Asia cup 2023 BAN vs AFG: ಅಫ್ಘಾನ್ ವಿರುದ್ದ ಬಾಂಗ್ಲಾ ತಂಡಕ್ಕೆ ಅಮೋಘ ಗೆಲುವು

TV9 Web
| Updated By: ಝಾಹಿರ್ ಯೂಸುಫ್

Updated on:Sep 03, 2023 | 10:57 PM

Asia cup 2023 Bangladesh vs Afghanistan: 335 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ್ ಪರ ಇಬ್ರಾಹಿಂ ಝದ್ರಾನ್ 75 ರನ್​ ಬಾರಿಸಿದರು. ಆದರೆ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 44.3 ಓವರ್​ಗಳಲ್ಲಿ 245 ರನ್​ಗಳಿಗೆ ಆಲೌಟ್ ಆಗುವ ಮುಲಕ ಅಫ್ಘಾನಿಸ್ತಾನ್ ತಂಡ ಸೋಲೊಪ್ಪಿಕೊಂಡಿತು. ಇತ್ತ 89 ರನ್​ಗಳ ಭರ್ಜರಿ ಜಯದೊಂದಿಗೆ ಬಾಂಗ್ಲಾದೇಶ್ ತಂಡವು ಸೂಪರ್-4 ಹಂತಕ್ಕೇರುವ ಕನಸನ್ನು ಜೀವಂತವಿರಿಸಿಕೊಂಡಿದೆ

Asia cup 2023 BAN vs AFG: ಅಫ್ಘಾನ್ ವಿರುದ್ದ ಬಾಂಗ್ಲಾ ತಂಡಕ್ಕೆ ಅಮೋಘ ಗೆಲುವು
BAN vs AFGImage Credit source: insidesport.in

ಏಷ್ಯಾಕಪ್​ನ 4ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ದ ಬಾಂಗ್ಲಾದೇಶ್ ತಂಡವು ಅಮೋಘ ಗೆಲುವು ದಾಖಲಿಸಿದೆ. ಲಾಹೋರ್​ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ಪರ ಮೆಹದಿ ಹಸನ್ ಮಿರಾಝ್ (112) ಹಾಗೂ ನಜ್ಮುಲ್ ಹೊಸೈನ್ ಶಾಂಟೊ (105) ಭರ್ಜರಿ ಶತಕ ಸಿಡಿಸಿದ್ದರು. ಈ ಭರ್ಜರಿ ಶತಕಗಳ ನೆರವಿನಿಂದ ಬಾಂಗ್ಲಾದೇಶ್ ತಂಡವು ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 334 ರನ್​ ಕಲೆಹಾಕಿತು.

335 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ್ ಪರ ಇಬ್ರಾಹಿಂ ಝದ್ರಾನ್ 75 ರನ್​ ಬಾರಿಸಿದರು. ಆದರೆ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 44.3 ಓವರ್​ಗಳಲ್ಲಿ 245 ರನ್​ಗಳಿಗೆ ಆಲೌಟ್ ಆಗುವ ಮುಲಕ ಅಫ್ಘಾನಿಸ್ತಾನ್ ತಂಡ ಸೋಲೊಪ್ಪಿಕೊಂಡಿತು. ಇತ್ತ 89 ರನ್​ಗಳ ಭರ್ಜರಿ ಜಯದೊಂದಿಗೆ ಬಾಂಗ್ಲಾದೇಶ್ ತಂಡವು ಸೂಪರ್-4 ಹಂತಕ್ಕೇರುವ ಕನಸನ್ನು ಜೀವಂತವಿರಿಸಿಕೊಂಡಿದೆ

  • ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರೀಂ ಜನತ್, ರಶೀದ್ ಖಾನ್, ಫಝಲ್ಹಕ್ ಫಾರೂಕಿ, ಮುಜೀಬ್ ಉರ್ ರೆಹಮಾನ್.
  • ಬಾಂಗ್ಲಾದೇಶ್ (ಪ್ಲೇಯಿಂಗ್ XI): ಮೊಹಮ್ಮದ್ ನಯಿಮ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ತೌಹಿದ್ ಹೃದೋಯ್, ಶಮೀಮ್ ಹೊಸೈನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಹಸನ್ ಮಹಮ್ಮದ್.

ಬಾಂಗ್ಲಾದೇಶ್ ತಂಡ: ಶಕೀಬ್ ಅಲ್ ಹಸನ್ (ನಾಯಕ) , ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್) , ಮೊಹಮ್ಮದ್ ನಯಿಮ್ , ತಂಝಿದ್ ಹಸನ್ , ನಜ್ಮುಲ್ ಹೊಸೈನ್ ಶಾಂಟೋ , ತೌಹಿದ್ ಹೃದೊಯ್ , ಮೆಹಿದಿ ಹಸನ್ ಮಿರಾಜ್ , ಮುಸ್ತಫಿಜುರ್ ರೆಹಮಾನ್, ಮಹೇದಿ ಹಸನ್ , ತಸ್ಕಿನ್ ಅಹ್ಮದ್ , ಶೋರಿಫುಲ್ ಇಸ್ಲಾಂ, ನಸುಮ್ ಅಹ್ಮದ್, ಅನಾಮುಲ್ ಹಕ್, ತಂಝುಮ್ ಹಸನ್, ಶಮೀಮ್ ಹುಸೈನ್, ಆಫಿಫ್ ಹುಸೈನ್.

ಅಫ್ಘಾನಿಸ್ತಾನ್ ತಂಡ: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ಹಶ್ಮತುಲ್ಲಾ ಶಾಹಿದಿ (ನಾಯಕ) , ಇಬ್ರಾಹಿಂ ಝದ್ರಾನ್ , ರಹಮತ್ ಷಾ , ಗುಲ್ಬದಿನ್ ನೈಬ್ , ರಿಯಾಜ್ ಹಸನ್ , ಮೊಹಮ್ಮದ್ ನಬಿ , ಇಕ್ರಮ್ ಅಲಿಖಿಲ್ , ರಶೀದ್ ಖಾನ್ , ಅಬ್ದುಲ್ ರಹಮಾನ್ , ನಜೀಬುಲ್ಲಾಹ್ ಝದ್ರಾನ್ , ಮುಜೀಬ್ ಉರ್ ರೆಹಮಾನ್, ಫಝಲ್ಹಕ್ ಫಾರೂಖಿ, ಸರ್ಫುದ್ದೀನ್ ಅಶ್ರಫ್, ಕರೀಂ ಜನತ್ , ನೂರ್ ಅಹ್ಮದ್ , ಸುಲಿಮಾನ್ ಸಫಿ.

