
ಏಷ್ಯಾಕಪ್ 2023 ರ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 10 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಮೊಹಮ್ಮದ್ ಸಿರಾಜ್ ಅವರ ಕರಾರುವಾಕ್ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡವು ಕೇವಲ 15.2 ಓವರ್ಗಳಲ್ಲಿ 50 ರನ್ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು 6.1 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಟೀಮ್ ಇಂಡಿಯಾ 10 ವಿಕೆಟ್ಗಳ ಜಯ ಸಾಧಿಸಿದೆ.
ಟೀಮ್ ಇಂಡಿಯಾ ಪರ 7 ಓವರ್ಗಳಲ್ಲಿ 21 ರನ್ ನೀಡಿ ಮೊಹಮ್ಮದ್ ಸಿರಾಜ್ 6 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಹಾರ್ದಿಕ್ ಪಾಂಡ್ಯ 3 ವಿಕೆಟ್ ಕಬಳಿಸಿದರೆ, ಜಸ್ಪ್ರೀತ್ ಬುಮ್ರಾ 1 ವಿಕೆಟ್ ಪಡೆದರು. ಈ ಅದ್ಭುತ ಪ್ರದರ್ಶನದ ಫಲವಾಗಿ ಸಿರಾಜ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು.
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್.
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ದುಶನ್ ಹೇಮಂತ, ಪ್ರಮೋದ್ ಮದುಶನ್, ಮತೀಶ ಪತಿರಾಣ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್.
ಶ್ರೀಲಂಕಾ ತಂಡ: ದಸುನ್ ಶಾನಕ (ನಾಯಕ), ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಪೆರೇರ, ಕುಸಾಲ್ ಮೆಂಡಿಸ್ (ಉಪನಾಯಕ), ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಸದೀರ ಸಮರವಿಕ್ರಮ, ದುನಿತ್ ವೆಲ್ಲಾಲಗೆ, ಮಥೀಶ ಪತಿರಾಣ, ಕಸುನ್ ರಜಿತ, ದುಶನ್ ಹೇಮಂತ, ಬಿನೂರ ಫರ್ನಾಂಡೊ, ಪ್ರಮೋದ್ ಮಧುಶನ್.
That moment when #TeamIndia captain Rohit Sharma received the #AsiaCup2023 Trophy from the hands of Mr. Jay Shah, President, Asian Cricket Council & Honorary Secretary, BCCI 🏆 👏 #INDvSL | @ImRo45 | @JayShah pic.twitter.com/mmw0kqj9vF
— BCCI (@BCCI) September 17, 2023
ಏಷ್ಯಾಕಪ್ನಲ್ಲಿ 8ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಇಂಡಿಯಾ.
ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡಕ್ಕೆ 10 ವಿಕೆಟ್ಗಳ ಭರ್ಜರಿ ಜಯ.
ಟೀಮ್ ಇಂಡಿಯಾ ಹೊಸ ಏಷ್ಯನ್ ಚಾಂಪಿಯನ್ಸ್.
ಮತೀಶ ಪತಿರಾಣ ಎಸೆದ 5ನೇ ಓವರ್ನಲ್ಲಿ ಒಂದೊಂದು ಫೋರ್ ಬಾರಿಸಿದ ಶುಭ್ಮನ್ ಗಿಲ್ ಹಾಗೂ ಇಶಾನ್ ಕಿಶನ್.
ಗೆಲುವಿನತ್ತ ಟೀಮ್ ಇಂಡಿಯಾ
ಪ್ರಮೋದ್ ಮಧುಶನ್ ಎಸೆದ 3ನೇ ಓವರ್ನ ಮೂರನೇ ಮತ್ತು 4ನೇ ಎಸೆತಗಳಲ್ಲಿ ಆಫ್ ಸೈಡ್ನತ್ತ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಶುಭ್ಮನ್ ಗಿಲ್. 5ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಮತ್ತೊಂದು ಫೋರ್ ಸಿಡಿಸಿದ ಗಿಲ್.
ಪ್ರಮೋದ್ ಮಧುಶನ್ ಎಸೆದ ಮೊದಲ ಓವರ್ನ ಕೊನೆಯ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಫೋರ್ ಬಾರಿಸಿದ ಶುಭ್ಮನ್ ಗಿಲ್.
ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣದಲ್ಲಿ ಇಶಾನ್ ಕಿಶನ್ ಹಾಗೂ ಶುಭ್ಮನ್ ಗಿಲ್.
16ನೇ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದ ಹಾರ್ದಿಕ್ ಪಾಂಡ್ಯ.
ಕೇವಲ 50 ರನ್ಗಳಿಗೆ ಶ್ರೀಲಂಕಾ ತಂಡ ಆಲೌಟ್.
