ಏಷ್ಯಾಕಪ್ನ 4ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ದ ಬಾಂಗ್ಲಾದೇಶ್ ತಂಡವು ಅಮೋಘ ಗೆಲುವು ದಾಖಲಿಸಿದೆ. ಲಾಹೋರ್ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ಪರ ಮೆಹದಿ ಹಸನ್ ಮಿರಾಝ್ (112) ಹಾಗೂ ನಜ್ಮುಲ್ ಹೊಸೈನ್ ಶಾಂಟೊ (105) ಭರ್ಜರಿ ಶತಕ ಸಿಡಿಸಿದ್ದರು. ಈ ಭರ್ಜರಿ ಶತಕಗಳ ನೆರವಿನಿಂದ ಬಾಂಗ್ಲಾದೇಶ್ ತಂಡವು ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 334 ರನ್ ಕಲೆಹಾಕಿತು.
335 ರನ್ಗಳ ಕಠಿಣ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ್ ಪರ ಇಬ್ರಾಹಿಂ ಝದ್ರಾನ್ 75 ರನ್ ಬಾರಿಸಿದರು. ಆದರೆ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 44.3 ಓವರ್ಗಳಲ್ಲಿ 245 ರನ್ಗಳಿಗೆ ಆಲೌಟ್ ಆಗುವ ಮುಲಕ ಅಫ್ಘಾನಿಸ್ತಾನ್ ತಂಡ ಸೋಲೊಪ್ಪಿಕೊಂಡಿತು. ಇತ್ತ 89 ರನ್ಗಳ ಭರ್ಜರಿ ಜಯದೊಂದಿಗೆ ಬಾಂಗ್ಲಾದೇಶ್ ತಂಡವು ಸೂಪರ್-4 ಹಂತಕ್ಕೇರುವ ಕನಸನ್ನು ಜೀವಂತವಿರಿಸಿಕೊಂಡಿದೆ
ಬಾಂಗ್ಲಾದೇಶ್ ತಂಡ: ಶಕೀಬ್ ಅಲ್ ಹಸನ್ (ನಾಯಕ) , ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್) , ಮೊಹಮ್ಮದ್ ನಯಿಮ್ , ತಂಝಿದ್ ಹಸನ್ , ನಜ್ಮುಲ್ ಹೊಸೈನ್ ಶಾಂಟೋ , ತೌಹಿದ್ ಹೃದೊಯ್ , ಮೆಹಿದಿ ಹಸನ್ ಮಿರಾಜ್ , ಮುಸ್ತಫಿಜುರ್ ರೆಹಮಾನ್, ಮಹೇದಿ ಹಸನ್ , ತಸ್ಕಿನ್ ಅಹ್ಮದ್ , ಶೋರಿಫುಲ್ ಇಸ್ಲಾಂ, ನಸುಮ್ ಅಹ್ಮದ್, ಅನಾಮುಲ್ ಹಕ್, ತಂಝುಮ್ ಹಸನ್, ಶಮೀಮ್ ಹುಸೈನ್, ಆಫಿಫ್ ಹುಸೈನ್.
ಅಫ್ಘಾನಿಸ್ತಾನ್ ತಂಡ: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ಹಶ್ಮತುಲ್ಲಾ ಶಾಹಿದಿ (ನಾಯಕ) , ಇಬ್ರಾಹಿಂ ಝದ್ರಾನ್ , ರಹಮತ್ ಷಾ , ಗುಲ್ಬದಿನ್ ನೈಬ್ , ರಿಯಾಜ್ ಹಸನ್ , ಮೊಹಮ್ಮದ್ ನಬಿ , ಇಕ್ರಮ್ ಅಲಿಖಿಲ್ , ರಶೀದ್ ಖಾನ್ , ಅಬ್ದುಲ್ ರಹಮಾನ್ , ನಜೀಬುಲ್ಲಾಹ್ ಝದ್ರಾನ್ , ಮುಜೀಬ್ ಉರ್ ರೆಹಮಾನ್, ಫಝಲ್ಹಕ್ ಫಾರೂಖಿ, ಸರ್ಫುದ್ದೀನ್ ಅಶ್ರಫ್, ಕರೀಂ ಜನತ್ , ನೂರ್ ಅಹ್ಮದ್ , ಸುಲಿಮಾನ್ ಸಫಿ.