LIVE NEWS & UPDATES

The liveblog has ended.
  • 03 Sep 2023 10:49 PM (IST)

    Asia cup 2023 BAN vs AFG Live Score: ಬಾಂಗ್ಲಾದೇಶ್ ತಂಡಕ್ಕೆ ಅಮೋಘ ಗೆಲುವು

    ಅಫ್ಘಾನಿಸ್ತಾನ್ ವಿರುದ್ಧ ಬಾಂಗ್ಲಾದೇಶ್ ತಂಡಕ್ಕೆ 89 ರನ್​ಗಳ ಭರ್ಜರಿ ಜಯ

    BAN 334/5 (50)

    AFG 245 (44.3)

    8.3 ಓವರ್​ಗಳಲ್ಲಿ 44 ರನ್​ ನೀಡಿ 4 ವಿಕೆಟ್ ಕಬಳಿಸಿದ ಬಾಂಗ್ಲಾ ವೇಗಿ ತಸ್ಕಿನ್ ಅಹ್ಮದ್.

    ಎಡಗೈ ವೇಗಿ ಶೋರಿಫುಲ್​ ಇಸ್ಲಾಂಗೆ 3 ವಿಕೆಟ್.

    ಅಫ್ಘಾನಿಸ್ತಾನ್ ಪರ ಇಬ್ರಾಹಿಂ ಝದ್ರಾನ್ (75) ಟಾಪ್ ಸ್ಕೋರರ್.

  • 03 Sep 2023 10:31 PM (IST)

    Asia cup 2023 BAN vs AFG Live Score: ಸೋಲಿನ ಸುಳಿಯಲ್ಲಿ ಸಿಲುಕಿದ ಅಫ್ಘಾನಿಸ್ತಾನ್

    42 ಓವರ್​ಗಳ ಮುಕ್ತಾಯದ ವೇಳೆಗೆ 8 ವಿಕೆಟ್​ ಕಳೆದುಕೊಂಡು 231 ರನ್​ ಕಲೆಹಾಕಿದ ಅಫ್ಘಾನಿಸ್ತಾನ್. ಕೇವಲ ಬಾಂಗ್ಲಾದೇಶ್ ತಂಡದ ಜಯಕ್ಕೆ ಕೇವಲ 2 ವಿಕೆಟ್​ಗಳ ಅಗತ್ಯತೆ. ಗೆಲ್ಲಲು ಅಫ್ಗಾನ್ ತಂಡಕ್ಕೆ 102 ರನ್​ಗಳ ಅವಶ್ಯಕತೆ.

    BAN 334/5 (50)

    AFG 231/8 (42)

      

  • 03 Sep 2023 10:00 PM (IST)

    BAN vs AFG Live Score: ಅಫ್ಘಾನಿಸ್ತಾನ್ ತಂಡದ 4ನೇ ವಿಕೆಟ್ ಪತನ

    ಮೆಹದಿ ಹಸನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದ ನಜೀಬುಲ್ಲಾ ಝದ್ರಾನ್. 25 ಎಸೆತಗಳಲ್ಲಿ 17 ರನ್​ಗಳಿಸಿ ಔಟಾದ ನಜೀಬ್. ಕ್ರೀಸ್​ನಲ್ಲಿ ಶಾಹಿದಿ ಹಾಗೂ ಮೊಹಮ್ಮದ್ ನಬಿ ಬ್ಯಾಟಿಂಗ್.

    ಅಫ್ಘಾನಿಸ್ತಾನ್ ತಂಡಕ್ಕೆ ಗೆಲ್ಲಲು 143 ರನ್​ಗಳ ಅವಶ್ಯಕತೆ.

    AFG 193/4 (36.1)

      

  • 03 Sep 2023 09:53 PM (IST)

    BAN vs AFG Live Score: ಕೊನೆಯ 15 ಓವರ್​ಗಳ ಫೈಟ್

    ಅಫ್ಘಾನಿಸ್ತಾನ್ ತಂಡಕ್ಕೆ ಕೊನೆಯ 90 ಎಸೆತಗಳಲ್ಲಿ 146 ರನ್​ಗಳ ಅವಶ್ಯಕತೆ. ಕ್ರೀಸ್​ನಲ್ಲಿ ಶಾಹಿದಿ ಹಾಗೂ ನಜೀಬುಲ್ಲಾ ಬ್ಯಾಟಿಂಗ್.

    ಬಾಂಗ್ಲಾದೇಶ್ ತಂಡಕ್ಕೆ ಗೆಲ್ಲಲು 7 ವಿಕೆಟ್​ಗಳ ಅಗತ್ಯತೆ. ಕುತೂಹಲಘಟ್ಟದತ್ತ ಸಾಗುತ್ತಿರುವ ಪಂದ್ಯ.

    AFG 190/3 (35)

      

  • 03 Sep 2023 09:44 PM (IST)

    BAN vs AFG Live Score: 33 ಓವರ್​ಗಳ ಮುಕ್ತಾಯ: ಅಫ್ಘಾನ್ ಹೋರಾಟ

    ಶಮೀಮ್ ಎಸೆದ 33ನೇ ಓವರ್​ನಲ್ಲಿ ಎರಡು ಬೌಂಡರಿ ಬಾರಿಸಿದ ಶಾಹಿದಿ. ಈ ಫೋರ್​ಗಳೊಂದಿಗೆ ತಂಡದ ಮೊತ್ತ 170 ಕ್ಕೆ ಏರಿಕೆ. ಗೆಲುವಿಗಾಗಿ ಮುಂದುವರೆದ ಅಫ್ಘಾನ್ ಬ್ಯಾಟರ್​ಗಳ ಹೋರಾಟ. ಕ್ರೀಸ್​ನಲ್ಲಿ ನಜೀಬುಲ್ಲಾ ಝದ್ರಾನ್ ಹಾಗೂ ಶಾಹಿದಿ ಬ್ಯಾಟಿಂಗ್.