ಟೀಮ್ ಇಂಡಿಯಾಗೆ ಕೇವಲ 51 ರನ್ಗಳ ಗುರಿ.
ಟೀಮ್ ಇಂಡಿಯಾ ಪರ 6 ವಿಕೆಟ್ ಕಬಳಿಸಿದ ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯಗೆ 3 ವಿಕೆಟ್, ಬುಮ್ರಾಗೆ 1 ವಿಕೆಟ್.
ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಸ್ಲಿಪ್ನಲ್ಲಿದ್ದ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿದ ಪ್ರಮೋದ್ ಮಧುಶನ್.
ಕೇವಲ 50 ರನ್ಗಳಿಗೆ 9 ವಿಕೆಟ್ ಕಳೆದುಕೊಂಡ ಶ್ರೀಲಂಕಾ.
ಹಾರ್ದಿಕ್ ಪಾಂಡ್ಯಗೆ 2 ವಿಕೆಟ್, ಮೊಹಮ್ಮದ್ ಸಿರಾಜ್ಗೆ 6 ವಿಕೆಟ್, ಬುಮ್ರಾಗೆ 1 ವಿಕೆಟ್.
ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ದುನಿತ್ ವೆಲ್ಲಾಲಗೆ
ಶ್ರೀಲಂಕಾ ತಂಡದ 8ನೇ ವಿಕೆಟ್ ಪತನ.
ಕ್ರೀಸ್ನಲ್ಲಿ ದುಶನ್ ಹೇಮಂತ ಹಾಗೂ ಪ್ರಮೋದ್ ಮಧುಶನ್ ಬ್ಯಾಟಿಂಗ್.
ಟೀಮ್ ಇಂಡಿಯಾ ಪರ 6 ವಿಕೆಟ್ ಕಬಳಿಸಿದ ಮೊಹಮ್ಮದ್ ಸಿರಾಜ್.
ಹಾರ್ದಿಕ್ ಪಾಂಡ್ಯ ಹಾಗೂ
ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಕುಸಾಲ್ ಮೆಂಡಿಸ್ ಕ್ಲೀನ್ ಬೌಲ್ಡ್.
34 ಎಸೆತಗಳಲ್ಲಿ 17 ರನ್ಗಳಿಸಿ ವಿಕೆಟ್ ಒಪ್ಪಿಸಿದ ಮೆಂಡಿಸ್.
6ನೇ ವಿಕೆಟ್ ಕಬಳಿಸಿದ ಮೊಹಮ್ಮದ್ ಸಿರಾಜ್. ಒಂದು ವಿಕೆಟ್ ಪಡೆದಿರುವ ಬುಮ್ರಾ.
ಟೀಮ್ ಇಂಡಿಯಾದ ಭರ್ಜರಿ ಬೌಲಿಂಗ್ಗೆ ತತ್ತರಿಸಿದ ಶ್ರೀಲಂಕಾ.
10 ಓವರ್ಗಳ ಮುಕ್ತಾಯದ ವೇಳೆಗೆ 31 ರನ್ ಕಲೆಹಾಕಿದ ಶ್ರೀಲಂಕಾ.
ಕ್ರೀಸ್ನಲ್ಲಿ ಕುಸಾಲ್ ಮೆಂಡಿಸ್ (17) ಹಾಗೂ ದುನಿತ್ ವೆಲ್ಲಾಲಗೆ (6) ಬ್ಯಾಟಿಂಗ್.
5 ಓವರ್ಗಳಲ್ಲಿ 7 ರನ್ ನೀಡಿ 5 ವಿಕೆಟ್ ಕಬಳಿಸಿದ ಮೊಹಮ್ಮ್ ಸಿರಾಜ್, ಜಸ್ಪ್ರೀತ್ ಬುಮ್ರಾಗೆ ಒಂದು ವಿಕೆಟ್.
ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಕ್ಲೀನ್ ಬೌಲ್ಡ್.
ಕೇವಲ 4 ರನ್ ನೀಡಿ 5 ವಿಕೆಟ್ ಕಬಳಿಸಿದ ಮೊಹಮ್ಮದ್ ಸಿರಾಜ್.
ಒಂದು ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ.
ಕ್ರೀಸ್ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ದುನಿತ್ ವೆಲ್ಲಾಲಗೆ ಬ್ಯಾಟಿಂಗ್
4ನೇ ಓವರ್ನಲ್ಲಿ 4 ವಿಕೆಟ್ ಕಬಳಿಸಿದ ಮೊಹಮ್ಮದ್ ಸಿರಾಜ್.
ಮೊದಲ ಎಸೆತದಲ್ಲಿ ಪಾತುಮ್ ನಿಸ್ಸಂಕಾ ಕ್ಯಾಚ್ ಔಟ್.
