ಏಷ್ಯಾಕಪ್ನ ಸೂಪರ್-4 ಹಂತದ 2ನೇ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಶ್ರೀಲಂಕಾ ತಂಡ ಜಯ ಸಾಧಿಸಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ನಾಯಕ ಶಕೀಬ್ ಅಲ್ ಹಸನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಪರ ಸದೀರ ಸಮರವಿಕ್ರಮ (93) ಹಾಗೂ ಕುಸಾಲ್ ಮೆಂಡಿಸ್ (50) ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಗಳ ನೆರವಿನಿಂದ ಶ್ರೀಲಂಕಾ ತಂಡವು ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 257 ರನ್ ಕಲೆಹಾಕಿತು.
258 ರನ್ಗಳ ಸ್ಪರ್ಧಾತ್ಮಕ ಗುರಿ ಪಡೆದ ಬಾಂಗ್ಲಾದೇಶ್ ತಂಡವು ಉತ್ತಮ ಆರಂಭ ಪಡೆದರೂ ಮಧ್ಯಮ ಕ್ರಮಾಂಕದಲ್ಲಿ ಕುಸಿತಕ್ಕೊಳಗಾಯಿತು. ಇದಾಗ್ಯೂ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತೌಹಿದ್ ಹೃದೋಯ್ 82 ರನ್ ಬಾರಿಸುವ ಮೂಲಕ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಲಂಕಾ ತಂಡದ ಸಂಘಟಿತ ದಾಳಿ ಮುಂದೆ ಮಂಡಿಯೂರಿದ ಬಾಂಗ್ಲಾದೇಶ್ ಅಂತಿಮವಾಗಿ 48.1 ಓವರ್ಗಳಲ್ಲಿ 236 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಶ್ರೀಲಂಕಾ ತಂಡವು 21 ರನ್ಗಳ ಜಯ ಸಾಧಿಸಿದೆ.
ಬಾಂಗ್ಲಾದೇಶ (ಪ್ಲೇಯಿಂಗ್ XI): ಮೊಹಮ್ಮದ್ ನಯಿಮ್, ಮೆಹಿದಿ ಹಸನ್ ಮಿರಾಜ್, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್ (ನಾಯಕ), ತೌಹಿದ್ ಹೃದೋಯ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಶಮೀಮ್ ಹೊಸೈನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್, ನಸುಮ್ ಅಹ್ಮದ್.
ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಕಸುನ್ ರಜಿತ, ಮಥೀಶ ಪತಿರಾಣ.
ಬಾಂಗ್ಲಾದೇಶ್ ತಂಡ: ಶಕೀಬ್ ಅಲ್ ಹಸನ್ (ನಾಯಕ), ಲಿಟ್ಟನ್ ದಾಸ್, ತಂಝಿದ್ ತಮೀಮ್, ತೌಹಿದ್ ಹೃದಯ್, ಮುಶ್ಫಿಕರ್ ರಹೀಮ್, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಹಸನ್ ಮಹ್ಮದ್, ಶೇಖ್ ಮಹಿದಿ, ನಸುಮ್ ಅಹ್ಮದ್, ಶಮೀಮ್ ಹೊಸೈನ್, ಶರೀಫುಲ್ ಇಸ್ಲಾಂ, ಇಬಾದತ್ ಹೊಸೈನ್, ನಯಿಮ್ ಶೇಖ್.
ಶ್ರೀಲಂಕಾ ತಂಡ: ದಸುನ್ ಶಾನಕ (ನಾಯಕ), ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಪೆರೇರ, ಕುಸಾಲ್ ಮೆಂಡಿಸ್ (ಉಪನಾಯಕ), ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಸದೀರ ಸಮರವಿಕ್ರಮ, ಮಹೀಶ್ ತೀಕ್ಷಣ, ದುನಿತ್ ವೆಲ್ಲಲಗೆ, ಮಥೀಶ ಪತಿರಾಣ, ಕಸುನ್ ರಜಿತ, ದುಶನ್ ಹೇಮಂತ, ಬಿನೂರ ಫರ್ನಾಂಡೊ, ಪ್ರಮೋದ್ ಮಧುಶನ್.
ಮಥೀಶ ಪತಿರಾಣ ಎಸೆತದಲ್ಲಿ ನಾಸುಮ್ ಅಹ್ಮದ್ ಕ್ಲೀನ್ ಬೌಲ್ಡ್.
236 ರನ್ಗಳಿಗೆ ಬಾಂಗ್ಲಾದೇಶ್ ತಂಡ ಆಲೌಟ್.
