
2026 ರ ಏಷ್ಯಾಕಪ್‌ನಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದುಕೊಂಡಿರುವ ಭಾರತ ಮಹಿಳಾ ತಂಡ ಎ ಗುಂಪಿನಿಂದ ಮೊದಲ ಸ್ಥಾನ ಪಡೆದುಕೊಂಡು ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಗುಂಪು ಹಂತದ ಮೊದಲ ಥೈಲ್ಯಾಂಡ್ ತಂಡವನ್ನು ಮಣಿಸಿದ ಟೀಂ ಇಂಡಿಯಾ, ಎರಡನೇ ಪಂದ್ಯದಲ್ಲಿ ಹಾಂಕ್ ಕಾಂಗ್ ಚೀನಾ ತಂಡವನ್ನು ಸೋಲಿಸಿತ್ತು. ಆ ನಂತರ ನಡದಿದ್ದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ಸೋಲಿಸಿದ ಹರ್ಮನ್ಪ್ರೀತ್ ಪಡೆ ಅಜೇಯ ತಂಡದವಾಗಿ ಸೆಮಿಫೈನಲ್ಗೇರಿದೆ. ಸೆಮಿಫೈನಲ್ ಸುತ್ತು ಸೆಪ್ಟೆಂಬರ್ 10 ರಿಂದ ಆರಂಭವಾಗಲಿದ್ದು, ಈ ಸುತ್ತಿನಲ್ಲಿ ಟೀಂ ಇಂಡಿಯಾದ ಎದುರಾಳಿ ಯಾರು ಎಂಬುದು ಈಗ ಪ್ರಶ್ನೆಯಾಗಿದೆ.
ಮೇಲೆ ಹೇಳಿದಂತೆ ಗುಂಪು ಎ ಯಲ್ಲಿ ಥೈಲ್ಯಾಂಡ್, ಹಾಂಗ್ ಕಾಂಗ್ ಮತ್ತು ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ಸೋಲಿಸಿದ ಭಾರತ ತಂಡ 6 ಅಂಕಗಳೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ. ಈ ಗುಂಪಿನಲ್ಲಿ ಭಾರತ ಅಗ್ರ ಸ್ಥಾನವನ್ನು ಪಡೆದುಕೊಂಡಿರುವುದರಿಂದ ಸೆಮಿಫೈನಲ್‌ನಲ್ಲಿ, ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದುಕೊಳ್ಳುವ ತಂಡವನ್ನು ಎದುರಿಸಬೇಕಾಗುತ್ತದೆ. ಈ ಪಂದ್ಯ ಸೆಪ್ಟೆಂಬರ್ 10 ರಂದು ನಡೆಯಲಿದೆ. ಗ್ರೂಪ್ ಎ ನಿಂದ ಸೆಮಿಫೈನಲ್ ರೇಸ್‌ನಲ್ಲಿರುವ ಎರಡು ತಂಡಗಳು ಪಾಕಿಸ್ತಾನ ಮತ್ತು ಥೈಲ್ಯಾಂಡ್. ಆದರೆ, ಥೈಲ್ಯಾಂಡ್ ಮೂರು ಪಂದ್ಯಗಳನ್ನು ಆಡಿದೆ, ಆದರೆ ಪಾಕಿಸ್ತಾನ ತನ್ನ ಕೊನೆಯ ಪಂದ್ಯವನ್ನು ಹಾಂಗ್ ಕಾಂಗ್ ವಿರುದ್ಧ ಆಡಬೇಕಾಗಿದೆ.
ಶ್ರೀಲಂಕಾ ಆಡಿರುವ ಮೂರು ಪಂದ್ಯಗಳನ್ನು ಗೆದ್ದು, ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಹೀಗಾಗಿ ಶ್ರೀಲಂಕಾ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಎ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ಅಂತವನ್ನು ಎದುರಿಸಲಿದೆ. ಅಂದರೆ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿವೆ. ಇತ್ತ ಮೊದಲ ಸೆಮಿಫೈನಲ್‌ನಲ್ಲಿ ಭಾರತದ ಎದುರಾಳಿ ಯಾರಾಗಬಹುದು ಎಂಬುದು ಇಂದು ಖಚಿತವಾಗಲಿದೆ. ಬಿ ಗುಂಪಿನಲ್ಲಿ ಶ್ರೀಲಂಕಾವನ್ನು ಹೊರತುಪಡಿಸಿ ಬಾಂಗ್ಲಾದೇಶ ಮತ್ತು ಯುಎಇ ತಲಾ 2 ಅಂಕಗಳೊಂದಿಗೆ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.
ಟಿ20 ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾದ ದಾಖಲೆ ಹೇಗಿದೆ?
ನಾಳೆ ನಡೆಯಲಿರುವ ಬಿ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಯುಎಇ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಮೊದಲ ಸೆಮಿಫೈನಲ್‌ನಲ್ಲಿ ಭಾರತವನ್ನು ಎದುರಿಸಲಿದೆ. ಉಭಯ ತಂಡಗಳ ಬಲಾಬಲವನ್ನು ನೋಡಿದರೆ, ಬಾಂಗ್ಲಾದೇಶ ಕೊಂಚ ಮೇಲುಗೈ ಸಾಧಿಸಿದೆ. ಹೀಗಾಗಿ ಟೀಂ ಇಂಡಿಯಾದೆದುರು ಬಾಂಗ್ಲಾದೇಶ ಸ್ಪರ್ಧೆಗಿಳಿಯುವ ಸಾಧ್ಯತೆ ಇದೆ. ಈ ಪಂದ್ಯದಲ್ಲಿ ಗೆದ್ದ ತಂಡ ಎರಡನೇ ಸೆಮಿಫೈನಲ್‌ನಲ್ಲಿ ಗೆದ್ದ ತಂಡವನ್ನು ಫೈನಲ್ನಲ್ಲಿ ಎದುರಿಸಲಿದೆ.
Published On - 3:59 pm, Mon, 7 September 26