ಅಫ್ಘಾನಿಸ್ತಾನ್ ವಿರುದ್ಧ ಬಾಂಗ್ಲಾದೇಶ್ ತಂಡಕ್ಕೆ 89 ರನ್ಗಳ ಭರ್ಜರಿ ಜಯ
8.3 ಓವರ್ಗಳಲ್ಲಿ 44 ರನ್ ನೀಡಿ 4 ವಿಕೆಟ್ ಕಬಳಿಸಿದ ಬಾಂಗ್ಲಾ ವೇಗಿ ತಸ್ಕಿನ್ ಅಹ್ಮದ್.
ಎಡಗೈ ವೇಗಿ ಶೋರಿಫುಲ್ ಇಸ್ಲಾಂಗೆ 3 ವಿಕೆಟ್.
ಅಫ್ಘಾನಿಸ್ತಾನ್ ಪರ ಇಬ್ರಾಹಿಂ ಝದ್ರಾನ್ (75) ಟಾಪ್ ಸ್ಕೋರರ್.
42 ಓವರ್ಗಳ ಮುಕ್ತಾಯದ ವೇಳೆಗೆ 8 ವಿಕೆಟ್ ಕಳೆದುಕೊಂಡು 231 ರನ್ ಕಲೆಹಾಕಿದ ಅಫ್ಘಾನಿಸ್ತಾನ್. ಕೇವಲ ಬಾಂಗ್ಲಾದೇಶ್ ತಂಡದ ಜಯಕ್ಕೆ ಕೇವಲ 2 ವಿಕೆಟ್ಗಳ ಅಗತ್ಯತೆ. ಗೆಲ್ಲಲು ಅಫ್ಗಾನ್ ತಂಡಕ್ಕೆ 102 ರನ್ಗಳ ಅವಶ್ಯಕತೆ.
ಮೆಹದಿ ಹಸನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದ ನಜೀಬುಲ್ಲಾ ಝದ್ರಾನ್. 25 ಎಸೆತಗಳಲ್ಲಿ 17 ರನ್ಗಳಿಸಿ ಔಟಾದ ನಜೀಬ್. ಕ್ರೀಸ್ನಲ್ಲಿ ಶಾಹಿದಿ ಹಾಗೂ ಮೊಹಮ್ಮದ್ ನಬಿ ಬ್ಯಾಟಿಂಗ್.
ಅಫ್ಘಾನಿಸ್ತಾನ್ ತಂಡಕ್ಕೆ ಗೆಲ್ಲಲು 143 ರನ್ಗಳ ಅವಶ್ಯಕತೆ.
ಅಫ್ಘಾನಿಸ್ತಾನ್ ತಂಡಕ್ಕೆ ಕೊನೆಯ 90 ಎಸೆತಗಳಲ್ಲಿ 146 ರನ್ಗಳ ಅವಶ್ಯಕತೆ. ಕ್ರೀಸ್ನಲ್ಲಿ ಶಾಹಿದಿ ಹಾಗೂ ನಜೀಬುಲ್ಲಾ ಬ್ಯಾಟಿಂಗ್.
ಬಾಂಗ್ಲಾದೇಶ್ ತಂಡಕ್ಕೆ ಗೆಲ್ಲಲು 7 ವಿಕೆಟ್ಗಳ ಅಗತ್ಯತೆ. ಕುತೂಹಲಘಟ್ಟದತ್ತ ಸಾಗುತ್ತಿರುವ ಪಂದ್ಯ.
ಶಮೀಮ್ ಎಸೆದ 33ನೇ ಓವರ್ನಲ್ಲಿ ಎರಡು ಬೌಂಡರಿ ಬಾರಿಸಿದ ಶಾಹಿದಿ. ಈ ಫೋರ್ಗಳೊಂದಿಗೆ ತಂಡದ ಮೊತ್ತ 170 ಕ್ಕೆ ಏರಿಕೆ. ಗೆಲುವಿಗಾಗಿ ಮುಂದುವರೆದ ಅಫ್ಘಾನ್ ಬ್ಯಾಟರ್ಗಳ ಹೋರಾಟ. ಕ್ರೀಸ್ನಲ್ಲಿ ನಜೀಬುಲ್ಲಾ ಝದ್ರಾನ್ ಹಾಗೂ ಶಾಹಿದಿ ಬ್ಯಾಟಿಂಗ್.