21 ರನ್ಗಳಿಂದ ಗೆದ್ದು ಬೀಗಿದ ಶ್ರೀಲಂಕಾ ತಂಡ.
ಶ್ರೀಲಂಕಾ ಪರ ತಲಾ 3 ವಿಕೆಟ್ ಕಬಳಿಸಿದ ಮಹೀಶ್ ತೀಕ್ಷಣ, ಮಥೀಶ್ ಪತಿರಾಣ ಹಾಗೂ ದಸುನ್ ಶಾನಕ.
ಮಥೀಶ ಪತಿರಾಣ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಶೊರಿಫುಲ್ ಇಸ್ಲಾಂ.
7 ಎಸೆತಗಳಲ್ಲಿ 7 ರನ್ಗಳಿಸಿ ವಿಕೆಟ್ ಒಪ್ಪಿಸಿದ ಶೊರಿಫುಲ್.
ಬಾಂಗ್ಲಾದೇಶ್ ತಂಡದ 9ನೇ ವಿಕೆಟ್ ಪತನ. ಜಯದತ್ತ ಶ್ರೀಲಂಕಾ ತಂಡ.
ಕ್ರೀಸ್ನಲ್ಲಿ ನಾಸುಮ್ ಅಹ್ಮದ್ ಹಾಗೂ ಹಸನ್ ಮಹಮೂದ್ ಬ್ಯಾಟಿಂಗ್.
ಮಹೀಶ್ ತೀಕ್ಷಣ ಎಸೆತದಲ್ಲಿ ಎಲ್ಬಿಡಬ್ಲೂ ಆಗಿ ನಿರ್ಗಮಿಸಿದ ತಸ್ಕಿನ್ ಅಹ್ಮದ್.
44ನೇ ಓವರ್ನಲ್ಲಿ ಎರಡು ವಿಕೆಟ್ ಕಬಳಿಸಿದ ಮಹೀಶ್ ತೀಕ್ಷಣ.
3 ಎಸೆತಗಳಲ್ಲಿ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದ ತಸ್ಕಿನ್ ಅಹ್ಮದ್.
ಬಾಂಗ್ಲಾದೇಶ್ ತಂಡಕ್ಕೆ ಕೊನೆಯ 6 ಓವರ್ಗಳಲ್ಲಿ 58 ರನ್ಗಳ ಅವಶ್ಯಕತೆ
ಮಹೀಶ್ ತೀಕ್ಷಣ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರ ನಡೆದ ತೌಹಿದ್ ಹೃದೋಯ್.
97 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 87 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಬಾಂಗ್ಲಾ ತಂಡದ ಯುವ ಬ್ಯಾಟರ್.
ಕ್ರೀಸ್ನಲ್ಲಿ ನಾಸುಮ್ ಅಹ್ಮದ್ ಹಾಗೂ ತಸ್ಕಿನ್ ಅಹ್ಮದ್ ಬ್ಯಾಟಿಂಗ್
ಮಹೀಶ್ ತೀಕ್ಷಣ ನೋಬಾಲ್ ಎಸೆತ…ಫ್ರೀ ಹಿಟ್ನಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ತೌಹಿದ್ ಹೃದೋಯ್.
ಕ್ರೀಸ್ನಲ್ಲಿ ನಾಸುಮ್ ಅಹ್ಮದ್ ಹಾಗೂ ತೌಹಿದ್ ಹೃದೋಯ್ ಬ್ಯಾಟಿಂಗ್.
ಬಾಂಗ್ಲಾದೇಶ್ ತಂಡಕ್ಕೆ ಗೆಲ್ಲಲು 41 ರನ್ಗಳ ಅವಶ್ಯಕತೆ.
ಮಹೀಶ್ ತೀಕ್ಷಣ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರ ನಡೆದ ಶಮೀಮ್ ಹೊಸೈನ್.
10 ಎಸೆತಗಳಲ್ಲಿ 5 ರನ್ ಗಳಿಸಿ ನಿರ್ಗಮಿಸಿದ ಶಮೀಮ್ ಹೊಸೈನ್.
ಕ್ರೀಸ್ನಲ್ಲಿ ತೌಹಿದ್ ಹೃದೋಯ್ ಹಾಗೂ ನಾಸುಮ್ ಅಹ್ಮದ್ ಬ್ಯಾಟಿಂಗ್.
ಬಾಂಗ್ಲಾದೇಶ್ ತಂಡಕ್ಕೆ ಗೆಲ್ಲಲು 51 ರನ್ಗಳ ಅವಶ್ಯಕತೆ
40 ಓವರ್ ಮುಕ್ತಾಯದ ವೇಳೆಗೆ 177 ರನ್ ಕಲೆಹಾಕಿದ ಬಾಂಗ್ಲಾದೇಶ್.