ಎರಡನೇ ಎಸೆತದಲ್ಲಿ ಯಾವುದೇ ರನ್ ಇಲ್ಲ.
ಮೂರನೇ ಎಸೆತದಲ್ಲಿ ಸದೀರ ಸಮರವಿಕ್ರಮ ಎಲ್ಬಿಡಬ್ಲ್ಯೂ.
ನಾಲ್ಕನೇ ಎಸೆತದಲ್ಲಿ ಚರಿತ್ ಅಸಲಂಕಾ ಕ್ಯಾಚ್ ಔಟ್.
ಐದನೇ ಎಸೆತದಲ್ಲಿ ಫೋರ್ ಬಾರಿಸಿದ ಧನಂಜಯ ಡಿಸಿಲ್ವಾ.
ಆರನೇ ಎಸೆತದಲ್ಲಿ ಧನಜಂಯ ಡಿಸಿಲ್ವಾ ಕೀಪರ್ ಕ್ಯಾಚ್ ಔಟ್.
ಕೊಲಂಬೊದ ಮೈದಾನದಲ್ಲಿ ಮಿಯಾ ಮ್ಯಾಜಿಕ್
ಮೊಹಮ್ಮದ್ ಸಿರಾಜ್ ಎಸೆದ 3ನೇ ಓವರ್ನ 4ನೇ ಎಸೆತದಲ್ಲಿ ಚರಿತ್ ಅಸಲಂಕಾ ವಿಕೆಟ್ ಪಡೆದ ಸಿರಾಜ್.
ಒಂದೇ ಓವರ್ನಲ್ಲಿ ಮೂರು ವಿಕೆಟ್ ಕಬಳಿಸಿದ ಸಿರಾಜ್.
ಮೊದಲ ಎಸೆತದಲ್ಲಿ ಪಾತುಮ್ ಸಿಸ್ಸಂಕಾ, 3ನೇ ಎಸೆತದಲ್ಲಿ ಸದೀರ ಸಮರವಿಕ್ರಮ ಮತ್ತು 4ನೇ ಸ್ಥಾನದಲ್ಲಿ ಚರಿತ್ ಅಸಲಂಕಾ ಔಟ್.
ಮೊಹಮ್ಮದ್ ಸಿರಾಜ್ ಅವರ 4ನೇ ಓವರ್ನ ಮೊದಲ ಎಸೆತದಲ್ಲಿ ಸ್ಕ್ವೇರ್ ಫೀಲ್ಡರ್ಗೆ ಜಡೇಜಾಗೆ ಕ್ಯಾಚ್ ನೀಡಿದ ಪಾತುಮ್ ನಿಸ್ಸಂಕಾ.
4 ಎಸೆತಗಳಲ್ಲಿ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಶ್ರೀಲಂಕಾ ತಂಡದ ಆರಂಭಿಕ ಆಟಗಾರ ನಿಸ್ಸಂಕಾ.
ಇದರ ಬೆನ್ನಲ್ಲೇ ಸದೀರ ಸಮರವಿಕ್ರಮ (0) ರನ್ನು ಎಲ್ಬಿ ಬಲೆಗೆ ಕೆಡವಿದ ಸಿರಾಜ್.
ಟೀಮ್ ಇಂಡಿಯಾಗೆ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟ ಮೊಹಮ್ಮದ್ ಸಿರಾಜ್.
ಜಸ್ಪ್ರೀತ್ ಬುಮ್ರಾ ಎಸೆದ ಮೊದಲ ಓವರ್ನ 4ನೇ ಎಸೆತದಲ್ಲಿ ಮಿಡ್ ಆಫ್ನತ್ತ ಫೋರ್ ಬಾರಿಸಿದ ಕುಸಾಲ್ ಮೆಂಡಿಸ್.
ಬೌಂಡರಿಯೊಂದಿಗೆ ಖಾತೆ ತೆರೆದ ಕುಸಾಲ್ ಮೆಂಡಿಸ್. ಇದು ಶ್ರೀಲಂಕಾ ಇನಿಂಗ್ಸ್ನ ಮೊದಲ ಬೌಂಡರಿ.
ಕ್ರೀಸ್ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.
ಜಸ್ಪ್ರೀತ್ ಬುಮ್ರಾ ಎಸೆದ ಮೊದಲ ಓವರ್ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಕುಸಾಲ್ ಪೆರೇರಾ.
ವಿಕೆಟ್ ಕೀಪರ್ ಕೆಎಲ್ ರಾಹುಲ್ ಅತ್ಯುತ್ತಮ ಡೈವಿಂಗ್ ಕ್ಯಾಚ್..ಕುಸಾಲ್ ಪೆರೇರಾ (0) ಔಟ್.