ಹಸನ್ ಮಹಮೂದ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದ ಇಬ್ರಾಹಿಂ ಝದ್ರಾನ್.
74 ಎಸೆತಗಳಲ್ಲಿ 75 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಆರಂಭಿಕ ಆಟಗಾರ ಇಬ್ರಾಹಿಂ ಝದ್ರಾನ್.
ಕ್ರೀಸ್ನಲ್ಲಿ ಶಾಹಿದಿ ಹಾಗೂ ನಜೀಬುಲ್ಲಾ ಝದ್ರಾನ್ ಬ್ಯಾಟಿಂಗ್.
ಮಿರಾಝ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಇಬ್ರಾಹಿಂ ಝದ್ರಾನ್. ಆಕ್ರಮಣಕಾರಿ ಆಟಕ್ಕೆ ಮುಂದಾದ ಅಫ್ಘಾನಿಸ್ತಾನ್ ತಂಡ. ಕ್ರೀಸ್ನಲ್ಲಿ ಶಾಹಿದಿ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್
25 ಓವರ್ಗಳ ಮುಕ್ತಾಯದ ವೇಳೆ 110 ರನ್ ಕಲೆಹಾಕಿದ ಅಫ್ಘಾನಿಸ್ತಾನ್ ತಂಡ. ಕ್ರೀಸ್ನಲ್ಲಿ ಇಬ್ರಾಹಿಂ ಝದ್ರಾನ್ (61) ಹಾಗೂ ಶಾಹಿದಿ (14) ಬ್ಯಾಟಿಂಗ್. ಇನ್ನು 25 ಓವರ್ಗಳಲ್ಲಿ 225 ರನ್ಗಳ ಅವಶ್ಯಕತೆ. ಬಾಂಗ್ಲಾದೇಶ್ ತಂಡಕ್ಕೆ ಗೆಲ್ಲಲು 8 ವಿಕೆಟ್ಗಳ ಅಗತ್ಯತೆ.
52 ಎಸೆತಗಳಲ್ಲಿ 8 ಫೋರ್ಗಳೊಂದಿಗೆ ಅರ್ಧಶತಕ ಪೂರೈಸಿದ ಇಬ್ರಾಹಿಂ ಝದ್ರಾನ್. ಆರಂಭಿಕನಾಗಿ ಕಣಕ್ಕಿಳಿದು ಅಫ್ಘಾನ್ ತಂಡಕ್ಕೆ ಆಸರೆಯಾಗಿ ನಿಂತ ಝದ್ರಾನ್. ಕ್ರೀಸ್ನಲ್ಲಿ ನಾಯಕ ಹಶ್ಮುತುಲ್ಲಾ ಶಾಹಿದಿ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
ತಸ್ಕಿನ್ ಅಹ್ಮದ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ರಹಮತ್ ಶಾ. 57 ಎಸೆತಗಳಲ್ಲಿ 33 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅಫ್ಘಾನ್ ಬ್ಯಾಟರ್. ಬಾಂಗ್ಲಾದೇಶ್ ತಂಡಕ್ಕೆ 2ನೇ ಯಶಸ್ಸು.
ಕ್ರೀಸ್ನಲ್ಲಿ ಇಬ್ರಾಹಿಂ ಝದ್ರಾನ್ ಹಾಗೂ ಹಶ್ಮತುಲ್ಲಾ ಶಾಹಿದಿ ಬ್ಯಾಟಿಂಗ್.
ಶಕೀಬ್ ಅಲ್ ಹಸನ್ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಫೋರ್ ಬಾರಿಸಿದ ರಹಮತ್ ಶಾ. 14 ಓವರ್ ಮುಕ್ತಾಯದ ವೇಳೆ 61 ರನ್ ಕಲೆಹಾಕಿದ ಬಾಂಗ್ಲಾದೇಶ್. ಕ್ರೀಸ್ನಲ್ಲಿ ಇಬ್ರಾಹಿಂ ಝದ್ರಾನ್ (34) ಹಾಗೂ ರಹಮತ್ ಶಾ (26) ಬ್ಯಾಟಿಂಗ್.
ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬಾಂಗ್ಲಾದೇಶ್. ಮೊದಲ 8 ಓವರ್ಗಳಲ್ಲಿ ನೀಡಿರುವುದು ಕೇವಲ 23 ರನ್ಗಳು ಮಾತ್ರ. ಅತ್ತ ರನ್ಗಳಿಸಲು ಪರದಾಡುತ್ತಿರುವ ಇಬ್ರಾಹಿಂ ಝದ್ರಾನ್ (15) ಹಾಗೂ ರಹಮತ್ ಶಾ (7).
ತಸ್ಕಿನ್ ಅಹ್ಮದ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಇಬ್ರಾಹಿಂ ಝದ್ರಾನ್. ಆಫ್ ಸೈಡ್ನತ್ತ ಎರಡು ಫೋರ್ಗಳನ್ನು ಬಾರಿಸಿದ ಇಬ್ರಾಹಿಂ. ಕ್ರೀಸ್ನಲ್ಲಿ ರಹಮತ್ ಶಾ ಹಾಗೂ ಇಬ್ರಾಹಿಂ ಝದ್ರಾನ್ ಬ್ಯಾಟಿಂಗ್.
ಶೊರಿಫುಲ್ ಇಸ್ಲಾಂ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ರಹಮಾನುಲ್ಲಾ ಗುರ್ಬಾಝ್ (1). 2ನೇ ಓವರ್ನಲ್ಲೇ ಬಾಂಗ್ಲಾದೇಶ್ ತಂಡಕ್ಕೆ ಮೊದಲ ಯಶಸ್ಸು. ಕ್ರೀಸ್ನಲ್ಲಿ ಇಬ್ರಾಹಿಂ ಝದ್ರಾನ್ ಹಾಗೂ ರಹಮತ್ ಶಾ ಬ್ಯಾಟಿಂಗ್.
ಬಾಂಗ್ಲಾದೇಶ್ ತಂಡದ ಇನಿಂಗ್ಸ್ ಅಂತ್ಯ. 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 334 ರನ್ ಪೇರಿಸಿದ ಬಾಂಗ್ಲಾ ತಂಡ. ಭರ್ಜರಿ ಶತಕ ಸಿಡಿಸಿದ ಮೆಹದಿ ಹಸನ್ ಮಿರಾಝ್ (112) ಹಾಗೂ ನಜ್ಮುಲ್ ಹೊಸೈನ್ ಶಾಂಟೊ (105).
ಅಫ್ಘಾನಿಸ್ತಾನ್ ತಂಡಕ್ಕೆ ಗೆಲ್ಲಲು 335 ರನ್ಗಳ ಕಠಿಣ ಗುರಿ.
49ನೇ ಓವರ್ನಲ್ಲಿ ನೈಬ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಶಕೀಬ್ ಅಲ್ ಹಸನ್. ಬಾಂಗ್ಲಾ ಬ್ಯಾಟರ್ಗಳ ಅಬ್ಬರಕ್ಕೆ ತತ್ತರಿಸಿದ ಅಫ್ಗಾನ್ ಬೌಲರ್ಗಳು. ಬೃಹತ್ ಮೊತ್ತದತ್ತ ಬಾಂಗ್ಲಾದೇಶ್ ತಂಡ.
ಶಕೀಬ್ ಅಲ್ ಹಸನ್ ಕರೆಗೆ ಓಡಿದ ಮುಶ್ಪಿಕುರ್ ರಹೀಮ್. ಅರ್ಧದಲ್ಲಿ ಮನಸ್ಸು ಬದಲಿಸಿ ಶಕೀಬ್..ಮರಳಿ ಕ್ರೀಸ್ಗೆ ಸೇರುವ ಮುನ್ನ ನಾನ್ ಸ್ಟೈಕ್ನಲ್ಲಿ ರನೌಟ್ ಆದ ಮುಶ್ಫಿಕುರ್ ರಹೀಮ್ (15). ಬಾಂಗ್ಲಾದೇಶ್ ತಂಡದ 4ನೇ ವಿಕೆಟ್ ಪತನ.