ಕೊನೆಯ 60 ಎಸೆತಗಳಲ್ಲಿ 81 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ತೌಹಿದ್ ಹೃದೋಯ್ ಹಾಗೂ ಶಮೀಮ್ ಹೊಸೈನ್ ಬ್ಯಾಟಿಂಗ್.
ಪತಿರಾಣ ಎಸೆದ 35ನೇ ಓವರ್ನ ಮೊದಲ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ತೌಹಿದ್ ಹೃದೋಯ್.
35 ಓವರ್ಗಳ ಮುಕ್ತಾಯದ ವೇಳೆಗೆ 149 ರನ್ ಕಲೆಹಾಕಿದ ಬಾಂಗ್ಲಾದೇಶ್.
ಕೊನೆಯ 15 ಓವರ್ಗಳಲ್ಲಿ 109 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಮುಶ್ಫಿಕುರ್ ರಹೀಮ್ (44) ಹಾಗೂ ತೌಹಿದ್ ಹೃದೋಯ್ (27) ಬ್ಯಾಟಿಂಗ್.
ದುನಿಲ್ ವೆಲ್ಲಲಾಗೆ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ತೌಹಿದ್ ಹೃದೋಯ್.
ಕ್ರೀಸ್ನಲ್ಲಿ ಮುಶ್ಫಿಕುರ್ ರಹೀಮ್ ಹಾಗೂ ತೌಹಿದ್ ಹೃದೋಯ್ ಬ್ಯಾಟಿಂಗ್
ಮೊಹಮ್ಮದ್ ನಯಿಮ್ (21), ಮೆಹದಿ ಹಸನ್ ಮಿರಾಝ್ (28), ಶಕೀಬ್ ಅಲ್ ಹಸನ್ (3) ಹಾಗೂ ಲಿಟ್ಟನ್ ದಾಸ್ (15) ಔಟ್.
25ನೇ ಓವರ್ನಲ್ಲಿ ಶತಕ ಪೂರೈಸಿದ ಬಾಂಗ್ಲಾದೇಶ್ ತಂಡ.
27 ಓವರ್ ಮುಕ್ತಾಯದ ವೇಳೆ 107 ರನ್ ಕಲೆಹಾಕಿದ ಬಾಂಗ್ಲಾ ಬ್ಯಾಟರ್ಗಳು.
ಕ್ರೀಸ್ನಲ್ಲಿ ಮುಶ್ಫಿಕುರ್ ರಹೀಮ್ (15) ಹಾಗೂ ತೌಹಿದ್ ಹೃದೋಯ್ ( 15 ) ಬ್ಯಾಟಿಂಗ್.
ಶ್ರೀಲಂಕಾ ಪರ 2 ವಿಕೆಟ್ ಕಬಳಿಸಿದ ದಸುನ್ ಶಾನಕ.
ದುನಿತ್ ವೆಲ್ಲಲಾಗೆ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಲಿಟ್ಟನ್ ದಾಸ್.
24 ಎಸೆತಗಳಲ್ಲಿ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಲಿಟ್ಟನ್ ದಾಸ್.
ಕ್ರೀಸ್ನಲ್ಲಿ ಮುಶ್ಫಿಕುರ್ ರಹೀಮ್ ಹಾಗೂ ತೌಹಿದ್ ಹೃದೋಯ್ ಬ್ಯಾಟಿಂಗ್.
ಮಥೀಶ ಪತಿರಾಣ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಶಕೀಬ್ ಅಲ್ ಹಸನ್.
7 ಎಸೆತಗಳಲ್ಲಿ 3 ರನ್ ಬಾರಿಸಿ ನಿರ್ಗಮಿಸಿದ ಬಾಂಗ್ಲಾದೇಶ್ ತಂಡದ ನಾಯಕ ಶಕೀಬ್.
ಕ್ರೀಸ್ನಲ್ಲಿ ಲಿಟ್ಟನ್ ದಾಸ್ ಹಾಗೂ ಮುಶ್ಫಿಕುರ್ ರಹೀಮ್ ಬ್ಯಾಟಿಂಗ್.
15 ಓವರ್ಗಳ ಮುಕ್ತಾಯದ ವೇಳೆಗೆ 65 ರನ್ ಕಲೆಹಾಕಿದ ಬಾಂಗ್ಲಾದೇಶ್.
ಕ್ರೀಸ್ನಲ್ಲಿ ಶಕೀಬ್ ಅಲ್ ಹಸನ್ (3) ಹಾಗೂ ಲಿಟ್ಟನ್ ದಾಸ್ (10) ಬ್ಯಾಟಿಂಗ್.
