ಪ್ರೇಮದಾಸ ಸ್ಟೇಡಿಯಂನಲ್ಲಿ ಕೊಹ್ಲಿಯೇ ಕಿಂಗ್: ಪಾಕ್ ಬೌಲರ್ಗಳಿಗೆ ನಡುಕ ಶುರು
India vs Pakistan: ಭಾರತ-ಪಾಕಿಸ್ತಾನ್ ನಡುವಣ ಪಂದ್ಯಕ್ಕೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮೀಸಲು ದಿನವನ್ನು ಘೋಷಿಸಿದೆ. ಅಂದರೆ ಭಾನುವಾರ ನಡೆಯುವ ಪಂದ್ಯವು ಮಳೆಯಿಂದಾಗಿ ಸ್ಥಗಿತಗೊಂಡರೆ ಸೋಮವಾರ ಪಂದ್ಯವನ್ನು ಮುಂದುವರೆಸಲಾಗುತ್ತದೆ. ಹೀಗಾಗಿ ಸೂಪರ್-4 ಹಂತದ ಈ ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡಿದರೂ ಫಲಿತಾಂಶವನ್ನು ನಿರೀಕ್ಷಿಸಬಹುದು.
ಏಷ್ಯಾಕಪ್ನ ಸೂಪರ್ ಫೋರ್ ಹಂತದ 3ನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ್ (India vs Pakistan) ತಂಡಗಳು ಮುಖಾಮುಖಿಯಾಗಲಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಹೈವೋಲ್ಟೇಜ್ ಪೈಪೋಟಿಯನ್ನು ನಿರೀಕ್ಷಿಸಬಹುದು. ಅದರಲ್ಲೂ ವಿರಾಟ್ ಕೊಹ್ಲಿ ಬ್ಯಾಟ್ನಿಂದ ಭರ್ಜರಿ ಇನಿಂಗ್ಸ್ ಅನ್ನು ಎದುರು ನೋಡಬಹುದು. ಏಕೆಂದರೆ ಪ್ರೇಮದಾಸ ಮೈದಾನದಲ್ಲಿ ಕಿಂಗ್ ಕೊಹ್ಲಿ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.
ಕಿಂಗ್ ಕೊಹ್ಲಿ ಆರ್. ಪ್ರೇಮದಾಸ ಮೈದಾನದಲ್ಲಿ ಒಟ್ಟು 8 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 103.8 ಸರಾಸರಿಯಲ್ಲಿ ರನ್ಗಳಿಸಿರುವುದು ವಿಶೇಷ. ಅಂದರೆ 8 ಇನಿಂಗ್ಸ್ಗಳಿಂದ ಕೊಹ್ಲಿ ಕಲೆಹಾಕಿರುವುದು ಬರೋಬ್ಬರಿ 519 ರನ್ಗಳು. ಇದರಲ್ಲಿ 3 ಭರ್ಜರಿ ಶತಕ ಹಾಗೂ 1 ಅರ್ಧಶತಕ ಸೇರಿದೆ.
ಅದರಲ್ಲೂ ಈ ಮೈದಾನದಲ್ಲಿ ಆಡಿದ ಕೊನೆಯ ಮೂರು ಏಕದಿನ ಇನಿಂಗ್ಸ್ಗಳಲ್ಲಿ ಕಿಂಗ್ ಕೊಹ್ಲಿ ಶತಕ ಸಿಡಿಸಿದ್ದರು ಎಂಬುದು ವಿಶೇಷ. ಆರ್. ಪ್ರೇಮದಾಸ ಮೈದಾನದಲ್ಲಿ 128* (119), 131(96), 110* (116) ಕಲೆಹಾಕಿರುವ ಕಿಂಗ್ ಕೊಹ್ಲಿಯನ್ನು ಕಟ್ಟಿಹಾಕುವುದೇ ಈಗ ಪಾಕ್ ಬೌಲರ್ಗಳ ಮುಂದಿರುವ ದೊಡ್ಡ ಸವಾಲು.
