Asia cup 2025 IND vs SL Highlights: ನಿಸ್ಸಾಂಕ ಶತಕ ವ್ಯರ್ಥ; ಸೂಪರ್ ಓವರ್​ನಲ್ಲಿ ಗೆದ್ದ ಭಾರತ

Asia cup 2025 India vs Sri Lanka Highlights in Kannada: 2025 ರ ಏಷ್ಯಾ ಕಪ್‌ನ ಸೂಪರ್ 4 ಹಂತದ ಅಂತಿಮ ಪಂದ್ಯವನ್ನು ಭಾರತ ಕೊನೆಯ ಓವರ್​ನಲ್ಲಿ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಶ್ರೀಲಂಕಾಕ್ಕೆ 203 ರನ್‌ಗಳ ಗುರಿಯನ್ನು ನೀಡಿತು.ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಕೂಡ ಅಷ್ಟೇ ರನ್ ಕಲೆಹಾಕಿತು. ಅಂತಿಮವಾಗಿ ಸೂಪರ್ ಓವರ್​​ನಲ್ಲಿ ಭಾರತ ಗೆಲುವು ಸಾಧಿಸಿತು.

Asia cup 2025 IND vs SL Highlights: ನಿಸ್ಸಾಂಕ ಶತಕ ವ್ಯರ್ಥ; ಸೂಪರ್ ಓವರ್​ನಲ್ಲಿ ಗೆದ್ದ ಭಾರತ
Ind Vs Sl

Updated on: Sep 27, 2025 | 12:38 AM

ಏಷ್ಯಾಕಪ್ 2025 ರ ಸೂಪರ್ 4 ಸುತ್ತಿನ ಅಂತಿಮ ಪಂದ್ಯ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯಿತು. ತೀವ್ರ ರೋಚಕತೆಯಿಂದ ಕೂಡಿದ್ದ ಈ ಪಂದ್ಯವನ್ನು ಸೂಪರ್ ಓವರ್​​ನಲ್ಲಿ ಗೆದ್ದುಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಶ್ರೀಲಂಕಾಕ್ಕೆ 203 ರನ್‌ಗಳ ಗುರಿಯನ್ನು ನೀಡಿತು. ತಂಡದ ಪರ ಅಭಿಷೇಕ್ ಶರ್ಮಾ ಬಿರುಗಾಳಿಯ ಅರ್ಧಶತಕ ಬಾರಿಸಿದರು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಆರಂಭಿಕ ಪಾತುಮ್ ನಿಸ್ಸಂಕಾ ಅವರ ಶತಕದ ನೆರವಿನಿಂದ ಸುಲಭವಾಗಿ ಗೆಲ್ಲುವಂತೆ ತೋರುತ್ತಿತ್ತು. ಆದರೆ ಕೊನೆಯಲ್ಲಿ ಮ್ಯಾಜಿಕ್ ಮಾಡಿದ ಟೀಂ ಇಂಡಿಯಾ ಪಂದ್ಯವನ್ನು ಡ್ರಾ ಮಾಡುವಲ್ಲಿ ಯಶಸ್ವಿಯಾಯಿತು. ಹೀಗಾಗಿ ಪಂದ್ಯ ಸೂಪರ್​ ಓವರ್​​ನತ್ತ ಸಾಗಿತ್ತು. ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಕೇವಲ 2 ರನ್ ಕಲೆಹಾಕಿತು. 3 ರನ್​ಗಳ ಗುರಿ ಬೆನ್ನಟ್ಟಿದ ಭಾರತ ಮೊದಲ ಎಸೆತದಲ್ಲೇ ಗೆಲುವು ಸಾಧಿಸಿತು.

LIVE NEWS & UPDATES

The liveblog has ended.
  • 27 Sep 2025 12:38 AM (IST)

    IND vs SL Live Score: ಮೊದಲ ಎಸೆತದಲ್ಲೇ ಭಾರತಕ್ಕೆ ಜಯ

    ಸೂಪರ್ ಓವರ್‌ನ ಮೊದಲ ಎಸೆತದಲ್ಲೇ ಭಾರತ ಜಯಗಳಿಸಿತು. ಸೂರ್ಯಕುಮಾರ್ ಯಾದವ್ ಮೊದಲ ಎಸೆತದಲ್ಲೇ ಮೂರು ರನ್ ಗಳಿಸಿದರು. ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಅಜೇಯವಾಗಿ ಮುಂದುವರೆದಿದ್ದು, ಸತತ ಆರನೇ ಗೆಲುವು ದಾಖಲಿಸಿದೆ. ಸೆಪ್ಟೆಂಬರ್ 28 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಫೈನಲ್ ಪಂದ್ಯ ನಡೆಯಲಿದೆ.

  • 27 Sep 2025 12:32 AM (IST)

    IND vs SL Live Score: ಭಾರತಕ್ಕೆ ಮೂರು ರನ್‌ ಬೇಕು

    ಸೂಪರ್ ಓವರ್‌ನಲ್ಲಿ ಶ್ರೀಲಂಕಾ ಕೇವಲ ಎರಡು ರನ್ ಗಳಿಸಿತು. ಭಾರತಕ್ಕೆ ಮೂರು ರನ್‌ಗಳು ಬೇಕಾಗಿವೆ. ಅರ್ಶ್‌ದೀಪ್ ಸಿಂಗ್ ಅದ್ಭುತವಾಗಿ ಬೌಲಿಂಗ್ ಮಾಡಿದರು.


  • 27 Sep 2025 12:31 AM (IST)

    IND vs SL Live Score: ಸೂಪರ್ ಓವರ್​ನತ್ತ ಪಂದ್ಯ

    ಪಂದ್ಯ ಡ್ರಾಗೊಂಡಿದೆ. ಶ್ರೀಲಂಕಾ ತಂಡಕ್ಕೆ ಕೊನೆಯ ಎಸೆತದಲ್ಲಿ ಮೂರು ರನ್‌ಗಳು ಬೇಕಾಗಿದ್ದವು ಆದರೆ ಕೇವಲ ಎರಡು ರನ್‌ಗಳು ಮಾತ್ರ ಗಳಿಸಲು ಸಾಧ್ಯವಾಯಿತು. ಏಷ್ಯಾಕಪ್ ಇತಿಹಾಸದಲ್ಲಿ ಇದು ಮೊದಲ ಸೂಪರ್ ಓವರ್ ಆಗಲಿದೆ.

  • 27 Sep 2025 12:13 AM (IST)

    IND vs SL Live Score: ಕೊನೆಯ ಓವರ್​​ನಲ್ಲಿ 12 ರನ್ ಅಗತ್ಯ

    ೧9ನೇ ಓವರ್‌ನಲ್ಲಿ ಅರ್ಶ್‌ದೀಪ್ ಸಿಂಗ್ ಐದು ಉತ್ತಮ ಎಸೆತಗಳನ್ನು ಎಸೆದರು, ಆದರೆ ಕೊನೆಯ ಎಸೆತದಲ್ಲಿ ಬೌಂಡರಿ ಬಂತು. ಶ್ರೀಲಂಕಾಕ್ಕೆ ಈಗ ಕೊನೆಯ ಓವರ್‌ನಿಂದ 12 ರನ್‌ಗಳ ಅಗತ್ಯವಿದೆ.

  • 27 Sep 2025 12:12 AM (IST)

    IND vs SL Live Score: 18 ಓವರ್‌ಗಳಲ್ಲಿ 180 ರನ್

    ಶ್ರೀಲಂಕಾ 18 ಓವರ್‌ಗಳಲ್ಲಿ 180 ರನ್ ಗಳಿಸಿದೆ. ಅಕ್ಷರ್ ಪಟೇಲ್ ಅವರ ಓವರ್‌ನಲ್ಲಿ 10 ರನ್‌ಗಳು ಬಂದವು. ಶ್ರೀಲಂಕಾ ಗೆಲ್ಲಲು ಈಗ ಎರಡು ಓವರ್‌ಗಳಲ್ಲಿ 23 ರನ್‌ಗಳ ಅಗತ್ಯವಿದೆ.

  • 27 Sep 2025 12:02 AM (IST)

    IND vs SL Live Score: ನಿಸ್ಸಂಕಾ ಶತಕ

    ಪಥುಮ್ ನಿಸ್ಸಂಕಾ 2025 ರ ಏಷ್ಯಾಕಪ್‌ನ ಮೊದಲ ಶತಕವನ್ನು ಕೇವಲ 52 ಎಸೆತಗಳಲ್ಲಿ ಬಾರಿಸಿದರು. ಅದ್ಭುತ ಬ್ಯಾಟಿಂಗ್. ನಿಸ್ಸಂಕಾ ಅವರ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮೊದಲ ಶತಕ ಇದಾಗಿದೆ.