ಶ್ರೀಲಂಕಾ ಪರ 2 ವಿಕೆಟ್ ಕಬಳಿಸಿದ ದಸುನ್ ಶಾನಕ.
ಮೊಹಮ್ಮದ್ ನಯಿಮ್ (21) ಹಾಗೂ ಮೆಹದಿ ಹಸನ್ ಮಿರಾಝ್ (28) ಔಟ್.
ದಸುನ್ ಶಾನಕ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಮೊಹಮ್ಮದ್ ನಯಿಮ್.
46 ಎಸೆತಗಳಲ್ಲಿ 21 ರನ್ ಬಾರಿಸಿ ನಿರ್ಗಮಿಸಿದ ಮೊಹಮ್ಮದ್ ನಯಿಮ್.
ಶ್ರೀಲಂಕಾ ತಂಡಕ್ಕೆ 2 ಯಶಸ್ಸು ತಂದುಕೊಟ್ಟ ನಾಯಕ ಶಾನಕ.
ಕ್ರೀಸ್ನಲ್ಲಿ ಲಿಟ್ಟನ್ ದಾಸ್ ಹಾಗೂ ಶಕೀಬ್ ಅಲ್ ಹಸನ್ ಬ್ಯಾಟಿಂಗ್.
ದಸುನ್ ಶಾನಕ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಮೆಹದಿ ಹಸನ್ ಮಿರಾಝ್.
29 ಎಸೆತಗಳಲ್ಲಿ 28 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮೆಹದಿ ಹಸನ್ ಮಿರಾಝ್.
ಶ್ರೀಲಂಕಾ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟ ನಾಯಕ ಶಾನಕ.
10 ಓವರ್ ಮುಕ್ತಾಯದ ವೇಳೆಗೆ 47 ರನ್ ಕಲೆಹಾಕಿದ ಬಾಂಗ್ಲಾದೇಶ್ ತಂಡದ ಆರಂಭಿಕರು.
ಮೊದಲ ಪವರ್ ಪ್ಲೇನಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾದ ಲಂಕಾ ಬೌಲರ್ಗಳು.
ಕ್ರೀಸ್ನಲ್ಲಿ ಮೊಹಮ್ಮದ್ ನಯಿಮ್ (19) ಹಾಗೂ ಮೆಹದಿ ಹಸನ್ ಮಿರಾಝ್ (22) ಬ್ಯಾಟಿಂಗ್.
ಕಸುನ್ ರಜಿತ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಮೆಹದಿ ಹಸನ್ ಮಿರಾಝ್.
ಬಾಂಗ್ಲಾದೇಶ್ ತಂಡದ ಉತ್ತಮ ಆರಂಭ.
ಕ್ರೀಸ್ನಲ್ಲಿ ಬಲಗೈ ದಾಂಡಿಗ ಮೆಹದಿ ಹಸನ್ ಮಿರಾಝ್ ಹಾಗೂ ಎಡಗೈ ದಾಂಡಿಗ ಮೊಹಮ್ಮದ್ ನಯಿಮ್ ಬ್ಯಾಟಿಂಗ್
ಮಹೀಶ್ ತೀಕ್ಷಣ ಓವರ್ನಲ್ಲಿ ಎರಡು ಫೋರ್ ಬಾರಿಸಿದ ಮೆಹದಿ ಹಸನ್ ಮಿರಾಝ್.
ಕ್ರೀಸ್ನಲ್ಲಿ ಮೊಹಮ್ಮದ್ ನಯಿಮ್ ಹಾಗೂ ಮೆಹದಿ ಹಸನ್ ಮಿರಾಝ್ ಬ್ಯಾಟಿಂಗ್.
ಬಾಂಗ್ಲಾದೇಶ್ ತಂಡದ ಉತ್ತಮ ಆರಂಭ.
ಮೊದಲ ಓವರ್ನಲ್ಲಿ ಕೇವಲ 3 ರನ್ ನೀಡಿದ ಕಸುನ್ ರಜಿತ.
ಬಾಂಗ್ಲಾದೇಶ್ ಪರ ಆರಂಭಿಕರಾಗಿ ಮೆಹದಿ ಹಸನ್ ಮಿರಾಝ್ ಹಾಗೂ ಮೊಹಮ್ಮದ್ ನಯಿಮ್ ಬ್ಯಾಟಿಂಗ್.
ತಸ್ಕಿನ್ ಅಹ್ಮದ್ ಎಸೆದ ಕೊನೆಯ ಓವರ್ನ ಅಂತಿಮ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಸದೀರ ಸಮರ ವಿಕ್ರಮ. ಬೌಂಡರಿ ಲೈನ್ನಲ್ಲಿ ಕ್ಯಾಚ್.