    AFG 170/3 (33)

      

  • 03 Sep 2023 09:22 PM (IST)

    BAN vs AFG Live Score: ಅಫ್ಘಾನಿಸ್ತಾನ್ ತಂಡದ 3ನೇ ವಿಕೆಟ್ ಪತನ

    ಹಸನ್ ಮಹಮೂದ್ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದ ಇಬ್ರಾಹಿಂ ಝದ್ರಾನ್.

    74 ಎಸೆತಗಳಲ್ಲಿ 75 ರನ್​ ಬಾರಿಸಿ ವಿಕೆಟ್ ಒಪ್ಪಿಸಿದ ಆರಂಭಿಕ ಆಟಗಾರ ಇಬ್ರಾಹಿಂ ಝದ್ರಾನ್.

    ಕ್ರೀಸ್​ನಲ್ಲಿ ಶಾಹಿದಿ ಹಾಗೂ ನಜೀಬುಲ್ಲಾ ಝದ್ರಾನ್ ಬ್ಯಾಟಿಂಗ್.

    AFG 138/3 (28)

      

  • 03 Sep 2023 09:14 PM (IST)

    BAN vs AFG Live Score: ಭರ್ಜರಿ ಸಿಕ್ಸ್ ಸಿಡಿಸಿದ ಝದ್ರಾನ್

    ಮಿರಾಝ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಇಬ್ರಾಹಿಂ ಝದ್ರಾನ್. ಆಕ್ರಮಣಕಾರಿ ಆಟಕ್ಕೆ ಮುಂದಾದ ಅಫ್ಘಾನಿಸ್ತಾನ್ ತಂಡ. ಕ್ರೀಸ್​ನಲ್ಲಿ ಶಾಹಿದಿ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್

    AFG 126/2 (26.3)

      

  • 03 Sep 2023 09:11 PM (IST)

    BAN vs AFG Live Score: 25 ಓವರ್ ಮುಕ್ತಾಯ: ಬಾಂಗ್ಲಾ ಉತ್ತಮ ಬೌಲಿಂಗ್

    25 ಓವರ್​ಗಳ ಮುಕ್ತಾಯದ ವೇಳೆ 110 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ. ಕ್ರೀಸ್​ನಲ್ಲಿ ಇಬ್ರಾಹಿಂ ಝದ್ರಾನ್ (61) ಹಾಗೂ ಶಾಹಿದಿ (14) ಬ್ಯಾಟಿಂಗ್. ಇನ್ನು 25 ಓವರ್​ಗಳಲ್ಲಿ 225 ರನ್​ಗಳ ಅವಶ್ಯಕತೆ. ಬಾಂಗ್ಲಾದೇಶ್ ತಂಡಕ್ಕೆ ಗೆಲ್ಲಲು 8 ವಿಕೆಟ್​ಗಳ ಅಗತ್ಯತೆ.

    AFG 110/2 (25)

      

  • 03 Sep 2023 08:49 PM (IST)

    BAN vs AFG Live Score: ಅರ್ಧಶತಕ ಪೂರೈಸಿದ ಇಬ್ರಾಹಿಂ ಝದ್ರಾನ್

    52 ಎಸೆತಗಳಲ್ಲಿ 8 ಫೋರ್​ಗಳೊಂದಿಗೆ ಅರ್ಧಶತಕ ಪೂರೈಸಿದ ಇಬ್ರಾಹಿಂ ಝದ್ರಾನ್. ಆರಂಭಿಕನಾಗಿ ಕಣಕ್ಕಿಳಿದು ಅಫ್ಘಾನ್ ತಂಡಕ್ಕೆ ಆಸರೆಯಾಗಿ ನಿಂತ ಝದ್ರಾನ್. ಕ್ರೀಸ್​ನಲ್ಲಿ ನಾಯಕ ಹಶ್ಮುತುಲ್ಲಾ ಶಾಹಿದಿ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.

    AFG 90/2 (21)

      

      

  • 03 Sep 2023 08:38 PM (IST)

    BAN vs AFG Live Score: ಅಫ್ಘಾನಿಸ್ತಾನ್ ತಂಡದ 2ನೇ ವಿಕೆಟ್ ಪತನ

    ತಸ್ಕಿನ್ ಅಹ್ಮದ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ರಹಮತ್ ಶಾ. 57 ಎಸೆತಗಳಲ್ಲಿ 33 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅಫ್ಘಾನ್ ಬ್ಯಾಟರ್. ಬಾಂಗ್ಲಾದೇಶ್ ತಂಡಕ್ಕೆ 2ನೇ ಯಶಸ್ಸು.

    ಕ್ರೀಸ್​ನಲ್ಲಿ ಇಬ್ರಾಹಿಂ ಝದ್ರಾನ್ ಹಾಗೂ ಹಶ್ಮತುಲ್ಲಾ ಶಾಹಿದಿ ಬ್ಯಾಟಿಂಗ್.

    AFG 79/2 (17.5)

      

  • 03 Sep 2023 08:18 PM (IST)

    BAN vs AFG Live Score: ಅರ್ಧಶತಕ ಪೂರೈಸಿದ ಅಫ್ಘಾನಿಸ್ತಾನ್

    ಶಕೀಬ್ ಅಲ್ ಹಸನ್ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಫೋರ್ ಬಾರಿಸಿದ ರಹಮತ್ ಶಾ. 14 ಓವರ್ ಮುಕ್ತಾಯದ ವೇಳೆ 61 ರನ್​ ಕಲೆಹಾಕಿದ ಬಾಂಗ್ಲಾದೇಶ್. ಕ್ರೀಸ್​ನಲ್ಲಿ ಇಬ್ರಾಹಿಂ ಝದ್ರಾನ್ (34) ಹಾಗೂ ರಹಮತ್ ಶಾ (26) ಬ್ಯಾಟಿಂಗ್.