105 ಎಸೆತಗಳಲ್ಲಿ 104 ರನ್ ಬಾರಿಸಿ ರನೌಟ್ ಆಗಿ ನಿರ್ಗಮಿಸಿದ ನಜ್ಮುಲ್ ಹೊಸೈನ್ ಶಾಂಟೊ. ಬಾಂಗ್ಲಾದೇಶ್ ತಂಡದ 3ನೇ ವಿಕೆಟ್ ಪತನ. ಇದಾಗ್ಯೂ 278 ರನ್ ಬಾರಿಸಿ ಸುಸ್ಥಿತಿಯಲ್ಲಿ ಬಾಂಗ್ಲಾದೇಶ್ ತಂಡ. ಕ್ರೀಸ್ನಲ್ಲಿ ಮುಶ್ಫಿಕುರ್ ಹಾಗೂ ಶಕೀಬ್ ಅಲ್ ಹಸನ್ ಬ್ಯಾಟಿಂಗ್.
101 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಶತಕ ಪೂರೈಸಿದ ನಜ್ಮುಲ್ ಹೊಸೈನ್ ಶಾಂಟೊ. ಏಕದಿನ ಕ್ರಿಕೆಟ್ನಲ್ಲಿ 2ನೇ ಸೆಂಚುರಿ ಬಾರಿಸಿದ ಶಾಂಟೊ. ಬೃಹತ್ ಮೊತ್ತದತ್ತ ಬಾಂಗ್ಲಾದೇಶ್. ಕ್ರೀಸ್ನಲ್ಲಿ ನಜ್ಮುಲ್ ಶಾಂಟೊ ಹಾಗೂ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್.
ಮುಜೀಬ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಮೆಹದಿ ಹಸನ್. ಭರ್ಜರಿ ಹೊಡೆತದ ಬೆನ್ನಲ್ಲೇ ಬೆರಳಿಗೆ ಗಾಯ. ರಿಟೈರ್ಡ್ ಹರ್ಟ್ ಆಗಿ ಮೈದಾನದ ತೊರೆದ ಮೆಹದಿ ಹಸನ್ ಮಿರಾಝ್.
119 ಎಸೆತಗಳಲ್ಲಿ 112 ರನ್ ಬಾರಿಸಿ ನಿರ್ಗಮಿಸಿದರ ಮೆಹದಿ ಹಸನ್.
115 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಶತಕ ಪೂರೈಸಿದ ಮೆಹದಿ ಹಸನ್ ಮಿರಾಝ್. ಈ ಪಂದ್ಯದಲ್ಲಿ ಆರಂಭಿಕನಾಗಿ ಭಡ್ತಿ ಪಡೆದಿದ್ದ ಮಿರಾಝ್, ಇದೀಗ ಭರ್ಜರಿ ಸೆಂಚುರಿ ಸಿಡಿಸಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ.
39 ಓವರ್ಗಳ ಮುಕ್ತಾಯದ ವೇಳೆಗೆ 228 ರನ್ ಕಲೆಹಾಕಿದ ಬಾಂಗ್ಲಾದೇಶ್. ನಜ್ಮುಲ್ ಶಾಂಟೊ (86) ಹಾಗೂ ಮೆಹದಿ ಹಸನ್ ಮಿರಾಝ್ (96) ಉತ್ತಮ ಬ್ಯಾಟಿಂಗ್. ವಿಕೆಟ್ಗಾಗಿ ಅಫ್ಘಾನ್ ಬೌಲರ್ಗಳ ಪರದಾಟ.
2ನೇ ವಿಕೆಟ್ಗೆ 165 ರನ್ಗಳ ಜೊತೆಯಾಟವಾಡಿದ ಮೆಹದಿ ಹಸನ್-ನಜ್ಮುಲ್ ಶಾಂಟೊ
27 ಓವರ್ಗಳ ಮುಕ್ತಾಯದ ವೇಳೆಗೆ 147 ರನ್ ಕಲೆಹಾಕಿದ ಬಾಂಗ್ಲಾದೇಶ್ ತಂಡ. ಕ್ರೀಸ್ನಲ್ಲಿ ಮೆಹದಿ ಹಸನ್ ಮಿರಾಝ್ (63) ಹಾಗೂ ನಜ್ಮುಲ್ ಹೊಸೈನ್ ಶಾಂಟೊ (43) ಬ್ಯಾಟಿಂಗ್.
3ನೇ ವಿಕೆಟ್ಗೆ 85 ರನ್ಗಳ ಜೊತೆಯಾಟವಾಡಿದ ಮೆಹದಿ ಹಸನ್ ಹಾಗೂ ನಜ್ಮುಲ್ ಶಾಂಟೊ.