72 ಎಸೆತಗಳಲ್ಲಿ 93 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಸದೀರ ಸಮರ ವಿಕ್ರಮ.
50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 257 ರನ್ ಕಲೆಹಾಕಿದ ಶ್ರೀಲಂಕಾ.
ತಸ್ಕಿನ್ ಅಹ್ಮದ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಮಹೀಶ್ ತೀಕ್ಷಣ.
3 ಎಸೆತಗಳಲ್ಲಿ 2 ರನ್ ಗಳಿಸಿ ನಿರ್ಗಮಿಸಿದ ತೀಕ್ಷಣ.
ಬಾಂಗ್ಲಾದೇಶ್ ತಂಡಕ್ಕೆ 8ನೇ ಯಶಸ್ಸು.
ಕ್ರೀಸ್ನಲ್ಲಿ ಸದೀರ ಸಮರ ವಿಕ್ರಮ ಹಾಗೂ ಕಸುನ್ ರಜಿತ ಬ್ಯಾಟಿಂಗ್.
ಹಸನ್ ಮಹಮೂದ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ದಸುನ್ ಶಾನಕ.
32 ಎಸೆತಗಳಲ್ಲಿ 24 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಶ್ರೀಲಂಕಾ ತಂಡದ ನಾಯಕ.
ಕ್ರೀಸ್ನಲ್ಲಿ ಸದೀರ ಸಮರ ವಿಕ್ರಮ ಹಾಗೂ ದುನಿತ್ ವೆಲ್ಲಲಾಗೆ ಬ್ಯಾಟಿಂಗ್.
45 ಓವರ್ಗಳ ಮುಕ್ತಾಯದ ವೇಳೆಗೆ 217 ರನ್ ಕಲೆಹಾಕಿದ ಶ್ರೀಲಂಕಾ.
47 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡಿದ ದುಸನ್ ಶಾನಕ ಹಾಗೂ ಸದೀರ ಸಮರ ವಿಕ್ರಮ.
ಕ್ರೀಸ್ನಲ್ಲಿ ಸದೀರ ಸಮರ ವಿಕ್ರಮ ಹಾಗೂ ದುಸನ್ ಶಾನಕ ಬ್ಯಾಟಿಂಗ್.
ಶೊರಿಫುಲ್ ಇಸ್ಲಾಂ ಎಸೆತದಲ್ಲಿ ಪುಲ್ ಶಾಟ್ ಫೋರ್ ಬಾರಿಸಿದ ಸದೀರ ಸಮರ ವಿಕ್ರಮ.
ಈ ಫೋರ್ನೊಂದಿಗೆ 45 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಸದೀರ.
ಕ್ರೀಸ್ನಲ್ಲಿ ದಸುನ್ ಶಾನಕ ಹಾಗೂ ಸದೀರ ಸಮರ ವಿಕ್ರಮ ಬ್ಯಾಟಿಂಗ್.
40 ಓವರ್ಗಳ ಮುಕ್ತಾಯದ ವೇಳೆಗೆ 176 ರನ್ ಕಲೆಹಾಕಿದ ಶ್ರೀಲಂಕಾ ತಂಡ.
5 ವಿಕೆಟ್ಗಳನ್ನು ಕಬಳಿಸುವ ಮೂಲಕ ಶ್ರೀಲಂಕಾ ತಂಡ ರನ್ ಗತಿ ನಿಯಂತ್ರಿಸುವಲ್ಲಿ ಬಾಂಗ್ಲಾ ಬೌಲರ್ಗಳು ಯಶಸ್ವಿ.
ಕ್ರೀಸ್ನಲ್ಲಿ ದಸುನ್ ಶಾನಕ ಹಾಗೂ ಸದೀರ ಸಮರ ವಿಕ್ರಮ ಬ್ಯಾಟಿಂಗ್.
ಹಸನ್ ಮಹಮೂದ್ ಎಸೆತದಲ್ಲಿ ವಿಕೆಟ್ ಕೀಪರ್ ಮುಶ್ಫಿಕುರ್ ರಹೀಮ್ಗೆ ಕ್ಯಾಚ್ ನೀಡಿದ ಧನಂಜಯ ಡಿ ಸಿಲ್ವಾ
16 ಎಸೆತಗಳಲ್ಲಿ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಬಲಗೈ ಬ್ಯಾಟರ್ ಧನಂಜಯ ಡಿ ಸಿಲ್ವಾ.