    AFG 61/1 (14)

      

  • 03 Sep 2023 07:55 PM (IST)

    BAN vs AFG Live Score: ಬಾಂಗ್ಲಾದೇಶ್ ತಂಡದ ಭರ್ಜರಿ ಬೌಲಿಂಗ್

    ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬಾಂಗ್ಲಾದೇಶ್. ಮೊದಲ 8 ಓವರ್​ಗಳಲ್ಲಿ ನೀಡಿರುವುದು ಕೇವಲ 23 ರನ್​ಗಳು ಮಾತ್ರ. ಅತ್ತ ರನ್​ಗಳಿಸಲು ಪರದಾಡುತ್ತಿರುವ ಇಬ್ರಾಹಿಂ ಝದ್ರಾನ್ (15) ಹಾಗೂ ರಹಮತ್ ಶಾ (7).

    AFG 23/1 (8)

      

  • 03 Sep 2023 07:31 PM (IST)

    BAN vs AFG Live Score: ಝದ್ರಾನ್ ಬ್ಯಾಟ್​ನಿಂದ ಬ್ಯಾಕ್ ಟು ಬ್ಯಾಕ್ ಬೌಂಡರಿ

    ತಸ್ಕಿನ್ ಅಹ್ಮದ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಇಬ್ರಾಹಿಂ ಝದ್ರಾನ್. ಆಫ್ ಸೈಡ್​ನತ್ತ ಎರಡು ಫೋರ್​ಗಳನ್ನು ಬಾರಿಸಿದ ಇಬ್ರಾಹಿಂ. ಕ್ರೀಸ್​ನಲ್ಲಿ ರಹಮತ್ ಶಾ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.

    AFG 9/1 (2.4)

      

  • 03 Sep 2023 07:26 PM (IST)

    BAN vs AFG Live Score: ಅಫ್ಘಾನಿಸ್ತಾನ್ ತಂಡದ ಮೊದಲ ವಿಕೆಟ್ ಪತನ

    ಶೊರಿಫುಲ್ ಇಸ್ಲಾಂ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದ ರಹಮಾನುಲ್ಲಾ ಗುರ್ಬಾಝ್ (1). 2ನೇ ಓವರ್​ನಲ್ಲೇ ಬಾಂಗ್ಲಾದೇಶ್ ತಂಡಕ್ಕೆ ಮೊದಲ ಯಶಸ್ಸು. ಕ್ರೀಸ್​ನಲ್ಲಿ ಇಬ್ರಾಹಿಂ ಝದ್ರಾನ್ ಹಾಗೂ ರಹಮತ್ ಶಾ ಬ್ಯಾಟಿಂಗ್.

    AFG 1/1 (1.4)

      

  • 03 Sep 2023 06:45 PM (IST)

    BAN vs AFG Live Score: ಬಾಂಗ್ಲಾದೇಶ್ ತಂಡದ ಇನಿಂಗ್ಸ್ ಅಂತ್ಯ

    ಬಾಂಗ್ಲಾದೇಶ್ ತಂಡದ ಇನಿಂಗ್ಸ್ ಅಂತ್ಯ. 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 334 ರನ್ ಪೇರಿಸಿದ ಬಾಂಗ್ಲಾ ತಂಡ. ಭರ್ಜರಿ ಶತಕ ಸಿಡಿಸಿದ ಮೆಹದಿ ಹಸನ್ ಮಿರಾಝ್ (112) ಹಾಗೂ ನಜ್ಮುಲ್ ಹೊಸೈನ್ ಶಾಂಟೊ (105).

    ಅಫ್ಘಾನಿಸ್ತಾನ್ ತಂಡಕ್ಕೆ ಗೆಲ್ಲಲು 335 ರನ್​ಗಳ ಕಠಿಣ ಗುರಿ.

    BAN 334/5 (50)

      

  • 03 Sep 2023 06:38 PM (IST)

    BAN vs AFG Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಶಕೀಬ್

    49ನೇ ಓವರ್​ನಲ್ಲಿ ನೈಬ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಶಕೀಬ್ ಅಲ್ ಹಸನ್. ಬಾಂಗ್ಲಾ ಬ್ಯಾಟರ್​ಗಳ ಅಬ್ಬರಕ್ಕೆ ತತ್ತರಿಸಿದ ಅಫ್ಗಾನ್ ಬೌಲರ್​ಗಳು. ಬೃಹತ್ ಮೊತ್ತದತ್ತ ಬಾಂಗ್ಲಾದೇಶ್ ತಂಡ.

    BAN 322/4 (48.4)

      

  • 03 Sep 2023 06:29 PM (IST)

    BAN vs AFG Live Score: ಬಾಂಗ್ಲಾದೇಶ್ ತಂಡದ 4ನೇ ವಿಕೆಟ್ ಪತನ

    ಶಕೀಬ್ ಅಲ್ ಹಸನ್ ಕರೆಗೆ ಓಡಿದ ಮುಶ್ಪಿಕುರ್ ರಹೀಮ್. ಅರ್ಧದಲ್ಲಿ ಮನಸ್ಸು ಬದಲಿಸಿ ಶಕೀಬ್..ಮರಳಿ ಕ್ರೀಸ್​ಗೆ ಸೇರುವ ಮುನ್ನ ನಾನ್ ಸ್ಟೈಕ್​ನಲ್ಲಿ ರನೌಟ್ ಆದ ಮುಶ್ಫಿಕುರ್ ರಹೀಮ್ (15). ಬಾಂಗ್ಲಾದೇಶ್ ತಂಡದ 4ನೇ ವಿಕೆಟ್ ಪತನ.