  • 26 Sep 2025 11:31 PM (IST)

    IND vs SL Live Score: 12 ಓವರ್ ಅಂತ್ಯ

    ಕುಲ್ದೀಪ್ ಯಾದವ್ ಅದ್ಭುತ ಓವರ್ ಎಸೆದರು, ಕೇವಲ ನಾಲ್ಕು ರನ್ ನೀಡಿದರು. 12 ಓವರ್‌ಗಳ ನಂತರ ಶ್ರೀಲಂಕಾದ ಸ್ಕೋರ್ 134 ಆಗಿದೆ.

  • 26 Sep 2025 10:53 PM (IST)

    IND vs SL Live Score: ಅರ್ಶ್ದೀಪ್ ದುಬಾರಿ

    ಅರ್ಶ್ದೀಪ್ ಸಿಂಗ್ ಓವರ್​​ನಲ್ಲಿ 15 ರನ್‌ಗಳು ಬಂದವು. ನಿಸ್ಸಂಕ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು, ಶ್ರೀಲಂಕಾ 4 ಓವರ್‌ಗಳ ನಂತರ 45 ರನ್ ಗಳಿಸಿತು.

  • 26 Sep 2025 10:47 PM (IST)

    IND vs SL Live Score: ಲಂಕಾಗೆ ಉತ್ತಮ ಆರಂಭ

    ಅರ್ಶ್ದೀಪ್ ಸಿಂಗ್ ದುಬಾರಿ ಓವರ್ ಎಸೆದರು. ಮೊದಲ ಓವರ್ ನಲ್ಲಿ 11 ರನ್ ಗಳು ಬಂದವು. ಕುಶಾಲ್ ಪೆರೆರಾ ಬೌಂಡರಿ ಬಾರಿಸಿದರು. 2 ಓವರ್ ಗಳಲ್ಲಿ ಸ್ಕೋರ್ 18 ರನ್ ಗಳು.

  • 26 Sep 2025 10:02 PM (IST)

    IND vs SL Live Score: 202 ರನ್ ಕಲೆಹಾಕಿದ ಭಾರತ

    202 ರನ್ ಕಲೆಹಾಕಿದ ಭಾರತ. 2025 ರ ಏಷ್ಯಾ ಕಪ್‌ನಲ್ಲಿ ತಂಡವೊಂದು 200 ರನ್‌ಗಳ ಗಡಿಯನ್ನು ತಲುಪಿದ್ದು ಇದೇ ಮೊದಲು. ತಿಲಕ್ ವರ್ಮಾ 49 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

  • 26 Sep 2025 09:59 PM (IST)

    IND vs SL Live Score: 19 ಓವರ್‌ಗಳ ನಂತರ 189 ರನ್

    19 ಓವರ್‌ಗಳ ನಂತರ ಭಾರತ 189 ರನ್ ಕಲೆಹಾಕಿದೆ. ತಿಲಕ್ ವರ್ಮಾ ಅರ್ಧಶತಕದ ಸಮೀಪದಲ್ಲಿದ್ದಾರೆ.

  • 26 Sep 2025 09:39 PM (IST)

    IND vs SL Live Score: ಸಂಜು ಔಟ್

    ಸಂಜು ಸ್ಯಾಮ್ಸನ್ ಸಿಕ್ಸರ್ ಬಾರಿಸಿದ ಮುಂದಿನ ಎಸೆತದಲ್ಲಿ ಔಟಾದರು. ಭಾರತ ನಾಲ್ಕು ವಿಕೆಟ್ ಕಳೆದುಕೊಂಡಿತು.

  • 26 Sep 2025 09:29 PM (IST)

    IND vs SL Live Score: ಭಾರತದ ಸ್ಕೋರ್ 120

    12 ಓವರ್‌ಗಳ ನಂತರ ಭಾರತದ ಸ್ಕೋರ್ 120. ತಿಲಕ್ ವರ್ಮಾ 24 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 26 Sep 2025 09:03 PM (IST)

    IND vs SL Live Score: ಅಭಿಷೇಕ್ ಔಟ್

    ಅಭಿಷೇಕ್ ಶರ್ಮಾ 61 ರನ್ ಗಳಿಸಿ ಔಟಾದರು. ಅಸಲಂಕಾ ಅವರ ಸರಳ ಎಸೆತದಲ್ಲಿ ಅವರು ಔಟಾದರು. ಕಳಪೆ ಶಾಟ್.