65 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮೆಹದಿ ಹಸನ್ ಮಿರಾಝ್. ಈ ಪಂದ್ಯದ ಮೂಲಕ ಆರಂಭಿಕನಾಗಿ ಹೊಸ ಇನಿಂಗ್ಸ್ ಆರಂಭಿಸಿರುವ ಮೆಹದಿ. ಮೊದಲ ಪಂದ್ಯದಲ್ಲೇ ಹಾಫ್ ಸೆಂಚುರಿ ಸಿಡಿಸಿ ಮಿಂಚಿದ ಬಾಂಗ್ಲಾ ತಂಡದ ಯುವ ಬ್ಯಾಟರ್. ಸದ್ಯ ಕ್ರೀಸ್ನಲ್ಲಿ ಮೆಹದಿ ಹಸನ್ (50) ಹಾಗೂ ನಜ್ಮುಲ್ ಶಾಂಟೊ (34) ಬ್ಯಾಟಿಂಗ್.
ಮೊಹಮ್ಮದ್ ನಬಿ ಎಸೆತದಲ್ಲಿ ಮುನ್ನುಗ್ಗಿ ಬಂದು ಭರ್ಜರಿ ಸಿಕ್ಸ್ ಸಿಡಿಸಿದ ಮೆಹದಿ ಹಸನ್. ಇದು ಈ ಪಂದ್ಯದ ಮೊದಲ ಸಿಕ್ಸ್. ಕ್ರೀಸ್ನಲ್ಲಿ ನಜ್ಮುಲ್ ಶಾಂಟೊ (31) ಹಾಗೂ ಮೆಹದಿ ಹಸನ್ (41) ಉತ್ತಮ ಬ್ಯಾಟಿಂಗ್.
16 ಓವರ್ಗಳ ಮುಕ್ತಾಯದ ವೇಳೆಗೆ 88 ರನ್ ಕಲೆಹಾಕಿದ ಬಾಂಗ್ಲಾದೇಶ್. ಕ್ರೀಸ್ನಲ್ಲಿ ನಜ್ಮುಲ್ ಶಾಂಟೊ (28) ಹಾಗೂ ಮೆಹದಿ ಹಸನ್ (19) ಬ್ಯಾಟಿಂಗ್. 2 ವಿಕೆಟ್ ಕಬಳಿಸಿದ ಅಫ್ಘಾನಿಸ್ತಾನ್.
ಬಾಂಗ್ಲಾದೇಶ್ ತಂಡದ ಮೊಹಮ್ಮದ್ ನಯಿಮ್ (28) ಹಾಗೂ ತೌಹಿದ್ ಹೃದೋಯ್ (0) ಔಟ್.
ಗುಲ್ಬದ್ದೀನ್ ಎಸೆದ 13ನೇ ಓವರ್ನ ಕೊನೆಯ ಎರಡು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ನಜ್ಮುಲ್ ಶಾಂಟೊ. ಮೊದಲ ಫೋರ್ ಲಾಂಗ್ ಆನ್ನತ್ತ. 2ನೇ ಫೋರ್ ಆಫ್ಸೈಡ್ನತ್ತ…2 ಬೌಂಡರಿಗಳೊಂದಿಗೆ ಬಾಂಗ್ಲಾದೇಶ್ ತಂಡದ ಮೊತ್ತ 77 ಕ್ಕೆ ಏರಿಕೆ. ಕ್ರೀಸ್ನಲ್ಲಿ ನಜ್ಮುಲ್ ಶಾಂಟೊ ಹಾಗೂ ಮೆಹದಿ ಹಸನ್ ಬ್ಯಾಟಿಂಗ್.
ಗುಲ್ಬದ್ದೀನ್ ನೈಬ್ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ ತೌಹಿದ್ ಹೃದೋಯ್ (0). ಸ್ಲಿಪ್ನಲ್ಲಿ ಇಬ್ರಾಹಿಂ ಝದ್ರಾನ್ ಅತ್ಯುತ್ತಮ ಡೈವಿಂಗ್ ಕ್ಯಾಚ್. ಅಫ್ಗಾನಿಸ್ತಾನ್ ತಂಡಕ್ಕೆ ಬ್ಯಾಕ್ ಟು ಬ್ಯಾಕ್ ಯಶಸ್ಸು. ಕ್ರೀಸ್ನಲ್ಲಿ ನಜ್ಮುಲ್ ಶಾಂಟೊ ಹಾಗೂ ಮೆಹದಿ ಹಸನ್ ಬ್ಯಾಟಿಂಗ್.