ಏಕೆಂದರೆ ಏಕದಿನ ಕ್ರಿಕೆಟ್ನಲ್ಲಿ ಪಾಕಿಸ್ತಾನ್ ವಿರುದ್ಧ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅದರಲ್ಲೂ ನಿರ್ಣಾಯಕ ಹಂತದಲ್ಲಿ ಒತ್ತಡವನ್ನು ಮೀರಿ ಆಡುವಲ್ಲಿ ಕೊಹ್ಲಿ ನಿಸ್ಸೀಮರು. ಇದೀಗ ತನ್ನ ನೆಚ್ಚಿನ ಸ್ಟೇಡಿಯಂಗಳಲ್ಲಿ ಒಂದಾಗಿರುವ ಆರ್. ಪ್ರೇಮದಾಸ ಮೈದಾನದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ಮುಖಾಮುಖಿಯಾಗುತ್ತಿದೆ. ಹೀಗಾಗಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಬ್ಯಾಟ್ನಿಂದ ಭರ್ಜರಿ ಪ್ರದರ್ಶನವನ್ನು ಎದುರು ನೋಡಲಾಗುತ್ತಿದೆ.
ಅತ್ತ ಪಾಕಿಸ್ತಾನ್ ವಿರುದ್ಧ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 4 ರನ್ಗಳಿಸಿ ಔಟಾಗಿದ್ದರು. ಇದೀಗ ಈ ಪಂದ್ಯದ ಮೂಲಕ ಪಾಕ್ ಬೌಲರ್ಗಳಿಗೆ ವಿರಾಟ ದರ್ಶನ ಮಾಡಲು ಕಿಂಗ್ ಕೊಹ್ಲಿ ಕೂಡ ಸಜ್ಜಾಗಿದ್ದಾರೆ. ಹೀಗಾಗಿ ಆರ್. ಪ್ರೇಮದಾಸ ಮೈದಾನದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ನಿಂದ 77ನೇ ಅಂತಾರಾಷ್ಟ್ರೀಯ ಶತಕ ಮೂಡಿ ಬಂದರೂ ಅಚ್ಚರಿಪಡಬೇಕಿಲ್ಲ.
ಇಂಡೊ-ಪಾಕ್ ಕದನಕ್ಕೆ ಮೀಸಲು ದಿನ:
ಭಾರತ-ಪಾಕಿಸ್ತಾನ್ ನಡುವಣ ಪಂದ್ಯಕ್ಕೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮೀಸಲು ದಿನವನ್ನು ಘೋಷಿಸಿದೆ. ಅಂದರೆ ಭಾನುವಾರ ನಡೆಯುವ ಪಂದ್ಯವು ಮಳೆಯಿಂದಾಗಿ ಸ್ಥಗಿತಗೊಂಡರೆ ಸೋಮವಾರ ಪಂದ್ಯವನ್ನು ಮುಂದುವರೆಸಲಾಗುತ್ತದೆ. ಹೀಗಾಗಿ ಸೂಪರ್-4 ಹಂತದ ಈ ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡಿದರೂ ಫಲಿತಾಂಶವನ್ನು ನಿರೀಕ್ಷಿಸಬಹುದು.
ಪಾಕಿಸ್ತಾನ್ ತಂಡ: ಬಾಬರ್ ಆಝಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಬ್ದುಲ್ಲಾ ಶಫೀಕ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾಮ್-ಉಲ್-ಹಕ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಸಲ್ಮಾನ್ ಅಲಿ ಅಘಾ, ಸೌದ್ ಶಕೀಲ್, ಶಾಹೀನ್ ಅಫ್ರಿದಿ ಮತ್ತು ಉಸಾಮಾ ಮಿರ್, ತಯ್ಯಬ್ ತಾಹಿರ್ (ಮೀಸಲು ಆಟಗಾರ).
ಇದನ್ನೂ ಓದಿ: ಏಕದಿನದಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದವರ ಪೈಕಿ ಕೊಹ್ಲಿಗೆ 4ನೇ ಸ್ಥಾನ..!
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ.