ಟೀಂ ಇಂಡಿಯಾದ (Team India) ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ (Ravi Shastri) ಅವರು ತಮ್ಮ ಕಾಮೆಂಟರಿಯ ಹೊರತಾಗಿ ವಾಕ್ಚಾತುರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಇದೀಗ ಕೆಎಲ್ ರಾಹುಲ್ (KL Rahul) ರೀ ಎಂಟ್ರಿ ಬಗ್ಗೆ ಹೇಳಿಕೆ ನೀಡಿರುವ ರವಿಶಾಸ್ತ್ರಿ, ಏಷ್ಯಾಕಪ್‌ನಲ್ಲಿ (Asia Cup 2023) ಕೆಎಲ್ ರಾಹುಲ್ ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಸೇರಿಸುವುದು ಸರಿಯಾದ ನಿರ್ಧಾರವಲ್ಲ ಎಂದಿದ್ದಾರೆ. ಕೆಲವು ವರ್ಷಗಳಿಂದ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕಕ್ಕೆ ಸೂಕ್ತ ಬ್ಯಾಟರ್ ಸಿಕ್ಕಿಲ್ಲ. ಹೀಗಾಗಿ ಕೆಎಲ್ ರಾಹುಲ್ ಕಂಬ್ಯಾಕ್ನಿಂದ ತಂಡಕ್ಕೆ ಆ ಕೊರತೆ ನೀಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇದೀಗ ತಂಡದ ಮುಖ್ಯ ಕೋಚ್ ಆಗಿದ್ದ ರವಿಶಾಸ್ತ್ರಿ ಏಷ್ಯಾಕಪ್‌ನ ಆರಂಭಿಕ ಪಂದ್ಯಗಳಲ್ಲಿ ರಾಹುಲ್ ಅವರನ್ನು ಪ್ಲೇಯಿಂಗ್ ಇಲೆವೆನ್ನಲ್ಲಿ ಇರಿಸುವುದು ಸರಿಯಲ್ಲ ಎಂದು ರವಿಶಾಸ್ತ್ರಿ ಹೇಳುತ್ತಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ರವಿಶಾಸ್ತ್ರಿ, ‘ಕೆಎಲ್ ರಾಹುಲ್ ಬಗ್ಗೆ ಮಾತನಾಡಿದರೆ, ಅವರು ಕೆಲವು ತಿಂಗಳಿಂದ ಹೆಚ್ಚು ಕ್ರಿಕೆಟ್ ಆಡಿಲ್ಲ. ಅಲ್ಲದೆ ಅವರು ಗಾಯದಿಂದ ಇದೀಗ ತಾನೆ ಚೇತರಿಸಿಕೊಳ್ಳುತ್ತಿದ್ದಾರೆ. ನೀವು ಅವರನ್ನು ಏಷ್ಯಾಕಪ್‌ನ ಆಡಿಸಿದರೆ, ನೀವು ಅವರಿಂದ ತುಂಬಾ ನಿರೀಕ್ಷಿಸುತ್ತೀರಿ. ಅಲ್ಲದೆ ರಾಹುಲ್ ಕೀಪಿಂಗ್ ಕೂಡ ಮಾಡುತ್ತಾರೆ ಎಂದು ನೀವು ಹೇಳುತ್ತೀರಿ. ಒಬ್ಬ ಆಟಗಾರ ಗಾಯದಿಂದ ಚೇತರಿಸಿಕೊಂಡು ಮತ್ತೆ ತಂಡಕ್ಕೆ ಹಿಂತಿರುಗಿದಾಗ, ಆತನ ಚಲನೆಯ ವ್ಯಾಪ್ತಿಯು ಮೊದಲಿನಂತೆಯೇ ಇರುವುದಿಲ್ಲ ಎಂದು ಶಾಸ್ತ್ರಿ ಹೇಳಿದ್ದಾರೆ.
.@RaviShastriOfc, #SandeepPatil, #MSKPrasad & @jatinsapru ponder over the crucial questions of Team 🇮🇳’s squad selection & share their prospects!
Who will make the cut for #AsiaCup2023?
Tune-in to #SelectionDay
Today| 9 PM| SS1 & SS1 Hindi#Cricket #BelieveInBlue #AsiaCuponStar pic.twitter.com/RWqFrXQWyJ— Star Sports (@StarSportsIndia) August 15, 2023
ಕೆಎಲ್ ರಾಹುಲ್ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದು, ವಿಕೆಟ್ ಕೀಪಿಂಗ್ ಕೂಡ ಮಾಡಿದರೆ ಟೀಂ ಇಂಡಿಯಾ ಬಲ ಮತ್ತಷ್ಟು ಹೆಚ್ಚಲಿದೆ. ರಾಹುಲ್ ತಂಡಕ್ಕೆ ಉತ್ತಮ ಬ್ಯಾಲೆನ್ಸ್ ನೀಡುತ್ತಿದ್ದಾರೆ. ಈಗ ರಾಹುಲ್ ಆಡದಿದ್ದರೆ 5ನೇ ಕ್ರಮಾಂಕದಲ್ಲಿ ಯಾರು ಆಡುತ್ತಾರೆ ಎಂಬುದಕ್ಕೆ ಉತ್ತರ ತಿಳಿಯುವುದು ಕಷ್ಟ. ಈ ಸ್ಥಾನದಲ್ಲಿ ಆಡಲು ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ ಅವರಂತಹ ಹೆಸರುಗಳಿವೆ. ಆದರೆ ಈ ಬ್ಯಾಟ್ಸ್‌ಮನ್‌ಗಳು ಬಹುಶಃ ರಾಹುಲ್‌ನಂತೆ ಆಯ್ಕೆ ಮಂಡಳಿಗೆ ಭರವಸೆ ಮೂಡಿಸಿಲ್ಲ.
KL Rahul: ಟೀಂ ಇಂಡಿಯಾಗೆ ಗುಡ್ ನ್ಯೂಸ್; ಏಷ್ಯಾಕಪ್ಗೆ ಕೆಎಲ್ ರಾಹುಲ್ ಲಭ್ಯ..!
ಕೆಎಲ್ ರಾಹುಲ್ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಮ್ಮ ಫಿಟ್‌ನೆಸ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಕಾಲಿನ ಇಂಜುರಿಗೆ ತುತ್ತಾಗಿದ್ದ ರಾಹುಲ್ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ, 50 ಓವರ್‌ಗಳ ಅಭ್ಯಾಸ ಪಂದ್ಯದಲ್ಲಿ ಆಡುತ್ತಿರುವ ರಾಹುಲ್ ಅವರ ಫಿಟ್ನೆನ್ ಮೇಲೆ ಮಂಡಳಿ ಗಮನ ಇರಿಸಿದೆ. ಅಭ್ಯಾಸ ಪಂದ್ಯದಲ್ಲಿ ರಾಹುಲ್ ನಿರೀಕ್ಷಿತ ಪ್ರದರ್ಶಣ ನೀಡಿದ ನಂತರವೇ ಅವರಿಗೆ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