ಮುಜೀಬ್ ರೆಹಮಾನ್ ಎಸೆದ 10ನೇ ಓವರ್ನ ಕೊನೆಯ ಎಸೆತದಲ್ಲಿ ಮೊಹಮ್ಮದ್ ನಯಿಮ್ ಕ್ಲೀನ್ ಬೌಲ್ಡ್. 32 ಎಸೆತಗಳಲ್ಲಿ 28 ರನ್ ಬಾರಿಸಿ ಹೊರನಡೆದ ನಯಿಮ್. 10ನೇ ಓವರ್ನಲ್ಲಿ ಮೊದಲ ಯಶಸ್ಸು ಪಡೆದ ಬಾಂಗ್ಲಾದೇಶ್ ತಂಡ. ಕ್ರೀಸ್ನಲ್ಲಿ ಮೆಹದಿ ಹಸನ್ ಹಾಗೂ ತೌಹಿದ್ ಹೃದೋಯ್ ಬ್ಯಾಟಿಂಗ್.
8 ಓವರ್ಗಳಲ್ಲಿ ಅರ್ಧಶತಕ ಪೂರೈಸಿದ ಬಾಂಗ್ಲಾದೇಶ್. ಮೊದಲ ಯಶಸ್ಸಿನ ಹುಡುಕಾಟದಲ್ಲಿ ಅಫ್ಘಾನಿಸ್ತಾನ್ ಬೌಲರ್ಗಳು. ಅತ್ತ ಆರಂಭಿಕರಾದ ಮೊಹಮ್ಮದ್ ನಯಿಮ್ ಹಾಗೂ ಮೆಹದಿ ಹಸನ್ ಉತ್ತಮ ಬ್ಯಾಟಿಂಗ್.
25 ಎಸೆತಗಳಲ್ಲಿ 24 ರನ್ ಬಾರಿಸಿರುವ ನಯಿಮ್ ಹಾಗೂ 23 ಎಸೆತಗಳಲ್ಲಿ 16 ರನ್ ಕಲೆಹಾಕಿರುವ ಮೆಹದಿ ಹಸನ್ರಿಂದ ಭರ್ಜರಿ ಬ್ಯಾಟಿಂಗ್.
ಮೊದಲ 5 ಓವರ್ಗಳಲ್ಲಿ 33 ರನ್ ಬಾರಿಸಿದ ಬಾಂಗ್ಲಾದೇಶ್ ಆರಂಭಿಕ ಬ್ಯಾಟರ್ಗಳು. 21 ಎಸೆತಗಳಲ್ಲಿ 22 ರನ್ ಬಾರಿಸಿದ ಮೊಹಮ್ಮದ್ ನಯಿಮ್. 12 ಎಸೆತಗಳಲ್ಲಿ 2 ರನ್ ಕಲೆಹಾಕಲಷ್ಟೇ ಶಕ್ತರಾದ ಮೆಹದಿ ಹಸನ್. ಇದಾಗ್ಯೂ ಉತ್ತಮ ಆರಂಭ ಪಡೆಯುವಲ್ಲಿ ಬಾಂಗ್ಲಾದೇಶ್ ತಂಡ ಯಶಸ್ವಿ.
ಮೊದಲ 3 ಓವರ್ಗಳಲ್ಲೇ 30 ರನ್ ಬಾರಿಸಿದ ಬಾಂಗ್ಲಾದೇಶ್ ತಂಡದ ಆರಂಭಿಕರು. ಮೊಹಮ್ಮದ್ ನಯಿಮ್ ಹಾಗೂ ಮೆಹದಿ ಹಸನ್ರಿಂದ ಬಾಂಗ್ಲಾ ತಂಡಕ್ಕೆ ಉತ್ತಮ ಆರಂಭ. 2 ಓವರ್ಗಳಲ್ಲಿ 22 ರನ್ ನೀಡಿದ ಅಫ್ಘಾನಿಸ್ತಾನ್ ಎಡಗೈ ವೇಗಿ ಫಝಲ್ಹಕ್ ಫಾರೂಖಿ.
