ್ ಶುಕ್ಲಾ
  4. ಅಹಾನ್ ತ್ರಿವೇದಿ

ಪಾಕಿಸ್ತಾನ್ ಮೂಲದ ಆಟಗಾರರು:

  1. ಬಾಬರ್ ಹಯಾತ್
  2. ಮೊಹಮ್ಮದ್ ಘಜನ್ಫರ್
  3. ನಿಜಾಕತ್ ಖಾನ್
  4. ಐಜಾಜ್ ಖಾನ್
  5. ಯಾಸಿಮ್ ಮುರ್ತಾಜಾ
  6. ಜೀಶನ್ ಅಲಿ
  7. ಹರೂನ್ ಅರ್ಷದ್
  8. ಅಫ್ತಾಬ್ ಹುಸೇನ್
  9. ಎಹ್ಸಾನ್ ಖಾನ್
  10. ವಾಜಿದ್ ಶಾ
  11. ಮೊಹಮ್ಮದ್ ವಹೀದ್
  12. ಅತೀಕ್ ಇಕ್ಬಾಲ್

ಇಂಗ್ಲೆಂಡ್ ಮೂಲದ ಆಟಗಾರ:

  1. ಸ್ಕಾಟ್ ಮೆಕ್​ಕೆಚ್ನಿ

ಒಟ್ಟಿನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಗೆದ್ದು ಬೀಗಿದ್ದ ಟೀಮ್ ಇಂಡಿಯಾ ಇದೀಗ ಭಾರತ-ಪಾಕ್ ಆಟಗಾರರನ್ನು ಜಂಟಿಯಾಗಿ ಎದುರಿಸುತ್ತಿರುವುದು ವಿಶೇಷ.

ಹಾಂಗ್ ಕಾಂಗ್ ತಂಡ ಹೀಗಿದೆ:
ಬಾಬರ್ ಹಯಾತ್ , ಮೊಹಮ್ಮದ್ ಘಜನ್ಫರ್ , ಕಿಂಚಿತ್ ಶಾ , ನಿಜಾಕತ್ ಖಾನ್ (ನಾಯಕ) , ಐಜಾಜ್ ಖಾನ್ , ಯಾಸಿಮ್ ಮುರ್ತಾಜಾ , ಜೀಶನ್ ಅಲಿ , ಸ್ಕಾಟ್ ಮೆಕ್​ಕೆಚ್ನಿ , ಹರೂನ್ ಅರ್ಷದ್ , ಅಫ್ತಾಬ್ ಹುಸೇನ್ , ಎಹ್ಸಾನ್ ಖಾನ್ , ಧನಂಜಯ್ ರಾವ್ , ವಾಜಿದ್ ಶಾ , ಮೊಹಮ್ಮದ್ ವಹೀದ್, ಆಯುಷ್ ಶುಕ್ಲಾ, ಅತೀಕ್ ಇಕ್ಬಾಲ್, ಅಹಾನ್ ತ್ರಿವೇದಿ.

ಟೀಮ್ ಇಂಡಿಯಾ ಹೀಗಿದೆ:

ರೋಹಿತ್‌ ಶರ್ಮಾ (ನಾಯಕ), ಕೆ.ಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡ, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ದಿನೇಶ್‌ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್‌ ಕುಮಾರ್‌, ಅರ್ಷದೀಪ್‌ ಸಿಂಗ್‌, ಅವೇಶ್‌ ಖಾನ್‌, ಯುಜ್ವೇಂದ್ರ ಚಹಲ್‌, ಆರ್‌ ಅಶ್ವಿನ್‌, ರವಿ ಬಿಷ್ಣೋಯ್‌. ಮೀಸಲು ಆಟಗಾರರು: ಅಕ್ಷರ್‌ ಪಟೇಲ್‌, ದೀಪಕ್‌ ಚಹರ್‌ ಮತ್ತು ಶ್ರೇಯಸ್‌ ಅಯ್ಯರ್‌.