Asia Cup 2025: ಭಾರತವನ್ನು ಬಿಡಬೇಡಿ; ರೌಫ್ ಮುಂದೆ ಕೈಮುಗಿದು ಬೇಡಿದ ಪಾಕ್ ಅಭಿಮಾನಿ
India vs Pakistan Asia Cup Final: ಸೆಪ್ಟೆಂಬರ್ 28 ರಂದು ದುಬೈನಲ್ಲಿ ನಡೆಯಲಿರುವ ಮೊದಲ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಟೀಂ ಇಂಡಿಯಾ ಈಗಾಗಲೇ ಪಾಕಿಸ್ತಾನವನ್ನು ಎರಡು ಬಾರಿ ಸೋಲಿಸಿದೆ. ಫೈನಲ್‌ನಲ್ಲಿ 'ಭಾರತವನ್ನು ಬಿಡಬೇಡಿ' ಎಂದು ಪಾಕಿಸ್ತಾನಿ ಅಭಿಮಾನಿಯೊಬ್ಬರು ಹ್ಯಾರಿಸ್ ರೌಫ್ ಅವರಿಗೆ ಮನವಿ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಇದು ಪಂದ್ಯದ ಮೇಲಿನ ನಿರೀಕ್ಷೆ ಮತ್ತು ಅಭಿಮಾನಿಗಳ ಉತ್ಸಾಹವನ್ನು ಎತ್ತಿ ತೋರಿಸುತ್ತದೆ.
ಮೊದಲ ಬಾರಿಗೆ ಏಷ್ಯಾಕಪ್‌ನ ಫೈನಲ್ ಪಂದ್ಯ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿದೆ. ಸೆಪ್ಟೆಂಬರ್ 28 ರಂದು ದುಬೈನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಎರಡೂ ತಂಡಗಳು ಸಜ್ಜಾಗುತ್ತಿವೆ. 2025 ರ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ, ಪಾಕಿಸ್ತಾನವನ್ನು ಎರಡು ಬಾರಿ ಸೋಲಿಸಿದೆ. ಈಗ, ಎರಡೂ ತಂಡಗಳು ಮತ್ತೊಮ್ಮೆ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಮಧ್ಯೆ, ಪಾಕಿಸ್ತಾನಿ ಅಭಿಮಾನಿಯೊಬ್ಬರು ಪಾಕ್ ತಂಡದ ವೇಗದ ಹ್ಯಾರಿಸ್ ರೌಫ್ ಅವರ ಬಳಿ ‘ಭಾರತವನ್ನು ಬಿಡಬೇಡಿ’ (ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ) ಎಂದು ಕೂಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಏಷ್ಯಾಕಪ್‌ನ ನಿರ್ಣಾಯಕ ಸೂಪರ್ ಫೋರ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾದೇಶವನ್ನು 11 ರನ್‌ಗಳಿಂದ ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆಯಿತು. ಪಂದ್ಯದ ನಂತರ, ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಅಭಿಮಾನಿಗಳೊಂದಿಗೆ ಕೈಕುಲುಕುತ್ತಿದ್ದರು. ಈ ಸಮಯದಲ್ಲಿ, ಅಭಿಮಾನಿಯೊಬ್ಬರು ರೌಫ್ ಅವರ ಕೈ ಹಿಡಿದು ‘ಫೈನಲ್‌ನಲ್ಲಿ ಭಾರತವನ್ನು ಬಿಡಬಾರದು, ಫೈನಲ್‌ನಲ್ಲಿ ಭಾರತವನ್ನು ಬಿಡಬಾರದು’ ಎಂದು ಪದೇ ಪದೇ ಕೂಗಿ ಹೇಳಿದ್ದಾರೆ. ಕೊನೆಗೆ ಮೈಮುಗಿದು ವಿನಂತಿಸಿದ್ದಾನೆ. ಇತ್ತ ಹ್ಯಾರಿಸ್ ರೌಫ್ ಕೂಡ ನಗುತ್ತಾ ತಲೆಯಾಡಿಸಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದಾಗ್ಯೂ, ಭಾರತದ ವಿರುದ್ಧ ಪಾಕಿಸ್ತಾನದ ಪ್ರದರ್ಶನವನ್ನು ನೋಡಿದರೆ, ಇದು ಅಸಂಭವವೆಂದು ತೋರುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