ಕ್ರೀಸ್ನಲ್ಲಿ ಸದೀರ ಸಮರ ವಿಕ್ರಮ ಹಾಗೂ ದಸುನ್ ಶಾನಕ ಬ್ಯಾಟಿಂಗ್.
ಹಸನ್ ಮಹಮೂದ್ ಎಸೆದ 36ನೇ ಓವರ್ನ ಕೊನೆಯ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಸದೀರ ಸಮರ ವಿಕ್ರಮ.
ಕ್ರೀಸ್ನಲ್ಲಿ ಸದೀರ ಸಮರ ವಿಕ್ರಮ ಹಾಗೂ ಧನಂಜಯ ಡಿ ಸಿಲ್ವಾ ಬ್ಯಾಟಿಂಗ್.
ವೇಗಿ ತಸ್ಕಿನ್ ಅಹ್ಮದ್ ಎಸೆತದಲ್ಲಿ ಶಕೀಬ್ ಅಲ್ ಹಸನ್ಗೆ ಕ್ಯಾಚ್ ನೀಡಿದ ಚರಿತ್ ಅಸಲಂಕಾ.
23 ಎಸೆತಗಳಲ್ಲಿ 10 ರನ್ಗಳಿಸಿ ಔಟಾದ ಚರಿತ್ ಅಸಲಂಕಾ.
ಬಾಂಗ್ಲಾದೇಶ್ ತಂಡಕ್ಕೆ 4ನೇ ಯಶಸ್ಸು,
ಕ್ರೀಸ್ನಲ್ಲಿ ಸದೀರ ಸಮರ ವಿಕ್ರಮ ಹಾಗೂ ಧನಂಜಯ ಡಿಸಿಲ್ವಾ ಬ್ಯಾಟಿಂಗ್.
30 ಓವರ್ಗಳ ಮುಕ್ತಾಯದ ವೇಳೆಗೆ 131 ರನ್ ಕಲೆಹಾಕಿದ ಶ್ರೀಲಂಕಾ.
ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ಸದೀರ ಸಮರ ವಿಕ್ರಮ ಬ್ಯಾಟಿಂಗ್.
ದಿಮುತ್ ಕರುಣರತ್ನೆ (20), ಪಾತುಮ್ ನಿಸ್ಸಂಕಾ (40) ಹಾಗೂ ಕುಸಾಲ್ ಮೆಂಡಿಸ್ (50) ಔಟ್.
2 ವಿಕೆಟ್ ಕಬಳಿಸಿದ ಎಡಗೈ ವೇಗಿ ಶೊರಿಫುಲ್ ಇಸ್ಲಾಂ. ಹಸನ್ ಮಹಮೂದ್ಗೆ 1 ವಿಕೆಟ್.
ಅರ್ಧ ಶತಕದ ಬೆನ್ನಲ್ಲೇ ವಿಕೆಟ್ ಒಪ್ಪಿಸಿದ ಕುಸಾಲ್ ಮೆಂಡಿಸ್.
ಶೊರಿಫುಲ್ ಇಸ್ಲಾಂ ಶಾರ್ಟ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಕೈ ಹಾಕಿ ಥರ್ಡ್ ಮ್ಯಾನ್ ಫೀಲ್ಡರ್ಗೆ ಕ್ಯಾಚ್ ನೀಡಿದ ಮೆಂಡಿಸ್.
73 ಎಸೆತಗಳಲ್ಲಿ 50 ರನ್ ಬಾರಿಸಿ ನಿರ್ಗಮಿಸಿದ ಕುಸಾಲ್ ಮೆಂಡಿಸ್.
ಶೊರಿಫುಲ್ ಇಸ್ಲಾಂ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಕುಸಾಲ್ ಮೆಂಡಿಸ್.
ಈ ಫೋರ್ನೊಂದಿಗೆ 70 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಮೆಂಡಿಸ್.
ಕ್ರೀಸ್ನಲ್ಲಿ ಸದೀರ ಸಮರ ವಿಕ್ರಮ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.
ಶೊರಿಫುಲ್ ಇಸ್ಲಾಂ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರ ನಡೆದ ಪಾತುಮ್ ನಿಸ್ಸಂಕಾ.
60 ಎಸೆತಗಳಲ್ಲಿ 40 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಶ್ರೀಲಂಕಾ ಆರಂಭಿಕ ಆಟಗಾರ ನಿಸ್ಸಂಕಾ.
ಬಾಂಗ್ಲಾದೇಶ್ ತಂಡಕ್ಕೆ 2ನೇ ಯಶಸ್ಸು ತಂದುಕೊಟ್ಟ ಶೊರಿಫುಲ್ ಇಸ್ಲಾಂ.
