ಸಾವಿನ ವದಂತಿಯಿಂದ ಸುದ್ದಿಯಾಗಿದ್ದ ಜಿಂಬಾಬ್ವೆ ಕ್ರಿಕೆಟಿಗ ಹೀತ್ ಸ್ಟ್ರೀಕ್ ನಿಧನ; ಖಚಿತ ಪಡಿಸಿದ ಕುಟುಂಬ
Heath Streak: ಕೆಲವು ದಿನಗಳ ಹಿಂದೆ ಸಾವನ್ನಪ್ಪಿದ್ದಾರೆ ಎಂಬ ವದಂತಿಯಿಂದ ಸಾಕಷ್ಟು ಸುದ್ದಿಯಾಗಿದ್ದ ಜಿಂಬಾಬ್ವೆ ತಂಡದ ಮಾಜಿ ಕ್ರಿಕೆಟಿಗ ಹೀತ್ ಸ್ಟ್ರೀಕ್ ಇಂದು ಅಂದರೆ ಸೆಪ್ಟೆಂಬರ್ 3 ರ ಮುಂಜಾನೆಯಂದು ಇಹಲೋಕ ತ್ಯಜಿಸಿದ್ದಾರೆ. ಈ ವಿಚಾರವನ್ನು ಸ್ವತಃ ಹೀತ್ ಸ್ಟ್ರೀಕ್ ಅವರ ಕುಟುಂಬ ಸದಸ್ಯರು ಖಚಿತಪಡಿಸಿದ್ದಾರೆ.
ಕೆಲವು ದಿನಗಳ ಹಿಂದೆ, ಸಾವನ್ನಪ್ಪಿದ್ದಾರೆ ಎಂಬ ವದಂತಿಯಿಂದ ಸಾಕಷ್ಟು ಸುದ್ದಿಯಾಗಿದ್ದ ಜಿಂಬಾಬ್ವೆ ತಂಡದ ಮಾಜಿ ಕ್ರಿಕೆಟಿಗ (Former Zimbabwe cricketer) ಹೀತ್ ಸ್ಟ್ರೀಕ್ (Heath Streak) ಇಂದು ಅಂದರೆ ಸೆಪ್ಟೆಂಬರ್ 3 ರ ಮುಂಜಾನೆಯಂದು ಇಹಲೋಕ ತ್ಯಜಿಸಿದ್ದಾರೆ. ಈ ವಿಚಾರವನ್ನು ಸ್ವತಃ ಹೀತ್ ಸ್ಟ್ರೀಕ್ ಅವರ ಕುಟುಂಬ ಸದಸ್ಯರು ಖಚಿತಪಡಿಸಿದ್ದಾರೆ. ವಾಸ್ತವವಾಗಿ ಆಗಸ್ಟ್ 23 ರ ಮುಂಜಾನೆಯಂದು, ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಹಾಗೂ ಹೀತ್ ಸ್ಟ್ರೀಕ್ ಆಪ್ತ ಹೆನ್ರಿ ಒಲಂಗಾ ತಮ್ಮ ಟ್ವಿಟರ್ನಲ್ಲಿ, ಮಂಗಳವಾರ ತಡರಾತ್ರಿ ಸ್ಟ್ರೀಕ್ ನಿಧನರಾಗಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಆ ಬಳಿಕ ಸ್ಟ್ರೀಕ್ ನಿಧನದ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆ ಬಳಿಕ ತಮ್ಮ ಸಾವಿನ ಬಗ್ಗೆ ಎದ್ದಿರುವ ವದಂತಿಯ ಬಗ್ಗೆ ಮಾಹಿತಿ ನೀಡಿದ ಸ್ಟ್ರೀಕ್, ನಾನು ಇನ್ನು ಜೀವಂತವಾಗಿದ್ದೇನೆ ಮತ್ತು ಆರೋಗ್ಯವಾಗಿದ್ದೇನೆ ಎಂದು ಹೇಳಿಕೊಂಡಿದ್ದರು.
ಬಹಳ ದಿನಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಹೀತ್ ಸ್ಟ್ರೀಕ್ ಇದೀಗ ನಿಜವಾಗಿಯೂ ಸಾವನ್ನಪ್ಪಿದ್ದು, ಈ ಮಾಹಿತಿಯನ್ನು ಸ್ವತಃ ಅವರ ಮಡದಿ ಖಚಿತ ಪಡಿಸಿದ್ದಾರೆ. ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ಹೀತ್ ಸ್ಟ್ರೀಕ್ ಅವರ ಪತ್ನಿ ನಾಡಿನ್, “ಈ ಮುಂಜಾನೆ, ಭಾನುವಾರ, ಸೆಪ್ಟೆಂಬರ್ 3, 2023 ರಂದು, ನನ್ನ ಜೀವನದ ಅತ್ಯಂತ ದೊಡ್ಡ ಪ್ರೀತಿ ಮತ್ತು ನನ್ನ ಸುಂದರ ಮಕ್ಕಳ ತಂದೆ, ದೇವತೆಗಳೊಂದಿಗೆ ಇರಲು ಇಹಲೋಕ ತ್ಯಜಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.
‘ನಾನಿನ್ನೂ ಜೀವಂತವಾಗಿದ್ದೇನೆ’: ಸಾವಿನ ಸುದ್ದಿ ಸುಳ್ಳು ಎಂದ ಹೀತ್ ಸ್ಟ್ರೀಕ್
ಹೀತ್ ಸ್ಟ್ರೀಕ್ ವೃತ್ತಿ ಜೀವನ
ಜಿಂಬಾಬ್ವೆ ಪರ 65 ಟೆಸ್ಟ್ ಮತ್ತು 189 ಏಕದಿನ ಪಂದ್ಯಗಳನ್ನಾಡಿದ್ದ ಹೀತ್ ಸ್ಟ್ರೀಕ್, ಕ್ರಮವಾಗಿ 1990 ಮತ್ತು 2943 ರನ್ ಕಲೆಹಾಕಿದ್ದರು. ಆದರೆ, ಬೌಲಿಂಗ್ನಲ್ಲಿ ತಮ್ಮ ಪರಾಕ್ರಮ ತೊರಿದ್ದ ಹೀತ್ ಸ್ಟ್ರೀಕ್, ಟೆಸ್ಟ್ ಕ್ರಿಕೆಟ್‌ನಲ್ಲಿ 216 ಮತ್ತು ಏಕದಿನದಲ್ಲಿ 239 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರೊಂದಿಗೆ ಎರಡೂ ಮಾದರಿಗಳಲ್ಲಿ ಜಿಂಬಾಬ್ವೆ ಪರ ಅತಿ ಹೆಚ್ಚು ವಿಕೆಟ್ ಪಡೆದ ಸಾರ್ವಕಾಲಿಕ ಬೌಲರ್ ಎಂಬ ದಾಖಲೆ ಬರೆದಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:51 am, Sun, 3 September 23