ಟೀಮ್ ಇಂಡಿಯಾಗೆ ಆರಂಭಿಕ ಯಶಸ್ಸು ತಂದುಕೊಟ್ಟ ಜಸ್ಪ್ರೀತ್ ಬುಮ್ರಾ.
ಶ್ರೀಲಂಕಾ ಆರಂಭಿಕರು: ಕುಸಾಲ್ ಪೆರೇರಾ, ಪಾತುಮ್ ನಿಸ್ಸಂಕಾ
ಭಾರತದ ಪರ ಮೊದಲ ಓವರ್: ಜಸ್ಪ್ರೀತ್ ಬುಮ್ರಾ.
ಶ್ರೀಲಂಕಾ ಬ್ಯಾಟಿಂಗ್ ಲೈನಪ್: ಪಾತುಮ್ ನಿಸ್ಸಂಕಾ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ.
ಕೊಲಂಬೊದಲ್ಲಿ ಮಳೆ ಸ್ಥಗಿತವಾಗಿದ್ದು, 3:40 ಗಂಟೆಯಿಂದ ಪಂದ್ಯ ಶುರುವಾಗಲಿದೆ.
ಇನ್ನು ತಡವಾಗಿ ಪಂದ್ಯ ಆರಂಭವಾಗುತ್ತಿದ್ದರೂ ಯಾವುದೇ ಓವರ್ ಕಡಿತ ಮಾಡಲಾಗಿಲ್ಲ.
ಒಂದು ವೇಳೆ ಪಂದ್ಯವು ಮಳೆಯ ಕಾರಣ ಸ್ಥಗಿತವಾದರೆ ಮೀಸಲು ದಿನವಾದ ಸೋಮವಾರ ಮ್ಯಾಚ್ ಮುಂದುವರೆಯಲಿದೆ.
ಕೊಲಂಬೊದಲ್ಲಿ ತುಂತುರು ಮಳೆಯಾಗುತ್ತಿದ್ದು, ಹೀಗಾಗಿ ಪ್ರೇಮದಾಸ ಮೈದಾನದಲ್ಲಿ ಕವರ್ಗಳನ್ನು ಹೊದಿಸಲಾಗಿದೆ. ಇದೇ ಕಾರಣದಿಂದಾಗಿ ಪಂದ್ಯ ಆರಂಭ ವಿಳಂಬವಾಗಿದೆ.
______________________________________________________________________
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಟೀಮ್ ಇಂಡಿಯಾ ಮೊದಲು ಬೌಲಿಂಗ್ ಮಾಡಲಿದೆ.
🚨 Toss & Team News from Colombo 🚨
Sri Lanka have elected to bat against #TeamIndia in the #AsiaCup2023 Final.
Here’s our Playing XI 🙌 #INDvSL
Follow the match ▶️ https://t.co/xrKl5d85dN pic.twitter.com/tzLDct6Ppb
— BCCI (@BCCI) September 17, 2023
ಗಾಯಗೊಂಡಿರುವ ಅಕ್ಷರ್ ಪಟೇಲ್ ಸ್ಥಾನದಲ್ಲಿ ಕಣಕ್ಕಿಳಿದ ವಾಷಿಂಗ್ಟನ್ ಸುಂದರ್.
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್.
ಶ್ರೀಲಂಕಾ ಪ್ಲೇಯಿಂಗ್ 11: ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ದುಶನ್ ಹೇಮಂತ, ಪ್ರಮೋದ್ ಮದುಶನ್, ಮತೀಶ ಪತಿರಾಣ.
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್.
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಟೀಮ್ ಇಂಡಿಯಾ ಮೊದಲು ಫೀಲ್ಡಿಂಗ್ ಮಾಡಲಿದೆ.
Two of the Asian giants with a rich cricketing heritage! A rivalry etched in gold, and a final that this tournament has seen many times. In this evenly-matched battle, who will come out on top today? Who will be crowned the Asian champions? 😍#AsiaCup2023 #INDvsSL pic.twitter.com/xYm5IAepGl
— AsianCricketCouncil (@ACCMedia1) September 17, 2023
ಭಾರತ-ಶ್ರೀಲಂಕಾ ನಡುವಣ ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ.
ಟಾಸ್ ಪ್ರಕ್ರಿಯೆ- 2.30 ಕ್ಕೆ
ಪಂದ್ಯ ಶುರು- 3 ಗಂಟೆಗೆ
ಸ್ಥಳ- ಆರ್. ಪ್ರೇಮದಾಸ ಮೈದಾನ, ಕೊಲಂಬೊ
Published On - 2:15 pm, Sun, 17 September 23