ಶೊರಿಫುಲ್ ಇಸ್ಲಾಂ ಎಸೆತದಲ್ಲಿ ಥರ್ಡ್ ಮ್ಯಾನ್ ಬೌಂಡರಿಯತ್ತ ಫೋರ್ ಬಾರಿಸಿದ ಕುಸಾಲ್ ಮೆಂಡಿಸ್.
ಈ ಫೋರ್ನೊಂದಿಗೆ ಶತಕ ಪೂರೈಸಿದ ಶ್ರೀಲಂಕಾ ತಂಡ.
ಕ್ರೀಸ್ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಪಾತುಮ್ ನಿಸ್ಸಂಕಾ ಬ್ಯಾಟಿಂಗ್.
ಹಸನ್ ಮಹಮೂದ್ ಎಸೆದ 21ನೇ ಓವರ್ನ 3ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಕುಸಾಲ್ ಮೆಂಡಿಸ್.
21 ಓವರ್ಗಳ ಮುಕ್ತಾಯದ ವೇಳೆಗೆ 91 ರನ್ ಕಲೆಹಾಕಿದ ಶ್ರೀಲಂಕಾ.
ಕ್ರೀಸ್ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.
15 ಓವರ್ ಮುಕ್ತಾಯದ ವೇಳೆಗೆ 70 ರನ್ ಕಲೆಹಾಕಿದ ಶ್ರೀಲಂಕಾ ತಂಡ.
ಕ್ರೀಸ್ನಲ್ಲಿ ಪಾತುಮ್ ನಿಸ್ಸಂಕಾ (28) ಹಾಗೂ ಕುಸಾಲ್ ಮೆಂಡಿಸ್ (20) ಬ್ಯಾಟಿಂಗ್.
ಶ್ರೀಲಂಕಾ ಆರಂಭಿಕ ಆಟಗಾರ ದಿಮುತ್ ಕರುಣರತ್ನೆ (18) ಔಟ್.
ಬಾಂಗ್ಲಾದೇಶ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟ ಹಸನ್ ಮಹಮೂದ್.
10 ಓವರ್ಗಳಲ್ಲಿ ಅರ್ಧಶತಕ ಪೂರೈಸಿದ ಶೀಲಂಕಾ.
ಮೊದಲ ಹತ್ತು ಓವರ್ಗಳಲ್ಲಿ ಒಂದು ವಿಕೆಟ್ ಪಡೆದ ಬಾಂಗ್ಲಾದೇಶ್.
ಕ್ರೀಸ್ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.
ದಿಮುತ್ ಕರುಣರತ್ನೆ (18) ವಿಕೆಟ್ ಪಡೆದ ಹಸನ್ ಮಹಮೂದ್.
ಹಸನ್ ಮಹಮೂದ್ ಎಸೆದ 8ನೇ ಓವರ್ನ 3ನೇ ಹಾಗೂ 4ನೇ ಎಸೆತಗಳಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಪಾತುಮ್ ನಿಸ್ಸಂಕಾ.
3ನೇ ಎಸೆತದಲ್ಲಿ ಆಫ್ಸೈಡ್ನತ್ತ ಬೌಂಡರಿ. 4ನೇ ಎಸೆತದಲ್ಲಿ ಕವರ್ ಪಾಯಿಂಟ್ ಮೂಲಕ ಫೋರ್ ಬಾರಿಸಿದ ನಿಸ್ಸಂಕಾ.
ಹಸನ್ ಮಹಮೂದ್ ಎಸೆತದಲ್ಲಿ ವಿಕೆಟ್ ಕೀಪರ್ ಮುಶ್ಫಿಕುರ್ ರಹೀಮ್ಗೆ ಕ್ಯಾಚ್ ನೀಡಿದ ದಿಮುತ್ ಕರುಣರತ್ನೆ.
ಬಾಂಗ್ಲಾದೇಶ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟ ಯುವ ವೇಗಿ ಹಸನ್ ಮಹಮೂದ್.
17 ಎಸೆತಗಳಲ್ಲಿ 18 ರನ್ ಬಾರಿಸಿ ನಿರ್ಗಮಿಸಿದ ದಿಮುತ್ ಕರುಣರತ್ನೆ.
ದೆಹಲಿ: ಪ್ರಧಾನಿ ಮೋದಿ ಭೇಟಿಯಾದ ಜಪಾನ್ ಪ್ರಧಾನಿ ಕಿಷಿಡಾ ಅವರು ಹಲವು ವಿಚಾರಗಳ ಕುರಿತು ಕಿಷಿಡಾ, ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ.