    BAN 294/4 (46.3)

      

  • 03 Sep 2023 06:20 PM (IST)

    BAN vs AFG Live Score: ಬಾಂಗ್ಲಾದೇಶ್ ತಂಡದ 3ನೇ ವಿಕೆಟ್ ಪತನ

    105 ಎಸೆತಗಳಲ್ಲಿ 104 ರನ್​ ಬಾರಿಸಿ ರನೌಟ್ ಆಗಿ ನಿರ್ಗಮಿಸಿದ ನಜ್ಮುಲ್ ಹೊಸೈನ್ ಶಾಂಟೊ. ಬಾಂಗ್ಲಾದೇಶ್ ತಂಡದ 3ನೇ ವಿಕೆಟ್ ಪತನ. ಇದಾಗ್ಯೂ 278 ರನ್​ ಬಾರಿಸಿ ಸುಸ್ಥಿತಿಯಲ್ಲಿ ಬಾಂಗ್ಲಾದೇಶ್ ತಂಡ. ಕ್ರೀಸ್​ನಲ್ಲಿ ಮುಶ್ಫಿಕುರ್ ಹಾಗೂ ಶಕೀಬ್ ಅಲ್ ಹಸನ್ ಬ್ಯಾಟಿಂಗ್.

    BAN 278/3 (44.3)

      

  • 03 Sep 2023 06:13 PM (IST)

    BAN vs AFG Live Score: ಸೆಂಚುರಿ ಸಿಡಿಸಿದ ಎಡಗೈ ದಾಂಡಿಗ ಶಾಂಟೊ

    101 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ ಶತಕ ಪೂರೈಸಿದ ನಜ್ಮುಲ್ ಹೊಸೈನ್ ಶಾಂಟೊ. ಏಕದಿನ ಕ್ರಿಕೆಟ್​ನಲ್ಲಿ 2ನೇ ಸೆಂಚುರಿ ಬಾರಿಸಿದ ಶಾಂಟೊ. ಬೃಹತ್ ಮೊತ್ತದತ್ತ ಬಾಂಗ್ಲಾದೇಶ್. ಕ್ರೀಸ್​ನಲ್ಲಿ ನಜ್ಮುಲ್ ಶಾಂಟೊ ಹಾಗೂ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್.

    BAN 259/2 (42.4)

      

  • 03 Sep 2023 06:11 PM (IST)

    BAN vs AFG Live Score: ಮೆಹದಿ ಹಸನ್ ರಿಟೈರ್ಡ್​ ಹರ್ಟ್​

    ಮುಜೀಬ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಮೆಹದಿ ಹಸನ್. ಭರ್ಜರಿ ಹೊಡೆತದ ಬೆನ್ನಲ್ಲೇ ಬೆರಳಿಗೆ ಗಾಯ. ರಿಟೈರ್ಡ್ ಹರ್ಟ್​ ಆಗಿ ಮೈದಾನದ ತೊರೆದ ಮೆಹದಿ ಹಸನ್ ಮಿರಾಝ್.

    119 ಎಸೆತಗಳಲ್ಲಿ 112 ರನ್​ ಬಾರಿಸಿ ನಿರ್ಗಮಿಸಿದರ ಮೆಹದಿ ಹಸನ್.

    BAN 257/2 (42.1)

      

  • 03 Sep 2023 06:01 PM (IST)

    BAN vs AFG Live Score: ಭರ್ಜರಿ ಶತಕ ಸಿಡಿಸಿದ ಮೆಹದಿ ಹಸನ್

    115 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ ಶತಕ ಪೂರೈಸಿದ ಮೆಹದಿ ಹಸನ್ ಮಿರಾಝ್. ಈ ಪಂದ್ಯದಲ್ಲಿ ಆರಂಭಿಕನಾಗಿ ಭಡ್ತಿ ಪಡೆದಿದ್ದ ಮಿರಾಝ್, ಇದೀಗ ಭರ್ಜರಿ ಸೆಂಚುರಿ ಸಿಡಿಸಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ.

    BAN 234/2 (40.4)

      

  • 03 Sep 2023 05:49 PM (IST)

    BAN vs AFG Live Score: ಅಫ್ಘಾನಿಸ್ತಾನ್ ವಿರುದ್ಧ ಬಾಂಗ್ಲಾ ಹುಲಿಗಳ ಅಬ್ಬರ

    39 ಓವರ್​ಗಳ ಮುಕ್ತಾಯದ ವೇಳೆಗೆ 228 ರನ್​ ಕಲೆಹಾಕಿದ ಬಾಂಗ್ಲಾದೇಶ್. ನಜ್ಮುಲ್ ಶಾಂಟೊ (86) ಹಾಗೂ ಮೆಹದಿ ಹಸನ್ ಮಿರಾಝ್ (96) ಉತ್ತಮ ಬ್ಯಾಟಿಂಗ್. ವಿಕೆಟ್​ಗಾಗಿ ಅಫ್ಘಾನ್ ಬೌಲರ್​ಗಳ ಪರದಾಟ.

    2ನೇ ವಿಕೆಟ್​ಗೆ 165 ರನ್​ಗಳ ಜೊತೆಯಾಟವಾಡಿದ ಮೆಹದಿ ಹಸನ್-ನಜ್ಮುಲ್ ಶಾಂಟೊ

    BAN 228/2 (39)

      

  • 03 Sep 2023 04:56 PM (IST)

    BAN vs AFG Live Score: ಬಾಂಗ್ಲಾದೇಶ್ ತಂಡದ ಉತ್ತಮ ಬ್ಯಾಟಿಂಗ್

    27 ಓವರ್​ಗಳ ಮುಕ್ತಾಯದ ವೇಳೆಗೆ 147 ರನ್​ ಕಲೆಹಾಕಿದ ಬಾಂಗ್ಲಾದೇಶ್ ತಂಡ. ಕ್ರೀಸ್​ನಲ್ಲಿ ಮೆಹದಿ ಹಸನ್ ಮಿರಾಝ್ (63) ಹಾಗೂ ನಜ್ಮುಲ್ ಹೊಸೈನ್ ಶಾಂಟೊ (43) ಬ್ಯಾಟಿಂಗ್.

    3ನೇ ವಿಕೆಟ್​ಗೆ 85 ರನ್​ಗಳ ಜೊತೆಯಾಟವಾಡಿದ ಮೆಹದಿ ಹಸನ್ ಹಾಗೂ ನಜ್ಮುಲ್ ಶಾಂಟೊ.