  • 26 Sep 2025 09:02 PM (IST)

    IND vs SL Live Score: ಸೂರ್ಯ ಮತ್ತೆ ವಿಫಲ

    ಸೂರ್ಯಕುಮಾರ್ ಯಾದವ್ ಮತ್ತೆ ವಿಫಲರಾದರು. ನಾಯಕ 13 ಎಸೆತಗಳಲ್ಲಿ ಕೇವಲ 12 ರನ್ ಗಳಿಸಿ ಔಟಾದರು. ಹಸರಂಗ ಎಸೆತದಲ್ಲಿ ಅವರು ಎಲ್ಬಿಡಬ್ಲ್ಯೂ ಆಗಿ ಔಟಾದರು. 7 ಓವರ್‌ಗಳ ನಂತರ ಭಾರತದ ಸ್ಕೋರ್ 75 ಆಗಿದೆ.

  • 26 Sep 2025 08:59 PM (IST)

    IND vs SL Live Score: ಅಭಿಷೇಕ್ ದಾಖಲೆ

    ಅಭಿಷೇಕ್ ಶರ್ಮಾ 25 ಕ್ಕಿಂತ ಕಡಿಮೆ ಎಸೆತಗಳಲ್ಲಿ ತಮ್ಮ ಆರನೇ ಅರ್ಧಶತಕ ಗಳಿಸಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ರೋಹಿತ್ 159 ಪಂದ್ಯಗಳಲ್ಲಿ ಈ ಸಾಧನೆ ಮಾಡಿದರೆ, ಅಭಿಷೇಕ್ ಶರ್ಮಾ ಕೇವಲ 23 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅಭಿಷೇಕ್ ಶರ್ಮಾ ಏಷ್ಯಾಕಪ್‌ನಲ್ಲಿ 300 ರನ್‌ಗಳನ್ನು ತಲುಪಿದ್ದಾರೆ.

  • 26 Sep 2025 08:48 PM (IST)

    IND vs SL Live Score: ಅಭಿ ಅರ್ಧಶತಕ

    ಅಭಿಷೇಕ್ ಶರ್ಮಾ ಮತ್ತೊಂದು ಅರ್ಧಶತಕ ಗಳಿಸಿದರು. ಅವರು ಈಗಾಗಲೇ ಏಷ್ಯಾಕಪ್‌ನಲ್ಲಿ ಹ್ಯಾಟ್ರಿಕ್ ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಬಾರಿ, ಅವರು 22 ಎಸೆತಗಳಲ್ಲಿ ಎರಡು ಸಿಕ್ಸರ್‌ ಮತ್ತು ಏಳು ಬೌಂಡರಿಗಳ ಸಹಿತ ತಮ್ಮ ಅರ್ಧಶತಕವನ್ನು ಪೂರೈಸಿದರು

  • 26 Sep 2025 08:24 PM (IST)

    IND vs SL Live Score: ಗಿಲ್ ಔಟ್

    ಶುಭಮನ್ ಗಿಲ್ ಕೇವಲ 4 ರನ್‌ಗಳಿಗೆ ಔಟಾದರು. ಮಹೇಶ್ ತೀಕ್ಷನ್ ವಿಕೆಟ್ ಪಡೆದರು.

  • 26 Sep 2025 07:54 PM (IST)

    IND vs SL Live Score: ಶ್ರೀಲಂಕಾ ತಂಡ

    ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಕುಸಲ್ ಪೆರೆರಾ, ಚರಿತ್ ಅಸಲಂಕಾ (ನಾಯಕ), ಕಮಿಂದು ಮೆಂಡಿಸ್, ದಸುನ್ ಶನಕ, ವನಿಂದು ಹಸರಂಗಾ, ಜನಿತ್ ಲಿಯಾನಗೆ, ದುಷ್ಮಂತ ಚಮೀರ, ಮಹೀಶ್ ತೀಕ್ಷಣ, ನುವಾನ್ ತುಷಾರ.

  • 26 Sep 2025 07:54 PM (IST)

    IND vs SL Live Score: ಭಾರತ ತಂಡ

    ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಅರ್ಷ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ.

  • 26 Sep 2025 07:34 PM (IST)

    IND vs SL Live Score: ಟಾಸ್ ಗೆದ್ದ ಶ್ರೀಲಂಕಾ

    ಟಾಸ್ ಗೆದ್ದ ಶ್ರೀಲಂಕಾ ಮೊದಲು ಬೌಲಿಂಗ್ ಆಯ್ದುಕೊಂಡಿತು

  • Published On - 7:33 pm, Fri, 26 September 25