4 ಓವರ್ಗಳ ಮುಕ್ತಾಯದ ವೇಳೆಗೆ 21 ರನ್ ಕಲೆಹಾಕಿದ ಶ್ರೀಲಂಕಾ ಆರಂಭಿಕರು. ಬಾಂಗ್ಲಾ ಬೌಲರ್ಗಳ ಉತ್ತಮ ದಾಳಿ. 4ನೇ ಓವರ್ನಲ್ಲಿ ಕೇವಲ 3 ರನ್ ನೀಡಿದ ಯುವ ವೇಗಿ ಹಸನ್ ಮಹಮೂದ್. ಕ್ರೀಸ್ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ದಿಮುತ್ ಕರುಣರತ್ನೆ ಬ್ಯಾಟಿಂಗ್.
ತಸ್ಕಿನ್ ಅಹ್ಮದ್ ಎಸೆದ ಮೊದಲ ಓವರ್ನಲ್ಲಿ 2 ಫೋರ್ ಬಾರಿಸಿ ಶುಭಾರಂಭ ಮಾಡಿದ ಪಾತುಮ್ ನಿಸ್ಸಂಕಾ. ಮೊದಲ ಓವರ್ನಲ್ಲಿ ಒಟ್ಟು 9 ರನ್.
ಕ್ರೀಸ್ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ದಿಮುತ್ ಕರುಣರತ್ನೆ ಬ್ಯಾಟಿಂಗ್.
ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಕಸುನ್ ರಜಿತ, ಮಥೀಶ ಪತಿರಾಣ.
ಬಾಂಗ್ಲಾದೇಶ (ಪ್ಲೇಯಿಂಗ್ XI): ಮೊಹಮ್ಮದ್ ನಯಿಮ್, ಮೆಹಿದಿ ಹಸನ್ ಮಿರಾಜ್, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್ (ನಾಯಕ), ತೌಹಿದ್ ಹೃದೋಯ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಶಮೀಮ್ ಹೊಸೈನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್, ನಸುಮ್ ಅಹ್ಮದ್.
ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆಯುತ್ತಿರುವ ಸೂಪರ್ ಫೋರ್ ಹಂತದ 2ನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಬಾಂಗ್ಲಾದೇಶ್ ತಂಡದ ನಾಯಕ ಶಕೀಬ್ ಅಲ್ ಹಸನ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಶ್ರೀಲಂಕಾ ತಂಡ ಮೊದಲು ಬ್ಯಾಟ್ ಮಾಡಲಿದೆ.
Happy Birthday to the dynamic leader of the Sri Lankan cricket team, Dasun Shanaka! 🇱🇰
Here’s to more sixes, wickets, and victories in the year ahead! 😍#ACC pic.twitter.com/FsxhiSD2nM— AsianCricketCouncil (@ACCMedia1) September 9, 2023
ಇಂದು ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಅವರ ಹುಟ್ಟುಹಬ್ಬ. ಹೀಗಾಗಿ ನಾಯಕನಿಗೆ ಗೆಲುವಿನ ಉಡುಗೊರೆ ನೀಡುವ ಇರಾದೆಯಲ್ಲಿದ್ದಾರೆ ಶ್ರೀಲಂಕಾ ಆಟಗಾರರು.
ಕೊಲಂಬೊ ಸುತ್ತ-ಮುತ್ತ ಉತ್ತಮ ಬಿಸಿಲಿನ ವಾತಾವರಣ ಇದ್ದು, ಹೀಗಾಗಿ ಈ ಪಂದ್ಯವು ಸರಾಗವಾಗಿ ನಡೆಯಲಿದೆ. ಇದಕ್ಕೂ ಮುನ್ನ ಸೂಪರ್-4 ಹಂತದ ಪಂದ್ಯಗಳಿಗೆ ಮಳೆ ಅಡಚಣೆಯನ್ನುಂಟು ಮಾಡಲಿದೆ ಎನ್ನಲಾಗಿತ್ತು. ಆದರೆ ಶನಿವಾರ ಕೊಲಂಬೊ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಕಂಡು ಬಂದಿಲ್ಲ. ಹೀಗಾಗಿ ಪಂದ್ಯ ನಡೆಯುವುದು ಖಚಿತ ಎನ್ನಬಹುದು.
Exciting news from R. Premadasa International Cricket Stadium, Colombo! The sun is shining brightly as we eagerly await the start of the second Super 4 fixture between Sri Lanka and Bangladesh! Stay tuned for thrilling cricket action! 🇱🇰🇧🇩#AsiaCup2023 #SLvBAN pic.twitter.com/apaDY46ErA
— AsianCricketCouncil (@ACCMedia1) September 9, 2023
Published On - 2:15 pm, Sat, 9 September 23