    BAN 147/2 (27)

      

  • 03 Sep 2023 04:39 PM (IST)

    BAN vs AFG Live Score: ಅರ್ಧಶತಕ ಪೂರೈಸಿದ ಮೆಹದಿ ಹಸನ್

    65 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮೆಹದಿ ಹಸನ್ ಮಿರಾಝ್. ಈ ಪಂದ್ಯದ ಮೂಲಕ ಆರಂಭಿಕನಾಗಿ ಹೊಸ ಇನಿಂಗ್ಸ್​ ಆರಂಭಿಸಿರುವ ಮೆಹದಿ. ಮೊದಲ ಪಂದ್ಯದಲ್ಲೇ ಹಾಫ್ ಸೆಂಚುರಿ ಸಿಡಿಸಿ ಮಿಂಚಿದ ಬಾಂಗ್ಲಾ ತಂಡದ ಯುವ ಬ್ಯಾಟರ್. ಸದ್ಯ ಕ್ರೀಸ್​ನಲ್ಲಿ ಮೆಹದಿ ಹಸನ್ (50) ಹಾಗೂ ನಜ್ಮುಲ್ ಶಾಂಟೊ (34) ಬ್ಯಾಟಿಂಗ್.

    BAN 124/2 (23.1)

      

  • 03 Sep 2023 04:32 PM (IST)

    BAN vs AFG Live Score: ಮೆಹದಿ ಬ್ಯಾಟ್​ನಿಂದ ಮೊದಲ ಸಿಕ್ಸ್

    ಮೊಹಮ್ಮದ್ ನಬಿ ಎಸೆತದಲ್ಲಿ ಮುನ್ನುಗ್ಗಿ ಬಂದು ಭರ್ಜರಿ ಸಿಕ್ಸ್ ಸಿಡಿಸಿದ ಮೆಹದಿ ಹಸನ್. ಇದು ಈ ಪಂದ್ಯದ ಮೊದಲ ಸಿಕ್ಸ್​. ಕ್ರೀಸ್​ನಲ್ಲಿ ನಜ್ಮುಲ್ ಶಾಂಟೊ (31) ಹಾಗೂ ಮೆಹದಿ ಹಸನ್ (41) ಉತ್ತಮ ಬ್ಯಾಟಿಂಗ್.

    BAN 113/2 (21.2)

      

  • 03 Sep 2023 04:29 PM (IST)

    BAN vs AFG Live Score: ಶತಕ ಪೂರೈಸಿದ ಬಾಂಗ್ಲಾದೇಶ್

    • 20ನೇ ಓವರ್​ನಲ್ಲಿ ಶತಕ ಪೂರೈಸಿದ ಬಾಂಗ್ಲಾದೇಶ್ ತಂಡ.
    • ನಜ್ಮುಲ್ ಶಾಂಟೊ ಹಾಗೂ ಮೆಹದಿ ಹಸನ್ ಉತ್ತಮ ಬ್ಯಾಟಿಂಗ್
    • 3ನೇ ವಿಕೆಟ್​ಗೆ 41 ರನ್​ಗಳ ಜೊತೆಯಾಟ
    • ಮೊಹಮ್ಮದ್ ನಯಿಮ್ (28) ಹಾಗೂ ತೌಹಿದ್ ಹೃದೋಯ್ (0) ಔಟ್
    • ವಿಕೆಟ್​​ಗಾಗಿ ಹರಸಾಹಸ ಪಡುತ್ತಿರುವ ಸ್ಟಾರ್ ಸ್ಪಿನ್ನರ್​ಗಳಾದ ರಶೀದ್ ಖಾನ್ – ಮುಜೀಬ್ ಉರ್ ರೆಹಮಾನ್

    BAN 103/2 (20)

      

  • 03 Sep 2023 04:15 PM (IST)

    BAN vs AFG Live Score: 16 ಓವರ್​ಗಳ ಮುಕ್ತಾಯ: ಬಾಂಗ್ಲಾ ಉತ್ತಮ ಬ್ಯಾಟಿಂಗ್

    16 ಓವರ್​ಗಳ ಮುಕ್ತಾಯದ ವೇಳೆಗೆ 88 ರನ್​ ಕಲೆಹಾಕಿದ ಬಾಂಗ್ಲಾದೇಶ್. ಕ್ರೀಸ್​ನಲ್ಲಿ ನಜ್ಮುಲ್ ಶಾಂಟೊ (28) ಹಾಗೂ ಮೆಹದಿ ಹಸನ್ (19) ಬ್ಯಾಟಿಂಗ್. 2 ವಿಕೆಟ್ ಕಬಳಿಸಿದ ಅಫ್ಘಾನಿಸ್ತಾನ್.

    ಬಾಂಗ್ಲಾದೇಶ್ ತಂಡದ ಮೊಹಮ್ಮದ್ ನಯಿಮ್ (28) ಹಾಗೂ ತೌಹಿದ್ ಹೃದೋಯ್ (0) ಔಟ್.

    BAN 88/2 (16)

      

  • 03 Sep 2023 04:02 PM (IST)

    BAN vs AFG Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ: ಶಾಂಟೊ ಶಾಟ್

    ಗುಲ್ಬದ್ದೀನ್ ಎಸೆದ 13ನೇ ಓವರ್​ನ ಕೊನೆಯ ಎರಡು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ನಜ್ಮುಲ್ ಶಾಂಟೊ. ಮೊದಲ ಫೋರ್​ ಲಾಂಗ್​ ಆನ್​ನತ್ತ. 2ನೇ ಫೋರ್​ ಆಫ್​ಸೈಡ್​ನತ್ತ…2 ಬೌಂಡರಿಗಳೊಂದಿಗೆ ಬಾಂಗ್ಲಾದೇಶ್ ತಂಡದ ಮೊತ್ತ 77 ಕ್ಕೆ ಏರಿಕೆ. ಕ್ರೀಸ್​ನಲ್ಲಿ ನಜ್ಮುಲ್ ಶಾಂಟೊ ಹಾಗೂ ಮೆಹದಿ ಹಸನ್ ಬ್ಯಾಟಿಂಗ್.