ಫಝಲ್ಹಕ್ ಫಾರೂಖಿ ಎಸೆದ ಮೊದಲ ಓವರ್ನಲ್ಲೇ 14 ರನ್ ಕಲೆಹಾಕಿದ ಬಾಂಗ್ಲಾದೇಶ್ ಬ್ಯಾಟರ್ಗಳು. ಈ ಓವರ್ನಲ್ಲಿ 2 ಫೋರ್ ಬಾರಿಸಿದ ಮೊಹಮ್ಮದ್ ನಯೀಮ್. ಮತ್ತೊಂದು ವೈಡ್+4.
ಮೊದಲ ಓವರ್ನಲ್ಲಿ 14 ರನ್ ಬಾರಿಸಿ ಶುಭಾರಂಭ ಮಾಡಿದ ಬಾಂಗ್ಲಾ ಆರಂಭಿಕರು. ಕ್ರೀಸ್ನಲ್ಲಿ ಮೆಹದಿ ಹಸನ್ ಹಾಗೂ ಮೊಹಮ್ಮದ್ ನಯಿಮ್ ಬ್ಯಾಟಿಂಗ್.
ಫಝಲ್ಹಕ್ ಫಾರೂಖಿಯ ಮೊದಲ ಓವರ್ನ 2ನೇ ಎಸೆತದಲ್ಲಿ ಫೋರ್ ಬಾರಿಸಿದ ಮೊಹಮ್ಮದ್ ನಯಿಮ್. ಬೌಂಡರಿಯೊಂದಿಗೆ ಖಾತೆ ತೆರೆದ ಬಾಂಗ್ಲಾದೇಶ್ ತಂಡ. ಕ್ರೀಸ್ನಲ್ಲಿ ಮೊಹಮ್ಮದ್ ನಯಿಮ್ ಹಾಗೂ ಮೆಹದಿ ಹಸನ್ ಬ್ಯಾಟಿಂಗ್.
ಬಾಂಗ್ಲಾದೇಶ್ (ಪ್ಲೇಯಿಂಗ್ XI): ಮೊಹಮ್ಮದ್ ನಯಿಮ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ತೌಹಿದ್ ಹೃದೋಯ್, ಶಮೀಮ್ ಹೊಸೈನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಹಸನ್ ಮಹಮ್ಮದ್
ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರೀಂ ಜನತ್, ರಶೀದ್ ಖಾನ್, ಫಝಲ್ಹಕ್ ಫಾರೂಕಿ, ಮುಜೀಬ್ ಉರ್ ರೆಹಮಾನ್.
After a tough loss against Sri Lanka, Bangladesh is determined to bounce back and stay alive in the competition. Meanwhile, Afghanistan is eager to start off with a high-flying victory. 🚀
Who do you think will emerge victorious in this thrilling showdown? 🤩#AsiaCup2023 pic.twitter.com/31t49JIn3x
— AsianCricketCouncil (@ACCMedia1) September 2, 2023
ಈ ಪಂದ್ಯದಲ್ಲಿ ಟಾಸ್ ಜಯಿಸಿರುವ ಬಾಂಗ್ಲಾದೇಶ್ ತಂಡವು ಮೊದಲು ಬ್ಯಾಟ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಲಾಹೋರ್ನ ಗಡಾಫಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಅಫ್ಘಾನಿಸ್ತಾನ್ ತಂಡ ಮೊದಲು ಬೌಲಿಂಗ್ ಮಾಡಲಿದೆ.
ಏಷ್ಯಾಕಪ್ನ ನಾಲ್ಕನೇ ಪಂದ್ಯದಲ್ಲಿ ಬಾಂಗ್ಲಾದೇಶ್ ಹಾಗೂ ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಲಾಹೋರ್ನ ಗಡಾಫಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಬಾಂಗ್ಲಾ ತಂಡದ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಪಂದ್ಯದಲ್ಲಿ ಸೋತರೆ ಬಾಂಗ್ಲಾದೇಶ್ ಸೂಪರ್-4 ಹಂತದ ರೇಸ್ನಿಂದ ಹೊರಬೀಳಲಿದೆ.
Published On - 2:21 pm, Sun, 3 September 23