    BAN 77/2 (13)

      

  • 03 Sep 2023 03:49 PM (IST)

    BAN vs AFG Live Score: ಬಾಂಗ್ಲಾದೇಶ್ 2ನೇ ವಿಕೆಟ್ ಪತನ

    ಗುಲ್ಬದ್ದೀನ್ ನೈಬ್ ಎಸೆತದಲ್ಲಿ ಸ್ಲಿಪ್​ನಲ್ಲಿ ಕ್ಯಾಚ್ ನೀಡಿದ ತೌಹಿದ್ ಹೃದೋಯ್ (0). ಸ್ಲಿಪ್​ನಲ್ಲಿ ಇಬ್ರಾಹಿಂ ಝದ್ರಾನ್ ಅತ್ಯುತ್ತಮ ಡೈವಿಂಗ್ ಕ್ಯಾಚ್. ಅಫ್ಗಾನಿಸ್ತಾನ್ ತಂಡಕ್ಕೆ ಬ್ಯಾಕ್ ಟು ಬ್ಯಾಕ್ ಯಶಸ್ಸು. ಕ್ರೀಸ್​ನಲ್ಲಿ ನಜ್ಮುಲ್ ಶಾಂಟೊ ಹಾಗೂ ಮೆಹದಿ ಹಸನ್ ಬ್ಯಾಟಿಂಗ್.

    BAN 63/2 (10.3)

      

  • 03 Sep 2023 03:44 PM (IST)

    BAN vs AFG Live Score: ಬಾಂಗ್ಲಾದೇಶ್ ತಂಡದ ಮೊದಲ ವಿಕೆಟ್ ಪತನ

    ಮುಜೀಬ್ ರೆಹಮಾನ್ ಎಸೆದ 10ನೇ ಓವರ್​ನ ಕೊನೆಯ ಎಸೆತದಲ್ಲಿ ಮೊಹಮ್ಮದ್ ನಯಿಮ್ ಕ್ಲೀನ್ ಬೌಲ್ಡ್​. 32 ಎಸೆತಗಳಲ್ಲಿ 28 ರನ್ ಬಾರಿಸಿ ಹೊರನಡೆದ ನಯಿಮ್. 10ನೇ ಓವರ್​ನಲ್ಲಿ ಮೊದಲ ಯಶಸ್ಸು ಪಡೆದ ಬಾಂಗ್ಲಾದೇಶ್ ತಂಡ. ಕ್ರೀಸ್​ನಲ್ಲಿ ಮೆಹದಿ ಹಸನ್ ಹಾಗೂ ತೌಹಿದ್ ಹೃದೋಯ್ ಬ್ಯಾಟಿಂಗ್.

    BAN 60/1 (10)

      

  • 03 Sep 2023 03:36 PM (IST)

    BAN vs AFG Live Score: ಅರ್ಧಶತಕ ಪೂರೈಸಿದ ಬಾಂಗ್ಲಾದೇಶ್

    8 ಓವರ್​ಗಳಲ್ಲಿ ಅರ್ಧಶತಕ ಪೂರೈಸಿದ ಬಾಂಗ್ಲಾದೇಶ್. ಮೊದಲ ಯಶಸ್ಸಿನ ಹುಡುಕಾಟದಲ್ಲಿ ಅಫ್ಘಾನಿಸ್ತಾನ್ ಬೌಲರ್​ಗಳು. ಅತ್ತ ಆರಂಭಿಕರಾದ ಮೊಹಮ್ಮದ್ ನಯಿಮ್ ಹಾಗೂ ಮೆಹದಿ ಹಸನ್ ಉತ್ತಮ ಬ್ಯಾಟಿಂಗ್.

    25 ಎಸೆತಗಳಲ್ಲಿ 24 ರನ್​ ಬಾರಿಸಿರುವ ನಯಿಮ್ ಹಾಗೂ 23 ಎಸೆತಗಳಲ್ಲಿ 16 ರನ್ ಕಲೆಹಾಕಿರುವ ಮೆಹದಿ ಹಸನ್​ರಿಂದ ಭರ್ಜರಿ ಬ್ಯಾಟಿಂಗ್.

    BAN 50/0 (8)

      

  • 03 Sep 2023 03:23 PM (IST)

    BAN vs AFG Live Score: 33 ರನ್ ಕಲೆಹಾಕಿದ ಬಾಂಗ್ಲಾದೇಶ್ ಆರಂಭಿಕರು

    ಮೊದಲ 5 ಓವರ್​ಗಳಲ್ಲಿ 33 ರನ್ ಬಾರಿಸಿದ ಬಾಂಗ್ಲಾದೇಶ್ ಆರಂಭಿಕ ಬ್ಯಾಟರ್​ಗಳು. 21 ಎಸೆತಗಳಲ್ಲಿ 22 ರನ್ ಬಾರಿಸಿದ ಮೊಹಮ್ಮದ್ ನಯಿಮ್. 12 ಎಸೆತಗಳಲ್ಲಿ 2 ರನ್​ ಕಲೆಹಾಕಲಷ್ಟೇ ಶಕ್ತರಾದ ಮೆಹದಿ ಹಸನ್. ಇದಾಗ್ಯೂ ಉತ್ತಮ ಆರಂಭ ಪಡೆಯುವಲ್ಲಿ ಬಾಂಗ್ಲಾದೇಶ್ ತಂಡ ಯಶಸ್ವಿ.

    BAN 33/0 (5)

      

  • 03 Sep 2023 03:15 PM (IST)

    BAN vs AFG Live Score: 3 ಓವರ್ ಮುಕ್ತಾಯ: ಬಾಂಗ್ಲಾ ಉತ್ತಮ ಬ್ಯಾಟಿಂಗ್

    ಮೊದಲ 3 ಓವರ್​ಗಳಲ್ಲೇ 30 ರನ್ ಬಾರಿಸಿದ ಬಾಂಗ್ಲಾದೇಶ್ ತಂಡದ ಆರಂಭಿಕರು. ಮೊಹಮ್ಮದ್ ನಯಿಮ್ ಹಾಗೂ ಮೆಹದಿ ಹಸನ್​ರಿಂದ ಬಾಂಗ್ಲಾ ತಂಡಕ್ಕೆ ಉತ್ತಮ ಆರಂಭ. 2 ಓವರ್​ಗಳಲ್ಲಿ 22 ರನ್ ನೀಡಿದ ಅಫ್ಘಾನಿಸ್ತಾನ್ ಎಡಗೈ ವೇಗಿ ಫಝಲ್ಹಕ್ ಫಾರೂಖಿ.

    BAN 30/0 (3)

      

  • 03 Sep 2023 03:08 PM (IST)

    BAN vs AFG Live Score: ಬಾಂಗ್ಲಾದೇಶ್ ತಂಡದ ಭರ್ಜರಿ ಆರಂಭ

    ಫಝಲ್ಹಕ್ ಫಾರೂಖಿ ಎಸೆದ ಮೊದಲ ಓವರ್​ನಲ್ಲೇ 14 ರನ್​ ಕಲೆಹಾಕಿದ ಬಾಂಗ್ಲಾದೇಶ್ ಬ್ಯಾಟರ್​ಗಳು. ಈ ಓವರ್​ನಲ್ಲಿ 2 ಫೋರ್ ಬಾರಿಸಿದ ಮೊಹಮ್ಮದ್ ನಯೀಮ್. ಮತ್ತೊಂದು ವೈಡ್+4.

    ಮೊದಲ ಓವರ್​ನಲ್ಲಿ 14 ರನ್​ ಬಾರಿಸಿ ಶುಭಾರಂಭ ಮಾಡಿದ ಬಾಂಗ್ಲಾ ಆರಂಭಿಕರು. ಕ್ರೀಸ್​ನಲ್ಲಿ ಮೆಹದಿ ಹಸನ್ ಹಾಗೂ ಮೊಹಮ್ಮದ್ ನಯಿಮ್ ಬ್ಯಾಟಿಂಗ್.

    BAN 14/0 (1)

      

  • 03 Sep 2023 03:04 PM (IST)

    BAN vs AFG Live Score: ಬೌಂಡರಿಯೊಂದಿಗೆ ಶುಭಾರಂಭ ಮಾಡಿದ ಬಾಂಗ್ಲಾದೇಶ್

    ಫಝಲ್ಹಕ್ ಫಾರೂಖಿಯ ಮೊದಲ ಓವರ್​ನ 2ನೇ ಎಸೆತದಲ್ಲಿ ಫೋರ್ ಬಾರಿಸಿದ ಮೊಹಮ್ಮದ್ ನಯಿಮ್. ಬೌಂಡರಿಯೊಂದಿಗೆ ಖಾತೆ ತೆರೆದ ಬಾಂಗ್ಲಾದೇಶ್ ತಂಡ. ಕ್ರೀಸ್​ನಲ್ಲಿ ಮೊಹಮ್ಮದ್ ನಯಿಮ್ ಹಾಗೂ ಮೆಹದಿ ಹಸನ್ ಬ್ಯಾಟಿಂಗ್.

    BAN 4/0 (0.2)

      

  • 03 Sep 2023 02:48 PM (IST)

    BAN vs AFG Live Score: ಬಾಂಗ್ಲಾದೇಶ್ ತಂಡದ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಬಾಂಗ್ಲಾದೇಶ್ (ಪ್ಲೇಯಿಂಗ್ XI): ಮೊಹಮ್ಮದ್ ನಯಿಮ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ತೌಹಿದ್ ಹೃದೋಯ್, ಶಮೀಮ್ ಹೊಸೈನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಹಸನ್ ಮಹಮ್ಮದ್

  • 03 Sep 2023 02:40 PM (IST)

    BAN vs AFG Live Score: ಅಫ್ಘಾನಿಸ್ತಾನ್ ತಂಡದ ಪ್ಲೇಯಿಂಗ್ ಇಲೆವೆನ್ ಹೀಗಿದೆ

    ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರೀಂ ಜನತ್, ರಶೀದ್ ಖಾನ್, ಫಝಲ್ಹಕ್ ಫಾರೂಕಿ, ಮುಜೀಬ್ ಉರ್ ರೆಹಮಾನ್.

  • 03 Sep 2023 02:35 PM (IST)

    BAN vs AFG Live Score: ಬಾಂಗ್ಲಾದೇಶ್ ತಂಡ ಮೊದಲು ಬ್ಯಾಟಿಂಗ್

    ಈ ಪಂದ್ಯದಲ್ಲಿ ಟಾಸ್ ಜಯಿಸಿರುವ ಬಾಂಗ್ಲಾದೇಶ್ ತಂಡವು ಮೊದಲು ಬ್ಯಾಟ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ.

  • 03 Sep 2023 02:32 PM (IST)

    BAN vs AFG Live Score: ಟಾಸ್ ಗೆದ್ದ ಬಾಂಗ್ಲಾದೇಶ್

    ಲಾಹೋರ್​ನ ಗಡಾಫಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ  ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಅಫ್ಘಾನಿಸ್ತಾನ್ ತಂಡ ಮೊದಲು ಬೌಲಿಂಗ್ ಮಾಡಲಿದೆ.

  • 03 Sep 2023 02:23 PM (IST)

    BAN vs AFG Live Score: ಬಾಂಗ್ಲಾದೇಶ್ ತಂಡಕ್ಕೆ ಅಫ್ಘಾನಿಸ್ತಾನ್ ಸವಾಲು

    ಏಷ್ಯಾಕಪ್​ನ ನಾಲ್ಕನೇ ಪಂದ್ಯದಲ್ಲಿ ಬಾಂಗ್ಲಾದೇಶ್ ಹಾಗೂ ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಲಾಹೋರ್​ನ ಗಡಾಫಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಬಾಂಗ್ಲಾ ತಂಡದ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಪಂದ್ಯದಲ್ಲಿ ಸೋತರೆ ಬಾಂಗ್ಲಾದೇಶ್ ಸೂಪರ್-4 ಹಂತದ ರೇಸ್​ನಿಂದ ಹೊರಬೀಳಲಿದೆ.

  • Published On - Sep 03,2023 2:21 PM

    Follow us
    ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
    ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
    ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
    ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
    ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
    ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
    2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
    2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
    ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
    ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
    ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
    ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
    ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
    ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
    ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
    ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
    ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
    ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
    ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
    ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